Homeಕರ್ನಾಟಕಫ್ಯಾಕ್ಟ್‌ಚೆಕ್‌: ಸಿಎಂ ಬೊಮ್ಮಾಯಿ ಹೇಳಿದಂತೆ ವಿ. ಡಿ. ಸಾವರ್ಕರ್‌ ದೇಶಕ್ಕೆ ಸ್ಪೂರ್ತಿದಾಯಕ ವ್ಯಕ್ತಿಯೆ?

ಫ್ಯಾಕ್ಟ್‌ಚೆಕ್‌: ಸಿಎಂ ಬೊಮ್ಮಾಯಿ ಹೇಳಿದಂತೆ ವಿ. ಡಿ. ಸಾವರ್ಕರ್‌ ದೇಶಕ್ಕೆ ಸ್ಪೂರ್ತಿದಾಯಕ ವ್ಯಕ್ತಿಯೆ?

- Advertisement -
- Advertisement -

ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ‘ಮುಖ್ಯಮಂತ್ರಿಯ ಅಧಿಕೃತ ಸರ್ಕಾರಿ ಜಾಲತಾಣಗಳ ಖಾತೆ’ಯಿಂದ, ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿರುವ, ಬಲಪಂಥಿಯ ನಾಯಕ ವಿನಾಯಕ ದಾಮೋದರ ಸಾವರ್ಕರ್‌ ಅವರಿಗೆ ಶನಿವಾರ ನಮನಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಹಲವಾರು ಜನರು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಇತಿಹಾಸದ ಪಾಠವನ್ನೂ ಮಾಡಿದ್ದಾರೆ.

ಫೆಬ್ರವರಿ 26 ವಿ.ಡಿ. ಸಾವರ್ಕರ್‌ ಅವರು ನಿಧನವಾದ ದಿನವಾಗಿರುವುದರಿಂದ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್‌ ಮತ್ತು ಫೇಸ್‌ಬುಕ್ ಖಾತೆಯಿಂದ, “ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ, ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶತಶತ ನಮನಗಳು. ಅವರ ದೇಶಪ್ರೇಮ, ತ್ಯಾಗ, ಹೋರಾಟಗಳು ಇಂದಿಗೂ ಸ್ಪೂರ್ತಿದಾಯಕವಾಗಿವೆ” ಎಂದು ಬರೆದುಕೊಂಡಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಇದನ್ನೂ ಓದಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’

ಫ್ಯಾಕ್ಟ್‌ಚೆಕ್‌

ಮುಖ್ಯಮಂತ್ರಿ ಮಾಡಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತೆ ವಿ.ಡಿ. ಸಾವರ್ಕರ್‌ ನಿಧನ ಹೊಂದಿರುವ ದಿನಾಂಕ ಸರಿಯೇ ಆಗಿದೆ. ಉಳಿದಂತೆ ಪೋಸ್ಟ್‌ನಲ್ಲಿ ಹಲವಾರು ಅರ್ಧ ಸತ್ಯವಿದ್ದು, ಇದು ಜನರನ್ನು ತಪ್ಪು ದಾರಿಗೆ ಎಳೆಯುತ್ತದೆ. ನಾನುಗೌರಿ.ಕಾಂ ಇವುಗಳನ್ನು ಸಂಕ್ಷಿಪ್ತವಾಗಿ ಪಟ್ಟಿ ಮಾಡಿದೆ.

ಮುಖ್ಯಮಂತ್ರಿ ಮಾಡಿರುವ ಪೋಸ್ಟ್‌‌ ಮತ್ತು ಅದರಲ್ಲಿ ಇರುವ ಚಿತ್ರದಲ್ಲಿ ಮುಖ್ಯವಾಗಿ ಎರಡೇ ವಾಕ್ಯಗಳಿಗೆ. ಇದರಲ್ಲಿ ಮೊದಲ ವಾಕ್ಯ ಕೆಳಗಿನಂತಿವೆ.

  • ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ, ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಪುಣ್ಯಸ್ಮರಣೆಯ ದಿನದಂದು ಅವರಿಗೆ ಶತಶತ ನಮನಗಳು.

ಮೊದಲ ವಾಕ್ಯವನ್ನು ನಾವು ಪರಿಶೀಲಿಸಿದರೆ, ‘ಭಾರತ ಮಾತೆಯ ಹೆಮ್ಮೆಯ ಪುತ್ರ’ ಮತ್ತು ‘ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ’ ಎಂಬ ವಾಕ್ಯಗಳು ಪೂರ್ತಿ ಸತ್ಯವಲ್ಲ. 82 ವರ್ಷ ಜೀವಿಸಿ 1966 ರಲ್ಲಿ ನಿಧನ ಹೊಂದಿದ ಸಾವರ್ಕರ್‌, 1924ರಲ್ಲಿಯೇ ಅಂಡಮಾನ್ ಜೈಲಿನಿಂದ ಬಿಡುಗಡೆಯಾದ ನಂತರ ಸ್ವಾತಂತ್ಯ್ರ ಹೋರಾಟದ ಯಾವ ಆಂದೋಲನಗಳಲ್ಲೂ ಪಾಲ್ಗೊಂಡಿರುವ ಯಾವುದೆ ದಾಖಲೆ ಇಲ್ಲ.

ವಾಸ್ತವದಲ್ಲಿ ವಿ.ಡಿ. ಸಾವರ್ಕರ್‌ ಅಂಡಮಾನಿನ ಸೆಲ್ಯುಲಾರ್‌ ಜೈಲಿನಿಂದ ಹೊರಬಂದಿದ್ದು ಬ್ರಿಟೀಷರಿಗೆ ಹಲವು ಬಾರಿ ಕ್ಷಮಾಪಣೆ ಪತ್ರ ಬರೆದು, ತಾನು ಮುಂದಕ್ಕೆ ಯಾವುದೇ ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ನಂತರವಾಗಿದೆ.

ಹಿರಿಯ ಸ್ವಾತಂತ್ಯ್ರ ಹೊರಾಟಗಾರ, ಪತ್ರಕರ್ತ ಎಚ್‌.ಎಸ್‌. ದೊರೆಸ್ವಾಮಿ ಅವರು, “ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದಿದ್ದೇ ತಪ್ಪಾಯಿತು. ನನ್ನನ್ನು ಬಿಡುಗಡೆ ಮಾಡಿ ಎಂದು ಸಾವರ್ಕರ್‌ ಬ್ರಿಟಿಷ್ ಸರ್ಕಾರವನ್ನು ಪ್ರಾರ್ಥಿಸಿದರು. ಸಾವರ್ಕರ್ ತಮ್ಮ ಜಿಲ್ಲೆ ಬಿಟ್ಟು ಬೇರೆಲ್ಲೂ ಹೋಗಕೂಡದು, ಪತ್ರಿಕೆಗೆ ಲೇಖನ ಬರೆಯಬಾರದು ಮುಂತಾದ ಷರತ್ತುಗಳನ್ನು ಹಾಕಿ ಬ್ರಿಟಿಷರು ಬಿಡುಗಡೆ ಮಾಡಿದರು” ಎಂದು ಲೇಖನವೊಂದಲ್ಲಿ ಬರೆದ್ದಾರೆ.

ಉಳಿದಂತೆ ‘ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ’ ಎಂಬ ವಾಕ್ಯವು ಕೂಡಾ ಅರ್ಧ ಸತ್ಯವಾಗಿದೆ. ವಿ.ಡಿ. ಸಾವರ್ಕರ್‌ ಸೆಲ್ಯುಲಾರ್‌ ಜೈಲಿಗೆ ಹೋಗುವುದಕ್ಕಿಂತ ಮುಂಚೆ ಸ್ವಾತಂತ್ಯ್ರ ಹೋರಾಟಗಳಲ್ಲಿ ಭಾಗವಹಿಸಿದ್ದು ನಿಜವೇ ಆಗಿದೆ ಮತ್ತು ಬರಹಗಳನ್ನು ಬರೆದಿದ್ದು ನಿಜವೇ ಆಗಿದೆ. ಆದರೆ ಸೆಲ್ಯುಲಾರ್ ಜೈಲಿನಿಂದ ಹೊರಬಂದ ನಂತರ ಅವರು ಎಲ್ಲದಕ್ಕೂ ತಿಲಾಂಜಲಿಯಿಟ್ಟರು. ಹಾಗೆ ನೋಡಿದರೆ, ಸ್ವಾತಂತ್ಯ್ರದ ಆಂದೋಲನದ ಇಡೀ ದೇಶವೇ ಭಾಗವಹಿಸಿದ ಕ್ವಿಟ್ ಇಂಡಿಯಾ ಚಳವಳಿಗೆ ಇಳಿಯಬೇಡಿ ಎಂದು ಕೂಡಾ ಸಾವರ್ಕರ್‌‌ ಯುವಕರಿಗೆ ಕರೆ ನೀಡಿದ್ದರು ಎಂದು ಇತಿಹಾಸ ತಜ್ಞರು ಉಲ್ಲೇಖಿಸುತ್ತಾರೆ.

ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟು ದೊರೆಸ್ವಾಮಿ ಅವರು, ‘ಸಾವರ್ಕರ್‌ ಅವರನ್ನು ಮಾಜಿ ವೀರ’ ಎಂದು ಉಲ್ಲೇಖಿಸುತ್ತಾರೆ. ಅಲ್ಲದೆ ಮಹಾತ್ಮ ಗಾಂಧಿ ಅವರ ಕೊಲೆಯಲ್ಲೂ ವಿ.ಡಿ. ಸಾವರ್ಕರ್‌ ಅವರ ಕೈವಾಡ ಇದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿದೆ. ದೊರೆಸ್ವಾಮಿ ಅವರು ಬರೆದಿರುವ, “ಹೇಡಿಯಾಗಿ ಬದಲಾದ ವಿ.ಡಿ ಸಾವರ್ಕರ್ ಗಾಂಧಿ ಕೊಲೆಗೆ ಪ್ರೇರಕರಾಗಿದ್ದರು’’ ಎಂಬ ಲೇಖನದಲ್ಲಿ ಗಾಂಧಿ ಕೊಲೆಯಲ್ಲಿ ಸಾವರ್ಕರ್‌ ಕೈವಾಡ ಹೇಗಿತ್ತು ಎಂದು ನಿರೂಪಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ಈ ಎಲ್ಲಾ ಅಂಶಗಳನ್ನು ಗಮಸಿದರೆ, ಮುಖ್ಯಮಂತ್ರಿ ಹೇಳಿದಂತೆ ವಿ.ಡಿ. ಸಾವರ್ಕರ್‌  ಭಾರತ ಮಾತೆಯ ಹೆಮ್ಮೆಯ ಪುತ್ರ ಅಲ್ಲ. ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧನೂ ಅಲ್ಲ. ಲೇಖಕ ಮತ್ತು ಹೋರಾಟಗಾರ ಆಗಿದ್ದ ಸಾವರ್ಕರ್‌ ಆಗಿದ್ದ ಅಂಡಮಾನ್‌ನಿಂದ ಹೊರ ಬಂದ ನಂತರ ಹೋರಾಟದಿಂದ ದೂರ ಉಳಿದರು. ಕೊನೆಗೆ ವಿಶ್ವವೇ ಗೌರವ ಭಾವನೆಯಿಂದ ನೋಡುವ, ದೇಶದ ಹೆಮ್ಮ ಮಹಾತ್ಮ ಗಾಂಧಿಯ ಕೊಲೆಗೂ ಪ್ರೇರಣೆಯಾದರು ಎಂಬ ಆರೋಪ ಎದುರಿಸಿದರು.

ವಾಕ್ಯದ ಕೊನೆಯ ಪದವಾದ ‘ಪುಣ್ಯಸ್ಮರಣೆ ದಿನ’ ಎಂದರೆ, ನಿಧನ ಹೊಂದಿದ ದಿನವನ್ನು ಸೂಚಿಸುವ ಪದವಾಗಿದೆ. ಈ ಪದವು ನಿಜವಾಗಿದ್ದು, ವಿ.ಡಿ. ಸಾವರ್ಕರ್‌ ಫೆಬ್ರವರಿ 26ರಂದು ನಿಧನ ಹೊಂದಿದ್ದರು.

ಮುಖ್ಯಮಂತ್ರಿ ಬರೆದಿರುವ ಪೊಸ್ಟ್‌ನಲ್ಲಿರುವ ಎರಡನೆ ವಾಕ್ಯ, ‘ಸಾವರ್ಕರ್‌ ದೇಶಪ್ರೇಮ, ತ್ಯಾಗ, ಹೋರಾಟಗಳು ಇಂದಿಗೂ ಸ್ಪೂರ್ತಿದಾಯಕವಾಗಿವೆ’ ಎಂದು ಬರೆಯುತ್ತಾರೆ. ಅವುಗಳನ್ನು ಒಂದೊಂದಾಗಿ ನೋಡೋಣ.

  • ದೇಶಪ್ರೇಮ – ದೇಶದ ಯುವಕರಿಗೆ ಸ್ವಾತಂತ್ಯ್ರ ಹೋರಾಟಕ್ಕೆ ಇಳಿಯಬೇಡಿ ಎಂದು ಕರೆಕೊಡುವುದು ದೇಶಪ್ರೇಮ ಆಗುವುದಿಲ್ಲ.
  • ತ್ಯಾಗ, ಹೋರಾಟಗಳು – ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ, ಬ್ರಿಟೀಷರು ಅವರಿಗೆ ಅಂಡಮಾನಿಯಲ್ಲಿ ಆರುವರ್ಷಗಳ ಕರಿನೀರಿನ ಶಿಕ್ಷೆ ನೀಡುತ್ತಾರೆ. ಆದರೆ ಸಾವರ್ಕರ್‌ ಮೂರು ವರ್ಷಗಳಲ್ಲೇ ಹಲವಾರು ಕ್ಷಮಾಪಣೆ ಪತ್ರ ಬರೆದು ಅಲ್ಲಿಂದ ಹೊರಬರುತ್ತಾರೆ. ಆದರೆ ಬ್ರಿಟೀಷರ ಕರಿನೀರಿನ ಶಿಕ್ಷೆಗೆ ಒಳಗಾಗಿ, ಅದೇ ಜೈಲಿನಲ್ಲಿ ಸಾವಿರಾರು ಭಾರತೀಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದರೆ ಸಾವರ್ಕರ್‌ ತಮ್ಮ ತುಂಬು ಜೀವನವನ್ನು ಬದುಕಿ 1966ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ಮರಣ ಹೊಂದುತ್ತಾರೆ.
  • ಇಂದಿಗೂ ಸ್ಪೂರ್ತಿದಾಯಕ – ಸಾವರ್ಕರ್‌ ಅವರು ದೇಶವನ್ನು ವಿಭಜನೆ ಮಾಡಬೇಕು ಎಂದು ಪ್ರತಿಪಾದಿಸಿರುವ ಮೊದಲಿಗರಲ್ಲಿ ಒಬ್ಬರು ಎಂದು ಹಲವಾರು ಸಂಶೋಧಕರು ಗುರುತಿಸುತ್ತಾರೆ. ಸಾವರ್ಕರ್‌ ಅವರು ಪ್ರತಿಗಾಮಿ ಸಂಘಟನೆಯಾದ ಹಿಂದೂ ಮಹಾಸಭಾದ ಸ್ಥಾಪಕರಾಗಿದ್ದಾರೆ. ಈ ಸಂಘಟನೆ ಪ್ರಜಾಪ್ರಭುತ್ವನ್ನು ಒಪ್ಪದೆ, ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದು ಪ್ರತಿಪಾದಿಸುವ ಸಂಘಟನೆಯಾಗಿದೆ.

ಒಟ್ಟಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳುವಂತೆ, ಸಾವರ್ಕರ್‌ ಅವರು ಭಾರತ ಮಾತೆಯ ಹೆಮ್ಮೆಯ ಪುತ್ರ ಅಲ್ಲ. ಅವರು ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ, ಕ್ರಾಂತಿಕಾರಿ ಲೇಖಕ, ಪ್ರಖರ ರಾಷ್ಟ್ರವಾದಿ ಕೂಡಾ ಅಲ್ಲ. ಅವರ ದೇಶಪ್ರೇಮ, ತ್ಯಾಗ, ಹೋರಾಟಗಳು ಭಾರತಕ್ಕೆ ಹಿಂದೆಯೂ, ಇಂದಿಗೂ, ಮುಂದೆಯೂ ಸ್ಪೂರ್ತಿದಾಯಕ ಅಲ್ಲ. 

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್‌ ಕಾರ್ಡ್’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...