Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌‌ಚೆಕ್‌: ಈ ಚಿತ್ರವನ್ನು ಮಹಿಳೆಯರ ಕಾಲಿಗೆ ಸಂಕೋಲೆ ಕಟ್ಟಿರುವಂತೆ ಎಡಿಟ್ ಮಾಡಲಾಗಿದೆ!

ಫ್ಯಾಕ್ಟ್‌‌ಚೆಕ್‌: ಈ ಚಿತ್ರವನ್ನು ಮಹಿಳೆಯರ ಕಾಲಿಗೆ ಸಂಕೋಲೆ ಕಟ್ಟಿರುವಂತೆ ಎಡಿಟ್ ಮಾಡಲಾಗಿದೆ!

- Advertisement -
- Advertisement -

ಅಫ್ಘಾನ್‌ ದೇಶವನ್ನು ಇಪ್ಪತ್ತು ವರ್ಷಗಳ ನಂತರ ತಾಲಿಬಾನ್‌ ಮರು ವಶಪಡಿಸಿಕೊಂಡ ನಂತರ ಹಲವು ಬರ್ಬರ ಮತ್ತು ಮಾನವೀಯ ಬಿಕ್ಕಟ್ಟಿನ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲೊಂದಾಗಿದೆ, ‘ಬುರ್ಖಾ ಧರಿಸಿರುವ ಮೂವರು ಮಹಿಳೆಯರ ಕಾಲಿಗೆ ಸರಪಣಿಯಿಂದ ಕಟ್ಟಿ ವ್ಯಕ್ತಿಯೊಬ್ಬ ಎಳೆದೊಯ್ಯುತ್ತಿರುವ’ ಚಿತ್ರ. ಈ ಚಿತ್ರದೊಂದಿಗೆ ಪಾಶ್ಚಿಮಾತ್ಯ ಉಡುಪಿನಲ್ಲಿರುವ ಮಹಿಳೆಯರ ಇನ್ನೊಂದು ಫೋಟೋವನ್ನು ಚಿತ್ರವನ್ನು ಕೂಡಾ ಹಂಚಿಕೊಳ್ಳಲಾಗುತ್ತಿದೆ.

ಈ ಎರಡು ಚಿತ್ರವನ್ನು ಹಂಚಿ, ತಾಲಿಬಾನ್‌ ಆಕ್ರಮಿತ ಅಫ್ಘಾನ್‌ ಮತ್ತು 1960-70 ರ ದಶಕದಲ್ಲಿನ ಅಫ್ಘಾನಿನ ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸಲಾಗುತ್ತಿದೆ. ಟಿವಿ 9 ಭಾರತವರ್ಶ್ ನಿರೂಪಕ ಶುಭಂಕರ್ ಮಿಶ್ರಾ ಕೂಡಾ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಅವರ ಟ್ವೀಟ್‌ ಅನ್ನು ಕೆಳಗೆ ನೀಡಲಾಗಿದೆ. (ಆರ್ಕೈವ್ ಲಿಂಕ್)

ಮೇಲಿನ ಟ್ವೀಟ್‌ಗಳನ್ನು ಹಾಕಿದ ಕೆಲವೆ ಗಂಟೆಗಳ ನಂತರ, ಶುಭಂಕರ್ ಮಿಶ್ರಾ ಮತ್ತೊಮ್ಮೆ ಚಿತ್ರಗಳನ್ನು ಬೇರೆ ಗ್ರಾಫಿಕ್‌ನಲ್ಲಿ ಟ್ವೀಟ್ ಮಾಡಿದ್ದಾರೆ. (ಆರ್ಕೈವ್ ಲಿಂಕ್)

ಈ ಚಿತ್ರವು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಈ ಚಿತ್ರಗಳು ಫೇಸ್‌ಬುಕ್‌ನಲ್ಲಿ ಕೂಡಾ ವೈರಲ್‌ ಆಗಿದೆ. (1 ಮತ್ತು 2)

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಚಿತ್ರಗಳನ್ನು ಖ್ಯಾತ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ಆಗಿರುವ ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ನಡೆಸಿದೆ. ವೈರಲ್‌ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ, ಸಂಕೋಲೆಗಳ ನೆರಳು ಸ್ವಲ್ಪ ವಿಚಿತ್ರವಾಗಿರುವುದನ್ನು ಗಮನಿಸಬಹುದಾಗಿದೆ. ಪುರುಷ ಮತ್ತು ಅವರ ಹಿಂದೆ ಇರುವ ಮಹಿಳೆಯ ನಡುವೆ ಸಂಕೋಲೆಯ ನೆರಳು ಗೋಚರಿಸುತ್ತದೆ, ಆದರೆ ನಂತರದ ಮಹಿಳೆಯ ನಡುವೆ ಈ ನೆರಳು ಕಾಣೆಯಾಗಿದೆ. ಆದರೆ ಎರಡನೆ ಮತ್ತು ಮೂರನೆ ಮಹಿಳೆಯ ನಡುವೆ ಇದು ಮತ್ತೆ ಕಾಣುತ್ತಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕಾಲಿಗೆ ಸರಪಳಿ ತೊಡಿಸಿರುವ ಚಿತ್ರ ಸ್ಟಾನ್ ಸ್ವಾಮಿಯವರದ್ದಲ್ಲ

ಈ ಚಿತ್ರಗಳಿಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಿರುವ ಆಲ್ಟ್‌ನ್ಯೂಸ್‌, ಎಬಿಪಿ ನ್ಯೂಸ್‌ನ ಬಂಗಾಳಿ ವಿಭಾಗವಾದ ಎಬಿಪಿ ಆನಂದದ 2017 ರ ವರದಿಯಲ್ಲಿ ವೈರಲ್‌ ಚಿತ್ರವನ್ನು ಪತ್ತೆಹಚ್ಚಿದೆ. ಆದರೆ ಈ ವರದಿಯಲ್ಲಿ ಇರುವ ಅದೇ ಚಿತ್ರದಲ್ಲಿ ಯಾವುದೆ ಸಂಕೋಲೆಗಳಿಲ್ಲ.

ಇದೇ ಚಿತ್ರವನ್ನು ‘ಮಾರ್ಡೆನ್‌ ಡಿಪ್ಲೊಮಸಿ’ 2017 ರ ಲೇಖನದಲ್ಲಿ ಬಳಸಿಕೊಂಡಿದೆ. ಇಲ್ಲಿಯೂ ವೈರಲ್‌ ಚಿತ್ರದಲ್ಲಿ ಇರುವಂತೆ ಯಾವುದೇ ಸಂಕೋಲೆಗಳು ಕಾಣುತ್ತಿಲ್ಲ.

ಇಷ್ಟೇ ಅಲ್ಲದೆ, 2011 ಮತ್ತು 2012 ರಲ್ಲಿ ಬರೆದ ಕೆಲವು ಬ್ಲಾಗ್ ಪೋಸ್ಟ್‌ಗಳಲ್ಲಿ ಕೂಡಾ ಈ ಚಿತ್ರವನ್ನು ಬಳಸಿಕೊಳ್ಳಲಾಗಿದ್ದು, ಅವುಗಳಲ್ಲಿ ಕೂಡಾ ಸಂಕೋಲೆಗಳು ಇಲ್ಲ. [ಲಿಂಕ್ 1 (ಆರ್ಕೈವ್ ಲಿಂಕ್), ಲಿಂಕ್ 2 (ಆರ್ಕೈವ್ ಲಿಂಕ್), ಲಿಂಕ್ 3 (2012 ಆರ್ಕೈವ್ ಲಿಂಕ್), ಲಿಂಕ್ 4 (2016 ಆರ್ಕೈವ್ ಲಿಂಕ್)]

ಇಂಟರ್ನೆಟ್ ಆರ್ಕೈವ್ ಲೈಬ್ರರಿಯನ್ನು ಬಳಸಿ, ಆಲ್ಟ್ ನ್ಯೂಸ್ ಈ ಬ್ಲಾಗ್ ಪೋಸ್ಟ್‌ಗಳ ಆರ್ಕೈವ್‌ ಮಾಡಿದೆ. ವಾಸ್ತವಲ್ಲಿ ಮೂಲ ಫೋಟೋವನ್ನು ಮೇ 2011 ರಲ್ಲಿ ಹಂಚಿಕೊಳ್ಳಲಾಗಿದೆ. ಇದರರ್ಥ ಚಿತ್ರವು ಕನಿಷ್ಠ 10 ವರ್ಷ ಹಳೆಯದಾಗಿದೆ.

ಇದನ್ನೂ ಓದಿ: ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬ ವೈರಲ್ ವಿಡಿಯೋ ಸುಳ್ಳು: ವಾಸ್ತವವೇನು?

ಈ ಎಲ್ಲಾ ಬ್ಲಾಗ್ ಪೋಸ್ಟ್‌ಗಳು ಒಂದೇ ಆಗಿದ್ದು, ಅವುಗಳನ್ನು ಪದಶಃ ಕಾಪಿ ಪೇಸ್ಟ್‌ ಮಾಡಲಾಗಿದೆ. ಎಲ್ಲಾ ಬ್ಲಾಗ್‌ ಪೋಸ್ಟ್‌ಗಳೂ, ಅಮೆರಿಕಾದ ಪತ್ರಕರ್ತೆ ಬಾರ್ಬರಾ ವಾಲ್ಟರ್ಸ್ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾಗ, ಅಫ್ಘಾನಿಸ್ತಾನದ ಮಹಿಳೆಯೊಂದಿಗೆ ಮಾತನಾಡಿದ ಘಟನೆಯನ್ನು ವಿವರಿಸುತ್ತದೆ.

2017 ರಲ್ಲಿ ಅಭಿಜಿತ್ ಅಯ್ಯರ್ ಮಿತ್ರ ಅವರು ವಾಟ್ಸಾಪ್ ಅನ್ನು ಉಲ್ಲೇಖಿಸಿ ಟ್ವಿಟರ್‌ನಲ್ಲಿ ಅದೇ ಕಥೆಯನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ, ಈ ಘಟನೆಯನ್ನು ಹಿಂದೆ ಭಾರತದಲ್ಲೂ ಹಂಚಿಕೊಳ್ಳಲಾಗಿತ್ತು. (ಆರ್ಕೈವ್ ಲಿಂಕ್)

ಬಾರ್ಬರಾ ವಾಲ್ಟರ್ಸ್ ವರದಿ ಮಾಡಿದ ಈ ಘಟನೆಯನ್ನು ಅಮೆರಿಕದ ಪ್ಯಾಕ್ಟ್‌ ಚೆಕಿಂಗ್‌ ಸಂಸ್ಥೆ 2014 ರಲ್ಲಿ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಹೊರ ಹಾಕಿದೆ. ಅದು ನಡೆಸಿದ ತನಿಖೆಯಂತೆ ಈ ಘಟನೆಯು ಕೇವಲ ವಿಡಂಬನಾತ್ಮಕ ಎಂದು ತೀರ್ಮಾನಿಸಿದೆ, ಇದು 2001 ರಿಂದ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.

ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಮಾರು ಹತ್ತು ವರ್ಷಗಳ ಹಿಂದಿನ ಚಿತ್ರವನ್ನು ಎಡಿಟ್‌ ಮಾಡಿ, ತಾಲಿಬಾ‌ನ್‌‌ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರದ ಚಿತ್ರ ಎಂದು ಶೇರ್‌ ಮಾಡಲಾಗುತ್ತಿದೆ.

ಕೃಪೆ: ಆಲ್ಟ್‌ನ್ಯೂಸ್

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...