Homeಮುಖಪುಟಆಹಾರದ ಹಣದುಬ್ಬರ ದರ 9.53%ಕ್ಕೆ ಏರಿಕೆ; ಕೈಗಾರಿಕಾ ಉತ್ಪಾದನೆಯಲ್ಲೂ ಕುಸಿತ

ಆಹಾರದ ಹಣದುಬ್ಬರ ದರ 9.53%ಕ್ಕೆ ಏರಿಕೆ; ಕೈಗಾರಿಕಾ ಉತ್ಪಾದನೆಯಲ್ಲೂ ಕುಸಿತ

- Advertisement -
- Advertisement -

ಭಾರತದಲ್ಲಿ ಚಿಲ್ಲರೆ ಆಹಾರದ ಹಣದುಬ್ಬರ ದರವು ಡಿಸೆಂಬರ್‌ನಲ್ಲಿ 9.53%ಕ್ಕೆ ಏರಿಕೆಯಾಗಿದ್ದು, ಗ್ರಾಹಕ ಆಹಾರ ಬೆಲೆ ಸೂಚ್ಯಂಕವು (CFPI) ಅದೇ ಅವಧಿಯಲ್ಲಿ 0.88% ರಷ್ಟು ಅನುಕ್ರಮ ಕುಸಿತವನ್ನು ಕಂಡಿದೆ. ಡಿಸೆಂಬರ್ 2022ರ ವಾರ್ಷಿಕ ಆಹಾರ ಹಣದುಬ್ಬರವು 4.19% ರಷ್ಟಿತ್ತು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ದಿನಬಳಕೆಯ ಆಹಾರ ಬುಟ್ಟಿಯಲ್ಲಿನ ಪದಾರ್ಥಗಳ ದರ ಏರಿಕೆಯಾಗುತ್ತಿದೆ. ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆಯು ಶೇ 4.67ರಷ್ಟಿತ್ತು. ಪ್ರಸಕ್ತ ಸಾಲಿನ ಅಕ್ಟೋಬರ್‌ನಲ್ಲಿ ಶೇ 8.7ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ತಿಳಿಸಿತ್ತು. ನವೆಂಬರ್‌ನಲ್ಲೂ ಚಿಲ್ಲರೆ ಆಹಾರದ ಹಣದುಬ್ಬರ ದರವು 8.7% ರಷ್ಟಿತ್ತು, ಅದು ಡಿಸೆಂಬರ್‌ನಲ್ಲಿ 9.53%ಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ನವೆಂಬರ್‌ನಲ್ಲಿ ಎಂಟು ತಿಂಗಳ ಕನಿಷ್ಠ 2.4%ಗೆ ಕುಸಿದಿದೆ.

ತರಕಾರಿಗಳ ಹಣದುಬ್ಬರದಲ್ಲಿ ಗಮನಾರ್ಹ ಏರಿಕೆಯಾಗಿದೆ. ನವೆಂಬರ್‌ನಲ್ಲಿ ಶೇ. 17.7ರಷ್ಟಿದ್ದ ಹಣದುಬ್ಬರ, ಡಿಸೆಂಬರ್‌ನಲ್ಲಿ ಶೇ. 27.64ಕ್ಕೆ ಹೆಚ್ಚಳವಾಗಿದೆ. ಗ್ರಾಹಕರ ಆಹಾರ ಬೆಲೆ ಸೂಚ್ಯಂಕವು CFPI ಆಗಸ್ಟ್‌ನಲ್ಲಿ 9.94%ರಷ್ಟಿತ್ತು ಸೆಪ್ಟೆಂಬರ್‌ನಲ್ಲಿ 6.62%ಕ್ಕೆ ಇಳಿದಿದೆ, ಪ್ರಾಥಮಿಕವಾಗಿ ಇದು ಟೊಮೆಟೊ ಬೆಲೆಗಳಿಂದ ಪ್ರಭಾವಿತವಾಗಿದೆ ಎಂದು ವರದಿಯಾಗಿದೆ.

ಚಿಲ್ಲರೆ ಈರುಳ್ಳಿ ಹಣದುಬ್ಬರವು ಡಿಸೆಂಬರ್‌ನಲ್ಲಿ 74.17% ರಷ್ಟು ಏರಿಕೆಯಾಯಿತು, ಹಲವಾರು ನಗರಗಳಲ್ಲಿ ಈರುಳ್ಳಿ ಕೆಜಿಗೆ 90ರೂ.ಗೆ ತಲುಪಿತ್ತು. ಇದು ರಫ್ತು ನಿಷೇಧವನ್ನು ವಿಧಿಸಲು ಸರ್ಕಾರವನ್ನು ಪ್ರೇರೇಪಿಸಿತು.  ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಕಾಲಿಕ ಮಳೆ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಆದರೆ ಈ ತಿಂಗಳ ಆರಂಭದಿಂದ ಈರುಳ್ಳಿ ಬೆಲೆಗಳಲ್ಲಿ ಕಡಿತವಾಗಿದೆ ಮತ್ತು ಈ ಕುಸಿತವು ಜನವರಿ 2024ರ ಹಣದುಬ್ಬರ ಅಂಕಿಅಂಶಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ದ್ವಿದಳ ಧಾನ್ಯಗಳ ಹಣದುಬ್ಬರವು ಡಿಸೆಂಬರ್‌ನಲ್ಲಿ 20.73% ಕ್ಕೆ ಏರಿಕೆಯಾಗಿದೆ. ಇದು ನವೆಂಬರ್‌ನಲ್ಲಿ 20.23% ರಷ್ಟಿತ್ತು. ಮಸಾಲೆ ಪದಾರ್ಥಗಳ ಹಣದುಬ್ಬರ ಶೇ. 19.69ರಷ್ಟಿದೆ. ಆದರೆ ತೈಲ ಮತ್ತು ಫ್ಯಾಟ್‌ ದರಗಳು ಶೇ. 14.96ರಷ್ಟು ಕಡಿಮೆಯಾಗಿದೆ. ಇಳಿಮುಖವಾಗುತ್ತಿರುವ ಉತ್ಪಾದನೆ ಮತ್ತು ಬೇಳೆಕಾಳುಗಳ ಬೇಡಿಕೆಯು ಹಣದುಬ್ಬರ ಏರಿಕೆಗೆ ಪ್ರಮುಖ ಅಂಶಗಳಾಗಿವೆ. ಒಟ್ಟಾರೆ ಧಾನ್ಯಗಳ ಹಣದುಬ್ಬರವು ನವೆಂಬರ್ 2023ರಲ್ಲಿ 10.27% ರಿಂದ ಡಿಸೆಂಬರ್‌ನಲ್ಲಿ 9.93% ಕ್ಕೆ ಇಳಿದಿದೆ. ಇದಕ್ಕೆ ಕಾರಣ ಗೋಧಿ ಬೆಲೆಯಲ್ಲಿ ಸ್ವಲ್ಪ ಇಳಿಮಖವಾಗಿರುವುದಾಗಿದೆ.

ಚಿಲ್ಲರೆ ಅಕ್ಕಿ ಬೆಲೆಗಳು ನವೆಂಬರ್‌ನಲ್ಲಿ 11.81%ಕ್ಕೆ ಹೋಲಿಕೆ ಮಾಡಿದರೆ ಡಿಸೆಂಬರ್‌ನಲ್ಲಿ 12.33% ರಷ್ಟು ಏರಿಕೆಯಾಗಿದೆ. ಬಿಳಿ ಅಕ್ಕಿ ರಫ್ತುಗಳನ್ನು ನಿಷೇಧ ಮತ್ತು ಪಾರ್-ಬಾಯ್ಲ್ಡ್ ರೈಸ್ ಮೇಲೆ 20% ರಫ್ತು ಸುಂಕವನ್ನು ವಿಧಿಸುವ ಸರ್ಕಾರದ ಕ್ರಮಗಳು ಈ ಹೆಚ್ಚಳಕ್ಕೆ ಕಾರಣವಾಗಿವೆ. ಇಂಧನ ಹಣದುಬ್ಬರವು ನವೆಂಬರ್‌ನಲ್ಲಿ ಶೇ. 0.77ರಷ್ಟು ಕಡಿಮೆಯಾಗಿತ್ತು. ಡಿಸೆಂಬರ್‌ನಲ್ಲಿ ಇದು ಶೇ. 0.99ರಷ್ಟು ತಗ್ಗಿದೆ.

ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳಂತಹ ಕೆಲವು ವಸ್ತುಗಳ ಹಣದುಬ್ಬರ ಸ್ವಲ್ಪಮಟ್ಟಿಗೆ ನಿಧಾನವಾಗಿರುತ್ತದೆ. ಡಿಸೆಂಬರ್‌ 2023ರಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಗೆ ಆಹಾರ ಮತ್ತು ಪಾನೀಯಗಳ ದರ ಹೆಚ್ಚಳ ಪ್ರಮುಖ ಕಾರಣವಾಗಿದೆ. ಆಹಾರ ವಿಭಾಗದಲ್ಲಿ ತರಕಾರಿಗಳ ದರ ಹೆಚ್ಚಳ ಗಮನಾರ್ಹವಾಗಿದೆ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ಇದನ್ನು ಓದಿ: ‘ಒಬಿಸಿ’ ಸಮುದಾಯವನ್ನು ಅವಮಾನಿಸಿದ ಬಾಬಾ ರಾಮ್‌ದೇವ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...