Homeಅಂಕಣಗಳುಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

- Advertisement -
- Advertisement -

ಗೌರಿ ಅವರಿಗೆ ಲಂಕೇಶ್ ಬರೆದಿದ್ದ ನಾಲ್ಕು ಪತ್ರಗಳು

1) 19-10-1993
ಪ್ರೀತಿಯ ಗೌರು,

ನಿನ್ನ ಪತ್ರ. Sorry. ಕಳೆದ ಮೂರು ದಿನಗಳಿಂದ ಉತ್ತರ ಬರೆಯಲು ಸಮಯ ಸಿಕ್ಕಿರಲಿಲ್ಲ.

ಆ ಯುರೋಪ್‍ನ ದೇಶಗಳು ಎಷ್ಟು ಸಜ್ಜಾಗಿ ವ್ಯವಸ್ಥಿತವಾಗಿವೆ ಎಂಬುದು ನನಗೆ ಗೊತ್ತು. ಆದರೆ ನಮ್ಮಂಥವರಿಗೆ ಅವರ ಪಿತ್ರಾರ್ಜಿತ ಕಲಾವಸ್ತುಗಳು ಉಸಿರುಗಟ್ಟಿಸುವಂತೆ ಇರುತ್ತವೆ. ಹಾಗೆಯೇ ಅವುಗಳಲ್ಲಿ ಅವರಿಗಿರುವ ಉತ್ಸಾಹ ಹಾಸ್ಯಾಸ್ಪದವಾಗಿ ಕಾಣುತ್ತದೆ,

ಆದರೆ ಪ್ಯಾರಿಸ್‍ನಂತಹ ನಗರ (ಈಗ ಅಲ್ಲಿಂದ ಜಗತ್‍ಪ್ರಖ್ಯಾತ ಮೇಧಾವಿಗಳು ಸಂಪೂರ್ಣವಾಗಿ ಮಾಯವಾಗಿದ್ದಾರೆ ಎಂದೆನಿಸುತ್ತದೆ) ನಿನಗೆ “Moveable Feast” (ಇದು ಏರ್ನೆಸ್ಟ್ ಹೆಮಿಂಗ್ವೆನ ಪುಸ್ತಕದ ಟೈಟಲ್ – ಗೌರಿ ಲಂಕೇಶ್) ಆಗುವುದು ಯಾವಾಗ ಅಂದರೆ, ನೀನು ಅದರ ಲಯವನ್ನು ಗ್ರಹಿಸಿದಾಗ; ಗೆಳೆಯರೊಂದಿಗೆ ಆ ನಗರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ; ಇವೆಲ್ಲ ಅನೇಕ ದಿನ ನೀನು ಅಲ್ಲಿ ತಂಗಿದಾಗ ಮಾತ್ರ ಸಾಧ್ಯವಾಗುತ್ತದೆ.

ನೀನು ನಿನ್ನ ಕೋರ್ಸ್‍ನ್ನು ಇಷ್ಟಪಡುತ್ತಿರುವೆ ಎಂದು ನಂಬಿದ್ದೇನೆ. ಸಮಯವಾದಾಗ ಪ್ಯಾರಿಸ್‍ನಿಂದ ಹೊರಗೆ ಹೋಗಿ ಆ ದೇಶದ ಗ್ರಾಮ ಪ್ರದೇಶಗಳನ್ನು ನೋಡು.

ಈ ದೇಶ ಇದ್ದಹಾಗೇ ಇದೆ; ಹಲವು ದುರಂತಗಳನ್ನು ಹೊರತುಪಡಿಸಿದರೆ. ಭೂಕಂಪ, ಕಾಂಗ್ರೆಸ್ ಪಕ್ಷದ ದುರಾಡಳಿತ… ಎಲ್ಲವೂ ಅಸಹ್ಯಕರವಾಗಿವೆ.

ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸೌಖ್ಯ,

ನಿನ್ನ ಪ್ರೀತಿಯ
ಅಪ್ಪ

2) 2-11-1993
ಪ್ರೀತಿಯ ಗೌರು,

ಹತ್ತು ದಿನಗಳ ಹಿಂದೆ ನಾನು ಬರೆದ ಪತ್ರ ತಲುಪಿದೆ ಎಂದು ನಂಬಿರುವೆ. ಇಲ್ಲಿಂದ ಯಾರೂ ಪತ್ರ ಬರೆದಿಲ್ಲ ಎಂದು ನಿನಗೆ ಬೇಸರವಾಗಿದೆ ಎಂದು ಕೇಳಿದೆ. ಒಂದನ್ನು ನನಪಿನಲಿಟ್ಟುಕೋ. ಜನರು ಮೂಲಭೂತವಾಗಿ ಸ್ವಾರ್ಥಿಗಳಾಗಿರುತ್ತಾರೆ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸುವುದು ತಪ್ಪು. ನೀನು ಇದನ್ನು ಅರಿತರೆ ಜೀವನದಲ್ಲಿ ಹೊರೆ ಕಡಿಮೆಯಾದಂತಾಗುತ್ತದೆ. ಸಾಕು ಈ ಉಪದೇಶಗಳು!

ಹೇಗಿದ್ದೀ? ಇಷ್ಟೋತ್ತಿಗಾಗಲೇ ನಿನಗೆ ಪ್ಯಾರಿಸ್ ಇಷ್ಟವಾಗಿರಬೇಕು. ಇಲ್ಲಿ ಮೊನ್ನೆಯವರೆಗೂ ಮಳೆ ಬರುತ್ತಿತ್ತು. ಆದರೆ ಈ ದಿನ ಸುಂದರವಾಗಿದೆ, bright, cool & thrilling! ಸದ್ಯದಲ್ಲೇ ಚಳಿಗಾಲ ಬರಲಿದೆ. ಈ ಬಾರಿಯ ದಸರಾ ಮತ್ತು ಗಣೇಶ ಹಬ್ಬಗಳು ತುಂಬಾ ಗದ್ದಲಮಯವಾಗಿದ್ದವು. ಈ ಗದ್ದಲಗಳ ನಡುವೆಯೇ 1970ರಲ್ಲಿ ಪ್ರಥಮವಾಗಿ ಪ್ರಕಟವಾಗಿದ್ದ ನನ್ನ “ಅಕ್ಷರ ಹೊಸಕಾವ್ಯ”ದ ಮರುಮುದ್ರಿಕೆಯನ್ನು ಹೊರತಂದೆವು.

ನಿನ್ನ ಪ್ರೀತಿಯ
ಅಪ್ಪ

3) 7-4-1994
ಪ್ರೀತಿಯ ಗೌರು,

ಇದೇ ಕೊನೆಯ ಕಾಗದ – ನೀನು ಪ್ಯಾರಿಸ್‍ನಿಂದ ಭಾರತಕ್ಕೆ ಹಿಂದಿರುಗುವ ಮುನ್ನ ಅನ್ನಿಸುತ್ತದೆ. ನೀನು ಟರ್ಕಿ ದೇಶದ ಜನರ ಬಗ್ಗೆ ಬರೆದದ್ದು ಕುತೂಹಲಕಾರಿಯಾಗಿತ್ತು. ಅವರು ಯುರೋಪಿಯನ್ ದೇಶದವರಿಗಿಂತ Courteous ಎಂದು ಬರೆದಿದ್ದೀ. ಆದರೆ ನ್ಯೂಸ್‍ವೀಕ್‍ನಲ್ಲಿ ಇತ್ತೀಚಿಗೆ ಮುಸ್ಲಿಂ ಮೂಲಭೂತವಾದಿಗಳು ಅಲ್ಜೀರಿಯ ಮತ್ತು ಈಜಿಪ್ಟ್ ದೇಶಗಳಲ್ಲಿಯಂತೆ ಟರ್ಕಿಯಲ್ಲಿಯೂ ತಮ್ಮ ಕಿತಾಪತಿ ಶುರು ಮಾಡಿದ್ದಾರೆ ಎಂದು ವರದಿಯಾಗಿತ್ತು. ಅದೊಂದು ದೊಡ್ಡ ದುರಂತ. ಯಾಕೆಂದರೆ, ಕಮಲ್ ಅತಾರುಕ್‍ನ ದೊಡ್ಡ ಸಾಧನೆ ಏನೆಂದರೆ, ಆತ ಟರ್ಕಿ ದೇಶವನ್ನು ಜಾತ್ಯತೀತ ರಾಜ್ಯವನ್ನಾಗಿಸಿದ್ದ. ಆದ್ದರಿಂದಲೇ ಟರ್ಕಿ ಯುರೋಪಿಗೆ ಹತ್ತಿರವಾಗಿತ್ತು.

ಈಗ ಫ್ರಾನ್ಸ್‌ನಲ್ಲಿ ವಸಂತ ಋತುಗಾಲ… ಪಶ್ಚಿಮ ಯುರೋಪ್ ದೇಶಗಳು ಈ ಸುಂದರವಾದ ಋತುಗಾಲಕ್ಕಾಗಿಯೇ ಹೇಳಿ ಮಾಡಿಸಿದಂತಿರಬೇಕು! ಅದರಲ್ಲಿಯೂ ಮೇ ತಿಂಗಳಂತೂ ಅತ್ಯಂತ ಆನಂದದಾಯಕವಾಗಿರುತ್ತದೆ ಎಂದು ಕೇಳಿದ್ದೇನೆ.

ನೀನು ಹಿಂದಿರುಗುವಾಗ ಮರೆಯದೇ ಒಂದೆರಡು ಸ್ಕಾಚ್ ಬಾಟಲ್‍ಗಳನ್ನು ತೆಗೆದುಕೊಂಡು ಬಾ. ತುಂಬಾ ದುಬಾರಿಯಾದದ್ದೇನೂ ಬೇಡ.

ನಿಜ, ನನಗೆ ಸಣ್ಣ ಸ್ಟ್ರೋಕ್ ಆಗಿತ್ತು. ಆದರೆ ಈಗ ಪರವಾಗಿಲ್ಲ.. ಡಾಲರ್‌ನಷ್ಟೇ ಸ್ಥಿರವಾಗಿದ್ದೇನೆ. (ಆದರೆ ಡಾಲರ್ ಮಾತ್ರ ಕುಸಿಯುತ್ತಿದೆಯಂತೆ!)

ಪುಸ್ತಕಗಳ ಬಗ್ಗೆ ಕೇಳಿದ್ದೀ. ಆದಷ್ಟು ಪುಸ್ತಕಗಳನ್ನು ತಗೊಂಡು ಬಾ. ಐಯೊನೆಸ್ಕೊ ತೀರಿಹೋದದ್ದು ಕೇಳಿ ಬೇಸರವಾಯಿತು. ಅವನು lovely fellow. ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ. (ಅದರ ಹೆಸರು ಸದ್ಯಕ್ಕೆ ನನಗೆ ಬರುತ್ತಿಲ್ಲ).

ನಿನ್ನ ಪ್ರೀತಿಯ
ಅಪ್ಪ

4) 29-4-1994
ಪ್ರೀತಿಯ ಗೌರು,

ಇಂಗ್ಲೆಂಡ್‍ಗೆ ಮತ್ತೆ ಹೋದಾಗ ಒಂದು ಒಳ್ಳೆಯ ಅಂಗಡಿಗೆ ಹೋಗಿ ಜಾರ್ಜ್||| ಬಗ್ಗೆ ಪ್ರಕಟವಾಗಿರುವ ನಾಟಕದ ಪುಸ್ತಕವನ್ನು ಮರೆಯದೇ ತಗೊಂಡು ಬಾ. ಜಾರ್ಜ್||| ಎಂಬ ರಾಜನಿಗೆ ಅಮೆರಿಕಾದ ಸ್ವಾತಂತ್ರ್ಯ ಯುದ್ಧ ನಡೆಯುತ್ತಿರುವಾಗ ಹುಚ್ಚು ಹಿಡಿದಿತ್ತು. ಅವನು ಒಳ್ಳೆಯವನಾಗಿದ್ದರೂ ಅವನ ಸುತ್ತಲೂ ಇದ್ದ ಜನ ಅವನಿಗೆ ಹುಚ್ಚು ಹಿಡಿಸಿದ್ದರು! ಅವನ ಕಥೆ ಒಂದು ಒಳ್ಳೆಯ ನಾಟಕವಾಗಿ ಮೂಡಿಬಂದಿದೆಯಂತೆ. (ಆ ನಾಟಕದ ಪ್ರದರ್ಶನ ಈಗ ಇಂಗ್ಲೆಂಡ್‍ನಲ್ಲಿ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾನು ಅಮೆರಿಕಾದಲ್ಲಿನ ಪ್ರದರ್ಶನದ ಬಗ್ಗೆ ವಿಮರ್ಶೆ ಓದಿರಬೇಕು) ಆ ನಾಟಕದ ಪುಸ್ತಕ ಸಿಕ್ಕರೆ ಮರೆಯದೇ ತಗೊಂಡು ಬಾ.

ನಾನೀಗ ಆರಾಮವಾಗಿದ್ದೇನೆ. rest, meditation ಮತ್ತು will powerಗಳಿಂದಾಗಿ!

ನೀ ಹೇಗಿದ್ದೀ? ಫ್ರಾನ್ಸ್ ಹೇಗಿದೆ? ನೀನು ನಿನ್ನ ಗೆಳೆಯರೊಂದಿಗೆ ಇರುವ ಹಲವು ಫೋಟೋಗಳನ್ನು ನೋಡಿದೆ. ನೀನು ಚೆನ್ನಾಗಿ ಕಾಣಿಸುತ್ತೀ..

ಚಿದು ಕಾಗದ ಬರೆದಿದ್ದ ಬೇರೆ ದೇಶಗಳಿಗೆ ಒಮ್ಮೆ ಪ್ರಯಾಣ ಮಾಡಿ ಎಂದು ಸೂಚಿಸಿದ್ದ. ಆದರೆ ನನಗೆ ಪ್ರಯಾಣ ಮಾಡುವಷ್ಟು ಆರೋಗ್ಯ ಇಲ್ಲ. ಹಾಗೆಯೇ ಈ ಟೂರಿಸ್ಟ್ ಜಾಗಗಳನ್ನು ಕಂಡರೆ ನನಗೆ ಆಸಹ್ಯ!

ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಮಳೆಯಾಗಿಲ್ಲ. ಬಹಳ ಸೆಖೆ. ಸಾಮಾನ್ಯವಾಗಿ ಏಪ್ರಿಲ್ ಕೊನೆಯ ಭಾಗದಲ್ಲಿ ಬೆಂಗಳೂರಿನಲ್ಲಿ ಮಳೆಯಾಗುತ್ತದೆ, ಅದಾದ ನಂತರ ಬೆಂಗಳೂರು ಟರ್ಫ್ ಕ್ಲಬ್‍ನವರು ರೇಸ್‍ಗಳಿಗೆ ತಮ್ಮ ಟ್ರ್ಯಾಕ್‍ಗಳನ್ನು ಸಿದ್ಧಪಡಿಸುತ್ತಾರೆ. ಈ ಬಾರಿ ಅದು doubtful.

ನಿನ್ನ ಪ್ರೀತಿಯ
ಅಪ್ಪ


ಇದನ್ನೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...