ಆದಾಯ ಹೆಚ್ಚಿಸುವ ಸಲುವಾಗಿ ಘೋಷಿಸಿದ ಜಿಎಸ್‌ಟಿ ದರಗಳ ಪರಿಷ್ಕರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದು, ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಟ್ವಿಟರ್‌ನಲ್ಲಿ ದರ ಏರಿಕೆಯಿಂದಾಗಿ ದುಬಾರಿಯಾಗಲಿರುವ ವಸ್ತುಗಳ ಪಟ್ಟಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಗಬ್ಬರ್ ಸಿಂಗ್ ಎಂದು ಹೇಳಿದ್ದಾರೆ. “ಮತ್ತೆ ಗಬ್ಬರ್ ಸಿಂಗ್ ಸ್ಟ್ರೈಕ್” ಎಂದು ಅವರು ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಹೆಚ್ಚಿನ ತೆರಿಗೆಗಳು, ಆದರೆ ಯಾವುದೇ ಉದ್ಯೋಗಗಳಿಲ್ಲ” ಎಂದು ಅವರು ಹೇಳಿದ್ದು, ಒಂದು ಕಾಲದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ನಾಶಪಡಿಸುವುದು ಹೇಗೆ ಎಂಬುದರ ಕುರಿತು ಬಿಜೆಪಿಯ ಮಾಸ್ಟರ್‌ಕ್ಲಾಸ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್, ಹಾಲು, ಮೊಸರು ಮತ್ತು ಪನೀರ್‌ನಂತಹ ಪ್ಯಾಕ್ ಮಾಡಿದ ಆಹಾರಗಳ ಮೇಲೆ ತರಲು ಜಿಎಸ್‌ಟಿ ಹೇರಲು ನಿರ್ಧರಿಸಿದೆ.
HIGH taxes, NO jobs
BJP’s masterclass on how to destroy what was once one of the world’s fastest growing economies. pic.twitter.com/cinP1o65lB
— Rahul Gandhi (@RahulGandhi) July 18, 2022
ಜಿಎಸ್‌ಟಿ ಹೆಚ್ಚಳವನ್ನು, “ಉಸಿರುಗಟ್ಟಿರುವಂತಹ ಬೇಜವಾಬ್ದಾರಿ” ಎಂದು ಕರೆದಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊಸ GST ದರ ಜಾರಿ: ಯಾವುದು ದುಬಾರಿಯಾಗಲಿವೆ? | ಸಂಕ್ಷಿಪ್ತ ವಿವರಣೆ
“ಭಾರತೀಯರಿಗೆ ಆರ್ಥಿಕ ತೊಂದರೆಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಈ ಜಿಎಸ್‌ಟಿ ದರದ ಏರಿಕೆಯು ಉಸಿರುಗಟ್ಟಿಸುವಂಹ ಬೇಜವಾಬ್ದಾರಿತನದ ನಡೆಯಾಗಿದೆ. ಹಣದುಬ್ಬರವು ತನ್ನ ಗಳಿಕೆಯನ್ನು ತಿನ್ನುತ್ತಿದ್ದರೂ ಸಹ ಸಾಮಾನ್ಯ ಜನತೆ ಹೊರೆಯ ಭಾರವನ್ನು ಹೊತ್ತುಕೊಳ್ಳುತ್ತದೆ” ಎಂದು ಹೇಳಿದ್ದಾರೆ.


