Homeಮುಖಪುಟಪೆಗಾಸಸ್ ಪಟ್ಟಿಯಲ್ಲಿದ್ದ ಜಾರ್ಖಂಡ್ ಪತ್ರಕರ್ತನ ಬಂಧನ; ದಿಟ್ಟ ವರದಿಗಾರಿಕೆಯೇ ಮುಳುವಾಯಿತೆ?

ಪೆಗಾಸಸ್ ಪಟ್ಟಿಯಲ್ಲಿದ್ದ ಜಾರ್ಖಂಡ್ ಪತ್ರಕರ್ತನ ಬಂಧನ; ದಿಟ್ಟ ವರದಿಗಾರಿಕೆಯೇ ಮುಳುವಾಯಿತೆ?

- Advertisement -
- Advertisement -

ಪೆಗಾಸಸ್ ಸ್ನೂಪಿಂಗ್ ಪಟ್ಟಿಯಲ್ಲಿ ತನ್ನ ಹೆಸರು ಕಾಣಿಸಿಕೊಂಡಿದ್ದರಿಂದ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಅವರನ್ನು ಜಾರ್ಖಾಂಡ್‌ ಪೊಲೀಸರು ಬಂಧಿಸಲಾಗಿದೆ. ಕಳೆದ ವರ್ಷ ಮಾವೋವಾದಿ ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ರೂಪೇಶ್ ಹೆಸರನ್ನು ಸೇರಿಸಲಾಗಿದೆ.

ಪತ್ರಕರ್ತ ರೂಪೇಶ್‌ ಮಾವೋವಾದಿಗಳಿಗಾಗಿ ನಿಧಿ ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ರೂಪೇಶ್ ಕುಟುಂಬ ಹಾಗೂ ಹಲವಾರು ಪತ್ರಕರ್ತರು ಆರೋಪಗಳನ್ನು ಅಲ್ಲಗಳೆದಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಕಟ್ಟಕಡೆಯ ಸಮುದಾಯಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರಂತರ ವರದಿ ಮಾಡುತ್ತಿದ್ದರಿಂದ ರೂಪೇಶ್ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಸಿಪಿಐ (ಮಾವೋವಾದಿ) ಪಕ್ಷದ ಪ್ರಶಾಂತ್ ಬೋಸ್ ಅಲಿಯಾಸ್ ಕಿಶಾಂದಾ ಸೇರಿದಂತೆ ಜಾರ್ಖಂಡ್‌ನ ಸರೈಕೆಲಾ ಜಿಲ್ಲೆಯ ಮಾವೋವಾದಿ ನಾಯಕರ ವಿರುದ್ಧ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪೇಶ್ ಬಂಧನವಾಗಿದೆ.

ಮಾವೋವಾದಿ ಸಂಪರ್ಕಗಳ ಆರೋಪದ ಮೇಲೆ ರೂಪೇಶ್‌ ಅವರನ್ನು 2019ರಲ್ಲಿ ಗಯಾ ಪೊಲೀಸರು ಬಂಧಿಸಿದ್ದರು. ಆದರೆ ಪೊಲೀಸರು ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗದ ಕಾರಣ ಜಾಮೀನು ಪಡೆದಿದ್ದರು ಎಂದು ‘ದಿ ವೈರ್’ ವರದಿ ಮಾಡಿತ್ತು. ‘ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ರೂಪೇಶ್ ಹೇಳಿದ್ದರು.

ಇದನ್ನೂ ಓದಿರಿ: ಲುಲುಮಾಲ್: ಬೇಕಂತಲೇ ನಮಾಜ್‌ ಮಾಡಿ ವಿವಾದ ಸೃಷ್ಟಿ; ಪಿತೂರಿಯ ಹಿಂದೆ ಯಾರಿದ್ದಾರೆ?

ರೂಪೇಶ್‌ ಅವರ ಪತ್ನಿ ಇಪ್ಸಾ ಶತಾಕ್ಷಿ ಅವರೂ ದಿಟ್ಟ ಹೋರಾಟಗಾರ್ತಿ. ಬುಡಕಟ್ಟು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಶತಾಕ್ಷಿ ಅವರ ಹೆಸರು ಕೂಡ ಪೆಗಾಸಸ್ ಸ್ನೂಪಿಂಗ್ ಪಟ್ಟಿಯಲ್ಲಿತ್ತು. ದಿ ವೈರ್‌ಗೆ ಪ್ರತಿಕ್ರಿಯೆ ನೀಡಿರುವ ಅವರು, “ಖಾರ್ಸಾವಾನ್ ಜಿಲ್ಲೆಯ ಪೊಲೀಸರು ರಾಮಗಢ್‌ನಲ್ಲಿರುವ ನಮ್ಮ ಮನೆಯನ್ನು ಒಂಬತ್ತು ಗಂಟೆಗಳ ಕಾಲ ಸರ್ಚ್ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

“ಬೆಡ್ ಶೀಟ್, ಒಂಬತ್ತು ಪುಟಗಳ ನೋಟ್‌ಬುಕ್, ಮೋಟರ್‌ ಸೈಕಲ್ ದಾಖಲೆ, ಎರಡು ಮೊಬೈಲ್ ಫೋನ್‌ಗಳು, ಒಂದು ಹಾರ್ಡ್ ಡಿಸ್ಕ್, ಕಾರಿನ ದಾಖಲೆ, ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಚ್ ವೇಳೆ ಸುಮಾರು ಅರ್ಧಗಂಟೆ ಕಾಲ ಪೊಲೀಸರು ನಮ್ಮನ್ನು ಮನೆಯಿಂದ ಹೊರಗೆ ಕಳುಹಿಸಿದರು. ಒಳಗಿನಿಂದ ಬಾಗಿಲು ಲಾಕ್‌ ಮಾಡಿದ್ದರು” ಎಂದು ತಿಳಿಸಿದ್ದಾರೆ.

“ನಿರ್ಭೀತವಾಗಿ ಪತ್ರಿಕೋದ್ಯಮ ವೃತ್ತಿ ಮಾಡುತ್ತಿದ್ದ ಕಾರಣ ನನ್ನ ಗಂಡನನ್ನು ಟಾರ್ಗೆಟ್ ಮಾಡಲಾಗಿದೆ” ಎಂದು ಇಪ್ಸಾ ತಿಳಿಸಿದ್ದಾರೆ.

ರೂಪೇಶ್‌ ಇತ್ತೀಚೆಗೆ ಗಿರಿದಿಹ್‌ಗೆ ಭೇಟಿ ನೀಡಿದ್ದರು. ಕೈಗಾರಿಕಾ ಮಾಲಿನ್ಯದಿಂದಾಗಿ ಸ್ಥಳೀಯ ಜನರ ಜೀವನ ಎಷ್ಟು ಹದಗೆಟ್ಟಿದೆ ಎಂಬುದರ ಕುರಿತು ವರದಿ ಮಾಡಿದ್ದರು. ಮುಖದ ಮೇಲೆ ವಿಕಾರವಾದ ಗಡ್ಡೆ ಬೆಳೆದಿರುವ, ನಡೆಯಲೂ ಕೂಡ ಸಾಧ್ಯವಾಗದೆ ಇರುವ ಸ್ಥಳೀಯ ಹೆಣ್ಣುಮಗಳೊಬ್ಬಳ ವೀಡಿಯೊವನ್ನು ಅವರು ಟ್ವೀಟ್ ಮಾಡಿದ್ದಾರೆ. ವೀಡಿಯೊ ವೈರಲ್ ಕೂಡ ಆಗಿತ್ತು. ಕೆಲವು ವೈದ್ಯರು, ನಟ ಸೋನು ಸೂದ್ ಅವರ ತಂಡವು ಟ್ವೀಟ್‌ಗೆ ಪ್ರತಿಕ್ರಿಯಿಸಿ, ಆ ಹೆಣ್ಣುಮಗುವಿಗೆ ಸಹಾಯಹಸ್ತ ನೀಡಿದ್ದರು.

ಹಲವಾರು ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ರೂಪೇಶ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿರಿ: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ತಮಿಳುನಾಡಿನ ಕಲ್ಲಾಕುರಿಚಿಯಲ್ಲಿ ಹಿಂಸಾಚಾರ

“ಕೈಗಾರಿಕೆಗಳು ಉಂಟು ಮಾಡುತ್ತಿರುವ ಮಾಲಿನ್ಯದಿಂದಾಗಿ ಹಳ್ಳಿಗಳ ಮೇಲಾಗುತ್ತಿರುವ ದುಷ್ಪರಿಣಾಮದ ಕುರಿತು, ಸುದ್ದಿಮನೆಗಳು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಗ್ರೌಂಡ್‌ ರಿಪೋರ್ಟ್‌ ಅನ್ನು ರೂಪೇಶ್ ಕುಮಾರ್ ಸಿಂಗ್ ಮಾಡಿದ್ದಾರೆ. ಅದು ಅವರ ಕೊನೆಯ ವರದಿಯೂ ಆಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವರದಿ ಮಾಡುವ ಪತ್ರಕರ್ತರು ಸರ್ಕಾರದ ಕಣ್ಗಾವಲನ್ನು, ಸೆರೆಮನೆ ವಾಸವನ್ನು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಾಗದು” ಎಂದು ಸ್ವತಂತ್ರ ಪತ್ರಕರ್ತೆ ಶಾಲಿನಿ ನಾಯರ್ ಟ್ವೀಟ್ ಮಾಡಿದ್ದಾರೆ.

“ನಿಮಗೆ ವಾಕ್ ಸ್ವಾತಂತ್ರ್ಯದ ಬಗ್ಗೆ ಕಾಳಜಿ ಇದ್ದರೆ, ಪ್ರಚಾರವನ್ನು ಪಡೆಯದೆ ಗ್ರೌಂಡ್ ರಿಪೋರ್ಟ್ ಮಾಡುವ ಪತ್ರಕರ್ತರನ್ನು ಬೆಂಬಲಿಸಿ” ಎಂದು ಸ್ವತಂತ್ರ ಪತ್ರಕರ್ತೆ ನೇಹಾ ದೀಕ್ಷಿತ್ ಟ್ವೀಟ್ ಮಾಡಿದ್ದಾರೆ. ದಿಟ್ಟ ಪತ್ರಕರ್ತರಾದ ರೂಪೇಶ್‌ ಸಿಂಗ್‌, ಮೊಹಮ್ಮದ್‌ ಜುಬೇರ್‌, ಸಿದ್ದಿಕ್‌ ಕಪ್ಪನ್‌, ಆಸಿಫ್‌ ಸುಲ್ತಾನ್‌ ಅವರ ಹೆಸರುಗಳನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿರೀಕ್ಷಣಾ ಜಾಮೀನು ಕೋರಿ ಹೆಚ್‌.ಡಿ ರೇವಣ್ಣ ಅರ್ಜಿ: ಎಸ್‌ಐಟಿಗೆ ಕೋರ್ಟ್‌ ನೋಟಿಸ್

0
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ, ಶಾಸಕ ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ನೋಟಿಸ್ ಜಾರಿ ಮಾಡಿದೆ...