Homeಕರ್ನಾಟಕಗಾಂಧಿ ತಾತನ ಶಾಂತಿ ಸಂದೇಶ ಸಾರಲು ಮುಂದಾದ ’ನಮ್ಮ ಧ್ವನಿ’ ಬಳಗದಿಂದ ವಿಶಿಷ್ಟ ಗಾಂಧಿ ಜಯಂತಿ

ಗಾಂಧಿ ತಾತನ ಶಾಂತಿ ಸಂದೇಶ ಸಾರಲು ಮುಂದಾದ ’ನಮ್ಮ ಧ್ವನಿ’ ಬಳಗದಿಂದ ವಿಶಿಷ್ಟ ಗಾಂಧಿ ಜಯಂತಿ

"ನಮ್ಮ ಧ್ವನಿ" ಎಂಬ ಉತ್ಸಾಹಿ ತಂಡವನ್ನು ಪ್ರಗತಿಪರ ಚಿಂತಕರಾದ ದಿವಂಗತ ಮಹೇಂದ್ರ ಕುಮಾರ್‌ರವರು ಕಟ್ಟಿದ್ದರು. ಸಮಾಜದಲ್ಲಿ ನಡೆಯುವ ಹಾಗುಹೋಗುಗಳ ಬಗ್ಗೆ ವಿಮರ್ಶಿಸುತ್ತಾ, ವಿಶ್ಲೇಷಿಸುತ್ತಾ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

- Advertisement -
- Advertisement -

ಪ್ರಗತಿಪರ ಚಿಂತಕ ದಿವಂಗತ ಮಹೇಂದ್ರ ಕುಮಾರ್‌ ಅವರು ಪ್ರಾರಂಭಿಸಿದ್ದ ’ನಮ್ಮ ಧ್ವನಿ’ ತಂಡವು ಗಾಂಧಿ ಜಯಂತಿಯನ್ನು ’ನಮ್ಮ ನಡೆ ಗಾಂಧಿ ಕಡೆ’ ಎಂಬ ಧ್ಯೇಯದೊಂದಿಗೆ ಎಂಬ ವಿನೂತನ ರೀತಿಯಲ್ಲಿ ಆಚರಿಸಿತು.

ಬೆಂಗಳೂರಿನ ಟೌನ್‌ಹಾಲ್‌‌ನಿಂದ ಕಾಲ್ನಡಿಗೆಯಲ್ಲಿ ಹೊರಟ ತಂಡವು ಮೆಜೆಸ್ಟಿಕ್ ಮೂಲಕ ಹಾದು ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆಯವರೆಗೂ ಮೆರವಣಿಗೆ ನಡೆಸಿತು. ಗಾಂಧಿಯ ಆಶಯಗಳ ಪೋಸ್ಟರ್‌ ಪ್ರದರ್ಶನ, ಗಾಂಧಿ ಜಯಂತಿಯ ಶುಭಾಶಯ ಪತ್ರ ಹಾಗೂ ಶಾಂತಿಯ ಸಂಕೇತವಾಗಿ ಬಿಳಿ ಗುಲಾಬಿಯನ್ನು ಹಂಚುತ್ತಾ ಗಮನ ಸೆಳೆಯಿತು.

ಇದನ್ನೂ ಓದಿ: ಮಹೇಂದ್ರ ಕುಮಾರ್ ಎಂಬ ‘ನಮ್ಮ ಧ್ವನಿ’ಯ ನೆನಪು: ಮುನೀರ್‌ ಕಾಟಿಪಳ್ಳ

ಜಾಥಾದಲ್ಲಿ ಚಿಂತಕ, ನಟ ಚೇತನ್, ಹಾಗೂ ಸಾಹಿತಿ ಯೋಗೇಶ್ ಮೇಷ್ಟ್ರ ಕೂಡಾ ಭಾಗವಹಿಸಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರು, ಹಾಗೂ ವಿದ್ಯಾರ್ಥಿಗಳು ಹಾಗೂ ಹಲವಾರು ಪಾದಚಾರಿಗಳು ಮೆರವಣಿಗೆಯಲ್ಲಿ ಹೆಜ್ಜೆಯಾಕಿದರು.

“ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ. ಸತ್ಯ, ಪ್ರೀತಿ, ಅಹಿಂಸೆ ಎಲ್ಲಿ ನೆಲೆಸಿರುತ್ತದೆಯೋ ಅಲ್ಲಿ ಶಾಂತಿ ತೃಪ್ತಿ ನೆಲೆಸುತ್ತದೆ. ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆ. ಅಹಿಂಸೋ ಪರಮೋ ಧರ್ಮ” ಎಂಬ ಬರಹಗಳಿದ್ದ ಪ್ಲಕಾರ್ಡುಗಳನ್ನು ಹಿಡಿದು, ಗಾಂಧೀಜಿ ಅಮರರಾಗಲಿ, ಮಹೇಂದ್ರ ಕುಮಾರ್ ಅಮರರಾಗಲಿ ಎಂಬ ಘೋಷಣೆಗಳೊಂದಿಗೆ ಮೆರವಣಗೆ ನಡೆಯಿತು.

ಜಾಥಾದಲ್ಲಿ ಸಾಹಿತಿ ಯೋಗೇಶ್ ಮೇಷ್ಟ್ರು ಭಾಗವಹಿಸಿದರು.

ಯುವ ಮುಖಂಡ, ಚಿಂತಕ ರಾ ಚಿಂತನ್ ಮಾತನಾಡಿ, “ನಮ್ಮ ಧ್ವನಿ ಮಹೇಂದ್ರ ಕುಮಾರ್ ಮತ್ತು ನಮ್ಮೆಲ್ಲರ ಕನಸು. ಈ ದೇಶದ ಶಾಂತಿ ಸೌಹಾರ್ದತೆಯನ್ನು ಕದಡುವ ಕೆಲಸಗಳು ನಡೆಯುತ್ತಿರುವಾಗ ಅದನ್ನು ಶಾಶ್ವತವಾಗಿ ನಿಲ್ಲಿಸಲು ನಮ್ಮ ಧ್ವನಿ ಆರಂಭವಾಯಿತು. ಈ ನಡುವೆ ನಾವು ಮಹೇಂದ್ರ ಕುಮಾರ್‌ರವರನ್ನು ಕಳೆದುಕೊಂಡು ಅಕ್ಷರಶಃ ತಬ್ಬಲಿಗಳಾಗಿದ್ದೆವು. ನಮ್ಮಧ್ವನಿಯನ್ನು ಮುಂದುವರೆಸಲು ಗಾಂಧಿ ಜಯಂತಿಯ ದಿನ ಪ್ರಸಸ್ತವಾದ ದಿನ. ಹಾಗಾಗಿ ನಾವು ಮೊಟ್ಟ ಮೊದಲ ಬಾರಿಗೆ ಬೀದಿಗಿಳಿದು ಗಾಂಧಿ ತಾತನ ಶಾಂತಿಯ ಸಂದೇಶಗಳನ್ನು ಜನರಿಗೆ ತಲುಪಿಸಲು ಈ ಜಾಥವನ್ನು ಹಮ್ಮಿಕೊಂಡಿದ್ದೇವೆ” ಎಂದರು.

ನಾನುಗೌರಿ.ಕಾಂ ಜೊತೆ ಮಾತನಾಡಿದ ’ನಮ್ಮ ಧ್ವನಿ’ ಬಳಗದ ಸಂಸ್ಥಾಪಕ ಸದಸ್ಯರಾದ ರುದ್ರು ಪುನೀತ್‌ ಆರ್‌.ಸಿ, “ಮಹೇಂದ್ರ ಕುಮಾರ್‌ ಅವರ ಆಶಯಗಳನ್ನು ಮುಂದುವರೆಸಲು ’ನಮ್ಮ ಧ್ವನಿ’ ತಂಡ ಬದ್ದವಾಗಿದೆ. ಮಹೇಂದ್ರರವರ ಆಶಯದಂತೆ ಅನ್ಯಾಯದ ವಿರುದ್ದ ’ನಮ್ಮ ಧ್ವನಿ’ ತಂಡವು ಯಾವತ್ತಿಗೂ ನಿಲ್ಲುತ್ತದೆ. ಕೊರೊನಾ ಕಾರಣದಿಂದ ತಂಡದ ಚಟುವಟಿಕೆ ತುಸು ನಿಧಾನವಾಗಿತ್ತಾದರೂ, ಇದೀಗ ತಂಡದ ಚಟುವಟಿಕೆಯನ್ನು ಮತ್ತೇ ಉತ್ಸಾಹದಿಂದ ಪ್ರಾರಂಭಿಸಿದ್ದೇವೆ” ಎಂದರು.

ಇದನ್ನೂ ಓದಿ: ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ಜಾಥಾದಲ್ಲಿ ಭಾಗವಹಿಸಿದ ನಟ ಚೇತನ್

“ನಮ್ಮ ಧ್ವನಿ” ಎಂಬ ಉತ್ಸಾಹಿ ತಂಡವನ್ನು ಪ್ರಗತಿಪರ ಚಿಂತಕರಾದ ದಿವಂಗತ ಮಹೇಂದ್ರ ಕುಮಾರ್‌ರವರು ಕಟ್ಟಿದ್ದರು. ಸಮಾಜದಲ್ಲಿ ನಡೆಯುವ ಹಾಗುಹೋಗುಗಳ ಬಗ್ಗೆ ವಿಮರ್ಶಿಸುತ್ತಾ, ವಿಶ್ಲೇಷಿಸುತ್ತಾ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಯುವಕರನ್ನು ತಲುಪಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿದ್ದ ಮಹೇಂದ್ರ ಕುಮಾರ್‌, ಪ್ರತಿನಿತ್ಯ ತಮ್ಮ ಹರಿತ ಬರಹ ಮತ್ತು ವಿಡಿಯೋಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದರು. ನಮ್ಮ ಧ್ವನಿ ಯೂಟ್ಯೂಬ್ ಚಾನೆಲ್‌ನಲ್ಲಿ ಚಿಂತನಾರ್ಹ ಮತ್ತು ಸಕಾಲಿಕ ಸರಣಿ ವಿಡಿಯೋಗಳಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರು.

ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...