ಗುಜರಾತಿನಲ್ಲಿ ರೆಮ್ಡೆಸಿವಿರ್ ಹೆಸರಲ್ಲಿ ನಕಲಿ ಇಂಜೆಕ್ಷನ್ ಮಾರುತ್ತಿದ್ದ ಒಂದು ಜಾಲವನ್ನು ಮೂರು ದಿನದ ಹಿಂದೆ ಭೇದಿಸಲಾಗಿದೆ. ಬಂಧಿತ ಗ್ಯಾಂಗಿನ ಏಳು ಜನರ ಪೈಕಿ ಇಬ್ಬರು ಮುಸ್ಲಿಮರಿದ್ದು, ಬಲಪಂಥೀಯರು ಮತ್ತು ಬಿಜೆಪಿ ಐಟಿ ಸೆಲ್, ಈ ಇಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಿ ಇದಕ್ಕೆ ಕೋಮು ಬಣ್ಣ ಕಟ್ಟಲು ಹೊರಟಿದೆ. ಅದೇ ಪ್ರಯೋಗದ ಮುಂದುವರೆದ ಭಾಗವಾಗಿ, ಬೆಂಗಳೂರಲ್ಲಿ ಸಂಸದ ತೇಜಸ್ವಿ ಸೂರ್ಯ ‘ಬೆಡ್ ಬ್ಲಾಕಿಂಗ್’ ವಿಷಯವನ್ನು ಕೋಮು ಬಣ್ಣಕ್ಕೆ ತಿರುಗಿಸುವ ಹುನ್ನಾರ ನಡೆಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ರೆಮ್ಡೆಸಿವಿರ್ ಕೋವಿಡ್ ರೋಗಿಗಳ ಆರೈಕೆಯಲ್ಲಿ ಕೆಲಸ ಮಾಡದು ಎಂದು ಹೇಳಿದ ಬಳಿಕವೂ, ಭಾರತದಲ್ಲಿ ಕೋವಿಡ್ ರೋಗಿಗಳಿಗೆ ಇದನ್ನು ನೀಡಲಾಗುತ್ತಿದೆ. ರೆಮ್‌ಡೆಸಿವಿರ್‌ನ ಪರಿಣಾಮಕಾರಿತ್ವವನ್ನು ವೈದ್ಯರು ಮತ್ತು ವಿಜ್ಞಾನಿಗಳು ಪ್ರಶ್ನಿಸಿದರೂ, ಹತಾಶ ರೋಗಿಗಳು ಔಷಧವನ್ನು ಬ್ಲ್ಯಾಕ್ ಮಾರುಕಟ್ಟೆಯಲ್ಲಿ 40 ಸಾವಿರ ರೂ.ಗಳಿಗೆ ಖರೀದಿಸುತ್ತಿದ್ದಾರೆ.
ಮೇ 1 ರಂದು ಗುಜರಾತ್ ಪೊಲೀಸರು ನಕಲಿ ರೆಮ್ಡೆಸಿವಿರ್ ದಂಧೆಯನ್ನು ಭೇದಿಸಿ ಮೊರ್ಬಿ, ಅಹಮದಾಬಾದ್ ಮತ್ತು ಸೂರತ್‌ನ ಏಳು ಜನರನ್ನು ಬಂಧಿಸಿದ್ದಾರೆ. 60 ಸಾವಿರ ಖಾಲಿ ಬಾಟಲುಗಳು, 30 ಸಾವಿರ ನಕಲಿ ಸ್ಟಿಕ್ಕರ್‌ಗಳು ಮತ್ತು 90 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ರೋಗಿಯನ್ನು ಆಸ್ಪತ್ರೆಯ ಸಿಬ್ಬಂದಿ ಕೊಲ್ಲುತ್ತಿದ್ದಾರೆ ಎಂಬ ಈ ವಿಡಿಯೊ ಸುಳ್ಳು!
ಬಂಧಿಸಲ್ಪಟ್ಟವರ ಹೆಸರುಗಳು ರಮೀಜ್ ಕದ್ರಿ ಮತ್ತು ಮೊಹಮ್ಮದ್ ಆಸಿಫ್ ಎಂದು ಬಲಪಂಥೀಯರ ಮತ್ತು ಬಿಜೆಪಿ ಐಟಿ ಸೆಲ್ ಸದಸ್ಯರ ವೈರಲ್ ಸಂದೇಶಗಳು ಸೂಚಿಸುತ್ತಿವೆ.
@Rashtra_Sevika_ ಟ್ವಿಟರ್ ಹ್ಯಾಂಡಲ್‌ನ ಟ್ವೀಟ್‌ಗೆ 4,480 ಕ್ಕೂ ಹೆಚ್ಚು ರಿಟ್ವೀಟ್‌ಗಳು ಬಂದಿವೆ. ಈ ಟ್ವೀಟ್‌ನಲ್ಲಿ, ‘ಉಪ್ಪು, ಗ್ಲೂಕೋಸ್ ಮತ್ತು ನೀರಿನಿಂದ ನಕಲಿ ರೆಮ್ಡೆಸಿವಿರ್ ತಯಾರಿಸಿದ್ದಕ್ಕಾಗಿ ಆರು ಜನರನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ. ಅವರು 60 ಸಾವಿರ ನಕಲಿ ರೆಮ್ಡೆಸಿವಿರ್ ಮಾಡಲು ಹೊರಟಿದ್ದರು. ಅಹಮದಾಬಾದ್‌ನ ಜುಹಾಪುರದ ರಮೀಜ್ ಕದ್ರಿ ಮತ್ತು ಮೊಹಮ್ಮದ್ ಆಸಿಫ್ 1117 ನಕಲಿ ರೆಮ್‌ಡೆಸಿವಿರ್ ಬಾಟಲುಗಳು, 50 ಲಕ್ಷ ರೂ. ನಗದು, 55 ಸಾವಿರ ನಕಲಿ ಬಾಟಲುಗಳು ಮತ್ತು 55 ಸಾವಿರ ನಕಲಿ ರೆಮ್‌ಡೆಸಿವಿರ್‌ನೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಈ ಸಂದೇಶಗಳು ಹೇಳುತ್ತಿವೆ.

ಅದೇ ಹ್ಯಾಂಡಲ್‌ನ ಹ್ಯಾಂಡಲ್‌ನ ಮತ್ತೊಂದು ಟ್ವೀಟ್‌ನಲ್ಲಿ, ಸಿಕ್ಕಿಬಿದ್ದ ಇತರ ಐದು ಜನರನ್ನು ಹೆಸರಿಸಿದೆ. ಅದರಲ್ಲಿ ಮುಸ್ಲಿಂ ಹೆಸರುಗಳಿಲ್ಲ, ಈ ಟ್ವೀಟ್ ಕಡಿಮೆ ಜನರಿಂದ ರಿಟ್ವೀಟ್ ಆಗಿದೆ.
ಇದನ್ನೂ ಓದಿ: ಇಂದೋರ್‌ನಲ್ಲಿನ ಈ ಕೊರೊನಾ ಆರೈಕೆ ಕೇಂದ್ರ RSS ನಿರ್ಮಿಸಿದ್ದಲ್ಲ!
ಫ್ಯಾಕ್ಟ್‌ಚೆಕ್
ಇವೆಲ್ಲದರ ಹಿಂದಿನ ಉದ್ದೇಶ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯ ವೈಫಲ್ಯಗಳನ್ನು ಮರೆ ಮಾಚಲು ಘಟನೆಗೆ ಕೋಮುವಾದಿ ರೂಪ ಕೊಡುವುದಾಗಿದೆ. ತಪ್ಪು ದಾರಿಗೆಳೆಯುವ ಪೋಸ್ಟ್‌ಗಳು ಮುಸ್ಲಿಂ ಆರೋಪಿಗಳ ಹೆಸರನ್ನು ಮಾತ್ರ ಎತ್ತಿ ತೋರಿಸುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೊಗಳು ಗುಜರಾತ್‌ನಲ್ಲಿ ನಕಲಿ ಮಾಡಿದ ರೆಮ್‌ಡೆಸಿವಿರ್ ದಂಧೆಗೆ ಸಂಬಂಧಿಸಿವೆ. ಏಳು ಜನರನ್ನು ಬಂಧಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ಹೇಳಿದೆ. ಮೊರ್ಬಿ ನಿವಾಸಿಗಳಾದ ರಾಹುಲ್ ಕೋಟೇಯ ಮತ್ತು ರವಿರಾಜ್ ಹಿರಾನಿ, ಮೊಹಮ್ಮದ್ ಆಶಿಮ್ ಅಲಿಯಾಸ್ ಆಶಿಫ್ ಮತ್ತು ರಮೀಜ್ ಕದ್ರಿ, ಸೂರತ್ ನಿವಾಸಿ ಕೌಶಲ್ ವೋರಾ ಮತ್ತು ಅವರ ಸಹಚರ ಮುಂಬೈ ನಿವಾಸಿ ಪುನೀತ್ ತಲಾಲ್ ಷಾ.
ಕೌಶಲ್ ವೋರಾ ಈ ದಂಧೆಯ ಮಾಸ್ಟರ್ ಮೈಂಡ್ ಎಂದು ವರದಿಯಾಗಿದೆ. ಇದಲ್ಲದೆ, ಪೊಲೀಸರು ಆಶಿಫ್ ಮತ್ತು ರಮೀಜ್‌ರಿಂದ 1,170 ಚುಚ್ಚುಮದ್ದು ಮತ್ತು 17.37 ಲಕ್ಷ ರೂ. ನಗದು ಮತ್ತು 14 ನಕಲಿ ಚುಚ್ಚುಮದ್ದುಗಳನ್ನು, ರಾಹುಲ್ ಮತ್ತು ರವಿರಾಜ್ರಿಂದ 2.15 ಲಕ್ಷ ರೂ. ಹಾಗೂ 7.68 ಲಕ್ಷ ರೂ. ಮುಖಬೆಲೆಯ 190 ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು, ಕೌಶಲ್, ಪುನೀತ್‌ರಿಂದ 24.70 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ ಗ್ಯಾಂಗ್ ಗ್ಲೂಕೋಸ್ ಮತ್ತು ಟೇಬಲ್ ಉಪ್ಪನ್ನು ರೆಮ್ಡೆಸಿವಿರ್ ಚುಚ್ಚುಮದ್ದು ಎಂದು ಪ್ಯಾಕೇಜಿಂಗ್ ಮಾಡುತ್ತಿತ್ತು.
ಇದನ್ನೂ ಓದಿ: ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ
ಡೆಕ್ಕನ್ ಹೆರಾಲ್ಡ್ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ಆರು ಆರೋಪಿಗಳನ್ನು ಹೆಸರಿಸಿದ್ದು, ಅಹಮದಾಬಾದ್ ಮಿರರ್ ಇನ್ನೊಬ್ಬ ಏಳನೆ ಆರೋಪಿಯನ್ನು ಸಿರಾಜ್ ಖಾನ್ ಎಂದು ಹೆಸರಿಸಿದೆ. ಈತ ಕೌಶಲ್ ವೋರಾನ ಸಹಾಯಕ ಎಂದು ಅವರು ಹೇಳಿದೆ.
ಝೀ ನ್ಯೂಸ್ ಗುಜರಾತಿ ಪ್ರಕಾರ, ಆರೋಪಿಗಳಾದ ಕೌಶಲ್ ಮಹೇಂದ್ರ ವೊರಾ (ಸೂರತ್), ರಾಹುಲ್ ಅಶ್ವಿನ್ ಭಾಯ್ ಕೊಚೆತಾ (ಮೊರ್ಬಿ), ರವಿರಾಜ್ ಅಕಾ ರಾಜ್ ಮನೋಜ್ಭಾಯ್ ಹಿರಾನಿ (ಮೊರ್ಬಿ), ಮೊಹಮ್ಮದ್ ಆಶಿಮ್ ಅಕಾ ಮೊಹಮ್ಮದ್ ಆಸಿಫ್ ಮೊಹಮ್ಮದ್ ಅಬ್ಬಾಸ್ ಪಟಾನಿ (ಅಹ್ಮದಾಬಾದ್) ಮತ್ತು ಪುನೀತ್ ಗುನ್ವಂತ್ಲಾಲ್ ಷಾ (ಮುಂಬೈ). ಭರೂಚ್ ಮತ್ತು ಸೂರತ್‌ನ ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಈ ಪ್ರಕರಣದ ಬಗ್ಗೆ ದೇಶ್ ಗುಜರಾತ್ ತನ್ನ ಆರಂಭಿಕ ವರದಿಯಲ್ಲಿ ಮುಸ್ಲಿಂ ಆರೋಪಿಗಳನ್ನು ಮಾತ್ರ ಹೆಸರಿಸಿತ್ತು. ನಂತರ ತನ್ನ ವರದಿಯನ್ನು ನವೀಕರಿಸಿ, ಕುಶಾಲ್ ಮತ್ತು ಪುನೀತ್ ಹೆಸರುಗಳನ್ನು ಸೇರಿಸಿತು.
ಇದನ್ನೂ ಓದಿ: ಕೋವಿಡ್ 2ನೆ ಅಲೆ ತೀವ್ರವಾಗುತ್ತಿದ್ದಾಗ ಕುಂಭಮೇಳದಲ್ಲಿ ಮುಳುಗೆದ್ದವರು 70 ಲಕ್ಷ ಜನ!
ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಔಷಧದ ಬೇಡಿಕೆ ಗಗನಕ್ಕೇರಿದಾಗಿನಿಂದ ಗುಜರಾತ್ ಪೊಲೀಸರು ರಾಜ್ಯದಲ್ಲಿ ಅನೇಕ ನಕಲಿ ರೆಮ್ಡೆಸಿವಿರ್ ದಂಧೆಗಳನ್ನು ಪತ್ತೆ ಮಾಡಿದ್ದಾರೆ. ಬ್ಲ್ಯಾಕ್ ಮಾರುಕಟ್ಟೆ ಮತ್ತು ನಕಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಿದ 63 ಆರೋಪಿಗಳ ವಿರುದ್ಧ ಒಟ್ಟು 24 ಪ್ರಕರಣಗಳು ದಾಖಲಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತ ಸರ್ಫರಾಜ್ ಶೇಖ್ ಟ್ವೀಟ್ ಮಾಡಿದ್ದಾರೆ.
#Remdesivir Total of 24 cases registered against 63 accused for black Marketing and selling fake Remdesivir injections across Gujarat. @dgpgujarat
— Sarfaraz Shaikh (@sarfaraz1003) May 3, 2021
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಗುಜರಾತಿನಲ್ಲಿ ನಕಲಿ ರೆಮ್ಡೆಸಿವಿರ್ ದಂಧೆಯಲ್ಲಿ ಇಬ್ಬರು ಮುಸ್ಲಿಂ ಆರೋಪಿಗಳ ಹೆಸರುಗಳನ್ನು ಮಾತ್ರ ಎತ್ತಿಕೊಂಡು ಇದಕ್ಕೆ ಕೋಮುವಾದದ ರೂಪ ಕೊಡಲು ಯತ್ನಿಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಸುಮಾರು ಏಳು ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಇಬ್ಬರು ಮುಸ್ಲಿಮರು ಮತ್ತು ಐವರು ಹಿಂದೂಗಳಿದ್ದಾರೆ ಎಂದು ಅಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ನಿರೂಪಿಸಿದೆ.
ಈಗ ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಕೂಡ ಇದೇ ಜಾಡಿನಲ್ಲಿ ‘ಬೆಡ್ ಬ್ಲಾಕಿಂಗ್’ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ.
ಕೃಪೆ: ಅಲ್ಟ್‌ನ್ಯೂಸ್
ಇದನ್ನೂ ಓದಿ: ಆಕ್ಸಿಜನ್, ಆರೋಗ್ಯ ಸೌಲಭ್ಯಗಳ ಕೊರತೆ: ಸಿಎಂ ಯೋಗಿ ವಿರುದ್ಧ ತಿರುಗಿ ಬಿದ್ದ ಬಿಜೆಪಿ ನಾಯಕರು!


