Homeಮುಖಪುಟ`ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!' - ಪ್ರಧಾನಿ ಮೋದಿಗೆ ಅರುಂಧತಿ ರಾಯ್ ಪತ್ರ

`ನಿಮ್ಮ ಜೋಳಿಗೆ ಎತ್ತಿಕೊಂಡು ಹೊರಟು ಬಿಡಿ!’ – ಪ್ರಧಾನಿ ಮೋದಿಗೆ ಅರುಂಧತಿ ರಾಯ್ ಪತ್ರ

- Advertisement -
- Advertisement -

ನಮಗೊಂದು ಸರ್ಕಾರ ಬೇಕು. ಅತ್ಯಗತ್ಯವಾಗಿ, ತಕ್ಷಣವೇ ಬೇಕು. ಆದರೆ ನಮಗೀಗ ಸರ್ಕಾರ ಎಂಬುದಿಲ್ಲ. ನಮಗೆ ಉಸಿರಾಡಲಾಗುತ್ತಿಲ್ಲ. ನಮ್ಮ ಪ್ರಾಣ ಹಾರಿ ಹೋಗುತ್ತಿದೆ. ಸಿಗುವ ಸಹಾಯವನ್ನಾದರೂ ಪಡೆದುಕೊಳ್ಳಲು ನಾವು ಏನು ಮಾಡಬೇಕೆಂದು ತಿಳಿಸುವ ವ್ಯವಸ್ಥೆಗಳಾವುದೂ ಕಾರ್ಯನಿರ್ವಾಹಿಸುತ್ತಿಲ್ಲ.

ಬೇರೇನು ಮಾಡಬೇಕು? ಈ ಕ್ಷಣ, ಈ ಸ್ಥಳದಲ್ಲಿ ನಮ್ಮ ಕರ್ತವ್ಯವೇನು?

ನಾವು 2024 ರವರೆಗೆ ಕಾಯಲಾರೆವು. ಯಾವುದೇ ವಿಚಾರಕ್ಕಾದರೂ ಸರಿಯೇ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿನಂತಿಸಿಕೊಳ್ಳುವ ದಿನವೊಂದು ಬರುವುದೆಂಬ ಊಹೆ ನನ್ನ ಸುತ್ತಮುತ್ತಲಿನ ಜನಕ್ಕೆ ಎಂದೂ ಬಂದಿರಲಿಕ್ಕಿಲ್ಲ. ವೈಯುಕ್ತಿಕವಾಗಿ ತನ್ನಷ್ಟಕ್ಕೆ ನಾನೇ ಅಂತಹ ವಿನಂತಿ ಮಾಡುವುದಕ್ಕಿಂತ ಜೈಲಿಗೆ ಹೋಗುವುದೇ ಉತ್ತಮವೆಂದು ಭಾವಿಸಿದ್ದೆ.

ಇದನ್ನೂ ಓದಿ: ಇತಿಹಾಸ: 60 ಲಕ್ಷ ಜನರ ಹತ್ಯಾಕಾಂಡದ ರೂವಾರಿ ‘ಅಡಾಲ್ಫ್‌ ಹಿಟ್ಲರ್‌‌’ ಆತ್ಮಹತ್ಯೆ ಮಾಡಿಕೊಂಡ

ಆದರೆ ಇಂದು ನಾವು ನಮ್ಮ ಮನೆಗಳಲ್ಲಿ, ಬೀದಿಗಳಲ್ಲಿ, ಆಸ್ಪತ್ರೆಗಳ ಕಾರ್ ಪಾರ್ಕಿಂಗ್ ಪ್ರದೇಶಗಳಲ್ಲಿ, ಮಹಾನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ, ಅರಣ್ಯಗಳಲ್ಲಿ, ಹೊಲ-ಗದ್ದೆಗಳಲ್ಲಿ – ಎಲ್ಲೆಂದರಲ್ಲಿ ಬಿದ್ದು ಸಾಯುತ್ತಿದ್ದರೆ ಒಬ್ಬ ಸಾಮಾನ್ಯ ಪ್ರಜೆಯಾದ ನಾನು ನನ್ನ ಆತ್ಮಗೌರವವನ್ನು ಮರೆತು, ಕೋಟ್ಯಾಂತರ ಜನ ಸಹಚರರ ಜೊತೆ ಧ್ವನಿಗೂಡಿಸುತ್ತಿದ್ದೇನೆ. ಸ್ವಾಮಿ ದಯವಿಟ್ಟು… ದಯವಿಟ್ಟು.. ರಾಜಿನಾಮೆ ನೀಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಕನಿಷ್ಟ ಪಕ್ಷ ಈಗಲಾದರೂ ಪಕ್ಕಕ್ಕೆ ತೊಲಗಿ. ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಕೆಳಗಿಳಿಯಿರಿ.

ಈ ಬಿಕ್ಕಟ್ಟನ್ನು ನೀವೇ ಸೃಷ್ಟಿಸಿದ್ದೀರಿ. ಇದನ್ನು ಬಗೆಹರಿಸುವುದು ನಿಮ್ಮ ಕೈಗಳಲ್ಲಿ ಇಲ್ಲ. ನೀವು ಇದನ್ನು ಮತ್ತಷ್ಟು ದಾರುಣವಾಗಿ ಮಾತ್ರವೇ ಮಾರ್ಪಡಿಸಬಲ್ಲಿರಿ. ಭಯ, ದ್ವೇಷ, ಅಜ್ಞಾನ ತುಂಬಿದ ವಾತಾವರಣದಲ್ಲಿ ಈ ವೈರಸ್ ಮತ್ತಷ್ಟು ಬಲಗೊಳ್ಳುತ್ತದೆ. ಧ್ವನಿಯೆತ್ತಿ ಮಾತನಾಡಬಲ್ಲ ಧ್ವನಿಗಳನ್ನು ನೀವು ಹತ್ತಿಕ್ಕಿದಾಗ ಈ ವೈರಸ್ ವಿಸ್ತರಿಸುತ್ತದೆ. ಸತ್ಯ ಏನೆಂದರೆ ಅಂತರಾಷ್ಟ್ರೀಯ ಪ್ರಚಾರ ಸಾಧನಗಳಲ್ಲಿ ಮಾತ್ರವೇ ಪ್ರಕಟವಾಗುವಂತೆ ನೀವು ದೇಶದಲ್ಲಿರುವ ಪ್ರಚಾರ ಸಾಧನಗಳನ್ನು ನಿಮ್ಮ ಗುಲಾಮಗಿರಿಯಲ್ಲಿರಿಸಿಕೊಂಡಾಗ ಈ ವೈರಸ್ ದಿಕ್ಕು ದಿಕ್ಕುಗಳಿಗೂ ವ್ಯಾಪಿಸುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಒಟ್ಟಾರೆ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕೂಡ ನಿರ್ವಹಿಸದ, ಇಷ್ಟು ಭಯಾನಕ ವಾತಾವರಣದಲ್ಲಿಯೂ ಕೂಡ ಎದುರಿನಲ್ಲಿರುವವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರಧಾನ ಮಂತ್ರಿ ಇದ್ದಾಗ ಈ ವೈರಸ್ ಮತ್ತಷ್ಟು ರೌದ್ರನರ್ತನ ಮಾಡುತ್ತದೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ನೀವೀಗ ಅಧಿಕಾರದಿಂದ ಕೆಳಗಿಳಿಯದಿದ್ದರೆ ನಮ್ಮಲ್ಲಿ ಸಾವಿರಾರು, ಲಕ್ಷಾಂತರ ಮಂದಿ ಅನಾವಶ್ಯಕವಾಗಿ ಮರಣ ಹೊಂದುತ್ತಾರೆ. ಹಾಗಾಗಿ ನೀವು ಹೊರಡಿ, ನಿಮ್ಮ ಜೋಳಿಗೆ ಎತ್ತಿಕೊಂಡು. ನೀವು ಗೌರವಯುತವಾಗಿ ಇಳಿಯುವ ಅವಕಾಶವಿದ್ದಾಗಲೇ ಇಳಿದುಬಿಡಿ. ನಿಮಗೆ ಧ್ಯಾನದಲ್ಲಿ, ಏಕಾಂತದಲ್ಲಿ ಉಜ್ವಲವಾದ ಭವಿಷ್ಯವಿದೆ. ನಿಮಗೆ ಬೇಕಾದುದು ಅದೇ ಎಂದು ಈ ಹಿಂದೆ ನೀವೇ ಹೇಳಿದ್ದೀರಿ. ಈಗಾಗಲೇ ನಡೆಯುತ್ತಿರುವ ಸಾಮೂಹಿಕ ಮಾರಣಹೋಮ ಹೀಗೆ ಮುಂದುವರೆದರೆ ನಿಮಗೆ ಅದೂ ಕೂಡ ಸಾಧ್ಯವಾಗದೇ ಹೋಗಬಹುದು.

ಈಗಾಗಲೇ ನಿಮ್ಮ ಸ್ಥಾನವನ್ನು ಅಲಂಕರಿಸಲು ನಿಮ್ಮ ಪಕ್ಷದಲ್ಲೇ ಬಹಳಷ್ಟು ಮಂದಿ ಇದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಜೊತೆ ಸಾಮರಸ್ಯವಾಗಿ ಇರಬೇಕೆಂದು ತಿಳಿದವರು. ನಿಮ್ಮ ಪಕ್ಷದಿಂದಲೇ, ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಅನುಮತಿಯೊಂದಿಗೆ, ಯಾರಾದರೂ ಆಗಲಿಬಿಡಿ. ಸರ್ಕಾರವನ್ನು, ಪ್ರಸ್ತುತ ವಾಗಿ ಇರುವ ಬಿಕ್ಕಟ್ಟು ನಿರ್ವಹಣೆಯ ತಂಡವನ್ನು ನಡೆಸಬಲ್ಲವು.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಮೂಲಕ ಎಲ್ಲಾ ಪಕ್ಷಗಳಿಗೂ ಪ್ರತಿನಿಧಿತ್ವ ದೊರೆಯಬಹುದು. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್‌ಗೂ ಆ ಬಿಕ್ಕಟ್ಟು ನಿರ್ವಹಣೆ ಯ ತಂಡದಲ್ಲಿ ಸ್ಥಾನ ಇರಬಹುದು. ಹಾಗೆಯೇ ವಿಜ್ಞಾನಿಗಳು, ಜನಾರೋಗ್ಯ ತಜ್ಞರು, ವೈದ್ಯರು, ಅನುಭವಿಗಳಾದ ಉನ್ನತಾಧಿಕಾರಿಗಳು ಇರಬಹುದು. ಇದೆಲ್ಲಾ ನಿಮಗೆ ಅರ್ಥವಾಗದಿರಬಹುದು, ಆದರೆ ಇದನ್ನೇ ಪ್ರಜಾತಂತ್ರ ಎನ್ನುತ್ತಾರೆ. ನೀವು ಅಂದುಕೊಳ್ಳುತ್ತಿರಬಹುದು, ಪ್ರತಿಪಕ್ಷ ಮುಕ್ತ ಪ್ರಜಾತಂತ್ರ ಎಂಬುದು ಇರದು. ಒಂದು ವೇಳೆ ಇದ್ದರೆ ಅದನ್ನು ನಿರಂಕುಶತ್ವ ಎನ್ನುತ್ತಾರೆ. ಈಗಿರುವ ವೈರಸ್‌ಗೆ ನಿರಂಕುಶತ್ವ ಎಂದರೆ ಬಹಳ ಇಷ್ಟ.

ನೀವೀಗ ಈ ಕೆಲಸ ಮಾಡದಿದ್ದರೆ, ಪ್ರಸ್ತುತ ಇರುವ ವಾತಾವರಣ ಹಂತ ಹಂತವಾಗಿ ಬೆಳೆದು ಅಂತರಾಷ್ಟ್ರೀಯ ಸಮಸ್ಯೆಯಾಗಿ, ಪ್ರಪಂಚಕ್ಕೇ ಅಪಾಯಕಾರಿ ಎಂದು ಕಾಣುತ್ತಿದೆ. ಇದು – ನಿಮ್ಮ ಅಸಾಮರ್ಥ್ಯ ಬೇರೆ ದೇಶಗಳಿಗೆ ನಮ್ಮ ಆತಂರಿಕ ವ್ಯವಹಾರಗಳಲ್ಲಿ ಮೂಗು ತೂರಿಸಲು ಪ್ರಯತ್ನಿಸುವುದಕ್ಕೆ ಮತ್ತು ಅಧಿಕಾರ ಹಿಡಿಯಲು ಪ್ರಯತ್ನಿಸುವುದಕ್ಕೆ ನ್ಯಾಯಯುತವಾದ ಅವಕಾಶವನ್ನು ನೀಡುತ್ತದೆ. ನಾವು ಕಷ್ಟಪಟ್ಟು ಹೋರಾಡಿ ಸಾಧಿಸಿಕೊಂಡ ಸಾರ್ವಭೌಮತ್ವ ಅಪಾಯದಲ್ಲಿ ಸಿಲುಕುತ್ತದೆ. ಪುನಃ ನಮ್ಮ ದೇಶ ಒಂದು ವಸಾಹತುವಾಗಿ ಮಾರ್ಪಡುತ್ತದೆ. ಇದೊಂದು ಗಂಭೀರವಾದ ಅಪಾಯಕಾರಿ ಅವಕಾಶ. ಇದನ್ನು ಕಡೆಗಣಿಸಬೇಡಿ.

ಆದ್ದರಿಂದ ಮಹಾನುಭಾವಾ, ದಯವಿಟ್ಟು ನೀವು ದಯಮಾಡಿಸಿ…ನೀವು ಮಾಡಬಹುದಾದ ಅತ್ಯಂತ ಜವಾಬ್ದಾರಿಯುತ ಕೆಲಸವಿದು. ನಮಗೆ ಪ್ರಧಾನ ಮಂತ್ರಿಯಾಗಿರುವ ನೈತಿಕ ಅಧಿಕಾರವನ್ನು ನೀವು ಕಳೆದುಕೊಂಡಿದ್ದೀರಿ.

ಕೃಪೆ: scroll. In
ಅನುವಾದ ರೇಣುಕಾ ಭಾರತಿ ಚಿಕ್ಕಮಗಳೂರು

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. Modi illade hodre e deshada stiti adhogati.. please don’t express your nexel mentality in this situation.this is not suitable time for that.

  2. Madam ಅರುಂಧತಿ ರಾಯ್. ನಿಮ್ಮ ನಿವೇದನೆ ಪೂರ್ವಕ ಆಗ್ರಹ, ಆಕ್ರೋಶ ನ್ಯಾಯಸಮ್ಮತವಾದುದು ಹಾಗೂ ೧೦೦ಕೋಟಿ ಭಾರತೀಯರ ಅಭಿಲಾಶೆಯಾಗಿದೆ. ಮಾನಗೆಟ್ಟ್ ಪರಧಾನಿಯೇ ಕೋಟ್ಯಾಧಿಪತಿ ಉದ್ಯಮಿಗಳಿಗಾಗಿ ಅಧಿಕಾರ ಚಲಾಯಿಸುತ್ತಿರುವ ನೀಚನೆ ತೊಲಗು ಈ ಗೌರವಾನ್ವಿತ ಹುದ್ದೆಯಿಂದ. ನೀನಾಗಿ ನೀನೆ ಅಧಿಕಾರದಿಂದ ಇಳಿಯದಿದ್ದರೆ ನಾವೆಲ್ಲ ನಿನ್ನನ್ನ ಕಲ್ಲು ಹೊಡೆದ ಅಧಿಕಾರದಿಂದ ಇಳಿಸುವ ಸಾಮರ್ಥ್ಯ ಹೊಂದಿದೇವೆ. ಈ ಮಟ್ಟಕ್ಕೆ ಇಳಿಯಬೇಡ.

  3. Madam ಅರುಂಧತಿ ರಾಯ್ ಅವ್ರೆ, ? ನಿಮ್ಮ ದೇಶದ ಕಾಳಜಿ ಶ್ಲಾಘನೀಯ. ಸಧ್ಯದ ಕೊರೋನ ಹೆಚ್ಚಳದಿಂದುಂಟಾದ ಉದ್ವಿಗ್ನ ಪರಿಸ್ಥಿತಿಯಿಂದ ಕರುಳು ಕಿತ್ತು ಬರುವಂತಹ ಪರಿಸ್ಥಿತಿ ನೋಡಿ ಮನಸ್ಸು ವ್ಯಗ್ರಗೊಂಡಿದೆ. ಸ್ವತಂತ್ರ ಪೂರ್ವ ಬ್ರಿಟಿಷರನ್ನೊಳಗೊಂಡು ದಾಳಿಕೋರರಾದಿಯಾಗಿ ಇಲ್ಲಿಯತನಕ ಕೆಲವು ಮುತ್ಸದ್ದಿಗಳನ್ನು ಹೊರತು ಪಡಿಸಿ ಎಲ್ಲರೂ ಜೋಳಿಗೆ ತುಂಬಿಸಿಕೊಂಡು ಹೋಗೋಕೆ ಬಂದೋರೆ. ಅದರಲ್ಲಿ ಎರಡು ಮಾತಿಲ್ಲ. ಮೋದಿ ಜೋಳಿಗಿ ಎತ್ತಿಕೊಂಡು ಹೋದ್ರೆ ಇನ್ನೂ ದೊಡ್ಡ ಜೋಳಿಗಿ ಹಿಡ್ಕೊಂಡು ತುಂಬಿಸಿಕೊಳ್ಳೋಕೆ ಕೆಲವರು ಕಾಯ್ತಾ ಇರ್ಬಹುದು. ಪ್ರಶ್ನೆ ಅದಲ್ಲ. ಇಂತ ಸಂಧಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬಹುದು ಅನ್ನುವಂತ ಸಲಹೆ ಸೂಚನೆಗಳನ್ನು ಕೊಡಬಹುದಿತ್ತೇನೋ ಅನ್ನೋದು ಅನೀಸಿಕೆ ಮಾತ್ರ . ಈ ಜೋಳಿಗಿ ಎತ್ತಿಕೊಂಡು ಹೋಗುವಂತೆ ಮಾಡೋದು, ತಮ್ಮ ಜೋಳಿಗಿ ತುಂಬಿಸಿಕೊಳ್ಲಿಕ್ಕೆ /ದೇಶದ ಜೋಳಿಗಿ ತುಂಬಲಿಕ್ಕೆ ಅವಕಾಶ ಮಾಡಿಕೊಡೋದು ಎಲ್ಲ ಜನರ ಕೈಯಲ್ಲಿಯೇ ಇದೆ. ಧನ್ಯವಾದಗಳು ಮೇಡಂ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...