ಕುಂಭಮೇಳದಲ್ಲಿ ಕಟ್ಟುನಿಟ್ಟಿನ ಕೊರೊನಾ ನಿಯಂತ್ರಣ ಕ್ರಮಕ್ಕೆ ಕೇಂದ್ರದ ಸೂಚನೆ
PC: UK Academe

ಹರಿದ್ವಾರದ ಕುಂಭಮೇಳದಲ್ಲಿ ಒಟ್ಟು ಸುಮಾರು ಎಪ್ಪತ್ತು ಲಕ್ಷ ಭಕ್ತರು ಭಾಗವಹಿಸಿದ್ದರು, ಇದು ಶುಕ್ರವಾರ ಕೊನೆಗೊಂಡಿದೆ. ಈ ಕಾರ್ಯಕ್ರಮ ಕೊರೋನಾ “ಸೂಪರ್-ಸ್ಪ್ರೆಡರ್” ಆಗಿ ಕೆಲಸ ಮಾಡಿದೆ ಎಂದು ಕೆಲವು ತಜ್ಞರು, ಹಿರಿಯ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹಲವಾರು ಸಲ ಕೋರ್ಟುಗಳು, ಈ ಮೇಳಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿವೆ.

ಸಾಮಾನ್ಯ ಪರಿಸ್ಥಿತಿಗಳಲ್ಲಿ ಮೂರು ತಿಂಗಳುಗಳ ಕಾಲ ನಡೆದ ಕುಂಭಮೇಳವು ಕೋವಿಡ್ ಕಳವಳದಿಂದಾಗಿ ಈ ಬಾರಿ ಔಪಚಾರಿಕವಾಗಿ ಏಪ್ರಿಲ್ 1 ರ ಹೊತ್ತಿಗೆ ಪ್ರಾರಂಭವಾಯಿತು. ಆದರೂ ಒಟ್ಟು ಸುಮಾರು 70 ಲಕ್ಷ ಜನರು ಭಾಗವಹಿಸಿದ ಈ ಮೇಳ ಕೊರೋನಾ ವೃದ್ಧಿಗೆ ಕಾರಣವಾಗಿತು ಎಂದು ಆರೋಪಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮೇಳದಲ್ಲಿ ವೈದ್ಯಕೀಯ ಸಿಬ್ಬಂದಿ ನಡೆಸಿದ ಸುಮಾರು ಎರಡು ಲಕ್ಷ ಪರೀಕ್ಷೆಗಳಲ್ಲಿ ಸುಮಾರು 2,600 ಭಕ್ತರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತು. ಹಲವು ಹಿರಿಯ ಸಾಧುಗಳು ಸಾವಿಗೀಡಾದರು.

ಏಪ್ರಿಲ್ 12, 14 ಮತ್ತು 27 ರಂದು ಮೂರು ಶಾಹಿ ಸ್ನಾನಗಳು (ಪವಿತ್ರ ಸ್ನಾನ) ನಡೆದವು, ಕೋರ್ಟುಗಳು ಮತ್ತು ದೇಶದ ನಾಗರೀಕರ ಆಕ್ಷೇಪಕ್ಕೆ ಮಣಿದು ಕೊನೆಯ ಸ್ನಾನವನ್ನು ಸಾಂಕೇತಿಕವಾಗಿ ನಡೆಸಲಾಯಿತಾದರೂ ಭಕ್ತರ ಸಂಖ್ಯೆ ಇದ್ದೇ ಇತ್ತು.

ಕೊರೊನಾ ವೈರಸ್ ಉಲ್ಬಣವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಗಣಿಸಿ ಕುಂಭವು ದೊಡ್ಡ ಸವಾಲಾಗಿತ್ತು ಎಂದು ಹರಿದ್ವಾರ ಮುಖ್ಯ ವೈದ್ಯಕೀಯ ಅಧಿಕಾರಿ ಎಸ್.ಕೆ. ಝಾ ಹೇಳಿದ್ದರು.
ಕುಂಭದ ವೈದ್ಯಕೀಯ ಅಧಿಕಾರಿ ಅರ್ಜುನ್ ಸಿಂಗ್ ಸೆಂಗಾರ್, ” ಹಿಂದಿನ ಸಲಕ್ಕಿಂತ ಜನಸಂದಣಿ ಕಡಿಮೆ ಇದ್ದರೂ, ಕೊರೊನಾ ಕಾರಣಕ್ಕಾಗಿ ಈ ಪರಿಸ್ಥಿತಿ ನಮಗೆ ಸವಾಲಾಗಿತ್ತು, ಸಾಮಾಜಿಕ ಅಂತರದ ಮಾನದಂಡಗಳನ್ನು ಉಲ್ಲಂಘಿಸುವಷ್ಟು ಜನಸಂದಣಿಯಂತೂ ಇತ್ತು’ ಎಂದು ಹೇಳಿದರು.

“ಭಕ್ತರಿಗೆ ಆರಂಭದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಏಪ್ರಿಲ್ 14 ರಂದು ಎರಡನೇ ಶಾಹಿ ಸ್ನಾನದ ನಂತರ ಅವರು ಪಶ್ಚಾತ್ತಾಪಪಟ್ಟರು” ಎಂದು ಅವರು ಹೇಳಿದರು.

“ಉತ್ತರ ಪ್ರದೇಶದಿಂದ ಕರೆತಂದ ಆರೋಗ್ಯ ಸಿಬ್ಬಂದಿಯ ಸಹಾಯದಿಂದ ನಾವು ಒಟ್ಟು 1,90,083 ಪರೀಕ್ಷೆಗಳನ್ನು ನಡೆಸಿದ್ದೇವೆ, ಅದರಲ್ಲಿ 2642 ಪಾಸಿಟಿವ್ ವರದಿ ಬಂದಿವೆ’ ಎಂದು ಅವರು ಹೇಳಿದರು.

ಭಾರಿ ಟೀಕೆಗಳು ವ್ಯಕ್ತವಾದ ನಂತರ, ಕುಂಭದಲ್ಲಿ ತಮ್ಮ ಪ್ರಾತಿನಿಧ್ಯವನ್ನು ಸಾಂಕೇತಿಕವಾಗಿ ಇರಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದ ನಂತರ ಜನಸಂದಣಿಯು ಹೊರಬರಲು ಪ್ರಾರಂಭಿಸಿತು.

ಮೇಳಕ್ಕೆ ಹಾಜರಾಗುವ ಪಂಗಡಗಳಲ್ಲಿ ಅತಿ ದೊಡ್ಡದಾದ ಜೂನಾ ಅಖಾಡಾ, ಪ್ರಧಾನಿ ಮೋದಿಯವರ ಮನವಿಗೆ ಮೊದಲ ಬಾರಿಗೆ ಸ್ಪಂದಿಸಿತು. ನಂತರ ಹಲವಾರು ಅಖಾಡಾಗಳು ಈ ಮೇಳದಿಂದ ಹಿಂದೆ ಸರಿದವು. ಆಗ ಸಾಮಾನ್ಯ ಭಕ್ತರು ಅವರ ಮಾದರಿಯನ್ನು ಅನುಸರಿಸಿದರು.

ಹರಿದ್ವಾರದಿಂದ ದೇವ್‌ಪ್ರಯಾಗ್‌ವರೆಗಿನ 641 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕುಂಭ ಮೇಳ ಕ್ಷೇತ್ರದಲ್ಲಿ ಎಲ್ಲಿಯೂ ಗಂಭೀರವಾದ ಅಹಿತಕರ ಘಟನೆಗಳಿಲ್ಲದೆ ಈ ಮೇಳ ಸಂಭವಿಸಿದೆ ಎಂದು ಮೇಳದ ಸಂಘಟಕರು ಹೇಳುತ್ತಾರೆ.

ಆದರೆ ಕೋರ್ಟುಗಳು, ವೈದ್ಯಕೀಯ ತಜ್ಞರು ಈ ಮೇಳ ಕೊರೊನಾ ಸೂಪರ್-ಸ್ಪ್ರೆಡರ್ ಆಗಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮೋದಿ ಫೋಟೊಗಳಿಗೆ ಹೆಚ್ಚುತ್ತಿರುವ #ResignModi ಕಮೆಂಟ್‌ಗಳು: ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here