Photo Courtesy: OneIndia Tamil

ಭಾರತಕ್ಕೆ ಅಪ್ಪಳಿಸಿರುವ ಕೋವಿಡ್ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ದಟ್ಟವಾಗಿ ಕೇಳಿಬರುತ್ತಿರುವುದರ ನಡುವೆ ಕಳೆದ 15 ದಿನಗಳಿಂದಲೂ #ResignModi ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ಹಾಕುವ ಪ್ರತಿಯೊಂದು ಫೋಟೊಗಳಿಗೆ #ResignModi ಎಂದು ಕಮೆಂಟ್ ಮಾಡುವು ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ಔಷಧಿಗಳು ಸಿಗುತ್ತಿಲ್ಲ.. ಎಲ್ಲಕ್ಕಿಂತ ಹೆಚ್ಚಾಗಿ ಕೋವಿಡ್ ಬರದಂತೆ ತಡೆಯಲು ಲಸಿಕೆ ಹಾಕಿಸಿಕೊಳ್ಳಲು ಸಹ ಸ್ಟಾಕ್ ಇಲ್ಲದ ಪರಿಸ್ಥಿತಿ ಉದ್ಭವಿಸಿದೆ. ಕೋವಿಡ್ ಬಂದು 15 ತಿಂಗಳಾದರೂ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮೋದಿ ಸರ್ಕಾರ ವಿಫಲವಾಗಿದೆ. ಈಗ ಪ್ರತಿನಿತ್ಯ 3000 ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಈ ರೀತಿಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರು ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡುವುದು ಸೇರಿದಂತೆ ಮೋದಿ ಫೋಟೊ ಮತ್ತು ಪೋಸ್ಟ್‌ಗಳಿಗೆ ಕಮೆಂಟ್ ಮಾಡಿ ಕೋಪ ತೋರಿಸುತ್ತಿದ್ದಾರೆ.

ಏಪ್ರಿಲ್ 28 ರಂದು ಮೋದಿಯವರು “ಒಂದು ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸುತ್ತೇವೆ, 500ಕ್ಕೂ ಹೆಚ್ಚು ಪಿಎಸ್‌ಎ ಪ್ಲಾಂಟ್‌ಗಳನ್ನು ಹಾಕುತ್ತೇವೆ” ಎಂದು ಪೋಸ್ಟ್ ಒಂದನ್ನು ಹಾಕಿದ್ದರು. ಅದಕ್ಕೆ ದಾಖಲಾದ 42 ಸಾವಿರ ಕಮೆಂಟ್‌ಗಳಲ್ಲಿ ಬಹುತೇಕ ಕಮೆಂಟ್‌ಗಳು ಮೋದಿ ವಿರುದ್ಧ ಕೋಪ, ಆಕ್ರೋಶ ವ್ಯಕ್ತಪಡಿಸಿವೆ. ಮನೆ ಹೊತ್ತಿ ಉರಿಯುವಾಗ ಬಾವಿ ತೋಡಿದರು ಎಂಬಂತೆ ಇಷ್ಟು ದಿನ ಏನು ಮಾಡುತ್ತಿದ್ದೀರಿ? ಜನರ ಪ್ರಾಣ ಅಂದ್ರೆ ನಿಮಗೆ ಅಷ್ಟು ಸುಲಭವೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಬಹಳಷ್ಟು ಕನ್ನಡಿಗರು ಸಹ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿ ಸರ್ಕಾರದ ನೀತಿಗಳನ್ನು ಟೀಕಿಸಿದ್ದಾರೆ. ಆದರೆ #ResignModi ಕಮೆಂಟ್‌ಗಳು ಸಹಸ್ರಾರು ಸಂಖ್ಯೆಯಲ್ಲಿ ದಾಖಲಾಗುತ್ತಿವೆ.

ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

ಇನ್ನು ನರೇಂದ್ರ ಮೋದಿಯವರು 2009ರಲ್ಲಿ ತಮ್ಮ ಫೇಸ್‌ಬುಕ್ ಪುಟ ತೆರೆದಿದ್ದಾರೆ. ಆಗ ಅವರು ಗುಜರಾತ್‌ ಸಿಎಂ ಆಗಿದ್ದರು. ಆ ಸಂದರ್ಭದಿಂದ ಅವರು ತಮ್ಮ ಹಲವಾರು ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಆ ಫೋಟೊಗಳನ್ನು ಬಿಡದ ನೆಟ್ಟಿಗರು ಅವಕ್ಕೂ ಸಹ #ResignModi ಕಮೆಂಟ್‌ಗಳನ್ನು ಮಾಡುವ ಮೂಲಕ ಮೋದಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇನ್ನು ಕಳೆದ 15 ದಿನಗಳಿಂದ ಸತತವಾಗಿ ಟ್ರೆಡಿಂಗ್‌ನಲ್ಲಿದ್ದ, ಕೋಟ್ಯಾಂತರ ಟ್ವೀಟ್‌ಗಳು, ಫೇಸ್‌ಬುಕ್ ಪೋಸ್ಟ್‌ಗಳು ದಾಖಲಾಗಿದ್ದ #ResignModi (‘ಮೋದಿ ರಾಜೀನಾಮೆ ನೀಡಿ’) ಎಂಬ ಹ್ಯಾಷ್‌ಟ್ಯಾಗ್‌ ಮತ್ತು ಅದರ ಹೆಸರಿನಲ್ಲಿ ದಾಖಲಾದ ಎಲ್ಲಾ ಪೋಸ್ಟ್‌ಗಳನ್ನು ಬುಧವಾರ ಫೇಸ್‌ಬುಕ್ ಇಂಡಿಯಾ ಬ್ಲಾಕ್ ಮಾಡಿತ್ತು. ಫೇಸ್‌ಬುಕ್ ಆಳುವ ಸರ್ಕಾರವನ್ನು ರಕ್ಷಿಸಲು ಮುಂದಾಗಿದೆ, ಇದು ಸೆನ್ಸಾರ್ ಶಿಪ್ ಅಲ್ಲವೇ? ಎಂಬ ವ್ಯಾಪಕ ಟೀಕೆಗಳು ಬಂದ ನಂತರ ಫೇಸ್‌ಬುಕ್ #ResignModi ಹ್ಯಾಷ್‌ಟ್ಯಾಗ್‌ ಅನ್ನು ಮರುಸ್ಥಾಪಿಸಿದೆ. ಇದೊಂದು ‘ಮಿಸ್ಟೇಕ್’ ಎಂದ ಕಂಪನಿ ಒಪ್ಪಿಕೊಂಡಿದೆ.


ಇದನ್ನೂ ಓದಿ: #ResignModi ಹ್ಯಾಷ್‌ಟ್ಯಾಗ್‌ ನಿರ್ಬಂಧಿಸಿ ಟೀಕೆಗೊಳಗಾದ ಫೇಸ್‌ಬುಕ್: ಟೀಕೆ ನಂತರ ಎಚ್ಚೆತ್ತು ಮರುಸ್ಥಾಪನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

2 COMMENTS

LEAVE A REPLY

Please enter your comment!
Please enter your name here