Homeಕರ್ನಾಟಕಗುಂಡ್ಲುಪೇಟೆ ಅಮಾನವೀಯ ಕ್ರೌರ್ಯಕ್ಕೆ ಜಾತಿ ಕಾರಣವಲ್ಲವೇ?

ಗುಂಡ್ಲುಪೇಟೆ ಅಮಾನವೀಯ ಕ್ರೌರ್ಯಕ್ಕೆ ಜಾತಿ ಕಾರಣವಲ್ಲವೇ?

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಫೇಕ್‍ಸುದ್ದಿಗಳನ್ನು ಶೇರ್ ಮಾಡಿದ್ದನ್ನೆ ಬಲವಾಗಿ ನಂಬಿದ ಕಾರಣ ಅಮಾಯಕ ಬಡವರನ್ನು ಮಕ್ಕಳ ಕಳ್ಳರು ಎಂದು ಶಂಕಿಸಿ ಕೊಲೆ ಮಾಡಿದ ಘಟನೆಗಳು ಒಮ್ಮೆ ಸರಣಿಯಾಗಿ ನಡೆದಿದ್ದು ನಿಮಗೆ ಇನ್ನೂ ನೆನಪಿರಬಹುದು. ಇದು ಈ ಆಧುನಿಕ ಕಾಲದಲ್ಲಿ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ನಡೆದ ವಿಕೃತ ಕೆಲಸಗಳಲ್ಲೊಂದು. ನಾವು ನಮ್ಮ ನಮ್ಮ ಹಳ್ಳಿಯ ಬಾಲ್ಯವನ್ನು ನೆನೆಸಿಕೊಂಡರೆ ಯಾರಾದರೂ ಶೋಷಿತ ಜಾತಿಯವರು, ಮೇಲ್ವರ್ಗದವರ ಮನೆ ಮುಂದೆ ಅಡ್ಡಾಡಿದರೂ ಸಾಕು ಅವರನ್ನು ಸಂಶಯದಿಂದ ನೋಡುವುದು ‘ಸಹಜ’ವಾಗಿತ್ತು. ಚುಚ್ಚಿ ಮಾತನಾಡುವುದೇ ಅಲ್ಲದೆ ಆ ಮನೆಯ ಯಜಮಾನ ಆ ವ್ಯಕ್ತಿಯನ್ನು ಹೀಯಾಳಿಸಿ ಸುತ್ತಲಿನವರಿಗೆ ಪುಕ್ಕಟ್ಟೆ ಮನರಂಜನೆ ಕೊಡುವಂತಹ ಸನ್ನಿವೇಶಗಳು ನಡೆಯುತ್ತಿದ್ದವು.

ಇತ್ತ ಅಪಹಾಸ್ಯಕ್ಕೀಡಾ ವ್ಯಕ್ತಿ ಹಸಿವಿನ ಮುಂದೆ ಸ್ವಾಭಿಮಾನವನ್ನ ಮರೆಯುತ್ತ ಒಳಗೆ ಉರಿಯಿದ್ದರೆ ಹೊರಗೆ ಮುಗುಳುನಗುತ್ತಿದ್ದ. ಹೀಗೆ ಮೇಲಿನವರು ಕೆಳಗಿನವರನ್ನು ನೋಡುವ ದೃಷ್ಟಿಯೇ ತುಂಬಾ ತುಚ್ಚವಾಗಿರುತ್ತಿತ್ತು. ಹಳ್ಳಿಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಯಾರಾದರೂ ಬಂದರೆ ಅವರ ಅಂಗಿಗೆ ಕಲ್ಲು ಕಟ್ಟುವುದು, ಅವನಿಗೆ ಕಲ್ಲು ಹೊಡೆದು ರೇಗಿಸುವುದರ ಮೂಲಕ ಮನರಂಜನೆ ತೆಗೆದುಕೊಳ್ಳುವಂತಹ ಘಟನೆಗಳು ನಡೆಯುತ್ತಲಿದ್ದವು. ಇಲ್ಲಿ ನಮಗೆ ಕಾಡಬೇಕಾದ ಪ್ರಶ್ನೆ ವ್ಯಕ್ತಿಯ ನ್ಯೂನ್ಯತೆಯನ್ನು ಇಟ್ಟುಕೊಂಡು ಕಾಡುವ ಈ ಜನಕ್ಕೆ ಎಂದಿಗೂ ಮನುಷ್ಯರನ್ನು ಮನುಷ್ಯರಂತೆ ನೋಡಲು ಸಾಧ್ಯವಾಗಿಲ್ಲ ಯಾಕೆ ಎಂಬುದು. ಇಂತಹ ಎಲ್ಲಾ ಪ್ರಶ್ನೆಗಳು ನಮಗೆ ಮೂಡುವಂತೆ ಮಾಡಿದ್ದು ದೂರದ ಯಾವುದೋ ಕಾನೂನು ಸುವ್ಯವಸ್ಥೆ ಹದಗೆಟ್ಟ ರಾಜ್ಯದ್ದೋ, ದೇಶದ್ದೋ ಕಥೆಯಲ್ಲ. ಬದಲಿಗೆ ನಮ್ಮದೇ ರಾಜ್ಯದ ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಮತ್ತು ಹಲ್ಲೆಮಾಡಿದ ಅಮಾನವೀಯ ಘಟನೆ.
ಘಟನೆಯ ಸುತ್ತ ಕೆಲವು ಗೊಂದಲಗಳು ಉಂಟಾಗಿವೆ. ಅಥವಾ ಅವನ್ನು ಸೃಷ್ಟಿಮಾಡಲು ಗುಂಪೊಂದು ಪ್ರಯತ್ನಿಸುತ್ತಿದೆ. ತಮ್ಮ ಜಾತಿಗೆ ಸೇರಿದವರು ಮಾಡಿದ ತಪ್ಪು ಅನ್ನುವ ಕಾರಣಕ್ಕೆ ಅವರ ಹಿತಾಸಕ್ತಿ ಕಾಪಾಡಲು ಅದು ಪ್ರಯತ್ನ ಮಾಡುತ್ತಿದೆ. ಘಟನೆಯ ವಿವರ ನಿಮಗೆ ಗೊತ್ತೆ ಇದೆ.

ಪ್ರತಾಪ್ ಎಂಬ ಗುಂಡ್ಲುಪೇಟೆ ತಾಲೂಕಿನ ವೀರಾಪುರ ಗ್ರಾಮದ ದಲಿತ ಯುವಕ ಮೈಸೂರಿನಲ್ಲಿ ಐ.ಎ.ಎಸ್ ಪರೀಕ್ಷೆ ಬರೆಯಲು ಹೋಗಿದ್ದ. ಪರೀಕ್ಷೆ ಬರೆಯಲಾಗದ್ದಕ್ಕೋ, ಇನ್ನಾವುದೋ ಕಾರಣಕ್ಕೋ ಮನನೊಂದು ವಾಪಸ್ಸು ಬಂದು ಕಬ್ಬೆಕಟ್ಟೆ ಎಂಬ ಗ್ರಾಮದ ಹತ್ತಿರದ ದೇವಸ್ಥಾನದಲ್ಲಿ ಮಲಗಿದ್ದ. ಜನರು ನೋಡುವಾಗಲೇ ಆತ ಬೆತ್ತಲಾಗಿದ್ದ ಎಂದು ಕೆಲವರು (ಆತನ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವವರ ಕಡೆಯವರು) ಹೇಳುತ್ತಾರೆ. ಕಬ್ಬೆಕಟ್ಟೆ ಗ್ರಾಮದ ಕೆಲವರು ಆತನನ್ನು ಅನುಮಾನಿಸಿ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ ಎಂದು ಪ್ರತಾಪ್ ಪರವಾಗಿ ಮಾತಾಡುತ್ತಿರುವವರು ಹೇಳುತ್ತಾರೆ.

ಘಟನೆಯ ಬಗ್ಗೆ ತಿಳಿದ ನಂತರ ರಾಜ್ಯದ ಕೆಲವೆಡೆ ದಲಿತಪರ ಹೋರಾಟಗಾರರು ಪ್ರತಿಭಟನೆಗಳನ್ನು ಮಾಡಿದ್ದಾರೆ. ಸೂಕ್ತ ತನಿಖೆಯನ್ನು ನಡೆಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಗುಂಡ್ಲುಪೇಟೆಯಲ್ಲಿ ಬೃಹತ್ ಕಾಲ್ನಡಿಗೆ ಜಾಥ ಮತ್ತು ಪ್ರತಿರೋಧ ಸಮಾವೇಶವನ್ಮು ಕೂಡ ನಡೆಸಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಬೃಹತ್ ಜಾಥ, ಪ್ರತಿರೋಧ ಸಮಾವೇಶ

ಈ ವಿಚಾರದಲ್ಲಿ ನಡೆದ ಇನ್ನೊಂದು ಬೆಳವಣಿಗೆಯೆಂದರೆ ಇದಕ್ಕೆ ನಾವು ಪ್ರತಿ ಜಾಥಾ ನಡೆಸುತ್ತೇವೆಂದು ಮೇಲ್ಜಾತಿಗೆ ಸೇರಿದ ಕೆಲವು ಜನ ಹೇಳಿದ್ದಾರೆ. ಅವರ ಪ್ರಕಾರ ಘಟನೆ ನಡೆದದ್ದೇ ಬೇರೆ ರೀತಿ. ಮಾನಸಿಕ ಅಸ್ವಸ್ಥನಾಗಿದ್ದ ಆತನಿಗೆ ಮೊದಲು ಯಾರೂ ಏನನ್ನೂ ಮಾಡಲಿಲ್ಲ. ಬದಲಿಗೆ ಸಾಧು ಇರಬೇಕೆಂದು ನಮಸ್ಕರಿಸಿದ್ದಾರೆ. ಆ ನಂತರ ಆತನೇ ಬೇರೆಯವರ ಮೇಲೆ ಹಲ್ಲೆ ನಡೆಸಿದಾಗ, ಬಹಳ ಪ್ರಯತ್ನಪಟ್ಟು ಹಿಡಿದು, ಕಟ್ಟಿ ಹಾಕಿದ್ದೇವೆ ಅಷ್ಟೇ. ಆ ನಂತರ ಪೊಲೀಸರು ಬಂದಾಗ ಅವರಿಗೆ ಒಪ್ಪಿಸಿದ್ದೇವೆ. ಜೊತೆಗೆ ಆತನ ಜಾತಿಯೂ ನಮಗೆ ಗೊತ್ತಿರಲಿಲ್ಲ. ಹಾಗಾಗಿ ಇದಕ್ಕೆ ಜಾತಿ ಬಣ್ಣ ಕಟ್ಟುವುದು ಬೇಡ ಎಂಬುದು ಅವರ ಹೇಳಿಕೆ.

ಒಂದು ವೇಳೆ ಇಷ್ಟೇ ಆಗಿದ್ದರೆ, ಅದು ಬೆತ್ತಲೆ ತಿರುಗುವ ಯಾವುದೇ ಮಾನಸಿಕ ಅಸ್ವಸ್ಥನ ಜೊತೆ ಸಮಾಜ ನಡೆದುಕೊಳ್ಳಬೇಕಾದ ರೀತಿ ಎಂದು ಬಗೆಯಬಹುದು. ಆದರೆ, ಈ ಮಾತುಗಳನ್ನು ಆಡುತ್ತಿರುವವರು ಸತ್ಯ ನುಡಿಯುತ್ತಿಲ್ಲ ಎಂಬುದಕ್ಕೆ ವಿಡಿಯೋ ಸಾಕ್ಷಿಯಾಗಿದೆ. ಆ ಹುಡುಗನನ್ನು ಬೆತ್ತಲೆಗೊಳಿಸಿ, ಕೈ ಹಿಂದಕ್ಕೆ ಕಟ್ಟಿ ನಡೆಸಿಕೊಂಡು ಬರುವುದು ಕಾಣುತ್ತಿದೆ. ಆ ರೀತಿ ನಡೆಸಿಕೊಂಡು ಬರುತ್ತಿರುವವರು ಕೈಯ್ಯಲ್ಲಿ ಕೋಲು ಹಿಡಿದಿದ್ದಾರೆ ಮತ್ತು ಇದನ್ನು ವಿಡಿಯೋ ಮಾಡಲಾಗಿದೆ. ‘ಜಾತಿ ಬಣ್ಣ ಕಟ್ಟಬೇಡಿ’ ಎನ್ನುತ್ತಿರುವವರು ಮೊದಲು ವಾಸ್ತವವನ್ನು ಮಾತಾಡಬೇಕು. ಕನಿಷ್ಠ ಇಂತಹ ಅಮಾನವೀಯವಾದ ಕೃತ್ಯವನ್ನು ಖಂಡಿಸುವ ಮಾನವೀಯತೆಯೂ ಇಲ್ಲದೇ, ಕೃತ್ಯವನ್ನು ಎಸಗಿದವರ ರಕ್ಷಣೆಗೆ ನಿಂತಿರುವುದು ಇಲ್ಲಿ ಎದ್ದು ಕಾಣುತ್ತಿದೆ.

ಅವರು ಹೇಳುವ ಹಾಗೆ ಮಾನಸಿಕ ಅಸ್ವಸ್ಥನೇ ಇರಬಹುದು (ಆ ರೀತಿ ಇಲ್ಲ, ಆತ ಐಎಎಸ್ ಪರೀಕ್ಷೆ ಬರೆಯುವಷ್ಟು ಸರಿಯಾಗಿದ್ದಾನೆಂದು ಕೇಂದ್ರ ಆಯೋಗದ ಸದಸ್ಯರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ), ಬೆತ್ತಲೆಯೇ ಕೂತಿದ್ದ ಎಂದುಕೊಳ್ಳೋಣ. ಮಾನಸಿಕ ಅಸ್ವಸ್ಥನಾಗಿದ್ದು, ಬೆತ್ತಲೆ ಕೂತಿರುವ ವ್ಯಕ್ತಿಯನ್ನು ಬೀದಿಯಲ್ಲಿ ಮೆರವಣಿಗೆ ಮಾಡುವವರು ಮಾನಸಿಕವಾಗಿ ಸ್ವಸ್ಥರೇ? ಅವರ ಮಾನಸಿಕತೆಗೆ ಬಡಿದಿರುವ ರೋಗ ಯಾವುದು? ಅದು ಮಕ್ಕಳ ಕಳ್ಳರು ಇತ್ಯಾದಿ ಕಾರಣ ಹೇಳಿ, ಬಡಿದು ಕೊಲ್ಲುವ ಮಾನಸಿಕತೆಯೇ? ಅಥವಾ ಜಾತಿ ರೋಗವೂ ಬಡಿದಿತ್ತಾ? ಆರೋಪಿಗಳ ಪಟ್ಟಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದವರಾರೂ ಇಲ್ಲ. ಬಲಾಢ್ಯ ಜಾತಿಗಳಿಗೆ ಸೇರಿದವರು ಮಾತ್ರವಿದ್ದಾರೆ. ಸಮರ್ಥನೆಗೆ ಇಳಿದವರೂ ಅವರೇ ಆಗಿದ್ದಾರೆ. ಹಾಗಾಗಿ ಇಲ್ಲಿ ಜಾತಿ ವಾಸನೆ ಬಡಿಯುತ್ತಿದೆ.

ಕೆಲವೊಮ್ಮೆ ಹೀಗೂ ಆಗುತ್ತದೆ. ಮೊದಲೇ ಹೇಳಿದ ರೀತಿಯಲ್ಲಿ ಅಪಮಾನಕ್ಕೆ ಗುರಿಯಾಗುವವರು ಸಾಮಾನ್ಯವಾಗಿ ಬಡವರು, ದುರ್ಬಲರು, ಶೋಷಿತ ಜಾತಿಗಳಿಗೆ ಸೇರಿದವರು, ಕೊಳೆಬಟ್ಟೆ ಹಾಕಿದವರು ಆಗಿರುತ್ತಾರೆ. ಬೀದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರೀ ಕಚೇರಿಗಳಲ್ಲಿ ಬಂದಿರುವವರ ಬಟ್ಟೆ ಇತ್ಯಾದಿಗಳನ್ನು ನೋಡಿ ಗೌರವದ ಮಟ್ಟ ನಿರ್ಧಾರವಾಗುತ್ತದೆ ಎಂದ ಮೇಲೆ, ಉಳಿದುದನ್ನು ಊಹಿಸಬಹುದು.

ಇಷ್ಟೇ ಅಲ್ಲದೇ, ನಮ್ಮದೇ ರಾಜ್ಯದಲ್ಲಿ ದಲಿತ ಯುವಕ ಹುಡುಗಿಯನ್ನು ಮಾತನಾಡಿಸಿದ ಎಂಬ ಕಾರಣಕ್ಕೆ, ಬೆತ್ತಲೆ ಮಾಡಿ ಚೆನ್ನಾಗಿ ಹೊಡೆದು ಆತನ ಕೊರಳಿಗೆ ಬೋರ್ಡ್ ನೇತಾಕಿ ವಿಡಿಯೋ ಮಾಡಿದ ಘಟನೆ ನಡೆದು ಬಹಳ ಕಾಲವಾಗಿಲ್ಲ. ದಲಿತ ಜೀವಪರ ಸಂಘಟನೆಗಳು ಇದನ್ನು ಪ್ರತಿಭಟಿಸಿದಾಗ ದಲಿತ ಯುವಕನ ಮೇಲೆಯೇ ಕೌಂಟರ್ ಕೇಸ್ ಹಾಕಿದ ಘಟನೆ ನಮ್ಮ ಕಣ್ಣಮುಂದೆ ಇದೆ. 9ನೇ ತರಗತಿಯ ಹುಡುಗಿಯನ್ನು ಮಾತನಾಡಿಸಿದ ನಂತರ ದಲಿತ ಹುಡುಗನೊಬ್ಬ ಅನಾಥ ಶವವಾಗಿದ್ದೂ ಇತ್ತೀಚೆಗೇ. ವಿಜಾಪುರದ ದಲಿತ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದಾಗ ಆ ಹುಡುಗಿಯ ನಡತೆಯೇ ಸರಿಯಿಲ್ಲವೆಂದ ಪೋಲಿಸ್ ಅಧಿಕಾರಿಗಳ ಆಡಿಯೋ ಸಹಾ ಎಲ್ಲರೂ ಕೇಳಿದ್ದೇವೆ.

ಈ ಎಲ್ಲಾ ಘಟನೆಗಳಲ್ಲೂ ಮೇಲ್ಜಾತಿಯ ಮನಸ್ಥಿತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಜಾತಿ ಮೇಲರಿಮೆಯೇ ಇದಕ್ಕೆ ಕಾರಣ ಎಂದು ನಂಬಲು ಕಾರಣಗಳಿವೆ. ಸುಲಭವಾಗಿ ಸಿಗುವ ಪ್ರತಾಪ್‍ನಂತಹ ಅಮಾಯಕರನ್ನು ಹಿಂಸಿಸುವುದನ್ನು ತಪ್ಪು ಎಂದು ಒಪ್ಪಿಕೊಳ್ಳದಷ್ಟು ಮಾನವೀಯತೆ ಕಳೆದುಕೊಂಡಿದ್ದೇವಾ ಎಂದು ಅವರೂ ಯೋಚಿಸಬೇಕಿದೆ. ಹಾಗೆ ಮಾಡದೇ ಸುಳ್ಳುಗಳನ್ನು ಕಟ್ಟಿದಾಗ ಇರಬಹುದಾದ ಅಲ್ಪಸ್ವಲ್ಪ ನಿಜವನ್ನೂ ನಂಬಲಾಗದು.

ಪ್ರತಿಜಾಥಾ ಇತ್ಯಾದಿ ಪ್ರಸ್ತಾಪಗಳನ್ನು ಮಾನವೀಯತೆಯಿರುವ ಜನರು ಕೈಬಿಟ್ಟು, ಆತ್ಮಾವಲೋಕನಕ್ಕೆ ಮುಂದಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...