ಹರಿಯಾಣದ ಮೇವತ್ (ನೂಹ್)ನಿಂದ ಹಿಂದೂ ಮಹಿಳೆಯರನ್ನು ಅಪಹರಿಸಲಾಗಿದೆ ಹಾಗೂ ಕಿರುಕುಳ ನೀಡಲಾಗಿದೆ ಎಂದು ಬಿಂಬಿಸಿ ಪ್ರಚೋದನಕಾರಿ ಸುದ್ದಿಗಳನ್ನು ಬಲಪಂಥೀಯ ಚಾನೆಲ್‌ಗಳು ಬಿತ್ತರಿಸುತ್ತಿವೆ. ಸುದ್ದಿಯ ಲಿಂಕ್‌ಗಳನ್ನು ಸಾಮಾಜಿಕ ಮಾಧ್ಯಗಳಲ್ಲಿ ಶೇರ್ ಮಾಡುವ ಮೂಲಕ ಕೋಮು ಗಲಭೆಯ ಬೆಂಕಿಗೆ ತುಪ್ಪ ಸುರಿಯುತ್ತಿವೆ ಎಂದು ಆಲ್ಟ್ ನ್ಯೂಸ್ ಪ್ರತಿಪಾದಿಸಿದೆ.
ಬಲಪಂಥೀಯ ಚಾನೆಲ್‌ಗಳು ಶೇರ್ ಮಾಡಿದ ವೀಡಿಯೊದಲ್ಲಿರುವ ಪ್ರತಿಪಾದನೆಯನ್ನು ಹೆಚ್ಚುವರಿ ಡಿಜಿಪಿ ಮಮತಾ ಸಿಂಗ್ ಅವರು ನಿರಾಕರಿಸುವ ವೀಡಿಯೊ ಎಂದು ಹೇಳಿದ್ದಾರೆ. ಈ ಬಗ್ಗೆ ಆಲ್ಟ್ ನ್ಯೂಸ್ ನ ಮುಹಮ್ಮದ್ ಝುಬೈರ್ ಅವರು ವಿಡಿಯೋ ಶೇರ್ ಮಾಡಿದ್ದಾರೆ.
ADGP Law and order, Mamata Singh says, No women was kidnapped, rape or molested in or near the temple, Says she was present in the temple on 31st July and nothing of that sort happened. Accounts sharing misleading claims will be booked and strictl action will be taken against… https://t.co/2ES6foPPpC pic.twitter.com/vpWwVqOKra
— Mohammed Zubair (@zoo_bear) August 5, 2023
”ನಾನು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವಾಗ ಇದೆಲ್ಲವನ್ನೂ ಈಗಾಗಲೇ ನಿರಾಕರಿಸಿದ್ದೇನೆ. ನಾನು ಇದುವರೆಗೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳದ ದೂರನ್ನು ಸ್ವೀಕರಿಸಿಲ್ಲ” ಎಂದು ಡಿಜಿಪಿ ಮಮತಾ ಸಿಂಗ್ ಅವರು ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ.
”ದಾರಿ ತಪ್ಪಿಸುವ ಪ್ರತಿಪಾದನೆಯನ್ನು ಶೇರ್ ಮಾಡುವ ಸಾಮಾಜಿಕ ಮಾಧ್ಯಮದ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಂತಹ ಖಾತೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು”’ ಎಂದು ಮಮತಾ ಸಿಂಗ್ ಹೇಳಿದ್ದಾರೆ.
ಪ್ರಚೋದನಕಾರಿ ಹಾಗೂ ದೃಢೀಕರಿಸದ ಪ್ರತಿಪಾದನೆಯನ್ನು ಪ್ರಸಾರ ಮಾಡುವ ಕೆಲವು ಚಾನೆಲ್‌ಗಳನ್ನು ಕೂಡ ಆಲ್ಟ್ ನ್ಯೂಸ್ ಪಟ್ಟಿ ಮಾಡಿದೆ. ಅವುಗಳೆಂದರೆ ಎಟುಝಡ್ ಟಿವಿ, ಲೀಡಿಂಗ್ ಭಾರತ್ ಟಿ.ವಿ. ಹಾಗೂ ಹಿಂದೂಸ್ತಾನ್ 9 ನ್ಯೂಸ್. ಎಟುಝಡ್ ನ್ಯೂಸ್ ಟಿ.ವಿ.ಯನ್ನು ನಡೆಸುತ್ತಿರುವವರಲ್ಲಿ ಮನೋಜ್ ಕುಮಾರ್ ಒಬ್ಬರು. ಅವರು ಮೇವತ್ಗೆ ಸಂಬಂಧಿಸಿದ ಹಲವು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ ಎಂದು ಮುಹಮ್ಮದ್ ಝುಬೈರ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: 70 ವರ್ಷದ ವ್ಯಕ್ತಿಯ ಗುಂಪು ಹತ್ಯೆ


