Homeಕರ್ನಾಟಕಹಾಸನ ಜಿಲ್ಲೆಯ ಚುನಾವಣ ಕಣದಲ್ಲಿ ಯಾವ ಅಭ್ಯರ್ಥಿ ಮುನ್ನಡೆ

ಹಾಸನ ಜಿಲ್ಲೆಯ ಚುನಾವಣ ಕಣದಲ್ಲಿ ಯಾವ ಅಭ್ಯರ್ಥಿ ಮುನ್ನಡೆ

- Advertisement -
- Advertisement -
ಹಾಸನ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಬಾ ಕ್ಷೇತ್ರಗಳ ಪೈಕಿ ಈ ಬಾರಿ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರವೆಂದರೆ ಹಾಸನ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದಲೂ ಜೆಡಿಎಸ್ ಪ್ರಭಲ್ಯವಿದ್ದರೂ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಮ್ ಗೌಡ ಗೆದ್ದು ಬೀಗುವ ಮೂಲಕ ಜೆಡಿಎಸ್ ಓಟಕ್ಕೆ ಬ್ರೇಕ್ ಹಾಕಿದ್ದರು. ಈ ಬಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ  ಜೆಡಿಎಸ್‌ನ ಸ್ವರೂಪ್ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರೀತಮ್‌ಗೌಡ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದ್ದು ಮತದಾರ ಯಾರ ಕೈ ಹಿಡಿದಿದ್ದಾನೆ ಎಂದು ನೋಡಬೇಕಿದೆ.
ಇನ್ನುಹಲವು ವರ್ಷಗಳಿಂದ ಹಾಸನ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಕಬ್ಬಿಣದ ಕಡಲೆಯೇ ಆಗಿಹೋಗಿದೆಈ ಬಾರಿ ಕೈ ಪಾಳಯದಿಂದ ಬಿ.ಕೆರಂಗಸ್ವಾಮಿ ಸ್ಪರ್ಧಿಸಿದ್ದಾರೆಕಳೆದ ಬಾರಿ ಗಳಿಸಿದ್ದ 3ನೇ ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿ ಉತ್ತಮಪಡಿಸಿಕೊಳ್ಳುತ್ತಾರಾಗೆಲುವು ಪಡೆದು ದಿಗ್ಗಜರಿಗೆ ಶಾಕ್ ಕೊಡುತ್ತಾರಾ ಎಂಬುದು ಕೆಲವೇ ಕ್ಷಣಗಳಲ್ಲಿ ಗೊತ್ತಾಗುತ್ತದೆ.

ಹಾಸನ ಕ್ಷೇತ್ರದ ಹಿಂದಿನ ಚುನಾವಣಾ ಇತಿಹಾಸ ನೋಡುವುದಾದರೆ 1957ರಿಂದ ಈಚೆ 2018 ರವರೆಗೆ 14 ಚುನಾವಣೆಗಳು ಈ ಕ್ಷೇತ್ರದಲ್ಲಿ ನಡೆದಿವೆಜೆಡಿಎಸ್ ಹಾಗೂ ಅದಕ್ಕೂ ಹಿಂದಿನ ಜನತಾ ಪಕ್ಷ ಅತಿ ಹೆಚ್ಚು ಬಾರಿ ಗೆದ್ದಿವೆಕಾಂಗ್ರೆಸ್ ಬಾರಿ ಗೆದ್ದಿದೆಬಿಜೆಪಿ ಅಭ್ಯರ್ಥಿಗಳೂ ಎರಡು ಬಾರಿ ಗೆದ್ದಿದ್ದಾರೆ.

1) ಹಾಸನ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,23,021, ಪುರುಷ ಮತದಾರರು: 1,10,153, ಮಹಿಳಾ ಮತದಾರರು: 1,12,857.

2018ರ ವಿಜೇತರು: ಪ್ರೀತಂ ಗೌಡ (ಬಿಜೆಪಿ),

2023 ರ ಅಭ್ಯರ್ಥಿಗಳು;
ಸ್ವರೂಪ್‌ ಪ್ರಕಾಶ್‌ (ಜೆಡಿಎಸ್‌), ಮುನ್ನಡೆ
ಪ್ರೀತಂ ಗೌಡ (ಬಿಜೆಪಿ), ಹಿನ್ನಡೆ
ಬನವಾಸೆ ರಂಗಸ್ವಾಮಿ (ಕಾಂಗ್ರೆಸ್‌) ಮೂರನೆ ಸ್ಥಾನ

2) ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,03,026, ಪುರುಷ ಮತದಾರರು: 1,00,604, ಮಹಿಳಾ ಮತದಾರರು: 1,02,419.

2018ರ ವಿಜೇತರು: ಸಿ.ಎನ್‌.ಬಾಲಕೃಷ್ಣ (ಜೆಡಿಎಸ್‌).

2023ರ ಅಭ್ಯರ್ಥಿಗಳು:
ಸಿ.ಎನ್‌.ಬಾಲಕೃಷ್ಣ (ಜೆಡಿಎಸ್‌), ಮುನ್ನಡೆ
ಎಂ.ಗೋಪಾಲಸ್ವಾಮಿ(ಕಾಂಗ್ರೆಸ್), ಹಿನ್ನಡೆ
ಚಿದಾನಂದ (ಬಿಜೆಪಿ), ಹಿನ್ನಡೆ

3) ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,18,097, ಪುರುಷ ಮತದಾರರು: 1,09,187, ಮಹಿಳಾ ಮತದಾರರು: 1,08,900.

2018ರ ವಿಜೇತರು: ಎಚ್‌.ಡಿ. ರೇವಣ್ಣ (ಜೆಡಿಎಸ್‌),

2023 ರ ಅಭ್ಯರ್ಥಿಗಳು;

ಎಚ್‌.ಡಿ. ರೇವಣ್ಣ (ಜೆಡಿಎಸ್‌), ಮುನ್ನಡೆ
ಶ್ರೇಯಸ್‌ ಪಟೇಲ್‌ (ಕಾಂಗ್ರೆಸ್‌), ಹಿನ್ನಡೆ
ಜಿ. ದೇವರಾಜೇಗೌಡ (ಬಿಜೆಪಿ), ಹಿನ್ನಡೆ

4) ಅರಕಲಗೂಡು ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,25,746, ಪುರುಷ ಮತದಾರರು: 1,15,558, ಮಹಿಳಾ ಮತದಾರರು: 1,10,185.

2018ರ ವಿಜೇತರು: ಎ.ಟಿ. ರಾಮಸ್ವಾಮಿ (ಜೆಡಿಎಸ್‌),

2023 ರ ಅಭ್ಯರ್ಥಿಗಳು;
ಎ. ಮಂಜು (ಜೆಡಿಎಸ್‌), ಮುನ್ನಡೆ
ಯೋಗಾ ರಮೇಶ್‌ (ಬಿಜೆಪಿ), ಹಿನ್ನಡೆ
ಶ್ರೀಧರ್‌ ಗೌಡ (ಕಾಂಗ್ರೆಸ್‌), ಹಿನ್ನಡೆ
ಎಂ.ಟಿ. ಕೃಷ್ಣೇಗೌಡ (ಪಕ್ಷೇತರ), ಹಿನ್ನಡೆ

5) ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,03,631, ಪುರುಷ ಮತದಾರರು: 1,01,582, ಮಹಿಳಾ ಮತದಾರರು: 1,02,044.

2018ರ ವಿಜೇತರು: ಎಚ್.ಕೆ. ಕುಮಾರಸ್ವಾಮಿ (ಜೆಡಿಎಸ್‌),

2023 ರ ಅಭ್ಯರ್ಥಿಗಳು:

ಎಸ್. ಮಂಜುನಾಥ (ಬಿಜೆಪಿ), ಮುನ್ನಡೆ
ಎಚ್‌.ಕೆ.ಕುಮಾರಸ್ವಾಮಿ (ಜೆಡಿಎಸ್‌), ಹಿನ್ನಡೆ
ಮುರುಳಿಮೋಹನ್‌ (ಕಾಂಗ್ರೆಸ್‌), ಹಿನ್ನಡೆ

6) ಅರಸೀಕೆರೆ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,14,020, ಪುರುಷ ಮತದಾರರು: 1,06,476, ಮಹಿಳಾ ಮತದಾರರು: 1,07,540.

2018ರ ವಿಜೇತರು: ಕೆ.ಎಂ. ಶಿವಲಿಂಗೇಗೌಡ (ಜೆಡಿಎಸ್‌);

2023 ರ ಅಭ್ಯರ್ಥಿಗಳು:
ಕೆ.ಎಂ.ಶಿವಲಿಂಗೇಗೌಡ (ಕಾಂಗ್ರೆಸ್‌), ಮುನ್ನಡೆ
ಎನ್‌.ಆರ್.ಸಂತೋಷ್‌ (ಜೆಡಿಎಸ್‌), ಹಿನ್ನಡೆ
ಜಿ.ವಿ.ಟಿ. ಬಸವರಾಜು (ಬಿಜೆಪಿ), ಹಿನ್ನಡೆ

7) ಬೇಲೂರು ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 1,96,053, ಪುರುಷ ಮತದಾರರು: 98,719, ಮಹಿಳಾ ಮತದಾರರು: 97,330.

2018ರ ವಿಜೇತರು: ಕೆ.ಎಸ್‌.ಲಿಂಗೇಶ್‌ (ಜೆಡಿಎಸ್‌),

2023 ರ ಅಭ್ಯರ್ಥಿಗಳು;
ಎಚ್‌.ಕೆ. ಸುರೇಶ್ (ಬಿಜೆಪಿ), ಮುನ್ನಡೆ
ಕೆ.ಎಸ್. ಲಿಂಗೇಶ್‌ (ಜೆಡಿಎಸ್‌), ಹಿನ್ನಡೆ
ಬಿ.ಶಿವರಾಂ (ಕಾಂಗ್ರೆಸ್‌), ಹಿನ್ನಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...