ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆ ಮತ್ತು ದೇಶಾದ್ಯಂತ ನಡೆದ ಉಪಚುನಾವಣೆಗಳ ಫಲಿತಾಂಶಗಳು BJP ಗೆ ತಳ ಮಟ್ಟದ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಬಲವಾದ ತಂಡವನ್ನು ಹೊಂದಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ. ಆದರೆ, ಬಿಜೆಪಿಯು ಉತ್ತಮ ಆಡಳಿತ ನೀಡುಕ್ಕಿಂತ ಚುನಾವಣೆಗಳನ್ನು ಗೆಲ್ಲುವುದಲ್ಲೇ ಹೆಚ್ಚು ಉತ್ಸುಕವಾಗಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷ ಆಳಿದಂತೆ ಭಾರತವನ್ನು ಆಳಲು ಬಿಜೆಪಿ ಬಯಸುತ್ತದೆ. ಇದರಲ್ಲಿ ಬಿಜೆಪಿ ಸಾಕಷ್ಟು ಯಶಸ್ವಿಯೂ ಆಗಿದೆ. 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಮತ್ತು ಆ ಎರಡೂ ಅವಧಿಯ ನಡುವಿನ ವರ್ಷಗಳ ಹಲವಾರು ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಚುನಾವಣಾ ಗೆಲುವಿಗಷ್ಟೇ ಉತ್ಸುವಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಮೋದಿ! ಬಿಜೆಪಿಯ ಈ ತಂತ್ರದ ವಾಸ್ತವವೇನು?
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ, ಕರ್ನಾಟಕ ಮತ್ತು ಮಧ್ಯಪ್ರದೇಶದಂತೆ ಆಡಳಿತದಲ್ಲಿದ್ದ ಇತರ ಪಕ್ಷಗಳ ಶಾಸಕರನ್ನು ಭೇಟೆಯಾಡುವ ಮೂಲಕ ಸರ್ಕಾರಗಳನ್ನು ರಚಿಸಿದೆ. ತೀರಾ ಇತ್ತೀಚಿಗೆ ರಾಹುಲ್ ಗಾಂಧಿಯ ಆಪ್ತ ಕಾಂಗ್ರೆಸ್ ಮಾಜಿ ನಾಯಕ, ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನೂ ಬಿಜೆಪಿ ಸೆಳೆದುಕೊಂಡಿತು. ವಾಸ್ತವವಾಗಿ, ಇತರ ರಾಜ್ಯಗಳಲ್ಲಿನ ಹಲವು ಪಕ್ಷಗಳ ಉನ್ನತ ನಾಯಕರು ಮತ್ತು ಶಾಸಕರನ್ನು ಬೇಟೆಯಾಡುವಲ್ಲಿ ಬಿಜೆಪಿ ಬಹಳ ಯಶಸ್ವಿಯಾಗಿದೆ.

ಜನರ ಭಾವನೆಗಳೊಂದಿಗೆ ಬಿಜೆಪಿಯ ಆಟ:
ಚುನಾವಣೆಗಳನ್ನು ಗೆಲ್ಲುವಲ್ಲಿ ಬಿಜೆಪಿಯ ಯಶಸ್ಸಿಗೆ ಪ್ರಮುಖ ಕಾರಣವೆಂದರೆ, ಬಿಜೆಪಿಯ ನಾಯಕರು ಯಾವಾಗಲೂ ಜನರ ಭಾವನೆಗಳೊಂದಿಗೆ ಆಟವಾಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಜನರ ಗಮನ ತಮ್ಮ ಪರವಾಗಿರುವಂತೆ ಮಾಡುತ್ತಾರೆ. ನಾವು ಬಿಜೆಪಿಯ ರಾಜಕೀಯವನ್ನು “ಕಾಮನ್‌ಸೆನ್ಸಲ್ ರಾಜಕೀಯ” ಎಂದು ಉಲ್ಲೇಖಿಸಬಹುದು.
ಬಿಜೆಪಿ ಯಾವಾಗಲೂ ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರಚಾರ ಮಾಡುತ್ತದೆ. ಜನರ ಸಹಾನುಭೂತಿ ಪಡೆಯಲು ಮತ್ತು ಅಂತಿಮವಾಗಿ ಮತಗಳನ್ನು ಪಡೆಯಲು ತಮ್ಮ ಸುತ್ತಲಿನ ವಿಚಾರಗಳ ಬಗ್ಗೆ ಪ್ರಚಾರದಲ್ಲಿ ಬಳಸುತ್ತಾರೆ. ಅಂತಹ ಕೆಲವು ವಿಷಯಗಳು ಮೀಸಲಾತಿ, ರಾಮ ಮಂದಿರ, ಹಿಂದೂ-ಮುಸ್ಲಿಂ ಸಂಘರ್ಷ, ಚೀನಾ-ಪಾಕಿಸ್ತಾನ, ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾ, ಇತ್ಯಾದಿಗಳ ಕುರಿತಾದ “ಚರ್ಚೆ”ಗಳನ್ನು ಅವರು ಬಳಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಬಿಜೆಪಿ ಸರ್ಕಾರ-ಭಾರಿ ವಿರೋಧ
ಈ ತಂತ್ರವು ಜನರು ಬಿಜೆಪಿಯತ್ತ ಆಕರ್ಷಿತರಾಗುವುದನ್ನು ಖಾತ್ರಿಗೊಳಿಸುತ್ತದೆ. ಇತರ ಪಕ್ಷಗಳು, ಈ ವಿವಾದಾತ್ಮಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹೊಂದಿದ್ದರೂ, ಅವುಗಳ ಬಗೆಗಿನ ಮುಕ್ತ ಚರ್ಚೆಯಿಂದ ದೂರ ಸರಿಯುತ್ತವೆ. ಈ ವಿಷಯದಲ್ಲಿ ಬಿಜೆಪಿ ಬಹಳ ಬುದ್ದಿವಂತಿಕೆಯಿಂದ ಜನರನ್ನು ಸೆಳೆಯುತ್ತಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮಹಾಘಟಬಂಧನ್ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರು. ಇದನ್ನು ಅರಿತುಕೊಂಡ ಬಿಜೆಪಿ ಮೊದಲ ಹಂತದ ಮತದಾನ ಮುಗಿದ ನಂತರ ತನ್ನ ಕಾರ್ಯತಂತ್ರವನ್ನು ಬದಲಾಯಿಸಿತು. “ಜಂಗಲ್ ರಾಜ್” ಎಂಬ ಪದವನ್ನು ಪದೇ ಪದೇ ತನ್ನ ಭಾಷಣಗಳಲ್ಲಿ ಉಲ್ಲೇಖಿಸುತ್ತಲೇ ಜನರ ತಲೆಗೆ ಆ ಪದವನ್ನು ತುಂಬಿತು.

ಬಿಜೆಪಿ ನಾಯಕರು ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್ ಅವರನ್ನು “ಜಂಗಲ್ ರಾಜ್ ಕಾ ಯುವರಾಜ್” ಎಂದು ಕರೆದಿದ್ದಾರೆ. ಇದು ಎರಡನೇ ಮತ್ತು ಮೂರನೇ ಹಂತಗಳಲ್ಲಿ ಸತತವಾಗಿ 52 ಮತ್ತು 53 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯ ಮಾಡಿತು. ಅದರ ಕಾರ್ಯತಂತ್ರದ ಬದಲಾವಣೆಯು ಹಳೆಯ ತಲೆಮಾರಿನ ಮತದಾರರು ಬಿಜೆಪಿಯನ್ನು ಬೆಂಬಲಿಸಲು ಸ್ಪಷ್ಟವಾಗಿ ಪ್ರೇರೇಪಿಸಿತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?
ಬಿಜೆಪಿ ಯಶಸ್ಸಿಗೆ ಸಾಮಾಜಿಕ ಮಾಧ್ಯಮ:
ಬಿಜೆಪಿ ಸೋಷಿಯಲ್ ಮೀಡಿಯಾ ತಂಡವು ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೋಷಿಯಲ್ ಮೀಡಿಯಾ ಬಳಕೆ ಮತ್ತು ಪ್ರಭಾವದಲ್ಲಿ ಪಕ್ಷವು ಯಾವಾಗಲೂ ಕಾಂಗ್ರೆಸ್‌ಗಿಂತಲೂ ಬಹಳ ಮುಂದಿದೆ. ಉದಾಹರಣೆಗೆ, ಫೆಬ್ರವರಿ 1998 ರಲ್ಲಿ ಬಿಜೆಪಿ ತನ್ನ ಪಕ್ಷದ ವೆಬ್‌ಸೈಟ್ ಅನ್ನು ಸ್ಥಾಪಿಸಿತು. ಆದರೆ ಕಾಂಗ್ರೆಸ್ ತನ್ನ ಮೊದಲ ಅಧಿಕೃತ ವೆಬ್‌ಸೈಟ್ ಅನ್ನು ಏಳು ವರ್ಷಗಳ ನಂತರ, ಫೆಬ್ರವರಿ 2005 ರಲ್ಲಿ ಉದ್ಘಾಟಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಪಕ್ಷವು ಆನ್‌ಲೈನ್ ಅಭಿಯಾನದೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರ ಪುಸ್ತಕ “ಐ ಆಮ್ ಎ ಟ್ರೋಲ್”ನಲ್ಲಿ ಮೋದಿಗೆ ಸಾಮಾಜಿಕ ಮಾಧ್ಯಮವು ಉತ್ಸಾಹ ಮಾತ್ರವಲ್ಲ, ಅವಶ್ಯಕತೆಯೂ ಇದೆ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಯ ಸಮಯದಲ್ಲಿ, ಬಿಜೆಪಿ “ಒಂದು ಲಕ್ಷಕ್ಕೂ ಹೆಚ್ಚು” ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ಹೇಳಿಕೊಂಡಿದೆ. ಫೇಸ್‌ಬುಕ್ ಮತ್ತು ಗೂಗಲ್‌ನಲ್ಲಿ ನೀಡಲಾದ ಜಾಹೀರಾತುಗಳ ಮೂಲಕ ತನ್ನ ಆಲೋಚನೆಗಳನ್ನು ಹರಡಿದೆ.
2019 ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪಶ್ಚಿಮ ಬಂಗಾಳದ ಮೂರು ಕೋಟಿ ಜನರನ್ನು ತಲುಪಲು ಪಕ್ಷವು 50,000 ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ತಿಳಿದುಬಂದಿದೆ. ಇದು ರಾಜ್ಯದಲ್ಲಿ 2014 ರಲ್ಲಿದ್ದ ತನ್ನ ಸ್ಥಾನದ ಬಲವನ್ನು 2 ರಿಂದ 18 ಕ್ಕೆ ಹೆಚ್ಚಿಸಲು ಮತ್ತು 17% ರಿಂದ ಸುಮಾರು 40% ವರೆಗೆ ಮತದ ಪಾಲು ಪಡೆಯಲು ಸಾಧ್ಯವಾಗಿದೆ.
ಇದನ್ನೂ ಓದಿ: ಬಿಜೆಪಿ ನನ್ನ ಜೈಲಿಗೆ ಹಾಕಿದರೂ, ಅಲ್ಲಿಂದಲೇ ಪಕ್ಷವನ್ನು ಗೆಲ್ಲಿಸುವೆ-ಮಮತಾ ಬ್ಯಾನರ್ಜಿ
2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರನ್ನು ಪಶ್ಚಿಮ ಬಂಗಾಳದ ಉಸ್ತುವಾರಿಗಳಾಗಿ ನೇಮಕ ಮಾಡಿರುವುದು ತೃಣಮೂಲ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸುತ್ತದೆ. ಇಂಗ್ಲಿಷ್ ಮಾಧ್ಯಮಗಳು ಮತ್ತು ಉದಾರವಾದಿ ವರ್ಗಗಳು ಮೋದಿಯನ್ನು ಬೆಂಬಲಿಸುವುದಿಲ್ಲ ಎಂದು ತಿಳಿದ ನಂತರ, ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯೋಜಿಸುವುದು ಪಕ್ಷದ ಅವಶ್ಯಕತೆಯಾಗಿದೆ.
ಆದ್ದರಿಂದ ಬಿಜೆಪಿಯ ಬೃಹತ್ ಸೋಷಿಯಲ್ ಮೀಡಿಯಾ ನೆಟ್‌ವರ್ಕ್‌ನ ಮನ್ನಣೆ ಅವರಿಗೆ ದೊರೆತಿದೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ. ಆದರೆ ಪ್ರತಿಪಕ್ಷಗಳು ನಿರಂತರವಾಗಿ ಹಾಗೆ ಮಾಡುತ್ತಿವೆ. ವೈಎಸ್ಆರ್ ಕಾಂಗ್ರೆಸ್ ನಂತಹ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮದ ಅಪಾರ ಶಕ್ತಿಯನ್ನು ಅರಿತುಕೊಂಡಿವೆ. ಅದರಲ್ಲಿ ಸಮಯ ಮತ್ತು ಸಂಪನ್ಮೂಲಗಳನ್ನು ಹೂಡಿಕೆ ಮಾಡಿವೆ. ಹಾಗೆ ಮಾಡುವುದರಿಂದ ಲಾಭ ಕೂಡಾ ಪಡೆದಿವೆ.

ಈಗ ತೃಣಮೂಲ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಹಾಯದಿಂದ ಸಾಮಾಜಿಕ ಮಾಧ್ಯಮ ಪ್ರಚಾರದಲ್ಲೂ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.
ಅಸಲಿ ಸಮಸ್ಯೆಗಳನ್ನು ಬದಿಗೊತ್ತಿ; ಆಕ್ರಮಣಕಾರಿಯಾಗಿ ಅಜೆಂಡಾ ಹೇರಿಕೆ:
ಜನರನ್ನು ತಲುಪಲು ಬಿಜೆಪಿ ಶಕ್ತಿ ಮತ್ತು ಹಣವನ್ನು ಹೂಡಿಕೆ ಮಾಡಿದ್ದಾರೆ. ಸಾರ್ವಜನಿಕರು ಮತ್ತು ಆಡಳಿತ ಪಕ್ಷದ ನಡುವೆ ಸಂವಹನಕ್ಕೆ ಏಕಮುಖ ಮಾರ್ಗವನ್ನು ಅವರು ಕಟ್ಟಿಕೊಂಡಿದ್ದಾರೆ. ಬಿಜೆಪಿ ನಾಯಕರ ಭಾವೋದ್ರಿಕ್ತ ವಾಕ್ಚಾತುರ್ಯದಿಂದ ಸಾರ್ವಜನಿಕರು ಬಿಜೆಪಿಯತ್ತ ವಾಲುತ್ತಿದ್ದಾರೆ. ಆದರೆ ತಮ್ಮದೇ ಆದ ಕುಂದುಕೊರತೆಗಳನ್ನು ಸಾರ್ವಜನಿಕರು ಕೇಳುತ್ತಿಲ್ಲ. ಪ್ರಶ್ನಿಸುವುದೂ ಇಲ್ಲ.
ಇದನ್ನೂ ಓದಿ: ಬಡತನ, ಭ್ರಷ್ಟಾಚಾರದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿ ವಿರುದ್ಧ ಆಕ್ರೋಶ
ಇದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು, ಈರುಳ್ಳಿಯ ಬೆಲೆಗಳು ಹೆಚ್ಚಾಗುವುದರಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಯಾಕೆಂದರೆ ತರಕಾರಿ ತನ್ನ ಆಹಾರದ ಭಾಗವಾಲ್ಲ ಎಂದು ಹೇಳಿದ್ದರು.
ಬಿಜೆಪಿಯ ಆದ್ಯತೆಯೆಂದರೆ, ಜನರು ಬಯಸುತ್ತಾರೋ ಇಲ್ಲವೋ, ಆದರೆ ತನ್ನದೇ ಆದ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದಕ್ಕಿಡುವುದು. ಸಂಸತ್ತಿನಲ್ಲಿ ಮಸೂದೆಗಳನ್ನು ಆಕ್ರಮಣಕಾರಿಯಾಗಿ ಅಂಗೀಕರಿಸುವುದು ಈ ಮನಸ್ಥಿತಿಗೆ ಸಾಕ್ಷಿಯಾಗಿದೆ. ವಾಸ್ತವವಾಗಿ, “ಲವ್ ಜಿಹಾದ್” ವಿರುದ್ಧದ ಇತ್ತೀಚಿನ ಕಾನೂನುಗಳು ಸಾಮಾಜಿಕ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಕ್ಕಿಂತ “ಹಿಂದೂ ಖತ್ರೇ ಮಿ ಹೈ” ಎಂಬ ಕಟ್ಟುಕತೆಯನ್ನು ನಿಜವಾಗಿಯು ಇದೆ ಎಂಬ ಸ್ಪಷ್ಟ ಪ್ರಯತ್ನವಾಗಿದೆ.
ಅಂತರ್‌ಧರ್ಮಿಯ ವಿವಾಹಗಳು ಭಾರತೀಯ ಸಮಾಜಕ್ಕೆ ಸಮಸ್ಯೆಯಲ್ಲ. ನಿಜವಾದ ಸಮಸ್ಯೆ ಲೈಂಗಿಕ ದೌರ್ಜನ್ಯವಾಗಿದೆ. ಆದರೂ ಬಿಜೆಪಿ ಅಂತರ್‌ಧರ್ಮೀಯ ವಿವಾಹಗಳನ್ನು ತಡೆಯುವ ಗುರಿಯನ್ನು ಹೊಂದಿದೆಯೆ ಹೊರತು ಲೈಂಗಿಕ ದೌರ್ಜನ್ಯಗಳನ್ನಲ್ಲ. ಹಾಗಾಗಿ ದೌರ್ಜನ್ಯ ಎಸಗುವ ಅಪರಾಧಿಗಳು ನಿರ್ಭಯದಿಂದ ತಿರುಗಾಡುತ್ತಾರೆ.

ಅಷ್ಟೇ ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆ-2019 ರ ಅಂಗೀಕಾರ ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಿಜೆಪಿ ಸ್ಪಷ್ಟ ಕೋಮು ದ್ರುವೀಕರಣದ ಆಡಳಿತಾತ್ಮಕ ದೃಷ್ಟಿಕೋನದ ಜೊತೆಗೆ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಅಲ್ಲದೆ, ನಿಜಕ್ಕೂ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಗಳನ್ನು ಬೆದರಿಕೆ-ಭಯದ ವಾತಾವರಣವನ್ನು ಹೇರುವ ಮತ್ತು ಉಳಿಸಿಕೊಳ್ಳುವ ನಿರಂತರ ಪ್ರಯತ್ನಗಳ ಜೊತೆಗೆ ದೊಡ್ಡ ಸಾರ್ವಜನಿಕರನ್ನು ಅಧೀನವಾಗಿಡಲು ಬಿಜೆಪಿಯು ಬಯಸುತ್ತಿದೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ನ ಒಳ ಒಪ್ಪಂದದಿಂದ ಉಪಚುನಾವಣೆಯನ್ನು ಗೆಲ್ಲಲಾಗಿದೆ: ಸಿದ್ದರಾಮಯ್ಯ
ಬಿಜೆಪಿ ಬಗ್ಗೆ ಪ್ರವಚನ ನೀಡುವ ಮಾಧ್ಯಮಗಳು:
ಭಾರತೀಯ ಸುದ್ದಿ ವಾಹಿನಿಗಳು ಬಿಜೆಪಿಯ ಪ್ರಚಾರವನ್ನು ನ್ಯಾಯಸಮ್ಮತಗೊಳಿಸಲು ನೆರವಾಗುತ್ತವೆ. ದೇಶಾದ್ಯಂತ ಜನರು ಈ ಚಾನೆಲ್‌ಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ ಮತ್ತು ಅವರು ಪ್ರಸಾರ ಮಾಡುವ ಬಿಜೆಪಿ ಬಗೆಗಿನ ಪ್ರವಚನವನ್ನು ಖರೀದಿಸುತ್ತಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೆನಿಸಿಕೊಂಡಿರುವ ಮಾಧ್ಯಮ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಆಡಳಿತ ಪಕ್ಷವು ಚುನಾವಣೆಯಲ್ಲಿ ಗೆಲ್ಲುವುದನ್ನು ತಡೆಯುವುದು ಅಸಾಧ್ಯವಾಗುತ್ತದೆ.

ಮಾಧ್ಯಮಗಳು ವಹಿಸಿರುವ ಪಾತ್ರದಿಂದಾಗಿ ಭಾರತದಲ್ಲಿ ಮೋದಿ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್, ಬ್ರೆಜಿಲ್‌ನ ಜೈರ್ ಬೋಲ್ಸನಾರೊ ಮತ್ತು ಇತರ ಪ್ರಬಲರು ಒಂದೇ ರೀತಿಯಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ಇಲ್ಲಿಯವರೆಗೆ ಹೇಳಿರುವ ಎಲ್ಲಾ ಸುಳ್ಳುಗಳನ್ನು ನ್ಯೂಯಾರ್ಕ್ ಟೈಮ್ಸ್ ನಲ್ಲಿ ನೀವು ಕಾಣಬಹುದು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇಡೀ ಮಾಧ್ಯಮವನ್ನು ಒಬ್ಬ ವ್ಯಕ್ತಿಯಿಂದ ನಿಯಂತ್ರಿಸಲಾಗುವುದಿಲ್ಲ, ಆದರೆ ಭಾರತದಲ್ಲಿ ಮಾಧ್ಯಮಗಳು ಸುಳ್ಳನ್ನು ಕ್ರಮಬದ್ಧವಾಗಿ ಪ್ರಚಾರ ಮಾಡುವುದನ್ನು ನಾವು ನೋಡಬಹುದು.
ಜನರ ಮನಸ್ಸಿನ ದುರ್ಬಲತೆಯನ್ನು ಬಿಜೆಪಿ ಬೇಟೆಯಾಡುತ್ತಿದೆ. ಅವರು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ಆರ್ಥಿಕ ಅಸ್ಥಿರತೆ ಮತ್ತು ಕಳಪೆ ಜೀವನಮಟ್ಟದಂತಹ ಅಂಶಗಳನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯು ಚುನಾವಣೆಯಲ್ಲಿ ಗೆಲ್ಲುವ ಪಕ್ಷವಾಗುತ್ತಿದೆಯೆ ಹೊರತು ದೇಶವನ್ನು ಉತ್ತಮವಾಗಿ ಹೇಗೆ ನಡೆಸಬಹುವುದು ಎಂಬುದಕ್ಕೆ ಉದಾಹರಣೆಯಾಗಿಯಲ್ಲ.
ಕೃಪಿ: ನ್ಯೂಸ್ ಕ್ಲಿಕ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: ಲವ್ ಜಿಹಾದ್ ವಿರುದ್ದದ ಕಾನೂನನ್ನು ಮೊದಲು ಬಿಜೆಪಿ ನಾಯಕರ ವಿರುದ್ದ ಬಳಸಿ: ಖ್ಯಾತ ಉರ್ದು ಕವಿ



100 % True