ಉರ್ದು

ಖ್ಯಾತ ಉರ್ದು ಕವಿ ಮುನವ್ವರ್ ರಾಣಾ, ‘ಲವ್ ಜಿಹಾದ್’ ವಿರುದ್ಧ ಕಾನೂನನ್ನು ತರಲು ಮುಂದಾಗಿರುವ ಉತ್ತರ ಪ್ರದೇಶ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಕಾನೂನನ್ನು ತಮ್ಮ ಸಮುದಾಯದ ಹೊರಗೆ ಮದುವೆಯಾಗಿರುವ ಬಿಜೆಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮೊದಲು ಬಳಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಲವ್ ಜಿಹಾದ್ ಕೇವಲ ಸಮಾಜದಲ್ಲಿ ದ್ವೇಷವನ್ನು ಹರಡಲು ಬಳಸುವ ಸುಳ್ಳು ಆಗಿದ್ದು, ಮುಸ್ಲಿಂ ಹುಡುಗಿಯರು ಇದರಿಂದ ಹೆಚ್ಚು ಬಳಲುತ್ತಿದ್ದಾರೆ ಯಾಕೆಂದರೆ ಸಮುದಾಯದ ಯುವಕರು ಹೊರಗಿನ ಯುವತಿಯರನ್ನು ಮದುವೆಯಾಗುತ್ತಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊದಲು ನಿತೀಶ್ ಕುಮಾರ್ ‘ಲವ್ ಜಿಹಾದ್’ ಕಾಯ್ದೆ ತರಲಿ, ನಾವು ನಂತರ ಯೋಚಿಸುತ್ತೇವೆ: ಸಂಜಯ್ ರಾವತ್

“ಕೇಂದ್ರದಲ್ಲಿ ಕುಳಿತಿರುವ ಇಬ್ಬರು ದೊಡ್ಡ ಲವ್ ಜಿಹಾದಿಗಳನ್ನು ಇಬ್ಬರು ಮುಸ್ಲಿಂ ಮಹಿಳೆಯರು ಮದುವೆಯಾಗಿ ಅವರಿಂದಲೇ ಕಾನೂನಿನ ಬಳಕೆಯನ್ನು ಆರಂಭಿಸಬೇಕು ಮತ್ತು ತಮ್ಮ ಧರ್ಮದ ಹೊರಗೆ ಮದುವೆಯಾಗಿರುವ ಎಲ್ಲ ಬಿಜೆಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಮಗಳನ್ನು ತೆಗೆದುಕೊಂಡರೆ ನೂತನ ಕಾನೂನನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ” ಎಂದು ಅವರು ಹೇಳಿದ್ದಾರೆ.

 

ಪ್ರವಾದಿ ಮುಹಮ್ಮದ್‌ರ ರೇಖಾಚಿತ್ರವನ್ನು ಬಿಡಿಸಿದ್ದಕ್ಕಾಗಿ ಫ್ರಾನ್ಸ್‌ನಲ್ಲಿ ನಡೆದಿದ್ದ ಮೂವರ ಹತ್ಯೆಗಳನ್ನು ಸಮರ್ಥಿಸಿಕೊಂಡಿದ್ದಾರೆಂದು ಮುನವ್ವರ್ ರಾಣಾ ವಿರುದ್ಧ ಇತ್ತೀಚಿಗೆ FIR ದಾಖಲಾಗಿತ್ತು.

ಇದನ್ನೂ ಓದಿ: ಅಂತರ್‌ಧರ್ಮೀಯ ವಿವಾಹಿತರಿಗೆ ಪ್ರೋತ್ಸಾಹ ಧನ ಘೋಷಿಸಿದ ಉತ್ತರಾಖಂಡ್‌!

LEAVE A REPLY

Please enter your comment!
Please enter your name here