ನಿವಾರ್‌
PC: NDTV

ನಿವಾರ್ ಚಂಡಮಾರುತ ಹಿನ್ನಲೆ ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಚಂಡಮಾರುತದ ಕಾರಣದಿಂದಾಗಿ ನಗರದಲ್ಲಿ ಇನ್ನು ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಳೆಯ ಸಾಧ್ಯತೆ ಮತ್ತು ಬೆಂಗಳೂರಿನ ಹಲವು ಭಾಗಗಳಲ್ಲಿ ಬೆಸ್ಕಾಂ ಶುಕ್ರವಾರ ಮತ್ತು ಶನಿವಾರ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯಗಳನ್ನು ನಡೆಸಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಇದನ್ನೂ ಓದಿ: ದೆಹಲಿಯಲ್ಲಿ ವಿದ್ಯುತ್ ಉಚಿತ v/s ಕರ್ನಾಟಕದಲ್ಲಿ ದರ ಹೆಚ್ಚಳ!: ಆಪ್ ಪ್ರತಿಭಟನೆ

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ವಿವೇಕಾನಂದ ನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ ಪೂರ್ವ, ಕತ್ರಿಗುಪ್ಪೆ ಮುಖ್ಯರಸ್ತೆ, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಐಟಿಐ ಲೇಔಟ್, ವಿದ್ಯಾಪೀಠ ವೃತ್ತ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ಕಡಿತವಾಗಲಿದೆ.

ಶನಿವಾರದಂದು ಹೊಸಕೆರೆಹಳ್ಳಿ, ಮೂಕಾಂಬಿಕ ನಗರ 7 ನೇ ಬ್ಲಾಕ್, ಬನಶಂಕರಿ 3 ನೇ ಹಂತ, ವೆಂಕಟಪ್ಪ ಲೇಔಟ್, ದತ್ತಾತ್ರೇಯ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಬೆಸ್ಕಾಂ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ವಿದ್ಯುತ್ ಖರೀದಿ ಕಸರತ್ತಿನ ಹಿಂದೆ ಭ್ರಷ್ಟಾಚಾರದ ವಾಸನೆ: ಸಿದ್ದರಾಮಯ್ಯ ಆರೋಪ

LEAVE A REPLY

Please enter your comment!
Please enter your name here