Homeಮುಖಪುಟಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ನೋಡಿದರೆ ಗೊತ್ತಾಗುತ್ತದೆ ಈ ಬಲಬಿಡಂಗಿತನ ಇರುವುದೂ ವಾಸ್ತವ ಎಂದು.

- Advertisement -
- Advertisement -

2015ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಿಟ್ಟರೆ ಬಿಹಾರದಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಪಕ್ಷಗಳೆಂದರೆ ಎಡಪಕ್ಷಗಳು. ಸಿಪಿಐ (ಎಂಎಲ್) 12, ಸಿಪಿಐ 02 ಮತ್ತು ಸಿಪಿಐ (ಎಂ) 02. ಮೂರೂ ಪಕ್ಷಗಳೂ ಇತ್ತೀಚಿನ ಚುನಾವಣೆಗಳಲ್ಲೇ ಅತೀ ಹೆಚ್ಚು ಸೀಟುಗಳನ್ನು ಗೆದ್ದಿವೆ. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿತ್ತು. 2015ರಲ್ಲಿ ಸಿಪಿಐ(ಎಂಎಲ್) 3 ಸೀಟುಗಳನ್ನು ಗೆದ್ದಿತ್ತು. ಅದಕ್ಕೂ ಹಿಂದೆ ಯಾವಾಗ ಇಷ್ಟು ಸೀಟುಗಳನ್ನು ಗೆದ್ದಿರಬಹುದೆಂದು ಹುಡುಕಲು ಬಹಳ ಅಧ್ಯಯನ ಮಾಡಬೇಕು. ಹಾಗೆ ನೋಡಿದರೆ ಅಖಿಲ ಭಾರತ ಮಟ್ಟದಲ್ಲೂ 2004ರ ಲೋಕಸಭಾ ಚುನಾವಣೆಯು ಕಳೆದ ಕೆಲವು ದಶಕಗಳಲ್ಲೇ ಎಡಪಕ್ಷಗಳು ಅತೀ ದೊಡ್ಡ ಸಾಧನೆ ಮಾಡಿದ (59 ಲೋಕಸಭಾ ಸ್ಥಾನಗಳು) ಸಂದರ್ಭವಾಗಿತ್ತು. ಬಿಹಾರದಲ್ಲಿ ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬಹುದಾದರೂ ಎಡ ಪಕ್ಷಗಳ ಈ ಸಾಧನೆಗೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು.

ಅಮೆರಿಕದಲ್ಲಾದಂತೆ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಉಂಟಾಗಿ ಸೆಂಟ್ರಿಸ್ಟ್ ಪಕ್ಷಗಳಿಗಿಂತ ಎರಡು ತುದಿಗಳಲ್ಲಿರುವ ಪಕ್ಷಗಳಿಗೆ ಹೆಚ್ಚು ಮತ ಹಾಕುತ್ತಿದ್ದಾರೆಯೇ? ಏಕೆಂದರೆ ಬಿಹಾರದಲ್ಲಿ ಅತೀ ಹಳೆಯ ಸಿಪಿಐ ಅಥವಾ ಸಿಪಿಎಂಗಿಂತ ಹೆಚ್ಚಿನ ಸ್ಥಾನ ಪಡೆಯುತ್ತಿರುವುದು ನಕ್ಸಲೈಟ್ ಧಾರೆಯ ಸಿಪಿಐ(ಎಂಎಲ್). ಈ ರೀತಿಯ ಮಾತುಗಳನ್ನು ಕೇಳಿದರೆ ಎಡಪಕ್ಷಗಳು ಸಿಟ್ಟಿಗೇಳುವುದು ಖಚಿತ. ಏಕೆಂದರೆ ಅಮೆರಿಕಾದಲ್ಲಿ ಧ್ರುವೀಕರಣ ಉಂಟಾಗಿರುವುದು ಅತೀ ಬಲಪಂಥೀಯ ಟ್ರಂಪ್ ಮತ್ತು ಬಲಪಂಥೀಯ ಜೋ ಬೈಡೆನ್ ಮಧ್ಯೆ ಮಾತ್ರ ಎಂಬುದು ಎಲ್ಲಾ ಎಡಪಂಥೀಯರ ವಿಶ್ಲೇಷಣೆ. ಹಾಗಾಗಿಯೇ ಎಡ-ಮಧ್ಯದ ಬರ್ನಿ ಸ್ಯಾಂಡರ್ಸ್ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿಯೇ ಹಿಂದಕ್ಕೆ ಸರಿಯಲು ಸೂಚಿಸಲಾಯಿತು. ಅದು ಬಹುಮಟ್ಟಿಗೆ ನಿಜವಾದರೂ, ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿ, ದುಡಿಯುವ ಜನರ ಚಳವಳಿಯಲ್ಲೂ ಪಾಲ್ಗೊಳ್ಳುವ ಮತ್ತು ಆಕ್ಯುಪೈ ಚಳವಳಿಯ ಘೋಷಣೆಯಾದ 1% ವರ್ಸಸ್ 99% ಮಾತನಾಡುವ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳಲೂ ಕಾರಣವಿತ್ತು. ಅತೀ ಕೆಡುಕನ್ನು ವಿರೋಧಿಸುವ ಸಂದರ್ಭದಲ್ಲಿ ವಿವಿಧ ರಂಗಿನ, ಶ್ರೇಣಿಯ ಜನರು ಒಂದೆಡೆಗೆ ಸರಿಯುತ್ತಾರೆ. ಅಂತಹ ಧ್ರುವೀಕರಣವು ಏರ್ಪಡುತ್ತಿರುವುದು ವಾಸ್ತವ. ದೇಶದ ದೊಡ್ಡ ಬಂಡವಾಳಸ್ಥರ ಬೆಂಬಲವನ್ನು ದೀರ್ಘಾವಧಿಗೆ ಪಡೆದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನೇರವಾಗಿ ಅಂಬಾನಿ-ಅದಾನಿಗಳ ಹೆಸರನ್ನು ಹೇಳಿ ಟೀಕೆ ಮಾಡುವ ಮಟ್ಟಿಗೆ ಎಡ ಪರಿಭಾಷೆ ಬಳಸುತ್ತಿರುವುದಕ್ಕೆ ಕಾರಣವಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ತೀವ್ರ ಬಲಪಂಥೀಯರನ್ನು ಎದುರಿಸುವಾಗ ಸೆಂಟ್ರಿಸ್ಟ್ ಪಕ್ಷಗಳೂ ಎಡ-ಮಧ್ಯದ ಅಥವಾ ಒಮ್ಮೊಮ್ಮೆ ಎಡ ಎಂದು ತೋರಬಹುದಾದ ಭಾಷೆಯನ್ನು ಬಳಸುತ್ತಾರೆ, ರಾಹುಲ್ ಗಾಂಧಿ ಅದಕ್ಕೊಂದು ನಿದರ್ಶನ. ತಾವು ತೀರಾ ಎಡಕ್ಕೆ ವಾಲಿಬಿಟ್ಟೆವೇನೋ ಎನಿಸಿದಾಗ ಬಲದ ಭಾಷೆ, ಆಚಾರಗಳಿಗೂ ವಾಲುತ್ತಾರೆ. ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ಮತ್ತು ಇವೆರಡೂ ಪಕ್ಷಗಳು ಮುಸ್ಲಿಂ ಮತದಾರರು ಇಲ್ಲವೇ ಇಲ್ಲವೇನೋ ಎಂಬಂತೆ ವರ್ತಿಸುವುದನ್ನು ನೋಡಿದರೆ ಅದು ಗೊತ್ತಾಗುತ್ತದೆ. ಈ ಬಲಬಿಡಂಗಿತನ ಇರುವುದೂ ವಾಸ್ತವವೇ.

ಇಂತಹ ವಾಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಎಡ ಪಕ್ಷಗಳಿಗೂ ಬೆಂಬಲ ಹೆಚ್ಚಾಗುತ್ತದೆ. ತೀವ್ರ ಬಲಪಂಥವು ಯಾವಾಗ ಜನರನ್ನು ಯಾಮಾರಿಸಲು ಸಾಧ್ಯವಾಗುವುದಿಲ್ಲವೋ ಅಥವಾ ಜನರಿಗೆ ತಮ್ಮ ನಿತ್ಯದ ಬದುಕಿನ ಸಮಸ್ಯೆಗಳೇ ದೊಡ್ಡ ಐಡೆಂಟಿಟಿಗಿಂತ ಮುಖ್ಯ ಎನಿಸುತ್ತದೋ ಆಗ ಅವರು ನಿತ್ಯದ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವವರ ಕಡೆಗೇ ವಾಲುತ್ತಾರೆ. ದೇಶವು ಸಂಕಷ್ಟದಲ್ಲಿದ್ದಾಗ ವಾಜಪೇಯಿ ನೇತೃತ್ವದ ಬಿಜೆಪಿಯು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಆತ್ಮವಿಶ್ವಾಸದಿಂದ ಚುನಾವಣೆಗೆ ಹೋದಾಗ, ಜನರು ಅಷ್ಟು ಆತ್ಮವಿಶ್ವಾಸ ಹೊಂದಿರದಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟರು. ಆಗಲೇ ಎಡ ಪಕ್ಷಗಳೂ 50ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದು!

ಗಮನಿಸಬೇಕಾದ ಒಂದು ಸಂಗತಿಯೇನೆಂದರೆ, ಜೋ ಬೈಡೆನ್-ಕಮಲಾರು ಒಂದಾಗಿ ನಿಂತಾಗ ಆದಂತೆ, ಎಡಪಕ್ಷಗಳು-ಆರ್‌ಜೆಡಿ-ಕಾಂಗ್ರೆಸ್ ಘಟಬಂಧನದಲ್ಲಿ ಎಡವು ಹೆಚ್ಚಿನ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಅಂದರೆ ಎಡವು ಇಲ್ಲಿ ಸ್ವತಂತ್ರವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಲಪಂಥೀಯ (ಸೆಕ್ಯುಲರ್ ಬಲಪಂಥೀಯ ಎಂದು ಬೇಕಾದರೆ ಸೀಮಿತ ಅರ್ಥದಲ್ಲಿ ಹೇಳಬಹುದು) ಟಿಎಂಸಿಯನ್ನು ಎದುರಿಸಲು ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ಸಿಪಿಎಂ ಪೆಟ್ಟು ತಿಂದಿದ್ದೇನೋ ನಿಜ (ಆಗ ಕಾಂಗ್ರೆಸ್ ಸಿಪಿಎಂಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿತ್ತು); ಆದರೆ ಬಿಹಾರದಲ್ಲಿ ಆರ್‌ಜೆಡಿ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೇ ತನ್ನಂತೆ ತಾನೇ ಎಡಪಕ್ಷಗಳು ಸ್ಪರ್ಧಿಸಿದ್ದರೆ ಈಗ ಗೆದ್ದಿರುವುದರಲ್ಲಿ ಕಾಲು ಭಾಗವನ್ನೂ ಗೆಲ್ಲುತ್ತಿರಲಿಲ್ಲ ಎಂಬುದೂ ನಿಜ. ಎಡಪಕ್ಷಗಳ ಬೆಂಬಲವೂ ಘಟಬಂಧನಕ್ಕೆ ಶಕ್ತಿ ತಂದುಕೊಟ್ಟಿರುತ್ತದೆ ಎಂಬುದರಲ್ಲೂ ಸಂಶಯವಿಲ್ಲ. ಈ ಶಕ್ತಿಯು ಕೇಡರ್, ಜನಸಮೂಹದಲ್ಲಿರುವ ಸಂಘಟನಾ ಬಲವೇ ಆಗಿರಬೇಕಿಲ್ಲ. ಜನಸಾಮಾನ್ಯರಿಗೆ ಅಪ್ಯಾಯವೆನಿಸುವ ಕಥನದ ಬಲವೂ ಆಗಿರಬಹುದು.

ಅಂದರೆ ಬಿಜೆಪಿಗೆದುರಾಗಿ ಇತರ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಕೇವಲ ಚುನಾವಣಾ ರಾಜಕಾರಣದ ಗೆಲುವು-ಸೋಲುಗಳ ಲೆಕ್ಕಾಚಾರದ ಕಾರಣಕ್ಕೆ ಮಾತ್ರವಲ್ಲಾ; ಧ್ರುವೀಕರಣವು ಏರ್ಪಟ್ಟಾಗ ಜನರ ಪರವಾದ ನೆರೇಟಿವ್‌ಅನ್ನು ಸೆಂಟ್ರಿಸ್ಟ್ ಶಕ್ತಿಗಳೇ ಪ್ರಧಾನವಾಗಿ ಮುಂದಕ್ಕೆ ಒಯ್ಯುವ ಸಾಧ್ಯತೆ ಇದ್ದಾಗ, ಎಡಚಳವಳಿಯು ಇನ್ನೂ ಬಲವಾಗಿರದಿದ್ದಾಗ ‘ಘಟಬಂಧನ’ದೊಳಗೆ ಇರುವುದೇ ಎಡಶಕ್ತಿಗಳು ಪ್ರಸ್ತುತವಾಗುಳಿಯುವುದಕ್ಕೆ ಇರುವ ಅವಕಾಶವಾಗಿರುತ್ತದೆ. ಇಲ್ಲದಿದ್ದರೆ ಅದರ ಲಾಭವನ್ನು ಸೆಂಟ್ರಿಸ್ಟ್ ಶಕ್ತಿಗಳು ಪಡೆದುಕೊಳ್ಳಬಹುದು; ಇಲ್ಲವೇ ಅದೂ ದುರ್ಬಲವಾಗಿ ಬಲಪಂಥೀಯ ಶಕ್ತಿಗಳೇ ಗೆಲ್ಲಬಹುದು. ಈ ಸದ್ಯ ಎಡ-ಆರ್‌ಜೆಡಿ ಮೈತ್ರಿಕೂಟದಿಂದ ಪರಸ್ಪರ ಲಾಭವೇ ಆಗಿರುವುದು ಕಾಣುತ್ತದೆ.

  • ನೀಲಗಾರ

ಇದನ್ನೂ ಓದಿ: ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...