Homeಕರ್ನಾಟಕ‘ಅಂಬೇಡ್ಕರ್‌ ಹೇಳಿಕೆ ನಾನು ಓದಿದ್ದಲ್ಲ, ಬೇರೆ ಯಾರೊ ಬರೆದಿದ್ದು ತೆಗೆದುಕೊಂಡಿದ್ದೇನೆ’ - ವಿಜಯ ಕರ್ನಾಟಕ ಅಂಕಣದ...

‘ಅಂಬೇಡ್ಕರ್‌ ಹೇಳಿಕೆ ನಾನು ಓದಿದ್ದಲ್ಲ, ಬೇರೆ ಯಾರೊ ಬರೆದಿದ್ದು ತೆಗೆದುಕೊಂಡಿದ್ದೇನೆ’ – ವಿಜಯ ಕರ್ನಾಟಕ ಅಂಕಣದ ಕುರಿತು ಎನ್‌. ಮಹೇಶ್‌

ಅಂಬೇಡ್ಕರ್‌ ಅವರು ಸಾವರ್ಕರ್ ಅನ್ನು ‘ಸ್ವಾತಂತ್ರ್ಯವೀರ’ ಎಂದು ಕರೆದಿದ್ದಾರೆ ಎಂದು ಅಂಕಣದಲ್ಲಿ ಉಲ್ಲೇಖಿಸಲಾಗಿದೆ

- Advertisement -
- Advertisement -

ಬಿಜೆಪಿ ಶಾಸಕ ಎನ್‌. ಮಹೇಶ್‌ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಅಂಕಣ ಬರಹದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌‌.ಅಂಬೇಡ್ಕರ್‌ ಅವರ ಹೇಳಿಕೆಯನ್ನು ತಿರುಚಿ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಉತ್ತರಿಸಿರುವ ಅವರು, “ಈ ಬಗ್ಗೆ ಬೇರೆ ಯಾರೊ ಬರೆದಿದ್ದನ್ನು ತೆಗೆದುಕೊಂಡಿದ್ದೇನೆ. ಅವರಲ್ಲಿ ಉಲ್ಲೇಖ ಕೇಳುತ್ತಿದ್ದೇನೆ” ಎಂದು ಹೇಳಿದ್ದಾರೆ.

ಮಾಜಿ ಬಿಎಸ್‌ಪಿ ನಾಯಕ, ಪ್ರಸ್ತುತ ಬಿಜೆಪಿ ಪಕ್ಷಕ್ಕೆ ಪಕ್ಷಾಂತರವಾಗಿರುವ ಕೊಳ್ಳೆಗಾಲದ ಶಾಸಕರಾದ ಮಹೇಶ್ ಅವರು ಮಂಗಳವಾರದ ವಿಜಯ ಕರ್ನಾಟಕ ಪತ್ರಿಕೆಗೆ ‘ಸಮಾಜ ಸುಧಾರಣೆಯ ದಿವ್ಯಚೇತನ ಸಾರ್ವರ್ಕರ್‌’ ಎಂಬ ಲೇಖನವನ್ನು ಬರೆದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬರಹದ ಮೊದಲ ಪ್ಯಾರಾದಲ್ಲಿ, “ಸಮಾಜ ಸುಧಾರಣೆಯ ದಿವ್ಯಚೈತನ್ಯದ ಸೊಡರು ಸ್ವಾತಂತ್ಯ್ರವೀರ ಸಾವರ್ಕರ್‌. ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆಯ ಆಚರಣೆಯು ಒಂದು ಕಳಂಕವಾಗಿದ್ದ, ಇಂಥ ಅಮಾನವೀಯ ಆಚರಣೆಯಿಂದ ನನ್ನಂಥವರಿಗೆ ಆಗುವ ಅವಮಾನ ಅಷ್ಟಿಷ್ಟಲ್ಲ. ಆದರೆ, ಸಾವರ್ಕರ್‌ ಅವರು ಇದರ ನಿವಾರಣೆಗೆ ಕೈಗೊಂಡಿರುವ ಕ್ರಮಗಳು ಕ್ರಾಂತಿಕಾರಿಯಾಗಿವೆ. ಇಂಥ ಐದೋ ಹತ್ತೋ ಮಂದಿ ಇದ್ದರೆ ಅಸ್ಪೃಶ್ಯತೆಯು ಮುಂದಿನ ಕೆಲವೇ ವರ್ಷಗಳಲ್ಲಿ ಇತಿಹಾಸದ ಸಂಗತಿಯಾಗುತ್ತದೆ ಎನ್ನುವ ವಿಶ್ವಾಸ ನನಗಿದೆ” ಎಂದು ಅಂಬೇಡ್ಕರ್‌ ಅವರ ಹೇಳಿದ್ದಾರೆ ಎಂದು ಎನ್. ಮಹೇಶ್ ಅವರು ಬರೆದಿದ್ದಾರೆ.

ಆದರೆ ಈ ಬಗ್ಗೆ ಅನೇಕ ಅಂಬೇಡ್ಕರ್‌‌ವಾದಿಗಳು ಆಕ್ಷೇಪವೆತ್ತಿದ್ದು, ಅಂಬೇಡ್ಕರ್‌ ಅವರು ಈ ರೀತಿ ಅಥವಾ ಇದೇ ರೀತಿ ಅರ್ಥ ಬರುವ ಮಾತು ಹಾಗೂ ಬರಹವನ್ನಾಗಲಿ ಹೇಳಿಯೆ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಂತಕ ಹ.ರಾ. ಮಹೇಶ್ ಅವರು, “ಈ ಮಾತು ಅಥವಾ ಬರಹ ಬಾಬಾಸಾಹೇಬರ ಯಾವ ಸಂಪುಟದಲ್ಲಿದೆ…!? ಬಾಬಾಸಾಹೇಬರು ಬರೆದಿರುವ ಯಾವ ಪುಸ್ತಕದಲ್ಲಿ ಅಥವಾ ಅವರ ಬರಹ ಭಾಷಣಗಳ‌ ಯಾವ ಸಂಪುಟದ ಯಾವ ಅಧ್ಯಾಯದ ಎಷ್ಟನೇ ಪುಟದಲ್ಲಿ ಬಾಬಾಸಾಹೇಬರು ಸಾವರ್ಕರ್ ಅನ್ನು ‘ಸ್ವಾತಂತ್ರ್ಯವೀರ’ ಎಂದು ಕರೆದಿದ್ದಾರೆ ಅಥವಾ ಆ ಅರ್ಥ ಬರುವಂತೆ ಬರೆದಿದ್ದಾರೆ..?” ಎಂದು ಪ್ರಶ್ನಿಸಿದ್ದಾರೆ.

“ಈ ಲೇಖನ ಬರೆದವರು ಅಥವಾ ಬರೆದುಕೊಟ್ಟವರು ಸಾರ್ವಜನಿಕರಿಗೆ ಆಧಾರ ಸಮೇತ ಸಾಕ್ಷೀಕರಿಸಬೇಕು. ಇಲ್ಲದಿದ್ದರೆ ಈ ಲೇಖನದ ವಿಷಯ ಮತ್ತು ಬರೆದವರ ವ್ಯಕ್ತಿತ್ವ ಎರಡೂ ಫೇಕ್ ಎಂದು ಮತ್ತೆ ಸಾಬೀತಾಗುತ್ತದೆ. ಮತ್ತು ಇದು ಬಾಬಾಸಾಹೇಬರಿಗೆ ಮಾಡಿದ ಅವಮಾನ ಮತ್ತು ಅಂಬೇಡ್ಕರ್ ವಾದಿಗಳಿಗೆ ಮಾಡಿದ ದ್ರೋಹವಾಗುತ್ತದೆ. ಈ ನಡೆಯನ್ನು ಜನ ಎಂದೆಂದಿಗೂ ಕ್ಷಮಿಸುವುದಿಲ್ಲ” ಎಂದು ಹ.ರಾ.ಹೇಶ್‌ ಅವರು ಹೇಳಿದ್ದಾರೆ.

 

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶಾಸಕ ಎನ್‌. ಮಹೇಶ್‌, “ಈ ಬಗ್ಗೆ ಬೇರೆ ಯಾರೊ ಬರೆದಿದ್ದನ್ನು ತೆಗೆದುಕೊಂಡಿದ್ದೇನೆ. ಅವರಲ್ಲಿ ಉಲ್ಲೇಖ ಕೇಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ವಿಜಯ ಕರ್ನಾಟಕದ ಲೇಖನವನ್ನು ಶಾಸಕ ಎನ್‌. ಮಹೇಶ್ ಅವರು ಬರೆದಿಲ್ಲ, ಬೇರೆ ಯಾರೋ ಬರೆದು ಅವರ ಹೆಸರು ಹಾಕಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು,“ಆ ಬರಹ ನಾನೆ ಬರೆದಿರುವುದು, ಈ ಬಗ್ಗೆ ಸಂಶಯ ಯಾಕೆ? ಮನುಷ್ಯ ಬದಲಾಗಬಾರದೆ, ನಾನು ನನ್ನ ಗ್ರಹಿಕೆಯಿಂದ ಬರೆದಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಸಕ ಎನ್‌.ಮಹೇಶ್‌ ಸೂಚನೆ ಮೇರೆಗೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ; ಆರೋಪ

“ಲೇಖನದ ಉಲ್ಲೇಖವನ್ನು ನಾನು ಕೊಡುತ್ತೇನೆ. ಅದನ್ನು ಅವರು ಎಲ್ಲಿಂದ ತೆಗೆದುಕೊಂಡಿದ್ದಾರೆ ಎಂದು ನಾನು ಅವರೊಂದಿಗೆ ಕೇಳುತ್ತಿದ್ದೇನೆ. ಅದನ್ನು ಪಡೆದುಕೊಂಡು ಕೊಡುತ್ತೇನೆ. ಈಗ ನಾನು ಹೊರಗಡೆ ಇದ್ದು, ನಂತರ ನಾನೇ ಮಾಹಿತಿ ನೀಡುತ್ತೇನೆ” ಎಂದು ನಾನುಗೌರಿ.ಕಾಂ ಜೊತೆಗೆ ಶಾಸಕ ಮಹೇಶ್ ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಈ ಅಯ್ಯೋಗ್ಯ ಯಾರಿಗೆ ಬೇಕಾದರೂ ಚಮಚಾಗಿರಿ ಮಾಡಿಕೊಂಡು ಗುಲಾಮಗಿರಿ ಮಾಡಿಕೊಳ್ಳಲಿ,ಅದರೆ ಇಲ್ಲಿ ಭಾಬಾಸಾಹೇಬರ ಹೆಸರನ್ನ ಯಾಕೆ ತೆಗೆದುಕೊಂಡು ಬಂದ? ಇವನ ಸ್ವಾರ್ಥ ತೆವಲಿಗೆ ಇವನ ಕ್ಷೇತ್ರದ ಜನತೆ ಸರಿಯಾಗಿ ವಿಚಾರಿಸಿಕೊಳ್ಳಲಿ.

  2. ಬರಹ ಬೇರೆಯವರದು, ಹೆಸರು ಇವರದು, ದಲಿತರನ್ನು ದಿಕ್ಕು ತಪ್ಪಿಸುವ ಪ್ರಯತ್ನ, ಮುಂದೆ ಒಂದು ದಿನ ದಲಿತ ನಾಯಕರೇ ದಲಿತರಿಗೆ ಮೀಸಲಾತಿಯ ಅಗತ್ಯವಿಲ್ಲ ಎಂದು ಹೇಳುವಂತಹ ಪರಿಸ್ಥಿತಿಗೆ ತರುತ್ತಾರೆ, ಇದು ಶತ ಸಿದ್ಧ, ದಲಿತರು ಹುಷಾರಾಗಿರಿ.

  3. ನಂಗೂ ಮಿಸಲಾತಿ ಬೇಡ … ಆದ್ರೆ ಬಾಬಾ ಸಾಹೇಬರು ಹೇಳಿದ ಸಮ ಪಾಲು ಸಮ ಬಾಳು ಬೇಕು…..

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...