Homeಅಂಕಣಗಳುಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

- Advertisement -
- Advertisement -

ಅಮೃತ ಮಹೋತ್ಸವದ ಪ್ರಚಾರಕ್ಕಾಗಿ ಸರಕಾರ ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೋನೇ ಇಲ್ಲದಂತೆ ಮಾಡಿ ಆ ಜಾಗಕ್ಕೆ ವೀರ ಸಾವರ್ಕರನ ಫೋಟೋವನ್ನ ಬೊಮ್ಮಾಯಿ ಹಾಕಿಸಿದ್ದಾರಂತಲ್ಲಾ. ಇದರಿಂದ ಕುಪಿತಗೊಂಡಿರುವ ಸ್ವಾತಂತ್ರ್ಯವೀರ ಲಿಂಗಾಯಿತರು, ಸಕಲರಿಗೂ ಲೇಸನ್ನ ಬಯಸುವ ದಯವೇ ಧರ್ಮದ ಮೂಲವೆಂದು, ಜಗತ್ತಿಗೆ ಸಾರಿದ ಬಸವಧರ್ಮದಲ್ಲಿ ಹುಟ್ಟಿದ ಈ ಬೊಮ್ಮಾಯಿ ಇತಿಹಾಸವನ್ನು ತಿರುಚಿ ಬಸವಕುಲಕೆ ಅವಮಾನ ಮಾಡಿಬಿಟ್ಟಿದ್ದಾರೆ. ನೆಹರು ಜೈಲಲ್ಲಿ ಇದ್ದಷ್ಟೇ ವರ್ಷ ಪ್ರಧಾನಿಯಾಗಿದ್ದರು. ಯೋಜನೆಗಳ ಮುಖಾಂತರ ಬಡ ಭಾರತವನ್ನ ಅಭಿವೃದ್ಧಿಪಥಕ್ಕೆ ತಂದು ನಿಲ್ಲಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವ ದೇಶದಲ್ಲಿ ಕಾಲೂರುವಂತೆ ಮಾಡಿದರು. ಲೋಕಸಭೆಯಲ್ಲಿ ಅವರನ್ನು ಟೀಕಿಸಿ ಮಾತನಾಡುವುದನ್ನ ಸಹಿಸಿಕೊಂಡರು; ತನ್ನ ಜನ್ಮದಿನವನ್ನ ಮಕ್ಕಳ ದಿನಾಚರಣೆಯನ್ನಾಗಿಸಿದರು; ಅವರು ಬದುಕಿದಷ್ಟೂ ದಿನ ಈ ದೇಶದ ಸರ್ವ ಜನಾಂಗಕ್ಕೂ ಪ್ರಧಾನಿಯಾಗಿದ್ದರೂ. ದಯಾಪರನಾದ ನೆಹರು ವ್ಯಕ್ತಿತ್ವವನ್ನ ದ್ವೇಷಿಸುವ ಬಿಜೆಪಿಗಳು ಎಂದಿನಂತೆ ತಮ್ಮ ಸಂಚಿನಿಂದ ಲಿಂಗಾಯಿತರ ಬೊಮ್ಮಾಯಿಯಿಂದ ನೆಹರುಗೆ ಅವಮಾನ ಮಾಡಿಸಿ ಆ ಮುಖಾಂತರ ಲಿಂಗಾಯಿತರಿಗೇ ಈ ಆರೆಸೆಸ್ಸಿಗರು ಅವಮಾನ ಮಾಡಿಸಿದ್ದಾರೆಂದು ಶರಣ ಸಮೂಹ ಸಿಟ್ಟಾಗಿದೆಯಂತಲ್ಲಾ, ಥೂತ್ತೇರಿ.

****

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರವನ್ನು ಮಾಧುಸ್ವಾಮಿ ಎಂಬ ಮಂತ್ರಿ ’ಇದು ತೆವಳಿಕೊಂಡು ನಡೆಯುತ್ತಿರುವ ಸರಕಾರ; ಅಂತೂ ಹೇಗೋ ದಡಮುಟ್ಟಿ ಮನೆಗೆ ಹೋಗುತ್ತೇವೆ’ ಎಂದು ಬಣ್ಣಿಸಿರುವ ಮಾತನ್ನು ಕರ್ನಾಟಕದ ಜನಸ್ತೋಮ ಇಡಿಯಾಗಿ ಸ್ವೀಕರಿಸಿ ಒಂದು ತಿದ್ದುಪಡಿ ಮಾಡಿಕೊಂಡಿದೆಯಂತಲ್ಲಾ. ಆ ತಿದ್ದುಪಡಿ ಯಾವುದೆಂದರೆ ಇದು ತೆವಳುತ್ತಿರುವ ಸರಕಾರವಲ್ಲಾ, ಕುಂಟುತ್ತಿರುವ ಸರಕಾರ ಎಂದರೆ ಸರಿಯಾಗುತ್ತಿತ್ತು ಎಂದು. ಸದರಿ ಮಾಧುಸ್ವಾಮಿ ಮಾತು ಈವರೆಗೂ ವಿರೋಧಪಕ್ಷಗಳಿಗೇ ಹೊಳೆದಿರಲಿಲ್ಲವಂತಲ್ಲಾ. ಅದಕ್ಕೆ ಕಾರಣ ಸರಕಾರ ತೆವಳುತ್ತಿದೆಯೋ ಕುಂಟುತ್ತಿದೆಯೋ ಎಂಬುದು ಆಡಳಿತದ ಭಾಗವಾಗಿದ್ದವರಿಗೆ ಹೊಳೆಯುತ್ತದೆಯೇ ಹೊರತು, ಹೊರಗಿನವರಿಗೆ ತಿಳಿಯಲಾರದು. ಇಂತಹ ಸರಕಾರ ಜತೆಗಿಟ್ಟುಕೊಂಡು ಸ್ವಾತಂತ್ರ್ಯದ ಅಮೃತೋತ್ಸವಕ್ಕಾಗಿ ಪಾರ್ಟಿಯ ನಿಷ್ಟಾವಂತ ಕಾರ್ಯಕರ್ತರು ಕೈತುಂಬಾ ಬಾವುಟ ಹಿಡಿದು ಮನೆಮನೆಗೆ ಹಂಚುತ್ತಾ ಹೋಗುತ್ತಿರುವಾಗ ಮಳೆಗೆ ಮನೆಬಿದ್ದ ಜಾಗಕ್ಕೆ ಹೋಗಿ, ಮನೆ ಕಳೆದುಕೊಂಡು ಅಳುತ್ತಿದ್ದ ಮಹಿಳೆಗೆ ಬಾವುಟಕೊಟ್ಟು “ಇದನ್ನ ನಿನ್ನ ಮನೆ ಮೇಲಕ್ಕೆ ಕಟ್ಟಕ್ಕ” ಎನ್ನಲಾಗಿ ಆ ಮಹಿಳೆ ಸಿಟ್ಟುಗೊಂಡು “ಅಯ್ಯಾ ನಿನ್ನ ಮನೆಹಾಳಾಗ ನಿನಿಗೇನು ಕಣ್ಣು ಇಂಗಿಹೋಗವಾ? ಮನೆ ಕಳಕಂಡು ಅಳುತಾಯಿದ್ರೆ ಬಾವುಟ ಹಾರಿಸು ಅಂತ ಬಂದಿದ್ದಯಲ್ಲಾ ಥೂ ನಿನ್ನ ಜನ್ಮಕ್ಕೆ” ಅಂದಾಗ ಸಾರಿ ಕಣಕ್ಕ ಎಂದು ಜಾಗ ಖಾಲಿಮಾಡಿದನಂರಲ್ಲಾ, ಥೂತ್ತೇರಿ.

****

ಸಂಘಿಗಳು ನಿಜ ಶ್ರದ್ಧೆಯನ್ನು ತೊರೆದು ಸಂಭ್ರಮವನ್ನ ಸೃಷ್ಟಿಮಾಡಿಕೊಂಡು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಹಿಂದೆಂದೂ ಕಂಡು ಕೇಳರಿಯದಿದ್ದ ಜಲ ಪ್ರಳಯಕ್ಕೆ ದೇಶ ತುತ್ತಾಗಿ ಹೋಗಿದೆ. ಮನೆಯ ಗೋಡೆಗಳು ಕುಸಿದಿವೆ; ಹಸುಗೂಸುಗಳೂ ಅಸುನೀಗಿವೆ; ಸೇತುವೆಗಳು ಕೊಚ್ಚಿಹೋಗಿವೆ; ಗುಡ್ಡಗಳು ಕುಸಿದು ಹೋಗಿವೆ; ಸಂತ್ರಸ್ತ ಜನರ ಕಣ್ಣೀರು ಮಳೆ ಹನಿಗಳೊಂದಿಗೆ ಸೇರಿಹೋಗಿವೆ. ಇಂತಹ ಮಳೆಯ ನಡುವೆ ಶಾಲೆಗೆ ಹೋದ ಹೆಣ್ಣು ಮಗುವೊಂದು ದಬ್ಬೆಯಿಂದ ಕಟ್ಟಿದ ಸೇತುವೆ ಮೇಲೆ ನಡೆದು ಬರುವಾಗ ಆಯತಪ್ಪಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಆ ಮನೆಯಲ್ಲಿ ದುಃಖ ಶಾಶ್ವತವಾಗಿಹೋಯ್ತು. ಈ ಸಂಬಂಧದಾಗಿ ಆ ಪ್ರದೇಶದ ಜನ ನಾಯಕನನ್ನ ಮಾತನಾಡಿಸಿದರೆ ನನ್ನ ಅವಧಿಯಲ್ಲಿ ಸೇತುವೆ ಆಗಿಲ್ಲ ನಿಜ ಆದರೆ ಎಪ್ಪತ್ತು ವರ್ಷ ದೇಶ ಆಳಿದವರು ಏನು ಮಾಡಿದ್ದಾರೆ. ಹೋಗಲಿ ಅವರ ಅವಧಿಯಲ್ಲಿ ಇಂತಹ ಮಳೆ ಬಂದಿತ್ತೆ ಎಂದು ಮಾತನಾಡಿದಾನಲ್ಲಾ. ಈ ಮೂರ್ಖ ಬಿಜೆಪಿ ಎಮ್ಮೆಲ್ಲೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ದೇಶದ ಯಾವುದೇ ಸಮಸ್ಯೆಯನ್ನು ಮುಸುಡಿಗೆ ಹಿಡಿದರೂ ಕೂಡ ಎಪ್ಪತ್ತು ವರ್ಷ ಆಳಿದವರು ಏನು ಮಾಡುತ್ತಿದ್ದರು ಎನ್ನುತ್ತವೆ. ಇದೇ ಮೋದಿ ಕಾಂಗ್ರೆಸ್ಸಿಗೆ ಅರವತ್ತು ವರ್ಷ ಅಧಿಕಾರ ಕೊಟ್ಟಿರಿ, ನೀವು ನನಗೆ ಕೇವಲ ಅರವತ್ತು ದಿವಸ ಕೊಡಿ ಎಂದಿದ್ದರು. ಇಲ್ಲಿ ಕಾಂಗ್ರೆಸ್ಸೇತರ ಮೊರಾರ್ಜಿ, ವಾಜಪೇಯಿ, ದೇವೇಗೌಡರು, ಗುಜ್ರಾಲ್ ಆಡಳಿತವಿದ್ದ ಲೆಕ್ಕ ಈ ಬಿಜೆಪಿಗಳಿಗೇ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.

****

ಈ ಬಿಜೆಪಿಗಳು ಸಾವರ್ಕರ್ ಚಿತ್ರವನ್ನು ಸ್ವತಂತ್ರ ಹೋರಾಟಗಾರರ ಸಾಲಿಗೆ ತಂದು ಅಂಟಿಸತೊಡಗಿವೆ. ಅಂಡಮಾನ್ ದ್ವೀಪದ ಕೊಠಡಿಯಲ್ಲಿರಲಾಗದೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಕೊಟ್ಟು ಭಾರತಕ್ಕೆ ಬಂದು ಪುರೋಹಿತಶಾಹಿ ಧರ್ಮದ ಪುನರುತ್ಥಾನ ಕೈಂಕರ್ಯದಲ್ಲಿ ನಿರತರಾದ ಸಾವರ್ಕರ್ ಮಾನ ಉಳಿಸಲು ಆರೆಸೆಸ್ಸಿಗರು ವೀರ ಪದವನ್ನ ಸೇರಿಸಿದರು. ಅಂಡಮಾನ್ ಜೈಲಿನ ಕೊಠಡಿಯಲ್ಲೇ ಆಯಸ್ಸು ಮುಗಿಸಿ ನೀರು ಪಾಲಾದ ಅಸಂಖ್ಯಾತ ಜನರ್‍ಯಾರು ವೀರರಲ್ಲ. ಸೋತು ಶರಣಾದ ಸಾವರ್ಕರ್ ವೀರ! ಇಂತಹ ವೀರನ ಚಿತ್ರ ತಂದು ಹದಿನೇಳು ವರ್ಷ ಪ್ರಧಾನಿಯಾಗಿದ್ದ ನೆಹರು ಚಿತ್ರದ ಜಾಗದಲ್ಲಿ ಅಂಟಿಸಿವೆ ಮತ್ತು ತಮ್ಮ ಕೃತ್ಯವನ್ನ ಸಮರ್ಥಿಸಿವೆ. ಇತಿಹಾಸವನ್ನೇ ಅಳಿಸಿಹಾಕುವ ಈ ಕಾರ್ಯದ ವಿರುದ್ಧ ಕನ್ನಡದ ಯಾವ ಸಾಹಿತಿಯೂ ತುಟಿಬಿಚ್ಚಿಲ್ಲ. ಬಹುಶಃ ಈ ರಣಮಳೆಯಲ್ಲಿ ಒಳಸೇರಿಕೊಂಡು ಕೃತಿ ರಚನೆಯಲ್ಲಿ ತೊಡಗಿರಬಹುದು. ಇನ್ನ ಪಠ್ಯಪುಸ್ತಕ ತಿದ್ದಿ ದಕ್ಕಿಸಿಕೊಂಡ ತಿಪಟೂರಿನ ನಾಗೇಶ್ ಎಂಬ ಸಚಿವನ ಹಿಂಬಾಲಕರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜಾಥಾದಲ್ಲಿ ರಾಷ್ಟ್ರಧ್ವಜಕ್ಕಿಂತ ತಮ್ಮ ಸಂಘದ ಧ್ವಜವನ್ನೇ ಎತ್ತರದಲ್ಲಿ ಹಾರಿಸುತ್ತ ಹೋಗಿದ್ದು ನೋಡಿದ ತಿಪಟೂರಿನ ಜನ ಮನುಷ್ಯನಿಗೆ ಹುಚ್ಚು ಕೆರಳಿದರೆ ಏನಾಗುತ್ತವೆ ಎಂಬುದಕ್ಕೆ ಈ ಜನಗಳೇ ಉದಾಹರಣೆಯೆಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...