Homeದಿಟನಾಗರಫ್ಯಾಕ್ಟ್‌ಚೆಕ್‌: 1948ರ ಒಲಂಪಿಕ್ಸ್‌ನಲ್ಲಿ ಭಾರತ ತಂಡ ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದು ಏತಕ್ಕೆ ಗೊತ್ತೆ?

ಫ್ಯಾಕ್ಟ್‌ಚೆಕ್‌: 1948ರ ಒಲಂಪಿಕ್ಸ್‌ನಲ್ಲಿ ಭಾರತ ತಂಡ ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದು ಏತಕ್ಕೆ ಗೊತ್ತೆ?

‘ಈ ಚಿತ್ರವನ್ನು ನೋಡಿ ಆಲೋಚಿಸಿದ ನಂತರ ನೀವು ಗಾಂಧಿ ಮತ್ತು ನೆಹರೂ ಅವರನ್ನು ದ್ವೇಷಿಸುತ್ತೀರಿ’ ಎಂಬ ಸಂದೇಶವನ್ನು ಬಿಜೆಪಿ ಬೆಂಬಲಿತ ಬಲಪಂಥೀಯರು ಹರಡುತ್ತಿದ್ದಾರೆ

- Advertisement -
- Advertisement -

‘1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡವು ಶೂಗಳನ್ನು ಖರೀದಿಸಲು ಸಾಧ್ಯವಾಗದೆ ಬರಿಗಾಲಿನಲ್ಲಿ ಪಂದ್ಯಗಳನ್ನು ಆಡಿದ್ದಾರೆ’ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರಹವೊಂದು ವೈರಲ್ ಮಾಡಲಾಗಿದೆ. ಮುಖ್ಯವಾಗಿ ಈ ಬರಹವನ್ನು ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿದ್ದು, ಫುಟ್‌ಬಾಲ್ ಆಟಗಾರರ ಅಂದಿನ ಪರಿಸ್ಥಿತಿಗೆ ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್ ನೆಹರೂ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರೆ ಕಾರಣ ಎಂಬಂತೆ ಪ್ರತಿಪಾದಿಸಲಾಗಿದೆ.

ವೈರಲ್ ಪೋಸ್ಟ್‌ ಈ ಕೆಳಗಿನಂತಿದೆ.

“ಈ ಚಿತ್ರವನ್ನು ನೋಡಿದ ನಂತರ ಮತ್ತು ಆಲೋಚಿಸಿದ ನಂತರ ನೀವು ಗಾಂಧಿಯನ್ನು ದ್ವೇಷಿಸುತ್ತೀರಿ… ಮತ್ತು ಹೌದು ಈ ಚಿತ್ರವು ನೆಹರೂ ಅವರ ಬಟ್ಟೆ ಮತ್ತು ಬೂಟುಗಳು ವಿಶೇಷ ವಿಮಾನದಲ್ಲಿ ಬರುತ್ತಿದ್ದಾಗ… ಇದು ಲಂಡನ್‌ನಲ್ಲಿ ನಡೆದ 1948ರ ಒಲಿಂಪಿಕ್ಸ್‌ನ ಚಿತ್ರ”

“ನಮ್ಮ ಫುಟ್ಬಾಲ್ ತಂಡ ಫ್ರಾನ್ಸ್ ಜೊತೆಗಿನ ಪಂದ್ಯವನ್ನು 1-1 ಗೋಲುಗಳಿಂದ ಟೈ ಮಾಡಿಕೊಂಡಿತು. ನಮ್ಮ ಆಟಗಾರರಿಗೆ ಶೂ ಇಲ್ಲದ ಕಾರಣ ಗೆಲ್ಲಲು ಸಾಧ್ಯವಾಗಲಿಲ್ಲ. ಮತ್ತು ಅವರು ಇಡೀ ಪಂದ್ಯವನ್ನು ಬರಿಗಾಲಿನಲ್ಲಿ ಆಡಿದರು. ಇದರಿಂದಾಗಿ ಇತರ ತಂಡದ ಆಟಗಾರರ ಶೂಗಳು ಇಲ್ಲದೆ ಹಲವು ಆಟಗಾರರು ಗಾಯಗೊಂಡಿದ್ದಾರೆ. ಆದರೂ ಪಂದ್ಯ ಸಮಬಲವಾಗಿತ್ತು. ಶೈಲೇಂದ್ರ ನಾಥ್ ಮನ್ನಾ ಈ ತಂಡದ ನಾಯಕರಾಗಿದ್ದರು. ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದರು”

“ಸರ್ಕಾರದ ಬಳಿ ಅಷ್ಟು ಹಣವೂ ಇದ್ದರು ಸರ್ಕಾರ ಏಕೆ ಶೂ ನೀಡಲಿಲ್ಲ. ಪ್ಯಾರಿಸ್‌ನಿಂದ ನೆಹರೂ ಅವರ ಬಟ್ಟೆಗಳು ಡ್ರೈ-ಕ್ಲೀನ್ ಆಗುತ್ತಿದ್ದ ಸಮಯ ಮತ್ತು ನೆಹರು ಅವರು ತಮ್ಮ ನಾಯಿಯೊಂದಿಗೆ ಖಾಸಗಿ ಜೆಟ್‌ನಲ್ಲಿ ತಿರುಗಾಡುತ್ತಿದ್ದರು. ಇದರ ಪರಿಣಾಮವೆಂದರೆ 1950 ರ ವಿಶ್ವಕಪ್‌ನಲ್ಲಿ ಭಾರತವನ್ನು ಫಿಫಾ ನಿಷೇಧಿಸಿತು. ಏಕೆಂದರೆ ಯಾವುದೇ ತಂಡವು ಶೂಗಳಿಲ್ಲದೆ ಪಂದ್ಯವನ್ನು ಆಡುವುದಿಲ್ಲ. ಮತ್ತೆಂದೂ ಭಾರತ ತಂಡ ಫಿಫಾ ವಿಶ್ವಕಪ್‌ಗೆ ಹೋಗಲಿಲ್ಲ. ಆದರೆ ಇಂದು ದೇಶದ ಹಲವು ಕ್ರೀಡಾಂಗಣಗಳಿಗೆ ನೆಹರೂ ಗಾಂಧಿ ಕುಟುಂಬದ ಹೆಸರಿಡಲಾಗಿದೆ” 

ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕಟ್ಟುಕತೆಯನ್ನು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಚಿತ್ರದೊಂದಿಗೆ ಕೂಡಾ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಇಲ್ಲಿ ನೋಡಬಹುದಾಗಿದೆ. ಇದೇ ಸಂದೇಶವನ್ನು ಸಾವಿರಾರು ಜನರು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಬರಹವನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕೂಡ ಹರಿದಾಡುತ್ತಿದೆ. ಮಾಜಿ ಪ್ರಧಾನಿ ನೆಹರೂ ಅವರನ್ನು ನಿಂದಿಸಿ ಒಂದೇ ರೀತಿಯ ಚಿತ್ರಗಳನ್ನು ಹೊಂದಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಆರ್ಕೈವ್‌‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾಮಾಜಿಕ ಮಾಧ್ಯಮದಾದ್ಯಂತ ಇದೇ ರೀತಿಯ ಪ್ರತಿಪಾದನೆಯನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.

ಆದರೆ, 1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡಿದ ಭಾರತೀಯ ರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ಶೂಗಳನ್ನು ಖರೀದಿಸಲು ಯಾವುದೇ ಸಮಸ್ಯೆ ಇರಲಿಲ್ಲ. ಲಂಡನ್‌ನಲ್ಲಿ ಆಡಿದ ತಂಡದ ಸಮಸ್ಯರಿಗೆ ಶೂ ಇತ್ತಾದರೂ, ಆಟಗಾರರು ಶೂ ಇಲ್ಲದೆ ಆಡಲು ಆದ್ಯತೆ ನೀಡಿದ್ದರು. ಆಡುವ ಮೈದಾನದಲ್ಲಿ ತೇವ ಅಥವಾ ಕೆಸರು ಇದ್ದಾಗ ಮಾತ್ರ ಆಟಗಾರರು ಅಂದು ಶೂಗಳನ್ನು ಧರಿಸುತ್ತಿದ್ದರು.

ಫ್ಯಾಕ್ಟ್‌ಚೆಕ್‌

ವೈರಲ್ ಸಂದೇಶವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, “ದಿ ಕ್ವಿಂಟ್” ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡಿದೆ. ಗೂಗಲ್‌ನಲ್ಲಿ ‘1948 ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡ’ವನ್ನು ಹುಡುಕಿ, ಪಂದ್ಯಕ್ಕೆ ಸಂಬಂಧಿಸಿದ ಸುದ್ದಿ ವರದಿಗಳನ್ನು ಕಂಡು ಹಿಡಿಯಲಾಗಿದೆ.

2014 ರಲ್ಲಿ ಪ್ರಕಟವಾದ ದಿ ಹಿಂದೂ ಪತ್ರಿಕೆಯ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಅಂದು ಭಾರತೀಯ ಫುಟ್‌ಬಾಲ್ ಆಟಗಾರರು ಬೂಟುಗಳಿಲ್ಲದೆ ಆಡುವುದನ್ನು “ಇಷ್ಟಪಟ್ಟಿದ್ದರು” ಎಂದು ತಂಡದ ತರಬೇತುದಾರ ಬಿಡಿ ಚಟರ್ಜಿ ಹೇಳಿದ್ದಾಗಿ ಅದು ಹೇಳಿದೆ. ಲಂಡನ್‌ನಲ್ಲಿ ಇದ್ದ ತಂಡದ ಸದಸ್ಯರ ಬಳಿ ಶೂಗಳು ಇತ್ತು ಲೇಖನವು ಹೇಳುತ್ತದೆ.

1 ಆಗಸ್ಟ್ 1948 ರ ದಿನಾಂಕದ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕೂಡಾ ಈ ಬಗ್ಗೆ ಬರೆಯಲಾಗಿದೆ. ಈ ಲೇಖನವು ಭಾರತೀಯ ತಂಡ ಫ್ರೆಂಚ್ ಪ್ರತಿಸ್ಪರ್ಧಿಗಳ ವಿರುದ್ಧ ಸೋತಿರುವುದರ ಹೇಳಿದೆ. ಭಾರತದ ಹನ್ನೊಂದು ಆಟಗಾರರಲ್ಲಿ ಎಂಟು ಮಂದಿ ಬರಿಗಾಲಿನಲ್ಲೇ ಆಡಿದ್ದಾರೆ ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಫೀಫಾದ ಅಧಿಕೃತ ಖಾತೆ 2018 ರಲ್ಲಿ ಮಾಡಿರುವ ಟ್ವೀಟ್‌ ಕೂಡ ಇದನ್ನೇ ಉಲ್ಲೇಖಿಸಿದೆ. ಅದು ತನ್ನ ಟ್ವೀಟ್‌ನಲ್ಲಿ, “ಹೆಚ್ಚಿನ ಭಾರತೀಯ ಆಟಗಾರರು ಬರಿಗಾಲಿನಲ್ಲಿದ್ದಾರೆ’’ ಎಂದು ಹೇಳಿದೆ. ಟ್ವೀಟ್ ಜೊತೆಗೆ ಫೋಟೋವನ್ನು ಕೂಡಾ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಒಬ್ಬ ಭಾರತೀಯ ಫುಟ್ಬಾಲ್ ಆಟಗಾರ ಶೂಗಳೊಂದಿಗೆ ಇದ್ದು, ಮೂವರು ಶೂ ಇಲ್ಲದೆ ಇರುವುದು ಕಾಣುತ್ತದೆ.

ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಮೊದಲ ಫುಟ್‌ಬಾಲ್ ಪಂದ್ಯದ 73 ವರ್ಷಗಳ ನೆನಪಿಗಾಗಿ ಇದೇ ಚಿತ್ರವನ್ನು ಭಾರತೀಯ ಫುಟ್‌ಬಾಲ್ ತಂಡದ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪಂದ್ಯದ ಬಗ್ಗೆ ಪತ್ರಕರ್ತ ಮತ್ತು ‘ಬೇರ್‌ಫೂಟ್ ಟು ಬೂಟ್ಸ್: ದಿ ಮೆನಿ ಲೈವ್ಸ್ ಆಫ್ ಇಂಡಿಯನ್ ಫುಟ್‌ಬಾಲ್’ ಪುಸ್ತಕದ ಲೇಖಕ ನೋವಿ ಕಪಾಡಿಯಾ ಅವರನ್ನು ದಿ ಕ್ವಿಂಟ್ ಮಾತನಾಡಿಸಿದೆ.

“ವಿಶೇಷವಾಗಿ ಬೆಂಗಳೂರು ಮತ್ತು ಕಲ್ಕತ್ತಾದ ಆಟಗಾರಿಗೆ ಬರಿಗಾಲಿನಲ್ಲಿ ಆಟವಾಡಿ ಅಭ್ಯಾಸವಾಗಿತ್ತು. ಆದ್ದರಿಂದ ಅವರಿಗೆ ಶೂ ಜೊತೆಗೆ ಆಟವಾಡುವುದು ಆರಾಮದಾಯಕವಾಗಿರಲಿಲ್ಲ. ಪಂದ್ಯಾಟದಲ್ಲಿ ಶೂಗಳನ್ನು ಕಡ್ಡಾಯ ಮಾಡಿದಾಗ, ಅಹ್ಮದ್ ಖಾನ್ ಅವರಂತಹ ಅಗ್ರ ಆಟಗಾರರನ್ನು ಭಾರತ ತಂಡದಿಂದ ಕೈಬಿಡಬೇಕಾಯಿತು. ಯಾಕೆಂದರೆ ಅವರಿಗೆ ಶೂ ಧರಿಸಿ ಆಡಲು ಸಾಧ್ಯವಾಗಲಿಲ್ಲ” ಎಂದು ಲೇಖಕ ಮತ್ತು ಫುಟ್ಬಾಲ್ ತಜ್ಞ ನೋವಿ ಕಪಾಡಿಯಾ ಹೇಳಿದ್ದಾರೆ.

ಶೂ ಧರಿಸಿ ಆಟವಾಡಬೇಕೆ ಅಥವಾ ಅವುಗಳು ಇಲ್ಲದೆ ಆಟವಾಡಬೇಕೆ ಎಂಬ ಆಯ್ಕೆಯನ್ನು ತಂಡಕ್ಕೆ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

“ಆಯ್ಕೆ ಅವರದಾಗಿತ್ತು. ಗೋಲು ಗಳಿಸಿದ ಎಸ್. ರಾಮನ್ ಅತ್ಯುತ್ತಮ ಡ್ರಿಬ್ಲರ್ ಆಗಿದ್ದರು. ಆದರೆ ಅವರು ಬರಿಗಾಲಿನಲ್ಲಿ ಮಾತ್ರ ಆಡಬಲ್ಲವರಾಗಿದ್ದರು” ಎಂದು ಕಪಾಡಿಯಾ ಹೇಳಿದ್ದಾರೆ.

“ಆಟಗಾರರಿಗೆ ಆರಾಮದಾಯಕವಾಗಿರುವುದರಿಂದ ಬರಿಗಾಲಿನಲ್ಲಿ ಆಡಿದ್ದು ಅವರ ಇಚ್ಛೆಯಿಂದಾಗಿದೆ. ಆಗಿನ ನಾಯಕ ಟಿ.ಓವೋ ಅವರು, ‘ಇದು ಫುಟ್‌ಬಾಲ್ ಆಗಿದ್ದು, ಬೂಟ್‌ಬಾಲ್ ಅಲ್ಲ’ ಎಂದು ಬಹಿರಂಗವಾಗಿ ಹೇಳಿದ್ದರು” ಎಂದು ಕಪಾಡಿಯಾ ಹೇಳಿದ್ದಾರೆ.

ಈ ಎಲ್ಲಾ ಮಾಹಿತಿಯ ಮೂಲಕ ತಿಳಿದು ಬರುವುದೇನೆಂದರೆ, 1948 ರ ಒಲಿಂಪಿಕ್ಸ್‌ನಲ್ಲಿ ಆಡಿದ ಸ್ವತಂತ್ರ ಭಾರತದ ಮೊದಲ ಫುಟ್‌ಬಾಲ್ ತಂಡವು ಹಣದ ಕೊರತೆಯಿಂದಾಗಿ ಬರಿಗಾಲಿನಲ್ಲಿ ಆಟ ಆಡುವಂತೆ ಆಗಿರಲಿಲ್ಲ. ಬದಲಿಗೆ ಅವರು ಬರಿಗಾಲಿನಲ್ಲಿ ಅವರ ಇಚ್ಛೆಯಿಂದಾಗಿಯೆ ಆಟವಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...