Homeಕರ್ನಾಟಕಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

ಬಿ.ಎಸ್.ಪಿ ಯ ಎನ್ ಮಹೇಶ್ ಹೀಗೇಕೆ ಮಾಡಿದರು?

- Advertisement -
- Advertisement -

ಕುಮಾರಸ್ವಾಮಿ ಸರ್ಕಾರದ ವಿಶ್ವಾಸಮತ ಯಾಚನೆಯಲ್ಲಿ ಎನ್.ಮಹೇಶ್ ರವರಿಗೆ ಜೆಡಿಎಸ್-ಕಾಂಗ್ರೆಸ್ ಪರವಾಗಿ ಮತ ಚಲಾಯಿಸಬೇಕೆಂದು ಬಿಎಸ್‍ಪಿಯ ನಾಯಕರು ಆದೇಶಿಸಿದ್ದರು. ಆದರೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎನ್ ಮಹೇಶ್‍ರವರು ಸದನಕ್ಕೆ ಹಾಜರಾಗದೆ ಪಕ್ಷದಿಂದಲೇ ಈಗ ಅಮಾನತಾಗಿದ್ದಾರೆ. ದಲಿತ ವಲಯದಲ್ಲಿ ಭರವಸೆ ಮೂಡಿಸಿದ್ದ ಎನ್.ಮಹೇಶ್ ಹೀಗೇಕೆ ಮಾಡಿದರು? ಅನ್ನೋದು ಈಗ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ.

ಕೊಳ್ಳೇಗಾಲದ ಎನ್.ಮಹೇಶ್‍ರವರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾಗಿದ್ದವರು. ಬಹುಜನ ಸಿದ್ದಾಂತಕ್ಕೆ ಮಾರುಹೋಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಧುಮುಕಿದವರು. ತನ್ನ ಸ್ನೇಹಿತ ಗೋಪಿನಾಥ್ ಜೊತೆ ಸೇರಿ ರಾಜ್ಯದಲ್ಲಿ ಬಿಎಸ್‍ಪಿ ಮತ್ತು ಬಿವಿಎಸ್ ಕಟ್ಟುವುದರಲ್ಲಿ ಮಹತ್ವದ ಮುಖ್ಯ ಪಾತ್ರ ಇವರದು. ಕರ್ನಾಟಕದಲ್ಲಿ ಅಕ್ಷರಶಃ ಸಾವಿರಾರು ಜನ ಇವರನ್ನು ಇಂದಿಗೂ ತಮ್ಮ ಗುರುಗಳೆಂದು ಭಾವಿಸಿದ್ದಾರೆ. ಅಷ್ಟರಮಟ್ಟಿಗೆ ‘ಮಹೇಶಣ್ಣ’ ಆಗಿ ಅವರು ಬಿಎಸ್‍ಪಿಯಲ್ಲಿ ತೊಡಗಿಸಿಕೊಂಡಿದ್ದರು.

ಅಂತ ಎನ್.ಮಹೇಶ್‍ರವರು ಸತತ ಮೂರು ಸಲ ಕೊಳ್ಳೆಗಾಲದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡವರು. ಗೆಲ್ಲಲೇಬೇಕೆಂಬ ಶತಾಯಗತಾಯ ಪ್ರಯತ್ನದಿಂದ, ಎಲ್ಲಕ್ಕಿಂತ ಹೆಚ್ಚು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕೊನೆಗೂ ಈ ಬಾರಿ ಗೆದ್ದರು ಮಾತ್ರವಲ್ಲ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸಹ ಆದರು. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತಾರೆ ಎಂದು ಹಲವಾರು ಜನ ನಂಬಿದ್ದರು. ಆದರೆ ಆದುದ್ದೇ ಬೇರೆ.

ಇದ್ದಕ್ಕಿದ್ದಂತೆ ಎನ್.ಮಹೇಶ್‍ರವರು ತಮ್ಮ ಅಮೂಲ್ಯ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾರಣ ಹುಡುಕುತ್ತಾ ಹೋದಾಗ ಗೊತ್ತಾಗಿದ್ದು ಬಿಎಸ್‍ಪಿಯ ನಾಯಕಿ ಮಾಯವತಿಯವರ ಗಮನಕ್ಕೆ ತಾರದೇ ರಾಜ್ಯದಲ್ಲಿ ದಶಕಗಳಿಗೂ ಹೆಚ್ಚು ಕಾಲ ಬಿವಿಎಸ್ ಎಂಬ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿದ್ದರು ಮಾತ್ರವಲ್ಲ ಅದನ್ನು ಬಿಎಸ್‍ಪಿಯ ಚುನಾವಣಾ ರಾಜಕಾರಣಕ್ಕೂ ಬಳಸಿಕೊಂಡಿದ್ದರು. ಆ ತಪ್ಪಿಗೆ ಎನ್.ಮಹೇಶ್ ತಮ್ಮ ಸಚಿವ ಸ್ಥಾನವನ್ನೇ ಬಲಿಕೊಡಬೇಕಾಯಿತು. ಅಷ್ಟು ಮಾತ್ರವಲ್ಲ ಅಂದು ಮಾಯಾವತಿಯವರು “ಪ್ರೆಸ್ ಮೀಟ್ ಮಾಡಿ, ಬಹಿರಂಗವಾಗಿ ಕ್ಷಮೆ ಕೇಳಬೇಕು” ಎಂದು ಸಹ ಆದೇಶಿಸಿದ್ದರು. ಆದರೆ ಎನ್.ಮಹೇಶ್ ಹೇಗೊ ಮಾಡಿ ಅದರಿಂದ ನುಣಚಿಕೊಂಡಿದ್ದರು.

ಅಂತಹ ಎನ್.ಮಹೇಶ್‍ರವರು ರಾಜ್ಯ ರಾಜಕೀಯ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿದ್ದಾಗ ಸದನಕ್ಕೆ ಹಾಜರಾಗದೇ ದೊಡ್ಡ ಪ್ರಮಾದ ಮಾಡಿದರು. ಬಿಎಸ್‍ಪಿ ಪಕ್ಷ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಆದೇಶಿಸಿದ್ದನ್ನು ಬೇಕಂತಲೇ ಉಲ್ಲಂಘಿಸಿದರು. ಬಿಜೆಪಿಯ ಕುದುರೆ ವ್ಯಾಪಾರ, ಅಪಾಯದಲ್ಲಿರುವ ಪ್ರಜಾತಂತ್ರ ಇತ್ಯಾದಿಗಳ ಕುರಿತು ಅತ್ಯಂತ ಮಹತ್ವದ ಮೌಲ್ಯಯುತ ಚರ್ಚೆ ನಡೆಯುತ್ತಿರಬೇಕಾದರೆ ಎನ್.ಮಹೇಶ್‍ರವರು ಸದನದಿಂದ ದೂರ ಉಳಿದುದ್ದನ್ನು ಬಹಳಷ್ಟು ಪ್ರಜ್ಞಾವಂತರು ಟೀಕಿಸಿದರು.

ಸದನದಲ್ಲಿ ಅವರು ಯಾವೊಂದು ಪಕ್ಷದ ಪರವಹಿಸಬೇಕಾದ ಅಗತ್ಯವೇನಿರಲಿಲ್ಲ. ಬದಲಿಗೆ ಪ್ರಜಾತಂತ್ರ, ಅಂಬೇಡ್ಕರ್‍ರವರು ರಚಿಸಿದ ಸಂವಿಧಾನ, ದೇಶದ ಇಂದಿನ ಸ್ಥಿತಿ, ದಲಿತರ ಪರಿಸ್ಥಿತಿಯ ಕುರಿತಾಗಿ ಅದ್ಭುತವಾಗಿ ಮಾತನಾಡಿ ಇಡೀ ದೇಶದ ಗಮನ ಸೆಳೆಯಬಹುದಿತ್ತು. ಮಾಧ್ಯಮಗಳ ಮೂಲಕ ಕರ್ನಾಟಕದ ಮೂರು ರಾಜಕೀಯ ಪಕ್ಷಗಳಿಗೂ ಅವರ ತಪ್ಪುಗಳನ್ನು ಮುಖಕ್ಕೆ ಹೊಡೆದಂತೆ ಹೇಳಬಹುದಿತ್ತು. ಸದನದ ಘನತೆ, ಜನರಿಗಾಗಿ ಶಾಸಕರು ಮಾಡಬೇಕಾದುದ್ದೇನು ಎಂಬುದರ ಕುರಿತು ಇಡೀ ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಬಹುದಿತ್ತು. ಅಂತಹ ವಿಫುಲ ಅವಕಾಶವನ್ನು ಎನ್.ಮಹೇಶ್ ಹಾಳು ಮಾಡಿಕೊಂಡರು.

ಎನ್ ಮಹೇಶ್ ಹೀಗೇಕೆ ಮಾಡಿದರು?
ಅವಕಾಶವಾದಿತನವೇ ಮಹೇಶ್‍ರವರು ಹೀಗೆ ಮಾಡಲು ಪ್ರಮುಖ ಕಾರಣವಾಗಿದೆ. ಇದು ಈಗ ಮಾತ್ರ ಗೋಚರಿಸುತ್ತಿರುವುದಲ್ಲ ಬದಲಿಗೆ ಇದರ ಲಕ್ಷಣಗಳು ಈ ಹಿಂದೆಯೇ ಕಾಣಿಸಿಕೊಂಡಿದ್ದವು. ಹಲವು ವರ್ಷಗಳ ಹಿಂದೆಯೇ ಎನ್.ಮಹೇಶ್‍ರವರು ಬಿಜೆಪಿ ಬಿ.ಶ್ರೀರಾಮುಲು ಜೊತೆ ಸಖ್ಯ ಹೊಂದಿದ್ದರು ಮಾತ್ರವಲ್ಲದೇ ಅವರೊಡನೆ ಕೂಡಿ ರೆಸಾರ್ಟ್‍ನಲ್ಲಿ ಹಲವು ಯೋಜನೆಗಳನ್ನು ಸಹ ರೂಪಿಸಿದ್ದರು ಎಂದು ಅವರ ಸಮೀಪವರ್ತಿಗಳೇ ಹೇಳುತ್ತಾರೆ.

ಮಾಯಾವತಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಯಾವಾಗ ಆದೇಶಿಸಿದ್ದರೋ ಅಂದಿನಿಂದಲೂ ಅವರ ವಿರುದ್ಧ ಎನ್.ಮಹೇಶ್ ತಿರುಗಿ ಬಿದ್ದಿದ್ದಾರೆ. ಅವಕಾಶ ಕಾಯುತ್ತಿದ್ದ ಅವರು ಈಗ ಬೇಕಂತಲೇ ಸದನಕ್ಕೆ ಹಾಜರಾಗಿಲ್ಲ. ಪಕ್ಷದಿಂದ ಉಚ್ಚಾಟಿಸುವುದು ಅವರು ಸಹ ಬೇಕಿದ್ದಂತೆ ತೋರುತ್ತದೆ. ಇದರಿಂದ ಅವರ ಶಾಸಕ ಸ್ಥಾನಕ್ಕೇನೂ ಚ್ಯುತಿಯಾಗುವುದಿಲ್ಲ. ಇನ್ನು ಮುಂದೆ ಅವರು ಬಿಜೆಪಿ ಜೊತೆ ಸೇರಿಯೂ ಸಚಿವರಾಗುವ ಅವಕಾಶವಿದೆ. ಅದನ್ನು ಅವರು ನಿರಾಕರಿಸುವುದಿಲ್ಲ ಎಂಬುದು ಸಹ ಸತ್ಯವೆ.

ಅತ್ಯಂತ ಘನತೆಯಿಂದ ಚಳವಳಿ ಆರಂಭಿಸಿದ್ದ ಅವರು ಇಂದು ಈ ಸ್ಥಿತಿ ತಲುಪಿರುವುದು ದುರಂತ ಮಾತ್ರವಲ್ಲ ದಲಿತ ರಾಜಕಾರಣಕ್ಕಾದ ನಷ್ಟವೂ ಹೌದು. ಅವರನ್ನೇ ನಂಬಿದ್ದ ಅವರ ಅನುಯಾಯಿಗಳಿಗೆ ಮಾಡಿದ ದ್ರೋಹವೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಾಮ್ ವಿಲಾಸ್ ಪಾಸ್ವಾನ್, ರಾಮದಾಸ್ ಅಠಾವಳೆ, ಉದಿತ್ ರಾಜ್ ಮತ್ತು ಈಗ ಎನ್.ಮಹೇಶ್ ಎಲ್ಲರೂ ಅಂಬೇಡ್ಕರ್ ಸಿದ್ದಾಂತಕ್ಕೆ ಹಾಡುಹಗಲೇ ಚೂರಿ ಹಾಕಿದವರು. ಇವರ ರಾಜಕೀಯ ಗುಲಾಮಗಿರಿಗೆ ದಿಕ್ಕಾರವಿರಲಿ.

LEAVE A REPLY

Please enter your comment!
Please enter your name here

- Advertisment -

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...