HomeUncategorizedನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

ನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿಹೋದರು.

ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಜೀವನ ಸವೆಸಿದ ಅವರು ಒಂದು ಅರ್ಥದಲ್ಲಿ ಅಭಿನವ ಅಭಿಮನ್ಯು. ಹೈದರಾಬಾದಿನ ಪೋಲೀಸ್ ಅಕಾಡೆಮಿಯಲ್ಲಿ ಯುವ ಅಧಿಕಾರಿಗಳಿಗೆ ಜಂಗಲ್ ಹೋರಾಟದ ತರಬೇತಿ ನೀಡುತ್ತಿದ್ದಾಗ ಅವರಿಗೆ ಸೋಂಕು ತಗುಲಿತು. ಒಂದೇ ದಿವಸದಾಗ ಅದು ಅವರ ಹೃದಯಕ್ಕೆ ವ್ಯಾಪಿಸಿತು. ಅಮೆರಿಕೆಯಲ್ಲಿ ಇದ್ದ ಅವರ ಪತ್ನಿ ಹಾಗೂ ಮಗಳು ಭಾರತಕ್ಕೆ ಬರೋ ಮುಂಚೆ ಅವರ ಕೊನೆಯುಸಿರು ಎಳೆದಿದ್ದರು. ಅದು ಎಚ್1 ಎನ್1 ವೈರಸ್ ಇರಬಹುದು ಅಂತ ಕೆಲವರು ಹೇಳಿದರು.

ಅವರಿಗೆ ಏನಾಗಿತ್ತು? ಅದಕ್ಕೆ ಔಷಧ ಏನು? ಅದನ್ನು ಗುಣಪಡಿಸಲಿಕ್ಕೆ ಯಾಕೆ ಆಗಲಿಲ್ಲ? ಈ ಪ್ರಶ್ನೆಗಳು ಜನರನ್ನು ಕಾಡಿದವು. ಐಜಿಪಿ ಮಟ್ಟದ ಐಪಿಎಸ್ ಅಧಿಕಾರಿಗೆ ಈ ಪರಿಸ್ಥಿತಿಯಾದರೆ ಇತರರಿಗೆ ಏನು ಅಂತ ಎಲ್ಲಾರೂ ಮಾತಾಡಲಿಕ್ಕೆ ಹತ್ತಿದರು. ಇದನ್ನು ಪತ್ತೆ ಹಚ್ಚಲಿಕ್ಕೆ ರಾಜ್ಯಸರಕಾರ ಡಾ. ದೇವಿಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯೊಳಗ ಒಂದು ಸಮಿತಿ ನೇಮಿಸಿತು. ಅದರ ವರದಿ ಇನ್ನೂ ಬಂದಿಲ್ಲ.

ಈ ವಾರದ ಸುದ್ದಿ ಏನಪಾ ಅಂದರ ಚೈನಾದಾಗ ನೊವೆಲ್ ಕೊರೋನಾ ಅಥವಾ ಹೊಸಾ ಕಿರೀಟಿ ವೈರಸ್ ಅಂತ ಪತ್ತೆ ಆಗೇದ.

ಆರ್ಥೋ ಕರೋನೊವಿರಿನೆ ಜಾತಿಯ ನಿಡೋವಿರಲೇ ಉಪಜಾತಿಯ ಈ ವೈರಸ್ಸು ನೋಡಲಿಕ್ಕೆ ಕಿರೀಟದಂಗ ಕಾಣತದ ಅಂತ ಇದಕ್ಕ ಕೊರೋನಾ ಅಥವಾ ಕಿರೀಟಿ ವೈರಸ್ ಅಂತಾರ. ಇದು ಆರ್‍ಎನ್‍ಎ ವೈರಸ್ಸು, ಪ್ರಾಣಿ ಹಾಗೂ ಮನುಷ್ಯನಲ್ಲಿ ಇದು ಪುಪ್ಪಸದ ಕೆಲಸ ನಿಲ್ಲಸತದ. ಉಸಿರಾಟ ಸಾಧ್ಯವಾಗದೇ ಸಾವು ಬರತದ. ಇದಕ್ಕೆ ಪರಿಹಾರವಾಗಲಿ, ಲಸಿಕೆ ಆಗಲೀ, ಇನ್ನೂ ಇಲ್ಲ.

ಅದು ವುಹಾನ್ ಪ್ರಾಂತದ ಸುಮಾರು 5,000 ಜನಕ್ಕ ಸೋಂಕಿರಬಹುದು ಅಂತ ಅಂದಾಜು. ಅದರಿಂದ ಸುಮಾರು 100 ಜನ ಸತ್ತು ಹೋಗ್ಯಾರ. ಅಲ್ಲಿಂದ ಬಂದವರು ಕೆಲವರಿಗೆ ಅದು ಬಂದಿರಬಹುದು ಅಂತ ಅಮೆರಿಕಾದ ಅವರನ್ನು ಡಾಕ್ಟರ್‍ಗಳ ನೋಡಕೊಳ್ಳಲಿಕ್ಕೆ ಹತ್ಯಾರ. ಭಾರತದಾಗೂ ಸಹ ಕೆಲವರಿಗೆ ಅದು ಬಂದಿರಬಹುದು ಅಂತ ಸಂಶಯ. ಇಲ್ಲಿಯವರೆಗೂ ಅದು ಯಾರಿಗೂ ಬಂದಿರೋ ಖಾತ್ರಿ ಆಗಿಲ್ಲ ಅಂತ ಸರಕಾರ ಹೇಳೇದ. ಭಾರತದ ಎಲ್ಲಾ ವಿಮಾನ ನಿಲ್ದಾಣದೊಳಗ ಒಂದು ವಿಶೇಷ ಕೌಂಟರ್ ಮಾಡಿ ಅವರನ್ನು ಚೆಕ್ ಮಾಡಲಿಕ್ಕೆ ಹತ್ಯಾರ.

ಆದರ ಇದು ಸುದ್ದಿ ಅಲ್ಲ.
ಚೈನಾದ ವುಹಾನ್ ಪ್ರಾಂತದಾಗ ಈ ಸೋಂಕು ಪತ್ತೆ ಆದಮ್ಯಾಲೆ ಅಲ್ಲಿಯವರು ಏನು ಮಾಡಿದರು ಅಂತ ಅನ್ನೋದು ವಿಶೇಷ. ಮೊದಲನೇ ರೋಗಿ ಪತ್ತೆ ಆದ 24 ತಾಸಿನೊಳಗ ಆ ವೈರಸ್ಸಿನ ಸಂಪೂರ್ಣ ಅಧ್ಯಯನ ನಡೀತು. ಅದರ ಜೀನೋಮು ಮ್ಯಾಪಿಂಗ್ ಅಂದರ ವಿಜ್ಞಾನಿಗಳು ಅದರ ವಂಶವಾಹಿನಿ ತಳಿಯನ್ನ ಪ್ರತ್ಯೇಕಿಸಿ ಅಭ್ಯಾಸ ಮಾಡಿದರು. ರೋಗಿಗಳ ಸಂಖ್ಯೆ ಹೆಚ್ಚು ಆದಂಗೆಲ್ಲಾ ಅವರನ್ನ ಪ್ರತ್ಯೇಕಿಸಿ ಇಡಲಾತು. ಇನ್ನೂ ಹೆಚ್ಚು ಆದಂಗ ಇವರ ಸಲುವಾಗೇನ ಒಂದು ವಿಶೇಷ ಆಸ್ಪತ್ರೆ ಕಟ್ಟಬೇಕು ಅಂತ ನಿರ್ಧಾರ ಆತು. ಹತ್ತು ದಿನದಾಗ ಆ ಆಸ್ಪತ್ರೆ ಕಟ್ಟಡ ಕಟ್ಟಬೇಕು ಅಂತ ಒಂದು ನೂರು ಭೂಚಾಲಕ ಯಂತ್ರಗಳನ್ನು ಕೆಲಸಕ್ಕೆ ಹಚ್ಚಲಾಗೇದ. ಅದು ಮುಗೀಲಿಕ್ಕೆ ಬಂದದ. ಅದಕ್ಕೆ ವಿಶೇಷ ತರಬೇತಿ ಪಡೆದ ಡಾಕ್ಟರಗಳನ್ನು ನೇಮಿಸಲಾಗೇದ.

ಸೋಂಕು ಹಬ್ಬೇದ ತಪ್ಪಸಬೇಕು ಅಂತ ಚೈನಾ ಸರಕಾರ ವುಹಾನ ಪ್ರಾಂತದ ಸುಮಾರು 50 ಲಕ್ಷ ಜನರನ್ನು ಒಂದು ವಾರದಾಗ ಬೇರೆ ಕಡೆ ಸ್ಥಳಾಂತರ ಮಾಡೇದ. ಇನ್ನೂ ತೊಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸತೇವಿ ಅಂತ ಅಲ್ಲಿನ ಸರಕಾರಿ ವಕ್ತಾರರು ಹೇಳ್ಯಾರ. `2012′ ಅನ್ನೋ ಹೆಸರಿನ ಸಿನಿಮಾದಾಗ ವಿಶ್ವದ ಎಲ್ಲಾ ನಾಯಕರು ಲಕ್ಷಾಂತರ ಜನರನ್ನ ಸಮುದ್ರದಾಗ ಬೇರೆ ಕಡೆ ಕರಕೊಂಡು ಹೋಗಬೇಕು ಅಂತ ನಿರ್ಧಾರ ಮಾಡತಾರ. ಆದರ ಅಷ್ಟು ಜನರನ್ನ ಕರಕೊಂಡು ಹೋಗೋವಂಥಾ ಹಡಗು ಕಟ್ಟುವವರು ಯಾರು ಅಂತ ಒಬ್ಬವ ಕೇಳಿದಾಗ ಅಮೆರಿಕದ ವಿಜ್ಞಾನಿಯೊಬ್ಬ ಇಂಥದೆಲ್ಲಾ ಮಾಡೋರ ಚೈನಾದವರಷ್ಟ, ಅಂತ ಹೇಳತಾನ.  ಅಷ್ಟೋತ್ತಿಗೆ ಚೈನಾದವರು ನಾವಾಗಲೇ ಮಾಡಿ ಬಿಟ್ಟೇವಿ ಅಂತ ಹೇಳತಾರ. ಅವರೆಲ್ಲರನ್ನೂ ಸುರಕ್ಷಿತ ಕರಕೊಂಡು ಹೋಗತಾರ.

ಚೈನಾದವರ ಚುರುಕುತನ ಎಲ್ಲರಿಗೂ ಜಗಜ್ಜಾಹೀರು ಆಗೇದ ಅಂತ ಆತು. ನಾವು ಹಿಂಗ ಆಗೋದು ಯಾವಾಗ? ನಮ್ಮಲ್ಲೆ ಒಂದೊಂದು ನಿರ್ಧಾರ ತೊಗೊಳ್ಳೋದು ವರ್ಷಾನುಗಟ್ಟಲೇ ತಡ ಆಗತದ. ಸ್ವಾತಂತ್ರ ಬಂದು 70 ವರ್ಷ ಆದರೂ ಸಹ ‌ ಎಷ್ಟೋ ಜಿಲ್ಲೆ / ತಾಲೂಕುದಾಗ ಶಿಕ್ಷಿತ ಡಾಕ್ಟರುಗಳು ಇಲ್ಲ. ಗಡಿ ತಾಲೂಕುಗಳಾದ ಔರಾದ, ಖಾನಾಪುರ, ಕೊಳ್ಳೇಗಾಲ ಮುಂತಾದ ಕಡೆ ಸ್ನಾತಕೋತ್ತರ ಪದವಿ ಪಡೆದ ಒಬ್ಬ ವೈದ್ಯರೂ ಇಲ್ಲ. ಎಷ್ಟೋ ಜಿಲ್ಲಾ ಆಸ್ಪತ್ರೆಯೊಳಗ ಹಾವು ಕಡಿತಕ್ಕ ಔಷಧಿ ಇಲ್ಲ. ಬ್ರಿಟಿಷರ ಕಾಲದಾಗ ಶುರುವಾದ ಮಲೇರಿಯಾ ಕಂಟ್ರೋಲ್ ಪ್ರೋಗ್ರಾಮು ಇನ್ನೂ ನಡಿಲಿಕ್ಕೆ ಹತ್ತೇದ. ಪ್ರತಿ ಮಾನಸೂನಿನ್ಯಾಗ ಅತಿ ಮುಂದುವರೆದ ಮಂಗಳೂರು ನಗರದಾಗ ಅತಿಹೆಚ್ಚು ಮಲೇರಿಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗತಾರ. ಆಸ್ಪತ್ರೆಯೊಳಗ ಆಮ್ಲಜನಕ ಇಲ್ಲದೇ ಕೂಸು ಸಾಯತಾವ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಅತಿ ಹೆಚ್ಚಿರುವ ದೇಶಗಳೊಳಗ ನಮ್ಮದೂ ಒಂದು. ಬಾಣಂತಿಯರ ಸಾವು, ಗುಣಪಡಿಸಬಹುದಾದ ರೋಗದಿಂದ ಸಾಯುವವರ ಸಂಖ್ಯೆ ನಮ್ಮ ಸುತ್ತಮುತ್ತಲಿನ ದೇಶಗಳಿಗಿಂತ ನಮ್ಮಲ್ಲಿ ಹೆಚ್ಚು. ಇವು ಯಾವಾಗ ಸಮಾ ಆಗಬೇಕು? ಛಲೋ ಪರಿಚಯ, ಅನುಭವ ಇರೋ ರೋಗಗಳ ಹಣೆಬರಹಾನ ಹಿಂಗ ಅಂದರ ನಮಗೇನರ ಹೊಸಾ ರೋಗ ಬಂದರ ಹೆಂಗ?

ಅಂದಂಗ ಒಂದು ಮಾತು. ಇದು ಜೋಕು ಅಲ್ಲ. ನಡೆದುಹೋದ ವಿಷಯ.

ಕನ್ನಡವನ್ನು ಬಾಳೆಹಣ್ಣು ಸುಲದು ಸಿಪ್ಪಿ ಬಿಸಾಡುವಷ್ಟು ಸುಲಲಿತವಾಗಿ ಮಾತಾಡುವ ಯುವ ನಾಯಕ ಶ್ರೀರಾಮುಲು ಅವರು ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದಾಗ ಒಂದು ಧುರಂದರ ಘೋಷಣೆ ಮಾಡಿದ್ದರು. ನಮ್ಮ ಆಡಳಿತದಾಗ ಆರೋಗ್ಯ ಇಲಾಖೆ ಎಷ್ಟು ಗಟ್ಟಿ ಆಗೇದ ಅಂದರ ನಾವು ಎಚ್1 ಎನ್1 ಅಲ್ಲಾ, ಎಚ್10 ಎನ್10 ಇದ್ದರೂ ನಾವು ಸಂಭಾಳಸತೇವಿ ಅಂತ. ಆ ಅಚ್ಛೇ ದಿನ ಬಂದೀತು ಅಂತ ನಾವೆಲ್ಲಾ ಕಾಯಕೊಂಡು ಇದ್ದೇವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...