Homeಮುಖಪುಟಜಾಮಿಯಾ ವಿದ್ಯಾರ್ಥಿ ಮೇಲೆ ಗುಂಡು: ಸುಳ್ಳು ಸುದ್ದಿ ಪ್ರಸಾರ ಮಾಡಿದ ರಿಪಬ್ಲಿಕ್‌ ಟವಿಗೆ ಛೀಮಾರಿ...

ಜಾಮಿಯಾ ವಿದ್ಯಾರ್ಥಿ ಮೇಲೆ ಗುಂಡು: ಸುಳ್ಳು ಸುದ್ದಿ ಪ್ರಸಾರ ಮಾಡಿದ ರಿಪಬ್ಲಿಕ್‌ ಟವಿಗೆ ಛೀಮಾರಿ…

"ಸಿಎಎ ಹೆಸರಿನಲ್ಲಿ ... ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಹಗಲು ಹೊತ್ತಿನಲ್ಲಿ ಬಂದೂಕುಗಳನ್ನು ಬ್ರಾಂಡ್ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಇದನ್ನು ಬೆಂಬಲಿಸಿದ್ದಾರೆ." ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ.

- Advertisement -
- Advertisement -

ಕೆಲವು ಗಂಟೆಗಳ ಹಿಂದೆಯಷ್ಟೆ ಸಿಎಎ ವಿರುದ್ಧ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಗೋಪಾಲ್‌ ಎಂಬ ಬಲಪಂಥೀಯ ಹುಡುಗನೊಬ್ಬ ಗುಂಡು ಹಾರಿಸಿ ಪೊಲೀಸರ ಅತಿಥಿಯಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಆದರೆ ಗುಂಡು ಹಾರಿಸಿದವರು ಜಾಮಿಯಾ ವಿದ್ಯಾರ್ಥಿಗಳು, ಪ್ರತಿಭಟನಾಕಾರರು ಹಿಂಸೆಗೆ ತಿರುಗಿದ್ದಾರೆ ಎಂದೆಲ್ಲಾ ರಿಪಬ್ಲಿಕ್‌ ಟಿವಿ ಸುಳ್ಳು ವರದಿ ಮಾಡಿ ಸಿಕ್ಕಿಬಿದ್ದಿದೆ.

ದೆಹಲಿ ಪೊಲೀಸರು ಬಂದೂಕುಧಾರಿಯನ್ನು ರಾಮ್‌ಭಕ್ತ್‌ ಗೋಪಾಲ್ ಶರ್ಮಾ ಎಂದು ಗುರುತಿಸಿದ್ದಾರೆ. “ಯೆ ಲೋ ಆಜಾದಿ. ಹಿಂದೂಸ್ತಾನ್ ಜಿಂದಾಬಾದ್. ದೆಹಲಿ ಪೊಲೀಸ್ ಜಿಂದಾಬಾದ್” ಎಂದು ಅವರು ಕೂಗಿದ್ದಾರೆ. ತೆಗೆದುಕೊಳ್ಳಿ ನಿಮ್ಮ ಆಜಾದಿ ಎಂದು ಆತ ಗುಂಡು ಹೊಡೆದಿರುವುದು ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವರದಿಗಳು ಮತ್ತು ವೀಡಿಯೊಗಳು ದಪ್ಪ ಅಕ್ಷರಗಳಲ್ಲಿ ಮತ್ತು ವೇಗವಾಗಿ ಹರಿದಾಡಿದರೂ, ರಿಪಬ್ಲಿಕ್ ಟಿವಿ ಮಾತ್ರ “ಜಾಮಿಯಾ ಪ್ರತಿಭಟನೆ ಹಿಂಸೆಗೆ ತಿರುಗಿದೆ, ಪ್ರತಿಭಟನಾಕಾರರು ಗನ್‌ ಬಳಸಿದ್ದಾರೆ” ಎಂದು ಸುಳ್ಳು ವರದಿ ಮಾಡಿದೆ.

ಚಾನೆಲ್‌ನ ರಾಜಕೀಯ ಸಂಪಾದಕಿ ಐಶ್ವರ್ಯ ಕಪೂರ್ ಅವರು ಹೀಗೆ ಹೇಳಿದರು: “ಸಿಎಎ ಹೆಸರಿನಲ್ಲಿ … ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಹಗಲು ಹೊತ್ತಿನಲ್ಲಿ ಬಂದೂಕುಗಳನ್ನು ಬ್ರಾಂಡ್ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಇದನ್ನು ಬೆಂಬಲಿಸಿದ್ದಾರೆ.”

“ಇದನ್ನು ಅನುಮತಿಸಬಾರದು” ಎಂದು ಐಶ್ವರ್ಯ ಕಪೂರ್ ಹೇಳಿದಾಗ, ರಿಪಬ್ಲಿಕ್ ವರದಿಗಾರ ದೂರವಾಣಿಯಲ್ಲಿ ಮಾತನಾಡುತ್ತಾ: “ಅದು ನಿಖರವಾಗಿ ವಿಷಯವಾಗಿದೆ … ಅವರಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಎಂದು ಸುಳ್ಳು ಹೇಳಿದ್ದಾನೆ. ಈ ಸಮಯದಲ್ಲಿ ಟಿವಿ ಪರದೆಯ ಸ್ಕ್ರೋಲ್‌ ಆಗುವ ಜಾಗದಲ್ಲಿ “ಜಾಮಿಯಾ ಪ್ರತಿಭಟನಾಕಾರರು ಬಂದೂಕುಗಳನ್ನು ಬಳಸುತ್ತಾರೆ” ಎಂದು ಪ್ರಸಾರವಾಗಿದೆ.

ಐಶ್ವರ್ಯ ಕಪೂರ್ ಪಟ್ಟುಹಿಡಿದು “ದೆಹಲಿಯು ಬೆದರಿಕೆಗೆ ಒಳಗಾಗುತ್ತಿಲ್ಲವೇ … ಸಿಎಎ ವಿರೋಧಿ ಹೆಸರಿನಲ್ಲಿ ಇದು ನಡೆಯುತ್ತಿದೆ.” ಎಂದು ಅರಚಾಡಿದ್ದಾರೆ. ನಂತರ ರಿಪಬ್ಲಿಕ್ ಅವರ ಸಿಬ್ಬಂದಿಯನ್ನು ವಿಶ್ವವಿದ್ಯಾನಿಲಯದಲ್ಲಿ ಕೂಡಿಹಾಕಲಾಗಿದೆ ಎಂದು ಸುಳ್ಳು ವರದಿ ಸಹ ಮಾಡಲಾಗಿದೆ.

ರಿಪಬ್ಲಿಕ್‌ ಟಿವಿಯ ಈ ನಡೆಯನ್ನು ಹಲವಾರು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಅಬ್ಬಬ್ಬ.. ಈ ಹೈಟೆಕ್ ಮಲ್ಟಿ ಮೀಡಿಯ ಕಾಲದಲ್ಲೇ ಇಷ್ಟು ಬ್ಲಾಟಂಟ್ ಆಗಿ ಸುಳ್ಳು ಪ್ರಚಾರ ಮಾಡ್ತಾರಲ್ಲ!! ಇನ್ನು ನಮ್ಮ ತಾತ ಮುತ್ತಾತಂದಿರ ಕಾಲದಲ್ಲಿ ಇವರಿನ್ನೆಷ್ಟು ಊರು ಹಾಳು ಮಾಡಿರಬೇಕು ಲೆಕ್ಕ ಹಾಕ್ಕೊಳಿ. ಅಬ್ಬ ಇವರ ಕುತಂತ್ರವೇ!! ಎಂದು ಕತೆಗಾರ ದಯಾನಂದ ಟಿ.ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರಾದ ದಿನೇಶ್‌ ಕುಮಾರ್ ದಿನೂರವರು 26/11 ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಮುಂಬೈನ ಜನರೇ ಮಾಡಿದ್ದು ಎಂದರೆ ಕೇಳಿದವರು ಮೆಟ್ಟಲ್ಲಿ ಹೊಡೆಯೋದಿಲ್ಲವೇ? ಇವತ್ತು ಅರ್ನಾಬ್ ಗೋಸ್ವಾಮಿ ಮಾಡಿರುವುದೂ ಅದನ್ನೇ. ಇಡೀ ದೇಶಕ್ಕೇ ಸತ್ಯ ಏನು ಅಂತ ಗೊತ್ತಿದೆ. ಆದರೂ ಈ ಗುಲಾಮ ಚಾನೆಲ್‌ #GunsInJamia ಎಂಬ ಹ್ಯಾಶ್ ಟ್ಯಾಗ್ ನಲ್ಲೇ ಹೇಸಿಗೆ ಮಾಡಿಕೊಳ್ಳುತ್ತಿದ್ದಾನೆ. ಇವನು ಹೇಡಿ ಮಾತ್ರವಲ್ಲ, ಪರಮನೀಚ. ಬೂಟು ನೆಕ್ಕುವುದು, ಧಣಿಗಳ ಅಮೇಧ್ಯ ತಿನ್ನುವುದು ಮಾಮೂಲಾದರೆ ಇದೆಲ್ಲ ಆಗುತ್ತದೆ. ಥೂ, ಇವನಿಗೆ ಬೀದಿಬೀದಿಯಲ್ಲೂ ಜನರು ಛೀಮಾರಿ ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...