Homeಅಂಕಣಗಳುಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

- Advertisement -
- Advertisement -

ಯಾವುದೇ ಪಕ್ಷವಾದರೂ ಹೊಂದಿಕೊಂಡು ಆ ಪಕ್ಷದ ವಕ್ತಾರನಂತೆ ಮಾತನಾಡುತ್ತ ಪಾರ್ಟಿಯ ಮಾನ ಮರ್ಯಾದೆ ಕಾಪಾಡುವಂತಹ ಶಿವರಾಮೇಗೌಡರನ್ನ ಮಾತನಾಡಿಸಿ, ಅವರು ಜೆಡಿಎಸ್‌ನಿಂದ ವಜಾಗೊಂಡಿರುವ ಸಮಯದಲ್ಲಿ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಲ್ಲವೆ ಎಂದು ಯೋಚಿಸಿ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ “ಯಾರು ಏನು ಮಾಡುವರು, ನನಗೇನೂ ಕೇಡು ಮಾಡುವರು, ಯಾರು…”

“ಹಲೋ ಯಾರು”

“ನಾನು ಸಾರ್ ನಿಮ್ಮ ಹಿತೈಷಿ ಯಾಹೂ.”

“ಹಿತೈಷಿ ಅನ್ನೊರಿಂದ್ಲೆ ಹಿಂಗಾದದ್ದು ಕಂಡ್ರಿ.”

“ನಾವಂಥೋರಲ್ಲ ಸಾ. ನೀವು ಮಾತಾಡಿದ್ದ ನಿಮ್ಮ ಬುಡಕೆ ತರೋದಿಲ್ಲ ಸಾ.”

“ಆಕೆ ಹೆಣ್ಣುಮಗಳು ವಳ್ಯೊಳು ಅಂತ ಮಾತಾಡಿದ್ನಪ್ಪ, ಹಿಂಗೆ ಮಾಡ್ತಳೆ ಅಂತ ಯಾರಿಗೊತ್ತು.”

“ಆಗೊದ್ಯಲ್ಲ ವಳ್ಳೆದ್ಕೆ ಅಂತ ಭಗವದ್ಗೀತೆ ಹೇಳ್ಯದೆ ಸಾ.”

“ಏನೊಳ್ಳೆದಾಯ್ತದೆ.”

“ಡಿ.ಕೆ ಶಿವಕುಮಾರ್ ಮತ್ತೆ ನೀವು ಆತ್ಮೀಯ ಗೆಳೆಯರಲ್ಲವ ಸಾ.”

“ಅದೇನೊ ನಿಜ.”

“ಮತ್ತೆ ಅವುರು ಮುಂದೆ ಪವರಿಗೆ ಬತ್ತಾಯಿರುವಾಗ ನೀವು ಜೆಡಿಎಸ್ಸಿನಲ್ಲಿರದು ಸರೀನಾ ಸಾರ್.”

“ನೀವೇಳಿದ್ದು ಸರಿನೆ, ಅದ್ರೆ ಕುಮಾರಣ್ಣ ನನ್ನ ಬುಟ್ಟು ಯಾರು ಸರಕಾರ ಮಾಡ್ತರೆ ನೋಡ್ತಿನಿ ಅಂದವುನಲಾ.”

“ಅಷ್ಟ್‌ವೊತ್ತಿಗೆ ಏನಾಗ್ತದೊ ಏನೋ, ಯಾರು ಕಂಡವುರೆ, ನೀವು ಡಿ.ಕೆಶಿಗೆ ತುಂಬ ಬೇಕಾದೊರಾದಾಗ ನಿಮ್ಮನ್ನ ನೆಗ್ಲೆಟ್ ಮಾಡಕ್ಕೆ ಬರಲ.”

“ನನ್ನನ್ನ ಯಾರೂ ನೆಗ್ಲೆಟ್ ಮಾಡಕ್ಕಾಗಲ್ಲ ಕಂಡ್ರಿ.”

“ಆಗಲ್ಲ ಸಾರ್, ಪವರಿಗೆ ಬಂದವುರ ಮನೆ ಬಾಗ್ಲಲ್ಲಿ ದಿನ ಹೋಗಿ ನಿಂತಗತ್ತಿರಿ, ಒಂದಿನ ವಳಿಗೆ ಕರದೇ ಕರಿತರೆ.”

“ಏನೇಳ್ತಯಿದ್ದಿರಿ ನೀವು.”

“ಆಗ ದೇವೆಗೌಡ್ರಿಗೆ ಅಂಗೆ ಮಾಡಿದ್ರಲ್ಲ ಸಾರ್, ಅವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪಾಜಿ, ಅಪ್ಪಾಜಿ ಅಂತ ಮನೆತಕ್ಕೊಗಿ ಕೂಗುತಿದ್ರಿ ಪಾಪ. ಅವುರ ಮಕ್ಕಾಳ್ಯಾರು ಅಂಗೆ ಕರಿತಿರಲಿಲ್ಲ. ಯಲ್ಲ ಯಪ್ಪ ಯಪ್ಪ ಅಂತಿದ್ದೊ ನೀವು ಅಪ್ಪಾಜಿ ಅಂತ ಕಾಲಿಗೆ ಬಿದ್ದಿದ್ದು ವರ್ಕೌಟಾಯ್ತು, ಹೌಸಿಂಗ್ ಬೋರ್ಡ್ ಛೇರ್ಮನ್ ಮಾಡಿದ್ರು.”

“ಅದ್ಯಲ್ಲ ಹಳೆ ಕತೆ, ಈಗಂಗಿಲ್ಲ ಅವುರು.”

“ನೀವಂಗೆ ಇದ್ದಿರಲ್ಲ ಸಾ, ನೀವು ಬದ್ಲಾಗಿದ್ರೆ ಹಿಂಗ್ಯಾಕಾಗದು.”

“ಅಲ್ಲ ಕಂಡ್ರಿ, ಸತ್ಯ ಮಾತಾಡದು ತಪ್ಪ.”

“ಏನು ಸತ್ಯ ಮಾತಾಡಿದ್ರಿ.”

“ಆ ಮಾದೇಗೌಡ ನನಿಗೆ ಎರಡು ಸತಿ ಟಿಕೆಟ್ ತಪ್ಪಿಸಿದ. ನಾನು ನಮ್ಮೂರಲ್ಲಿ ಒಬ್ಬನ ಮನೆ ಮ್ಯಾಲೆ ದಾಳಿ ಮಾಡಿಸಿದೆ. ಅದ ನೋಡಕ್ಕೆ ಬಂದ ಮಾದೇಗೌಡನಿಗೆ ನನ್ನ ಕಂಡ್ರಾಯ್ತಿರಲಿಲ್ಲ. ಸೋಲಂಗೆ ಮಾಡಿದ. ಆಗ ನಾನು ಗೆದ್ದಿದ್ರೆ ಯಸ್ಸೆಂ ಕೃಷ್ಣನ ಸಂಪುಟದಲ್ಲಿ ಡಿ.ಕೆ ಶಿವಕುಮಾರ್ ಜೊತೆ ನಾನು ಮಂತ್ರಿಯಾಯ್ತಿದ್ದೆ. ಡ್ರಸ್‌ನೂ ಕೂಡ ವಲಿಸಿದ್ದೆ ಕಂಡ್ರಿ, ವಟ್ಟುರಿಯಕ್ಕಿಲ್‌ವೆ ನನಿಗೆ.”

“ಡಿ.ಕೆ ಶಿವಕುಮಾರ್‌ಗೆ ಆಸ್ತಿ ಜಾಸ್ತಿಯಾಗಿ ತೊಂದ್ರೆ ಅನುಭವುಸ್ತಾಯಿದ್ರೆ, ನೀವು ನಾಳಗೆ ತೊಂದಗರಿಗೆ ಸಿಗಾತ್ತಾಯಿದ್ದಿರಿ ಸಾ.”

“ಸತ್ಯ ಮಾತಾಡದ್ರೆ ತಪ್ಪೇನ್ರಿ.”

“ಸತ್ಯ ಮಾತಾಡಿ ಅದರ ಪರಿಣಾಮ ಹೆದ್ರಸಕ್ಕೂ ರೆಡಿಯಾಗಿ.”

“ಈಗ ರೆಡಿಯಾಗಿ ಇದ್ದಿನಲ್ಲ, ನಿಂತ ನೆಲಿಲೆ ಕುಮಾರಸ್ವಾಮಿ ನನ್ನನ್ನ ವಜಾ ಮಾಡಿದ್ರೆ ಹೋಗಿ ಕಾಲಿಗೆ ಬೀಳಕ್ಕಾಯ್ತದಾ.”

“ಆಗಲ್ಲ ಸಾ, ಅವುರ ತಂದೆ ಕಾಲಿಗೇನೂ ಬೀಳಬಹುದು, ಆದ್ರೆ ಕುಮಾರಣ್ಣ ಕಾಲಿಗೆ ನಿಮ್ಮಂತ ಸೀನಿಯರು ಬೀಳಬಾರ್ದು.”

“ಅಲ್ಲ ಕಂಡ್ರಿ ಈ ಅಪ್ಪ ಮಕ್ಕಳು ನನ್ನ ಉಪಕಾರನೆ ಮರತುಬುಡ್ತರಲ್ಲ ಹೇಳಿ.”

“ಉಪಕಾರ ಏನು ಮಾಡಿದ್ರಿ ಸಾ.”

“ಸುಮಲತ ಎಲಕ್ಷನ್ನಿಗೆ ನಿಂತಾಗ ಇದೇ ನಾಗಮಂಗಲದಲ್ಲಿ ಪ್ರಧಾನ ಭಾಷಣಕಾರ ನಾನೆಯ, ಆಗ ಸುಮಲತಕ್ಕನ್ನ ಇವುಳು ಮಾಯಾಂಗನೆ ಜಯಲಲಿತ ಆಗಕ್ಕೆ ಬಂದವುಳೆ ಬುಡಬ್ಯಾಡಿ ಸೋಲಿಸಿ ಅಂದೆ. ಅಗ ದ್ಯಾವೇಗೌಡ್ರು ಮೆಚ್ಚಿ ಶಿವರಾಮೇಗೌಡರು ಮಾತನಾಡಿದ ಮೇಲೆ ನಾನು ಭಾಷಣ ಮಾಡೊ ಅಗತ್ಯ ಇಲ್ಲ ಅಂದ್ರು, ಅವತ್ತು ನಾನು ಕ್ಯಟ್ಟ ಮಾತಾಡಕ್ಕೆ ಪುಸಲಾಯಿಸಿದೋರು. ಇವತ್ತು ಅಂತವೇ ಮಾತಾಡಿದ್ರೆ ಪಾರ್ಟಿಯಿಂದ್ಲೆ ವಜಾ ಮಾಡ್ತಾರೆ ಇದಕೇನೇಳನ.”

“ಅದ್ಕೆ ಸಾರ್ ಯಾರಿಗೂ ಕೆಟ್ಟ ಮಾತಾಡಬಾರ್ದು.”

“ಅದ್ಯಂಗ್ರಿ ಇರಕ್ಕಾಯ್ತದೆ, ಕ್ಯಟ್ಟ ಮನುಸ್ರನ ವಳ್ಳೆ ಮನುಸ್ರು ಅನ್ನಕಾಯ್ತದೆ.”

“ಮಾದೇಗೌಡ್ರು ಕ್ಯಟ್ಟೊರಲ್ಲ, ಮಂಡ್ಯದ ರೈತ ನಾಯಕರು.”

“ಯಾವ ಸೀಮೆ ರೈತನಾಯಕ. ರೈತರಾಗಿದ್ರೆ ವಲ ಉಳತಿದ್ರು, ಮಂಡ್ಯಕ್ಕೆ ಬಂದು ರಾಜಕಾರಣ ಮಾಡತಿರಲಿಲ್ಲ.”

“ರೈತ ನಾಯಕರು ವಲ ಉಳೋ ಅಗತ್ಯಯಿಲ್ಲ, ಕೂಲಿಕೊಟ್ಟು ಉಳುಸಬಹುದು. ಇವತ್ತು ಕಾವೇರಿ ಇಶ್ಯೂ ಹಿಡಕಂಡು ಹೋರಾಡೊ ಅಂಥೋರು ವಬ್ರೂಯಿಲ್ಲ. ಯಾರಿಗೂ ಕೇರ್ ಮಾಡ್ದೆ ನೇರಾ ನೇರಾ ಮಾತಾಡತಿದ್ದ ಮಾದೇಗೌಡ್ರು ಸಮಾಧಿ ವಳಗಿದ್ದ ಕಂಡೇ ನಿಮ್ಮನ್ನ ವಜಾ ಮಾಡುಸ್ತರೆ ಅಂದ್ರೆ, ಅವುರ ಪವರೆಸ್ಟದೆ ಲ್ಯಕ್ಕ ಹಾಕಿ ಸಾ.”

“ಇದ್ಕೆ ನಿಮ್ಮನ್ನ ತಲಿಲ್ದ ಪತ್ರಕರ್ತರು ಅನ್ನದು.”

“ಅಂಗಂತಿರಾ.”

“ಮತ್ತಿನೇನು ಸಾಕ್ಷಿನೆ ಸಿಕ್ತಲ್ಲಾ, ಅಲ್ಲ ಕಂಡ್ರೀ ಜೆಡಿಎಸ್ಸು ಮಂಡ್ಯ ಜಿಲ್ಲೆಲಿ ನ್ಯಲೆ ಕಳಕತ್ತಾ ಅದೆ. ಅಂಥಾ ಟೈಮಲ್ಲಿ ನಾನು ಮಾದೇಗೌಡ್ರು ಬೋದಿದ್ದಿನಿ, ಅದ್ಕೆ ಕುಮಾರಣ್ಣ ಮಾದೇಗೌಡ್ರು ನಮ್ಮವರು, ಅವುರು ಒಕ್ಕಲಿಗರ ಲೀಡ್ರು ಅಂತ ಜಾತಿ ಮಾತಾಡಿ ನನ್ನ ವಜಾ ಮಾಡಿ ಜೆಡಿಎಸ್ ಬ್ಯಳಸಕ್ಕೆ ವಂಟವುರೆ, ಸುಮಲತನ್ನ ಬೈಯಿ ಅಂತ ಹೇಳಿದೋರು, ಮಾದೇಗೌಡ್ರು ಬೋದ್ರೆ ವಜಾ ಮಾಡ್ತರಲ್ಲಾ. ಇದು ರಾಜಕಾರಣ ಅಲವೇನ್ರಿ, ಅದರಲ್ಲೂ ಜಾತಿರಾಜಕಾರಣ ಅಲವೇನ್ರಿ. ಇಂತ ವಿಷಯನೆ ನಿಮಗೆ ತಿಳಿಯದಿಲ್ಲ. ಶಿವರಾಮೇಗೌಡ ಮಾದೇಗೌಡ್ರು ಬೋದ ಅಂತ ಅಲ್ಲೆ ಗಿರಕಿ ವಡಿತಿರಿ.”

“ಮಾದೇಗೌಡ್ರುನ ಏಕವಚನದಲ್ಲಿ ಅಂದು ಬಾಳ ಹಿಂದೆ ಸಾಯಬೇಕಾಗಿತ್ತು ಅಂದಿದ್ದು ತಪ್ಪಲವ ಸಾ.”

“ಅಂದಿದ್ದು ಆಯ್ತು, ಪಾರ್ಟಿಯಿಂದ ತಗದಾಕಿದ್ದು ಆಯ್ತು, ಈಗ್ಯಾಕ್ರಿ ತಪ್ಪಾಯ್ತು ಅನ್ನನಾ.”

“ಥೂತ್ತೇರಿ.”


ಇದನ್ನೂ ಓದಿ: ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...