Homeಸಿನಿಮಾಕ್ರೀಡೆಅಕ್ಟೋಬರ್ 23 ರಂದು ಭಾರತ-ಪಾಕ್ ಹಣಾಹಣಿ: ಟಿ20 ವಿಶ್ವಕಪ್‌ನಿಂದ ಜಸ್ಪ್ರಿತ್ ಬೂಮ್ರ ಹೊರಕ್ಕೆ

ಅಕ್ಟೋಬರ್ 23 ರಂದು ಭಾರತ-ಪಾಕ್ ಹಣಾಹಣಿ: ಟಿ20 ವಿಶ್ವಕಪ್‌ನಿಂದ ಜಸ್ಪ್ರಿತ್ ಬೂಮ್ರ ಹೊರಕ್ಕೆ

- Advertisement -
- Advertisement -

ಅಕ್ಟೋಬರ್ 16ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23ರಂದು ಎದುರಿಸಲಿದೆ. ಈ ಸಂದರ್ಭದಲ್ಲಿಯೇ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯ ಸುದ್ದಿಯೊಂದು ಅಪ್ಪಳಿಸಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಜಸ್ಪ್ರಿತ್ ಬೂಮ್ರ ಇಡೀ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಸರಣಿಯಲ್ಲಿಯೂ ಸಹ ಬೂಮ್ರ ಕಣಕ್ಕಿಳಿಯಲಿಲ್ಲ. ಸೆಪ್ಟಂಬರ್ 28 ರಂದು ತಿರುವನಂತಪುರಂನಲ್ಲಿ ನಡೆದ ಮೊದಲ ಪಂದ್ಯದ ಟಾಸ್ ಮುನ್ನವೆ ಅವರು ಬೂಮ್ರ ಅವರ ಗಾಯದ ಕುರಿತು ಬಿಸಿಸಿಐ ಮಾಹಿತಿ ನೀಡಿತ್ತು.

ಬೂಮ್ರ ಗಾಯದ ಕಾರಣದಿಂದಾಗಿ ಏಷ್ಯಾಕಪ್‌ನಲ್ಲಿಯೂ ಕಣಕ್ಕಿಳಿದಿರಲಿಲ್ಲ. ಏಷ್ಯಾ ಕಪ್‌ನಲ್ಲಿ ಭಾರತದ ಬೌಲಿಂಗ್ ಕೊರತೆಯಿಂದಾಗಿಯೇ ಭಾರತವು ಫೈನಲ್‌ ತಲುಪಲು ಸಾಧ್ಯವಾಗಿರಲಿಲ್ಲ. ಆನಂತರ ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳನ್ನು ಬೂಮ್ರ ಆಡಿದ್ದರು. ಯಾರ್ಕರ್‌ಗಳಿಗೆ ಖ್ಯಾತಿಯಾಗಿರುವ ಬೂಮ್ರ ಭಾರತದ ಬೌಲಿಂಗ್ ಬೆನ್ನೆಲುಬು ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಫಿಂಚ್‌ ಅವರನ್ನು ಯಾರ್ಕರ್‌ ಬೌಲ್ ಹಾಕಿ ಬೌಲ್ಡ್ ಮಾಡಿದಾಗ ಸ್ವತಃ ಫಿಂಚ್ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದರು.

ಸದ್ಯ ಬೂಮ್ರ ಹೊರಗುಳಿಯುತ್ತಿರುವುದರಿಂದ ಅವರ ಸ್ಥಾನವನ್ನು ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ತುಂಬುವ ಸಾಧ್ಯತೆ ಇದೆ. ದೀಪಕ್ ಚಹರ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 2 ಮಹತ್ವದ ವಿಕೆಟ್ ಪಡೆದಿದ್ದರು. ಅಲ್ಲದೆ ಬ್ಯಾಟ್ ಮಾಡುವ ಸಾಮರ್ಥ್ಯವು ಅವರಿಗಿರುವುದರಿಂದ ಅವರೆ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.

ಅಂತಿಮ ಓವರ್‌ಗಳಲ್ಲಿ ಕಳಪೆ ಬೌಲಿಂಗ್ ಪ್ರದರ್ಶನವು ಭಾರತ ತಂಡವನ್ನು ಕಾಡುತ್ತಿದೆ. ಭುವನೇಶ್ವರ್ ಕುಮಾರ್ ಅಂತಿಮ ಓವರ್‌ಗಳಲ್ಲಿ ವಿಫಲರಾಗಿದ್ದಾರೆ. ಕೆಲವೊಮ್ಮೆ ಹರ್ಷಲ್ ಪಟೇಲ್ ಸಹ ದುಬಾರಿಯೆನಿಸಿದ್ದಾರೆ. ಇದು ತಂಡದ ನಾಯಕ ರೋಹಿತ್ ಶರ್ಮಾರನ್ನು ಚಿಂತೆಗೀಡುಮಾಡಿದೆ. ಕಳೆದ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲವಾಗಿದ್ದರೆ ಈಗ ಸದ್ಯ ಅಂತಿಮ ಓವರ್‌ಗಳ ಬೌಲಿಂಗ್ ಸಮಸ್ಯೆಯಾಗಿ ಪರಿಣಮಿಸಿದೆ.

ಈಗಾಗಲೇ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಸಹ ಮಂಡಿ ನೋವಿನ ಸಮಸ್ಯೆಯಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಅವರೊಡನೆ ಬೂಮ್ರ ಸಹ ಸೇರಿಕೊಂಡಿದ್ದಾರೆ. ಈ ಒತ್ತಡವನ್ನು ಭಾರತ ತಂಡ ಹೇಗೆ ನಿಭಾಯಿಸುತ್ತದೆ ಕಾದು ನೋಡಬೇಕಿದೆ.


ಇದನ್ನೂ ಓದಿ: ಕ್ರಿಕೆಟ್‌ನ ಹೊಸ ನಿಯಮದಿಂದಾಗಿ ಭಾರತ ಮಹಿಳಾ ತಂಡಕ್ಕೆ ಜಯ: ಇಂಗ್ಲೆಂಡ್ ಎದುರು ಕ್ಲೀನ್‌ಸ್ವೀಪ್ ಸಾಧನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...

ಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ ‘ಬಾಡಿಗೆದಾರರು’ ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ ರಕ್ಷಾ ದಳದ ಸದಸ್ಯರು

2026ರ ಫೆಬ್ರವರಿ 26 ಮತ್ತು 27ರ ನಡುವಿನ ಮಧ್ಯರಾತ್ರಿ ಉತ್ತರ ಪ್ರದೇಶದ ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಮೇಲೆ ಹಿಂದೂ ರಕ್ಷಾ ದಳಕ್ಕೆ (ಹೆಚ್‌ಆರ್‌ಡಿ) ಸೇರಿದ ಮಹಿಳೆಯರು ಹಿಂದಿಯಲ್ಲಿ “मुसलमान के लिए...

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಹತ್ಯೆಗೆ ಗುರಿಯಾಗುತ್ತಾನೆ: ಇಸ್ರೇಲ್ ರಕ್ಷಣಾ ಸಚಿವನಿಂದ ಬೆದರಿಕೆ

ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ...

ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಗಳು ಅಂತರರಾಷ್ಟ್ರೀಯ ಕಾನೂನಿಗೆ ಸರಿ ಹೊಂದುವುದಿಲ್ಲ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಸಿಡ್ನಿ: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು "ವಿಷಾದದಿಂದ" ಬೆಂಬಲಿಸುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಆದರೆ ಈ ಸಂಘರ್ಷವು ಅಂತರರಾಷ್ಟ್ರೀಯ ಕ್ರಮದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು...

ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್; ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಸಿದ 37 ಭಾರತೀಯ ಹಡಗುಗಳು

ಇಸ್ರೇಲ್-ಯುಎಸ್ ಜಂಟಿ ದಾಳಿಯ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತೀಯ ಹಡಗುಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಭಾರತೀಯ ಧ್ವಜ ಹೊಂದಿರುವ 37 ಹಡಗುಗಳು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ನೀರಿನಲ್ಲಿ ಸಿಲುಕಿಕೊಂಡಿವೆ. 37 ಹಡಗುಗಳು...

ಪಾಲ್ಘರ್: ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟೆಂಪೋ: 28 ವರ್ಷದ ಚಾಲಕ ಸಜೀವ ದಹನ, ಕ್ಲೀನರ್ ಗೆ ಗಾಯ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಟೆಂಪೋಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಂಜಾಬ್‌ನ 28 ವರ್ಷದ ಚಾಲಕ ಸುಟ್ಟು ಕರಕಲಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ಜನನಿಬಿಡ...

ಗುಜರಾತ್| ಅಂತರ್ಧರ್ಮೀಯ ದಂಪತಿಗೆ ಪೊಲೀಸರ ರಕ್ಷಣೆ; ‘ಲವ್ ಜಿಹಾದ್’ ಎಂದು ಕೂಗಿದ ವಿಎಚ್‌ಪಿ

ಮಾರ್ಚ್ 3 ರಂದು ಗುಜರಾತ್‌ನ ಅಹಮದಾಬಾದ್‌ನ ಮೆಟ್ರೋ ನ್ಯಾಯಾಲಯದ ಸಂಕೀರ್ಣದೊಳಗಿನ ವಿವಾಹ ನೋಂದಣಿ ಕಚೇರಿಯು ಅವ್ಯವಸ್ಥೆಯ ತಾಣವಾಯಿತು. ಗಾಂಧಿನಗರದ ಹಿಂದೂ ಮಹಿಳೆಯೊಬ್ಬರು ನಗರದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಲು ಬಂದ ನಂತರ ಹಿಂದುತ್ವ ಸಂಘಟನೆಯ...

ಖಮೇನಿ ಹತ್ಯೆ ಕುರಿತು ಪೋಸ್ಟ್‌ : ನ್ಯಾಷನಲ್ ಕಾನ್ಫರೆನ್ಸ್ ಸಂಸದ, ಶ್ರೀನಗರದ ಮಾಜಿ ಮೇಯರ್ ವಿರುದ್ಧ ಎಫ್‌ಐಆರ್

ದಾರಿತಪ್ಪಿಸುವ ಆನ್‌ಲೈನ್ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಜಮ್ಮು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರೂಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ...