ಅಕ್ಟೋಬರ್ 16ರಿಂದ ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23ರಂದು ಎದುರಿಸಲಿದೆ. ಈ ಸಂದರ್ಭದಲ್ಲಿಯೇ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯ ಸುದ್ದಿಯೊಂದು ಅಪ್ಪಳಿಸಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಜಸ್ಪ್ರಿತ್ ಬೂಮ್ರ ಇಡೀ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಸರಣಿಯಲ್ಲಿಯೂ ಸಹ ಬೂಮ್ರ ಕಣಕ್ಕಿಳಿಯಲಿಲ್ಲ. ಸೆಪ್ಟಂಬರ್ 28 ರಂದು ತಿರುವನಂತಪುರಂನಲ್ಲಿ ನಡೆದ ಮೊದಲ ಪಂದ್ಯದ ಟಾಸ್ ಮುನ್ನವೆ ಅವರು ಬೂಮ್ರ ಅವರ ಗಾಯದ ಕುರಿತು ಬಿಸಿಸಿಐ ಮಾಹಿತಿ ನೀಡಿತ್ತು.
🚨 UPDATE 🚨
Jasprit Bumrah complained of back pain during India's practice session on Tuesday. The BCCI Medical Team assessed him. He is ruled out of the first #INDvSA T20I.#TeamIndia
— BCCI (@BCCI) September 28, 2022
ಬೂಮ್ರ ಗಾಯದ ಕಾರಣದಿಂದಾಗಿ ಏಷ್ಯಾಕಪ್‌ನಲ್ಲಿಯೂ ಕಣಕ್ಕಿಳಿದಿರಲಿಲ್ಲ. ಏಷ್ಯಾ ಕಪ್‌ನಲ್ಲಿ ಭಾರತದ ಬೌಲಿಂಗ್ ಕೊರತೆಯಿಂದಾಗಿಯೇ ಭಾರತವು ಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ. ಆನಂತರ ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳನ್ನು ಬೂಮ್ರ ಆಡಿದ್ದರು. ಯಾರ್ಕರ್‌ಗಳಿಗೆ ಖ್ಯಾತಿಯಾಗಿರುವ ಬೂಮ್ರ ಭಾರತದ ಬೌಲಿಂಗ್ ಬೆನ್ನೆಲುಬು ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಫಿಂಚ್ ಅವರನ್ನು ಯಾರ್ಕರ್ ಬೌಲ್ ಹಾಕಿ ಬೌಲ್ಡ್ ಮಾಡಿದಾಗ ಸ್ವತಃ ಫಿಂಚ್ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ್ದರು.
ಸದ್ಯ ಬೂಮ್ರ ಹೊರಗುಳಿಯುತ್ತಿರುವುದರಿಂದ ಅವರ ಸ್ಥಾನವನ್ನು ಮೊಹಮ್ಮದ್ ಶಮಿ ಅಥವಾ ದೀಪಕ್ ಚಹರ್ ತುಂಬುವ ಸಾಧ್ಯತೆ ಇದೆ. ದೀಪಕ್ ಚಹರ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 2 ಮಹತ್ವದ ವಿಕೆಟ್ ಪಡೆದಿದ್ದರು. ಅಲ್ಲದೆ ಬ್ಯಾಟ್ ಮಾಡುವ ಸಾಮರ್ಥ್ಯವು ಅವರಿಗಿರುವುದರಿಂದ ಅವರೆ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.
ಅಂತಿಮ ಓವರ್‌ಗಳಲ್ಲಿ ಕಳಪೆ ಬೌಲಿಂಗ್ ಪ್ರದರ್ಶನವು ಭಾರತ ತಂಡವನ್ನು ಕಾಡುತ್ತಿದೆ. ಭುವನೇಶ್ವರ್ ಕುಮಾರ್ ಅಂತಿಮ ಓವರ್‌ಗಳಲ್ಲಿ ವಿಫಲರಾಗಿದ್ದಾರೆ. ಕೆಲವೊಮ್ಮೆ ಹರ್ಷಲ್ ಪಟೇಲ್ ಸಹ ದುಬಾರಿಯೆನಿಸಿದ್ದಾರೆ. ಇದು ತಂಡದ ನಾಯಕ ರೋಹಿತ್ ಶರ್ಮಾರನ್ನು ಚಿಂತೆಗೀಡುಮಾಡಿದೆ. ಕಳೆದ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲವಾಗಿದ್ದರೆ ಈಗ ಸದ್ಯ ಅಂತಿಮ ಓವರ್‌ಗಳ ಬೌಲಿಂಗ್ ಸಮಸ್ಯೆಯಾಗಿ ಪರಿಣಮಿಸಿದೆ.
ಈಗಾಗಲೇ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಸಹ ಮಂಡಿ ನೋವಿನ ಸಮಸ್ಯೆಯಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಅವರೊಡನೆ ಬೂಮ್ರ ಸಹ ಸೇರಿಕೊಂಡಿದ್ದಾರೆ. ಈ ಒತ್ತಡವನ್ನು ಭಾರತ ತಂಡ ಹೇಗೆ ನಿಭಾಯಿಸುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಕ್ರಿಕೆಟ್‌ನ ಹೊಸ ನಿಯಮದಿಂದಾಗಿ ಭಾರತ ಮಹಿಳಾ ತಂಡಕ್ಕೆ ಜಯ: ಇಂಗ್ಲೆಂಡ್ ಎದುರು ಕ್ಲೀನ್‌ಸ್ವೀಪ್ ಸಾಧನೆ
What about T.natarajan ? No one talking about natarajan.