Homeಅಂಕಣಗಳುಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್'!

ಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್’!

- Advertisement -
- Advertisement -

ದಿಲ್ಬರ್ಟ್ ಮತ್ತು ರೋಲ್ಡ್ ಡಾಲ್ ಹಾಗೂ ಎಚ್ಚೆತ್ತ ಮಾಧ್ಯಮಗಳ ಬಗ್ಗೆ ಕಳೆದ ವಾರ ಬರೆದ ಸಂಪಾದಕೀಯದಲ್ಲಿ, ಈ ಎಚ್ಚರಿಕೆಯನ್ನು ’ವೋಕ್ ಸಂಸ್ಕೃತಿ’ ಅಥವಾ ’ವೋಕಿಸಂ’ ಎಂಬ ಬಗೆದು ಹೀಗಳೆಯಲು ಹಲವರು ಪ್ರಯತ್ನಿಸುವ ಬಗ್ಗೆ ಪ್ರಸ್ತಾಪಿಸಿ ಲೇಖನವನ್ನು ಕೊನೆಗೊಳಿಸಲಾಗಿತ್ತು. ’ವೋಕ್-ವಿರೋಧಿ’ ಅಭಿಯಾನವನ್ನೇ ಪ್ರಧಾನವಾಗಿಟ್ಟುಕೊಂಡು ಯುಎಸ್‌ಎನ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಿವೇಕ್ ಬಗ್ಗೆ ಸುದೀರ್ಘ ಲೇಖನವನ್ನು ಪ್ರಕಟಿಸಿದ್ದ ನ್ಯೂಯಾರ್ಕರ್ ಪತ್ರಿಕೆ ಅವರನ್ನು ’ಆಂಟಿ ವೋಕ್ ಇಂಕ್’ ಸಿಇಒ ಎಂದು ಕರೆದಿತ್ತು. 21ನೇ ಶತಮಾನದಲ್ಲಿ ಜನಾಂಗ, ಲಿಂಗತ್ವ, ಹವಾಮಾನ, ಸವಲತ್ತು, ಪ್ರಾತಿನಿಧ್ಯ ಮುಂತಾದ ಸಂಗತಿಗಳ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುತ್ತಿರುವ ಅಥವಾ ಎಚ್ಚರಗೊಳ್ಳಬೇಕಿರುವ ಆಶಯದ ವಿರುದ್ಧ ಹೂಡಿರುವ ಈ ’ವೋಕ್-ವಿರೋಧಿ’ ಅಭಿಯಾನ ದಿನೇದಿನೇ ಬಲಪಂಥೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ. ಅಮೆರಿಕದ ತೀವ್ರ ಬಲಪಂಥೀಯ ಟಿವಿ ಚಾನೆಲ್ ಆದ ಫಾಕ್ಸ್ ನ್ಯೂಸ್ ಕಾರ್ಯಕ್ರಮಗಳಲ್ಲಿ ವಿವೇಕ್ ರಾಮಸ್ವಾಮಿ ಕಾಯಂಆಗಿ ಹೋಗಿದ್ದಾರೆ ಎನ್ನುತ್ತವೆ ವರದಿಗಳು.

ಸ್ಯಾಂಪಲ್‌ಗೆ ವಿವೇಕ್ ಅವರ ಒಂದು ಟ್ವೀಟ್ ನೋಡಿ: “ನಾನು ಅಧ್ಯಕ್ಷನಾಗಿ, ಫೆಡೆರಲ್ ಕಾನೂನಾದ (ಯುಎಸ್‌ಎ ರಾಷ್ಟ್ರ ಮತ್ತು ರಾಜ್ಯಗಳು ಸೇರಿ ಮಾಡಿರುವ) ’ಅಫರ್ಮೆಟಿವ್ ಆಕ್ಷನ್’ ಅನ್ನು (ಅಂದರೆ, ಜನಾಂಗೀಯ ತಾರತಮ್ಯ ಕೊನೆಗಾಣಿಸಲು ನೀಡುವ ಮೀಸಲಾತಿ) ಕೊನೆಗೊಳಿಸುತ್ತೇನೆ. ಜನಾಂಗದ ಆಧಾರದ ಮೇಲೆ ಮೀಸಲಾತಿ ನೀಡುವ ಲಿಂಡನ್ ಜಾನ್ಸನ್ ಕಾರ್ಯಾಂಗ ಆದೇಶ 11246ವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಜಾನ್ಸನ್ ನಂತರ ಪ್ರತಿ ರಿಪಬ್ಲಿಕನ್‌ಗೆ ಈ ಕೆಲಸ ಮಾಡುವ ಅವಕಾಶವಿತ್ತು. ನಾನು ಯಾವುದೇ ಕ್ಷಮೆ ಕೇಳದೆ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ “ಪ್ರತಿಭೆ, ಶ್ರೇಷ್ಠತೆ, ಸ್ವ-ಆಡಳಿತ, ಮುಕ್ತ ಅಭಿವ್ಯಕ್ತಿ. ಇದು ಹೊಸ ಅಮೆರಿಕನ್ ಡ್ರೀಮ್ ಎಂದು ಬರೆದುಕೊಳ್ಳುತ್ತಾರೆ. ಯಾವ ಮೌಲ್ಯಗಳನ್ನು ಮರುಮೌಲ್ಯಮಾಪನ ಮಾಡಿ ಸಮಾನತೆ, ಪ್ರಾತಿನಿಧ್ಯದ ಕಡೆಗೆ ಚಲಿಸಬೇಕೆಂದು ಎಚ್ಚೆತ್ತ ಮನಸ್ಸುಗಳು ತುಡಿಯುತ್ತಿವೆಯೋ ಅವನ್ನೆಲ್ಲಾ ಅವಮಾನಿಸಿ ವಿರೋಧಿಸುವ ಅಭಿಯಾನವೇ ’ಆ್ಯಂಟಿ ವೋಕಿಸಂ’. ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ, ಜನಾಂಗೀಯ ನಿಂದನೆಯ ಬಗ್ಗೆ ಕಠಿಣ ಕ್ರಮಗಳು, ಜನ ಕಲ್ಯಾಣ ಯೋಜನೆಗಳು – ಹೀಗೆ ಜನಪರ ನೀತಿಗಳನ್ನೆಲ್ಲಾ ತೊಡೆದುಹಾಕಿ ’ಅಮೆರಿಕ ಫಸ್ಟ್’ ಎನಿಸಿಕೊಳ್ಳಬೇಕೆನ್ನುವ ’ಹುಸಿ ಶ್ರೇಷ್ಠತೆಯ’ ಧೋರಣೆಯೇ ಇದರ ಮೊದಲ ಆದ್ಯತೆ. ಮುಕ್ತ ಅಭಿವ್ಯಕ್ತಿ ಎಂಬುದು ಜವಾಬ್ದಾರಿ ಹೊತ್ತುಕೊಳ್ಳದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿ ಉಳಿಯಬೇಕೆಂಬ ವಾದ ಇವರದ್ದು. ಯಾವುದೇ ಮಟ್ಟದಲ್ಲಿ ಕೂಡ ಜನಾಂಗೀಯ, ಅಲ್ಪಸಂಖ್ಯಾತರ, ಮಹಿಳೆಯರ ಅವಮಾನ-ನಿಂದನೆಯನ್ನು ಮಾಡಲು ಸ್ವಾತಂತ್ರ್ಯ ಇರಬೇಕೆಂಬುದು ಇವರ ಫ್ರೀ ಸ್ಪೀಚ್ ವಾದದ ಉದ್ದೇಶ!

ಇದನ್ನೂ ಓದಿ: ದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ…

ಈ ವಿವೇಕ್ ರಾಮಸ್ವಾಮಿಯ ಕುಟುಂಬದವರು ಕೇರಳ ಮೂಲದ ಬ್ರಾಹ್ಮಣ ಜಾತಿಗೆ ಸೇರಿದವರು. ಇಲ್ಲಿನ ಬ್ರಾಹ್ಮಣ್ಯದ ’ಶ್ರೇಷ್ಠತೆಯ’ ಬಲಪಂಥೀಯತೆ ಮತ್ತು ಅಮೆರಿಕದಲ್ಲಿ ಹುಟ್ಟಿ ಬೆಳೆದು ಮೈಗೂಡಿಸಿಕೊಂಡಿರುವ ಕಾರ್ಪೊರೆಟ್ ಸಂಸ್ಕೃತಿಯ ಬಲಪಂಥೀಯತೆ ಒಟ್ಟಿಗೆ ಸೇರಿ ವಿವೇಕ್ ಅಮೆರಿಕದಲ್ಲಿ ಹೊಸ ಬಗೆಯ ಧ್ರುವೀಕರಣಕ್ಕೆ ನಾಂದಿ ಹಾಡುತ್ತಿದ್ದಾರೆ; ಡೊನಾಲ್ಡ್ ಟ್ರಂಪ್ ಮಾಡಿದ ಡ್ಯಾಮೇಜ್ ಏನೇನೂ ಸಾಲದೆಂಬಂತೆ. ಇಂತಹ ’ವೋಕ್-ಎಚ್ಚರ’ದ ವಿರುದ್ಧದ ಅಭಿಯಾನ ಮೀಸಲಾತಿ ವಿರೋಧಿಯಾಗಿ, ಖಾಸಗೀಕರಣದ ಪ್ರತಿಪಾದಕನಾಗಿ, ದೈತ್ಯ ಕಾರ್ಪೊರೆಟ್ ಕುಳಗಳ ಸಂರಕ್ಷರರಾಗಿ ಬೇರೆಬೇರೆ ಅವತಾರಗಳಲ್ಲಿ ಭಾರತದಲ್ಲಿಯೂ ನಮಗೆ ಕಾಣಸಿಗುತ್ತದೆ. ಅದು ಮುಂದೆ ಇನ್ನೂ ತೀವ್ರವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ಜಗತ್ತಿಗೆ ಬೇಕಾದ ಸಮಾನತೆಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ಕಾಳಜಿಯನ್ನು ಸ್ವಲ್ಪವಾದರೂ ಉಳಿಸಿಕೊಂಡಿರುವ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ನಾಗರಿಕ ಹಕ್ಕುಗಳ ಹೋರಾಟ ಗುಂಪುಗಳು ಸಕ್ರಿಯವಾಗಬೇಕಿದೆ.

2014ರಲ್ಲಿ ಕಪ್ಪು ವ್ಯಕ್ತಿಯೊಬ್ಬನನ್ನು ಅಮೆರಿಕದ ಪೊಲೀಸನೊಬ್ಬ ಕೊಂದಿದ್ದು ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆಗ ’ಸ್ಟೇ ವೋಕ್’ ಅಥವಾ ’ವೋಕ್’ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. 2020ರಲ್ಲಿ ಯುಎಸ್‌ಎನ ಪೊಲೀಸನೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಕತ್ತುಹಿಸುಕಿ ಸಾರ್ವಜನಿಕವಾಗಿಯೇ ಹತ್ಯೆ ಮಾಡಿದಾಗ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ತೀವ್ರ ಸ್ವರೂಪ ಪಡೆದುಕೊಂಡಿತು. ಇದು ಜಗತ್ತಿನಾದ್ಯಂತ ಜನಾಂಗೀಯ ಹಿಂಸೆಗಳ ಬಗ್ಗೆ ಚರ್ಚೆಗೆ ಕಾರಣವಾಯಿತು. ಜನಾಂಗೀಯ ನಿಂದನೆ ಮತ್ತು ಹಿಂಸೆಗಳ ಬಗ್ಗೆ ಜಾಗೃತಿ ತಳೆಯುವಂತೆ ಯುವ ಸಮುದಾಯವನ್ನು ಪ್ರಚೋದಿಸಿತು. ಭಾರತದಲ್ಲಿ ಜಾತಿನಿಂದನೆ ಮತ್ತು ಹಿಂಸೆಯ ಬಗ್ಗೆಗೂ ಚರ್ಚೆಗಳಾದವು. ಕೆಲಸದ ಸ್ಥಳಗಳಲ್ಲಿ ಜನರು ಹೆಚ್ಚು ಸಂವೇದನಾಶೀಲರಾಗಲು ತಳಸಮುದಾಯಗಳಿಂದ ಆಗ್ರಹ ಮೂಡಿಬಂತು. ಆಗ ಶೋಷಕ ಸಮುದಾಯಕ್ಕೆ ಸೇರಿದ ಕೆಲವರಾದರೂ ಎಚ್ಚೆತ್ತು ಸ್ಪಂದಿಸಲು ಪ್ರಾರಂಭಿಸಿದರು. ಅದರ ಜೊತೆಗೇ ಈ ಎಚ್ಚೆತ್ತ ಪ್ರಜ್ಞೆಯನ್ನು ಪ್ರಶ್ನಿಸುವ ಅವಮಾನಿಸುವ ವಿದ್ಯಮಾನಗಳೂ ಚುರುಕು ಪಡೆದವು. ಇಂದಿಗೂ ಈ ವಿವೇಕ್ ರಾಮಸ್ವಾಮಿ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ಅನ್ನು ಗೇಲಿಮಾಡುವುದನ್ನು ತನ್ನ ಕಾಯಕವನ್ನಾಗಿಸಿಕೊಂಡಿದ್ದಾರೆ. ಅದಕ್ಕಾಗಿ ಆ ಚಳವಳಿಯಲ್ಲಿ ಭಾಗಿಯಾದವರ ಚಾರಿತ್ರ್ಯಹರಣಕ್ಕೂ ಮುಂದಾಗುತ್ತಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆಗಳು 2024ರ ಮೊದಲ ಭಾಗದಲ್ಲಿ ಜರುಗಲಿವೆ. ಅಮೆರಿಕದ ಚುನಾವಣೆಗಳು 2024ರ ಕೊನೆಗೆ. ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷ ತೀವ್ರ ಬಲಪಂಥೀಯತೆಯ ಹೊಸ ರೂಪದಲ್ಲಿ ಅವತರಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. 2020ರಲ್ಲಿ ಹೇಗೋ ರಿವರ್ಸ್ ಪೋಲರೈಸೇಷನ್ ಸಾಧ್ಯವಾಗಿ ಟ್ರಂಪ್‌ನ ಸೋಲು ಸಾಧ್ಯವಾಗಿತ್ತು. ಆದರೆ ಟ್ರಂಪ್‌ಗಿಂತಲೂ ತನ್ನ ಪ್ರತಿಗಾಮಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲ ವ್ಯಕ್ತಿತ್ವ ವಿವೇಕ್ ಅವರದ್ದು. ಇವರ ನರೆಟಿವ್‌ಅನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಕಾರ್ಯಸ್ವರೂಪ ಡೆಮಾಕ್ರಟ್ ಪಕ್ಷದಿಂದ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿಲ್ಲ. ಭಾರತದಲ್ಲಿಯೂ ಇದೇ ಸನ್ನಿವೇಶವನ್ನು ನಾವು ಮುಂಗಾಣಬಹುದಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆಡಳಿತ ನಡೆಸುತ್ತಿರುವ ಬಲಪಂಥೀಯ ಪಕ್ಷ ಮರು ಆಯ್ಕೆಗಾಗಿ ಹಿಂದೆ ನಡೆಸಿದಂತೆಯೆ ಧ್ರುವೀಕರಣದ ತೀವ್ರ ಪ್ರಚಾರಾಭಿಯಾನ ನಡೆಸಲಿದೆ. ಇಲ್ಲಿನ ವಿರೋಧ ಪಕ್ಷಗಳು ಅದನ್ನು ಕೌಂಟರ್ ಮಾಡಲು ಸಜ್ಜಾಗಿವೆಯೇ? ರಾಷ್ಟ್ರವ್ಯಾಪಿ ಅಸ್ತಿತ್ವವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಂದು ಜನಪರ-ಪ್ರಗತಿಪರ ನಿಲುವುಗಳನ್ನು ಮತ್ತು ಬಲಪಂಥೀಯ ನೀತಿಗಳ ವಿರುದ್ಧವಾದ ಪೊಸಿಶನ್‌ಅನ್ನು ತೆಗೆದುಕೊಳ್ಳುವ ಮುಖಂಡರುಗಳು ಕಾಣಿಸುತ್ತಿಲ್ಲ. ಸಂಪತ್ತಿನ ಅಸಮಾನತೆ, ಪ್ರಾತಿನಿಧ್ಯ, ಹವಾಮಾನ ವೈಪರೀತ್ಯ ಇಂತಹ ವಿಷಯಗಳು ಇಲ್ಲಿನ್ನೂ ಚುನಾವಣೆಯ ವಿಷಯಗಳಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಜವಾಬ್ದಾರಿಯೇ ದೊಡ್ಡದಿದೆ ಎಂಬುದಂತೂ ನಿಚ್ಚಳ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...