- Advertisement -
- Advertisement -
ಹಿರಿಯ ಸಾಹಿತಿ ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದು ನಿಂದಿಸಿರುವ ಘಟನೆ ಬೆಂಗಳೂರಿನ 2 ನೇ ಎಸಿಎಂಎಂ ಕೋರ್ಟ್ ಆವರಣದಲ್ಲಿ ನಡೆದಿದೆ.
ಭಗವಾನ್ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಮೀರಾ ರಾಘವೇಂದ್ರ ಅವರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನು ವಿಚಾರಣೆ ನಡಸಿದ 2 ನೇ ಎಸಿಎಂಎಂ ನ್ಯಾಯಾಲಯ ಭಗವಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಈ ಘಟನೆಯ ನಂತರ ಕೋರ್ಟ್‌ನಿಂದ ಹೊರಬಂದ ಭಗವಾನ್ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ.
“ಹಿಂದೂ ಧರ್ಮ ಎಂಬುದೇ ಇಲ್ಲ, ಹಿಂದೂ ಧರ್ಮ ಅವಮಾನಕರ. ಮಾನ ಮರ್ಯಾದೆ ಇರೋರು ಹಿಂದೂ ಶಬ್ದ ಬಳಸಬಾರದು” ಎಂದು ಭಗವಾನ್ ಅಕ್ಟೋಬರ್ 2, 2020 ರಂದು ಹೇಳಿದ್ದರು. ಹಾಗಾಗಿ ಅವರ ಮೇಲೆ ಐಪಿಸಿ ಸೆಕ್ಷನ್ 298 ಮತ್ತು 505 ರ ಅಡಿಯಲ್ಲಿ ಕ್ರಿಮನಲ್ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ’ನಾಚಿಕೆಯಾಗ ಬೇಕು ನಿಮಗೆ’: ಅನಿಲ್ ಕುಂಬ್ಳೆ ವಿರುದ್ದ ಕನ್ನಡಿಗರು ಸಿಡಿದಿದ್ದೇಕೆ?



ನಾಚಿಕೆ ಅವಳಿಗೆ ಆಗಬೇಕು.
ಹೇಡಿಯ ಕೆಲಸಮಡಿದ್ದಿಯಾ.
ಅಷ್ಟೊಂದು ಹೆಮ್ಮೆ ಇದ್ದರೆ ನಿನಗೆ ಮುಖಾಮುಖಿ ಚರ್ಚೆಮಾಡಬೇಕಿತ್ತು ನೀನು.