Homeಬಹುಜನ ಭಾರತಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

ಬಹುಜನ ಭಾರತ; ಸಾರವನು ಧಿಕ್ಕರಿಸಿ ರೂಪವನು ಪೂಜಿಸುವ ಮೋಸ

- Advertisement -
- Advertisement -

ಮೊನ್ನೆ ಸರಿದು ಹೋದಸಂವಿಧಾನ ದಿನಾಚರಣೆಯಂದು ಮಾತನಾಡಿದ ಪ್ರಧಾನಮಂತ್ರಿಯವರು, “ನಾವು ಇಂದೇನಾದರೂ ಸಂವಿಧಾನವನ್ನು ಬರೆಯಬೇಕಾಗುವ ಪರಿಸ್ಥಿತಿ ಇದ್ದಿದ್ದರೆ, ಅದರ ಒಂದೇ ಒಂದು ಪುಟವನ್ನು ಕೂಡ ಬರೆಯಲಾಗುತ್ತಿರಲಿಲ್ಲ” ಎಂದರು.

ಆದರೆ ಸಂವಿಧಾನವನ್ನು ತಿದ್ದಿ ಬರೆಯುವ ಮಾತುಗಳನ್ನು ಅವರ ಪರಿವಾರ ಕಾಲಕಾಲಕ್ಕೆ ಆಡುತ್ತಲೇ ಬರುತ್ತಿದೆ. ಪ್ರಧಾನಿಯವರು ಒಂದೆಡೆ ಸಂವಿಧಾನವನ್ನು ಹೊಗಳುತ್ತ ಮತ್ತೊಂದೆಡೆ ಅದನ್ನು ಬೀಳುಗಳೆಯುವ ಹೆಜ್ಜೆಗಳನ್ನೇ ಇಡುತ್ತ ಬಂದಿದ್ದಾರೆ. ಅವರ ಪರಿವಾರ ಸಾವಿರ ಲಕ್ಷ ನಾಲಗೆಗಳಲ್ಲಿ ಸಂವಿಧಾನವನ್ನು ಹಳಿಯುತ್ತಲೇ ಬಂದಿದೆ.

ಧನಿಕರು-ದರಿದ್ರರು, ಬಲಾಢ್ಯ ಜಾತಿಗಳು-ತಳವರ್ಗಗಳ ನಡುವಣ ಅಂತರ ತಗ್ಗುವ ಬದಲು ಹೆಚ್ಚುತ್ತಲೇ ನಡೆದಿದೆ. ನೂರಾರು ವರ್ಷಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ದೊರೆತಿರುವ ಮೀಸಲಾತಿಯನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಿತ್ತುಕೊಳ್ಳುವ ಹುನ್ನಾರಗಳಿಗೆ ಹೆಚ್ಚು ಬಲ ಬಂದಿದೆ. ಕರುಬುವ ತೆಗಳುವ ಹಂಗಿಸುವ ದನಿಗಳಿಗೆ ಧಾರಾಳ ಧ್ವನಿವರ್ಧಕಗಳು ಒದಗಿವೆ. ಆದಿವಾಸಿಗಳು-ದಲಿತರ ಶೋಷಣೆಗೆ ಕೊನೆಯೇ ಕಾಣದಾಗಿದೆ. ದಲಿತರು, ದಮನಿತರು ಆದಿವಾಸಿಗಳು ಅಲ್ಪಸಂಖ್ಯಾತರು, ಪ್ರಗತಿಪರರು ಮಾತ್ರವೇ ಸಂವಿಧಾನವನ್ನು ಪ್ರಾಣಪದಕವೆಂದು ಬಗೆದು ಎದೆಗೆ ಅಪ್ಪಿ ಹಿಡಿದಿದ್ದಾರೆ.

ಸಂವಿಧಾನವು ಅದೆಷ್ಟೇ ಒಳ್ಳೆಯದಾಗಿರಲಿ, ಅದನ್ನು ಜಾರಿಗೆ ತರುವವರು ಒಳ್ಳೆಯವರಾಗಿರದಿದ್ದರೆ ಸಂವಿಧಾನವೂ ಕೆಟ್ಟದೆನಿಸಿಕೊಳ್ಳುತ್ತದೆ. ಸಂವಿಧಾನವು ಅದೆಷ್ಟೇ ಕೆಟ್ಟದಾಗಿದ್ದರೂ ಜಾರಿಗೆ ತರುವವರು ಒಳ್ಳೆಯವರಾಗಿದ್ದರೆ ಸಂವಿಧಾನ ಕೂಡ ಒಳ್ಳೆಯದೇ ಎನಿಸಿಕೊಳ್ಳುತ್ತದೆ ಎಂದಿದ್ದರು ಬಾಬಾಸಾಹೇಬರು.

ಆಳುವವರು ಟೀಕೆ ವಿಮರ್ಶೆಗಳಿಗೆ ಅಸಹನೆ ತೋರಿ ವಿಮರ್ಶಿಸುವವರನ್ನು ಜೈಲುಗಳಿಗೆ ತಳ್ಳುತ್ತಿರುವಾಗ, ಪ್ರಭುತ್ವದ ಮುಂದೆ ಪ್ರಜೆಗಳು ಮಂಡಿಯೂರಬೇಕೆಂದು ಬಯಸುವಾಗ, ಆಳುವವರ ನಡೆ ಮತ್ತು ನುಡಿಗೆ ಸಂಬಂಧವೇ ಇಲ್ಲದಿರುವಾಗ, ಸಮಾಜದ ಎಲ್ಲ ವರ್ಗಗಳನ್ನೂ ಜೊತೆಗೆ ಸೇರಿಸಿಕೊಂಡು ಮುನ್ನಡೆಯಬೇಕೆಂಬ ತತ್ವವನ್ನು ಧಿಕ್ಕರಿಸಿರುವಾಗ, ನಾಗರಿಕರ ಸ್ವಾತಂತ್ರ್ಯಗಳನ್ನು ಹಿಗ್ಗಿಸುವ ಬದಲು ಕುಗ್ಗಿಸುತ್ತಿರುವಾಗ – ಈಗ ಇದೀಗ ಸಂವಿಧಾನವನ್ನು ಬರೆಯಬೇಕಾಗಿ ಬಂದಿದ್ದರೆ.. ಊಹೆಗೂ ನಿಲುಕದ ಅನಾಹುತವಿದು.

ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಪಸರಿಸಲು ನವೆಂಬರ್ 26ರ ದಿನವನ್ನು ಸಂವಿಧಾನ ದಿವಸವೆಂದು ಆಚರಿಸುವುದಾಗಿ ಪ್ರಧಾನಿಯವರು 2015ರಲ್ಲಿ ಘೋಷಿಸಿದ್ದರು. ಸಂವಿಧಾನ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಅವರ ಕನಸಿನ ಭಾರತವನ್ನು ಕಟ್ಟುವ ಕುರಿತ ನಮ್ಮ ಪ್ರತಿಬದ್ಧತೆಯನ್ನು ಪುನರುಚ್ಚರಿಸುವ ತೇದಿಯೂ ಹೌದು ಎಂದು ಸಾರಿದರು. 197 ಕೋಟಿ ರುಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವೂ ತಲೆಯೆತ್ತಿದೆ. ಒಳ್ಳೆಯ ನಡೆಗಳೇ ಹೌದು.

ದಲಿತರ ಮತಗಳನ್ನು ಸೆಳೆಯುವ ಪ್ರತಿಮೆ-ಪ್ರತೀಕ-ಸ್ಮಾರಕ ರೂಪಕಗಳಾಗಿ ಮಾತ್ರವೇ ಪಕ್ಷ ಪರಿವಾರಗಳು ಅಂಬೇಡ್ಕರ್ ಮತ್ತು ಸಂವಿಧಾನವನ್ನು ನೋಡುತ್ತಿವೆ. ನಿಜದ ಬಾಬಾಸಾಹೇಬರ, ಅವರ ಪ್ರಖರ ವಿಚಾರಗಳ, ಅವರು ಕೊಡಮಾಡಿದ ಸಂವಿಧಾನದ ಮೌಲ್ಯಗಳ ನಿತ್ಯ ನಿರಂತರ ಹತ್ಯೆ ನಡೆಯುತ್ತಿದೆ. ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದರೆ ಸಾಲದು, ಅದು ಎತ್ತಿ ಹಿಡಿದಿರುವ ಮೌಲ್ಯಗಳನ್ನು ಗೌರವಿಸಬೇಕು.

1949ರಲ್ಲಿ ಮದ್ರಾಸ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಅಂದಿನ ಗೃಹಮಂತ್ರಿ ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ಪಟೇಲ್ ಅವರು ತೀವ್ರ ಎಡಪಂಥೀಯ ಶಕ್ತಿಗಳು ಮತ್ತು ಆರೆಸ್ಸೆಸ್ ಅಪಾಯಗಳ ಕುರಿತು ಮಾತಾಡಿದ್ದರು.

“ಹೈದರಾಬಾದ್ ಸರ್ಕಾರ ತನ್ನದೇ ಸ್ವಾರ್ಥಕ್ಕೆ ಬೆಳೆಯಲು ಬಿಟ್ಟ ಕಮ್ಯುನಿಸ್ಟರು, ತಮ್ಮ ಸೋದರರೇ ಆದ 200ಕ್ಕೂ ಹೆಚ್ಚು ಕಾಂಗ್ರೆಸ್ಸಿಗರನ್ನು ಕೊಂದಿದ್ದಾರೆ. ಈ ಭಯೋತ್ಪಾದಕರನ್ನು ಹೈದರಾಬಾದ್ ಪ್ರಾಂತ್ಯದಿಂದ ಹೊರದಬ್ಬಿದ ನಂತರ ಬೇರೆ ಗಡಿಗಳನ್ನು ಪ್ರವೇಶಿಸಿ ಅಂತಹುದೇ ಕೃತ್ಯಗಳಲ್ಲಿ ತೊಡಗುತ್ತಾರೆ.. ಇವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ನಾವು ತಯಾರಿದ್ದೇವೆ. ಆದರೆ ಅವರು ಭಯೋತ್ಪಾದನೆಯಲ್ಲೇ ತೊಡಗುವುದಾದರೆ ಹಿಡಿದು ಜೈಲಿಗೆ ತಳ್ಳಲು, ಭೂಗತರಾಗಿ ತಲೆ ಮರೆಸಿಕೊಳ್ಳುವಂತೆ ನಿಗ್ರಹಿಸಲು ನಾವು ಹಿಂಜರಿಯುವುದಿಲ್ಲ” ಎಂದು ಪಟೇಲ್ ಅವರು ಎಚ್ಚರಿಕೆ ನೀಡಿದ್ದರು.

“ನಿಮ್ಮ ಹಂಚಿಕೆಗಳನ್ನು ಕೈಬಿಡಿ, ಕೋಮುವಾದಿ ಘರ್ಷಣೆಗಳನ್ನು ದೂರವಿಡಿ, ಭಾರತದ ಸಂವಿಧಾನವನ್ನು ಗೌರವಿಸಿರಿ, ರಾಷ್ಟ್ರಧ್ವಜಕ್ಕೆ ನಿಷ್ಠೆ ತೋರಿರಿ. ನಿಮ್ಮ ಮಾತುಗಳ ನಂಬಬಹುದೆಂದು ನಮಗೆ ಮನವರಿಕೆ ಮಾಡಿಕೊಡಿರಿ, ಹೇಳುವುದೇ ಒಂದು, ಮಾಡುವುದು ಮತ್ತೊಂದು ಎಂಬ ಧೋರಣೆ ನಡೆಯುವುದಿಲ್ಲ” ಎಂಬುದು ಅವರು ಆರೆಸ್ಸೆಸ್‌ಗೆ ತಾಕೀತು ಮಾಡಿದ್ದರು.

ಪಟೇಲರು ತಿದ್ದಬಯಸಿದ ಈ ಧೋರಣೆಗಳು ಅಂತರಾಳದಿಂದ ಬದಲಾಗಿರುವ ಸೂಚನೆಗಳಿಲ್ಲ. ಬದಲಾಗಿ ಇನ್ನಷ್ಟು ಆಕ್ರಮಣಕಾರಿಯಾಗಿ ಪ್ರಕಟಗೊಳ್ಳತೊಡಗಿವೆ.

“ಹೊಸ ಸಂವಿಧಾನದ ಅತಿ ಕೇಡಿನ ಅಂಶವೆಂದರೆ ಅದರಲ್ಲಿ ಭಾರತೀಯ ಎಂಬುದು ಏನೇನೂ ಇಲ್ಲ….. ಪ್ರಾಚೀನ ಭಾರತದ ವಿಶಿಷ್ಟ ಸಾಂವಿಧಾನಿಕ ಬೆಳವಣಿಗೆಗಳ ಕುರಿತ ಪ್ರಸ್ತಾಪವೇ ಇಲ್ಲ. ಪ್ರಾಚೀನ ಗ್ರೀಸ್ ದೇಶದ ಕಾನೂನು ಬರೆದು ದಂತಕತೆಯೇ ಆಗಿಹೋದ ಲೈಕರ್ಗಸ್ ಮತ್ತು ಅಥೆನ್ಸಿನ ಸೋಲನ್ ಅವರಿಗಿಂತ ಬಹಳ ಮೊದಲೇ ಭಾರತದಲ್ಲಿ ಮನುಸ್ಮೃತಿಯ ರಚನೆಯಾಗಿತ್ತು. ಮನು ರಚಿಸಿದ ಕಾನೂನುಗಳು ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾರತದಲ್ಲಿ ಹಿಂದೂಗಳು ಅವುಗಳನ್ನು ಸ್ವಯಂಪ್ರೇರಣೆ ಮತ್ತು ವಿಧೇಯತೆಯಿಂದ ಪಾಲಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರ ಪಾಲಿಗೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ ಎಂದು 1949ರ ನವೆಂಬರ್ 30ರ ಆರೆಸ್ಸೆಸ್ ಮುಖವಾಣಿ ’ದಿ ಆರ್ಗನೈಸರ್’ನ ಸಂಚಿಕೆಯಲ್ಲಿ ಸಂಪಾದಕೀಯ ಬರೆಯಲಾಗಿತ್ತು.

ಇಂದಿಗೂ ಪರಿವಾರದಲ್ಲಿ ಪ್ರತಿಧ್ವನಿಸುವ ಸಂಪಾದಕೀಯವಿದು. ಕಾಲಕಾಲಕ್ಕೆ ಕೇಂದ್ರ ಮಂತ್ರಿಗಳು, ಪರಿವಾರದ ತಲೆಯಾಳುಗಳು- ಕಾಲಾಳುಗಳು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಹಾಕುವ ಗುಟುರುಗಳ ಮೂಲಸೆಲೆಯಿದು.

ನಾಗರಿಕರಿಗೆ ಸಂವಿಧಾನದತ್ತವಾಗಿ ದೊರಕಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಸರ್ಕಾರ ಹಲವಾರು ನೀತಿ ನಿರ್ಧಾರಗಳು ಕಾಯಿದೆ ಕಾನೂನುಗಳನ್ನು ಹೊರಡಿಸಿದೆ. ಇವುಗಳನ್ನು ಪ್ರಶ್ನಿಸಿರುವ ಅರ್ಜಿಗಳು ಅಹವಾಲುಗಳು ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನಲ್ಲಿ ಕೊಳೆಯುತ್ತಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೆಯ ಮತ್ತು 35ಎ ಕಲಮುಗಳನ್ನು 2019ರಲ್ಲಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಲಾಯಿತು. ಜಮ್ಮು-ಕಾಶ್ಮೀರಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಲ್ಲಿಸಲಾಗಿರುವ ಸುಮಾರು 25 ಅರ್ಜಿಗಳು ದೀರ್ಘ ಕಾಲದಿಂದ ವಿಚಾರಣೆಗೆ ಕಾದಿವೆ.

ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಮತ್ತು ನಿರಾಕರಿಸುವ ಪೌರತ್ವ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ಪೌರತ್ವ ರಿಜಿಸ್ಟರನ್ನು ಪ್ರಶ್ನಿಸಿರುವ 143 ರಿಟ್ ಅರ್ಜಿಗಳು, ರಾಜಕೀಯ ಪಕ್ಷಗಳು ಚುನಾವಣೆಗಳಿಗೆ ಅಜ್ಞಾತ ದೇಣಿಗೆದಾರರಿಂದ ಹಣ ಪಡೆಯುವ ಚುನಾವಣಾ ಬಾಂಡ್‌ಗಳ ವ್ಯವಸ್ಥೆ, ತನ್ನ ನೀತಿ ಸಿದ್ಧಾಂತಗಳನ್ನು ಒಪ್ಪದಿರುವ ಭಿನ್ನಮತವನ್ನು ಜೈಲಿಗೆ ತಳ್ಳುವ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ (ಯುಎಪಿಎ) ಮತ್ತು ರಾಜದ್ರೋಹದ ಕಾಯಿದೆ, ಅಂತರ್ಜಾಲ ಮಾಧ್ಯಮವನ್ನು ನಿಯಂತ್ರಿಸಲು ಮಿತಿಯಿಲ್ಲದ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯಿದೆ ಮುಂತಾದ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾಯಿದೆಗಳನ್ನು

ಈ ಬೆಳವಣಿಗೆ ಸಂವಿಧಾನದ ಅಡಿಪಾಯವನ್ನು ಕದಲಿಸಿದೆಯೇ ವಿನಾ ಗಟ್ಟಿ ಮಾಡಿಲ್ಲ.

“ಸಾಮಾಜಿಕ ಜನತಂತ್ರದ ಆಧಾರದ ವಿನಾ ರಾಜಕೀಯ ಜನತಂತ್ರ ಉಳಿದು ಬಾಳಲಾರದು. ಸಾಮಾಜಿಕ ಜನತಂತ್ರವೆಂದರೇನು? ಸ್ವಾತಂತ್ರ್ಯ ಸಮಾನತೆ ಹಾಗೂ ಸೋದರತೆಯ ತತ್ವಗಳು ಜೀವನಮೌಲ್ಯಗಳೇ ಆಗುವ ಬದುಕಿನ ವಿಧಾನವೇ ಸಾಮಾಜಿಕ ಜನತಂತ್ರ” ಎಂಬ ಬಾಬಾಸಾಹೇಬರ ನೀತಿ ಕಳೆದೇಹೋಗಿದೆ.


ಇದನ್ನೂ ಓದಿ: ಒಂದು ಪ್ರಕರಣಕ್ಕೆ ತಡೆ ಬೆನ್ನಲ್ಲೇ ಹಂಸಲೇಖರ ಹೊಸ ಸಂಯೋಜನೆ ‘ಸಂವಿಧಾನ ಗೀತೆ’ ವೈರಲ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...