Homeಮುಖಪುಟಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

ಕುಸ್ತಿ ಸಂಘದ ವಿಷಯದಲ್ಲಿ ಪ್ರಧಾನಮಂತ್ರಿಗಳ ಅಸಹಾಯಕತೆಯೇನು?

- Advertisement -
- Advertisement -

ಮೊದಲು ರೈತರು ಕೇಳುತ್ತಿದ್ದ ಪ್ರಶ್ನೆಯನ್ನು ಈಗ ಕುಸ್ತಿಪಟುಗಳು ಕೇಳುತ್ತಿದ್ದಾರೆ: ಪ್ರಧಾನಿಗಳು ಸುಮ್ಮನಿರುವುದಾದರೂ ಏತಕ್ಕೆ? ಅಪರಾಧದ ದಾಖಲೆ ಹೊಂದಿರುವ ಮತ್ತು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಾಯಕರ ವಿರುದ್ಧ ಅವರು ಕ್ರಮ ಏಕೆ ಕೈಗೊಳ್ಳುವುದಿಲ್ಲ? ಅಷ್ಟಕ್ಕೂ ಪ್ರಧಾನಮಂತ್ರಿಯವರ ಅಸಹಾಯಕತೆ ಏನು? ಎಂದು.

ಮಹಿಳಾ ಕುಸ್ತಿಪಟುಗಳು ಹೊರಿಸಿದ ಆರೋಪಗಳು ಸಾಮಾನ್ಯ ಆರೋಪಗಳಲ್ಲ. ಯಾವುದೇ ಸಂವೇದನಾಶೀಲ ವ್ಯಕ್ತಿಯ ಹೃದಯ ಕಂಪಿಸಬೇಕು, ಯಾವುದೇ ದೇಶಭಕ್ತನು ತಲೆಬಾಗಬೇಕು, ಅಂತಹ ಆರೋಪಗಳವು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಇಂದಿನಿಂದಲ್ಲ, ಸುಮಾರು 10 ವರ್ಷಗಳಿಂದ ನಡೆಯುತ್ತಿದೆ. ಕೇವಲ ಒಬ್ಬ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವಿಲ್ಲ, ಕುಸ್ತಿ ಫೆಡರೇಷನ್‌ನ ಅನೇಕ ಕೋಚ್‌ಗಳೂ ಶಾಮೀಲಾಗಿದ್ದಾರೆ ಎಂದು ಆರೋಪಗಳಿವೆ. ಈ ದೌರ್ಜನ್ಯದ ಬಲಿಪಶು ಆದವರಲ್ಲಿ ಅಪ್ರಾಪ್ತ ಬಾಲಕಿಯರೂ ಇದ್ದಾರೆ ಮತ್ತು ಈ ಆರೋಪ ಹೊರಿಸಿದ್ದು ಕೇವಲ ಒಬ್ಬ ಮಹಿಳೆ ಅಲ್ಲ, ಅನೇಕ ಮಹಿಳೆಯರು ಆರೋಪಗಳನ್ನು ಮಾಡಿದ್ದಾರೆ. ಆರೋಪದ ಗಂಭೀರತೆಯನ್ನು ಖುದ್ದು ಸುಪ್ರೀಂಕೋರ್ಟ್ ಸ್ವೀಕರಿಸಿದೆ. ಇದಿಷ್ಟೇ ಅಲ್ಲದೆ, ಎರಡು ವರ್ಷಗಳ ಮುಂಚೆಯೇ ಸಾಕ್ಷಿ ಮಲಿಕ್ಪ್ರಧಾನಮಂತ್ರಿಗೆ ನೇರವಾಗಿ  ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೂರನ್ನು ನೀಡಿದ್ದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಇದು ಮೊದ ಆರೋಪವೇನೂ ಅಲ್ಲ. ಆರು ಬಾರಿ ಲೋಕಸಭೆಯ ಸದಸ್ಯನಾಗಿರುವ ಬ್ರಿಜ್ ಭೂಷಣ್‌ನ ಚುನಾವಣಾ ಅಫಿಡವಿಟ್ ಆತನ ಅಪರಾಧದ ದಾಖಲೆಯ ಕಥೆ ಬಿಚ್ಚಿಡುತ್ತದೆ. ಕಳೆದ ಲೋಕಸಭೆ ಚುನಾವಣೆಗಳಲ್ಲಿ ಅವನ ಅಫಿಡವಿಟ್‌ನಲ್ಲಿ ಸೆಕ್ಷನ್ 307 (ಕೊಲೆ ಯತ್ನ) ಸೇರಿದಂತೆ ನಾಲ್ಕು ಅಪರಾಧದ ವಿಷಯಗಳ ಉಲ್ಲೇಖವಿದೆ. ಕೊಲೆಯ ಇನ್ನೊಂದು ಪ್ರಕರಣದಲ್ಲಿ ಆತನನ್ನು ಸಾಕ್ಷ್ಯದ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್

ಸಂಸದ ಮಹಾಶಯರು ಖುದ್ದು ತಮ್ಮ ಅಪರಾಧಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ವರ್ಷ ಲಲ್ಲನ್‌ಟಾಪ್‌ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ಅವರೇ ಹೇಳಿದ್ದು: ’ನನ್ನ ಜೀವನದಲ್ಲಿ ನನ್ನ ಕೈಯಿಂದ ಒಂದು ಕೊಲೆಯಾಗಿದೆ, ಜನರು ಏನೇ ಹೇಳಲಿ, ನಾನು ಒಂದು ಕೊಲೆ ಮಾಡಿದ್ದೇನೆ..’ ಎಂದು; ಆದರೆ ಆ ಕೊಲೆಯ ಪ್ರಕರಣದಲ್ಲಿ ಈತನ ಮೇಲೆ ವಿಚಾರಣೆಯೇ ನಡೆದಿಲ್ಲ, ಇದರ ಯಾವ ದಾಖಲೆಯೂ ಇಲ್ಲ. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೋಂಡಾದಿಂದ ಬಿಜೆಪಿ ಈತನ ಬದಲು ಘನಷ್ಯಾಮ್ ಶುಕ್ಲರನ್ನು ಅಭ್ಯರ್ಥಿಯನ್ನಾಗಿ ಮಾಡಿದಾಗ ಮತದಾನದ ದಿನದಂದು ಒಂದು ದುರ್ಘಟನೆಯಲ್ಲಿ ಶುಕ್ಲ ಅವರು ನಿಧನರಾದರು. ಈ ಸಾವಿನ ಹಿಂದೆ ಬ್ರಿಜ್ ಭೂಷಣ್‌ನ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದು ಬೇರೆ ಯಾರೂ ಅಲ್ಲ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೇ. ಈ ವಿಷಯವನ್ನು ಬಹಿರಂಗಪಡಿಸಿದ್ದು ಬೇರೆ ಯಾರೂ ಅಲ್ಲ, ಖುದ್ದು ಬ್ರಿಜ್ ಭೂಷಣ್ ’ದಿ ಸ್ಕ್ರಾಲ್’ಗೆ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದ್ದರು.

ಪ್ರಶ್ನೆ ಏನೆಂದರೆ, ಇಂತಹ ವ್ಯಕ್ತಿಗೆ ಪ್ರಧಾನಮಂತ್ರಿಗಳ ರಕ್ಷಣೆ ಹೇಗೆ ಪ್ರಾಪ್ತಿಯಾಯಿತು? ಪ್ರಶ್ನೆಯ ಆಳಕ್ಕೆ ಹೋದರೆ, ನಿಮಗೆ ಸಿಗುವುದೇನೆಂದರೆ, ಬ್ರಿಜ್ ಭೂಷಣ್ ಮಾತ್ರ ಒಂದು ಅಪವಾದವೇನಲ್ಲ ಎಂಬ ಕಟುವಾಸ್ತವ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳಿರುವ ಬಿಜೆಪಿಯ ನಾಯಕರ ಒಂದು ದೀರ್ಘ ಪಟ್ಟಿಯನ್ನೇ ಮಾಡಬಹುದು, ಆದರೆ ಬಿಜೆಪಿ ಅಥವಾ ಪ್ರಧಾನಮಂತ್ರಿ ಮೂಲಕ ಅವರಲ್ಲಿ ಬಹುತೇಕರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂಬುದೂ ಸತ್ಯ.

ಈ ಪಟ್ಟಿಯಲ್ಲಿ ಕುಲದೀಪ್ ಸೆಂಗರ್, ಚಿನ್ಮಯಾನಂದ ಸ್ವಾಮಿ, ಸಾಕ್ಷಿ ಮಹಾರಾಜ್, ಎಂ.ಜೆ ಅಕ್ಬರ್, ಉಮೇಶ್ ಅಗರ್ವಾಲ್, ಬರ್ನಾರ್ಡ್ ಮರಾಕ್ ಹಾಗೂ ಸಂದೀಪ್ ಸಿಂಗ್ ಅವರುಗಳ ಹೆಸರು ಇರಹುದು. ಅತ್ತ ತಥಾಕಥಿತ ಸ್ವಘೋಷಿತ ದೇವಮಾನವರಾದ ಬಾಬಾ ರಾಮ ರಹೀಮ್ ಮತ್ತು ಆಸಾರಾಮ್ ನಂತವರು ಬಿಜೆಪಿಗೆ ನಿಕಟವಾಗಿದ್ದರು ಎಂಬ ಕಟುಸತ್ಯ ಎಲ್ಲರಿಗೂ ತಿಳಿದಿದ್ದೇ ಇದೆ.

ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಹಲ್ಲೆ: ‘ನೀವು ನಮ್ಮನ್ನು ಕೊಲ್ಲಲು ಬಯಸಿದರೆ, ಕೊಲ್ಲಬಹುದು’ ಎಂದು ಕಣ್ಣೀರಿಟ್ಟ ವಿನೇಶ್ ಫೋಗಟ್

ಹಿಂದಿನ ಕೆಲವು ವರ್ಷಗಳಲ್ಲಿ, ನಮ್ಮ ಪ್ರಧಾನಮಂತ್ರಿಯವರ ವಿವಿಧ ಅಧಿಕಾರಾವಧಿಯಲ್ಲಿ ಹಾಥರಸ್, ಕಠುವಾ ಅಥವಾ ಬಿಲ್ಕಿಸ್ ಬಾನೋರಂತಹ ಮಹಿಳೆಯರ ವಿರುದ್ಧ ಬಲಾತ್ಕಾರ ಅಥವಾ ಶೋಷಣೆಯ (ಅಪರಾಧಿಗಳನ್ನು ಬಿಡುಗಡೆ ಮಾಡಿದ್ದು ಸೇರಿ) ಪ್ರಮುಖ ಘಟನೆಗಳ ಬಗ್ಗೆಯೂ ಪ್ರಧಾನಮಂತ್ರಿಗಳು ವಿಚಿತ್ರವಾದ ಮೌನ ವಹಿಸಿದ್ದಾರೆ.

ಈ ಪ್ರಶ್ನೆ ಹೊಸದಲ್ಲ. ಕೇಂದ್ರೀಯ ಗೃಹ ರಾಜ್ಯ ಸಚಿವ ಅಜಯ್ ಮಿಶ್ರ ಟೇನಿಯ ಬಗ್ಗೆಯೂ ರೈತರು ಇದೇ ಪ್ರಶ್ನೆಯನ್ನು ಕೇಳಿದ್ದರು. ಹಾಡುಹಗಲೇ ರೈತರನ್ನು ಕೊಂದ ಆರೋಪಿಯ ತಂದೆ ಹಾಗೂ ಆ ಹತ್ಯಾಕಾಂಡದ ಪಿತೂರಿಯ ಪ್ರಮುಖ ಆರೋಪಿ ಅಜಯ್ ಮಿಶ್ರ ಟೇನಿ ಇಂದಿಗೂ ಮಂತ್ರಿಮಂಡಲದಲ್ಲಿ ಏಕೆ ಇದ್ದಾರೆ? ಇಂದು ಅದೇ ಪ್ರಶ್ನೆ ಬ್ರಿಜ್ ಭೂಷಣ್ ಸಿಂಗ್ ಬಗ್ಗೆ ಎತ್ತಲಾಗಿದೆ. ಬೇಟಿ ಬಚಾವೊ ಎಂಬ ಘೋಷಣೆ ನೀಡಿದ ಪ್ರಧಾನಮಂತ್ರಿ, ಅಪ್ರಾಪ್ತ ಬಾಲಕಿಯ ಮೇಲೆ ಆದ ಲೈಂಗಿಕ ದೌರ್ಜನ್ಯದ ಆರೋಪ ಬಂದ ಮೇಲೂ ಬ್ರಿಜ್ ಭೂಷಣ್‌ಗೆ ಅಭಯಹಸ್ತ ಏಕೆ ನೀಡಿದ್ದಾರೆ? ಈ ಆಟಗಾರರನ್ನು ಭಾರತದ ಹೆಮ್ಮೆ ಎನ್ನುವ ಮೋದೀಜಿ ಬ್ರಿಜ್ ಭೂಷಣ್ ಶರಣ್ ಸಿಂಗ್‌ನನ್ನು ಕುಸ್ತಿ ಸಂಘದ ಅಧ್ಯಕ್ಷ ಪದದಿಂದ ತೆಗೆದುಹಾಕುವ ಸಾಮಾನ್ಯ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿದ್ದಾರೆ? ಈ ವರ್ಷ ಜನವರಿಯಲ್ಲಿ ಈ ಹಗರಣ ಸಾರ್ವಜನಿಕ ಆದ ಮೇಲೂ ಹಾಗೂ ಆಟಗಾರರಿಗೆ ಸೂಕ್ತ ಕ್ರಮ ಆಶ್ವಾಸನೆ ನೀಡಿದ ಮೇಲೂ ಯಾವುದೇ ಕ್ರಮ ಯಾಕೆ ಕೈಗೊಳ್ಳಲಾಗಲಿಲ್ಲ?

ನರೇಂದ್ರ ಮೋದಿ

ಈ ಪ್ರಶ್ನೆಗೆ ಎರಡು ಉತ್ತರಗಳು ಸಾಧ್ಯ. ಒಂದೋ ರಾಜಕೀಯ ಅನಿವಾರ್ಯತೆಯ ವಿಷಯವಿದೆ ಅಥವಾ ನೈತಿಕ ದೌರ್ಬಲ್ಯದ ವಿಷಯ. ಲೈಂಗಿಕ ದೌರ್ಜನ್ಯದ ಈ ಎಲ್ಲ ಆರೋಪಿಗಳು ತಮ್ಮ ತಮ್ಮ ಪ್ರದೇಶದ ಪ್ರಬಲ ನಾಯಕರಾಗಿದ್ದಾರೆ ಹಾಗೂ ಕೆಲವು ಜಾತಿಗಳ ಮತಗಳಿಗೆ ಗುತ್ತಿಗೆದಾರರಾಗಿದ್ದಾರೆ. ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದರ ಅರ್ಥ, ಬಿಜೆಪಿಯ ವೋಟ್ ಬ್ಯಾಂಕ್‌ನಲ್ಲಿ ಆ ಸಮುದಾಯದ ಮತಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಒಂದು ವೇಳೆ ಇದೇ ಕಾರಣವಾಗಿದ್ದರೆ, ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: ದೇಶದ ’ಎಲ್ಲಕ್ಕಿಂತ ಜನಪ್ರಿಯ ಮತ್ತು ಪ್ರಬಲ’ ನಾಯಕ ಕೆಲವು ಸ್ಥಳೀಯ ಪ್ರಭಾವಶಾಲಿ ನಾಯಕರ ಎದುರಿಗೆ ಇಷ್ಟೊಂದು ದೈನೇಸಿಯಾಗಿದ್ದಾರೆಯೇ? ಅಷ್ಟಕ್ಕೂ ಬ್ರಿಜ್ ಭೂಷಣ್ ತಾನು ಬಾಯಿ ಬಿಚ್ಚಿದರೆ ಸುನಾಮಿ ಬಂದುಬಿಡುತ್ತೆ ಎಂದು ಯಾವ ಆಧಾರದ ಮೇಲೆ ಬೆದರಿಕೆ ಹಾಕುತ್ತಾನೆ? ಅನೇಕ ದೊಡ್ಡದೊಡ್ಡ ನಾಯಕರನ್ನು ಅಂಚಿಗೆ ತಳ್ಳಿದ ನರೇಂದ್ರ ಮೋದಿ, ಈ ಅರೋಪಿತ ನಾಯಕನ ಎದುರು ಯಾಕೆ ಅಸಹಾಯಕರಾಗಿದ್ದಾರೆ? ಹಾಗೂ ಒಂದು ವೇಳೆ ಅಸಹಾಯಕರಾಗಿದ್ದಲ್ಲಿ, ಯಾವ ಬಾಯಿಂದ ರಾಷ್ಟ್ರದ ಹೆಮ್ಮೆ ಮತ್ತು ಬೇಟಿ ಬಚಾವೊ ಮಾತುಗಳನ್ನಾಡುತ್ತಾರೆ?

ಮತ್ತೊಂದು ಕೋನದಲ್ಲಿ ಯೋಚಿಸುವುದಾದರೆ, ಮಹಿಳೆಯರ ವಿರುದ್ಧ ಆಗುವ ಈ ಅಪರಾಧಗಳನ್ನು ಪ್ರಧಾನಮಂತ್ರಿ ಹಗುರವಾಗಿ ಪರಿಗಣಿಸುತ್ತಾರೆಯೇ? ಅಥವಾ ಪ್ರಧಾನಮಂತ್ರಿಯೂ, ಹೆಚ್ಚೆಚ್ಚು ಮಹಿಳೆಯರೊಂದಿಗೆ ಆಗುವ ಕಿರುಕುಳವನ್ನು ನೋಡಿ ನಕ್ಕು ತಮಾಷೆ ಮಾಡುವ, ಕೌಟುಂಬಿಕ ಹಿಂಸೆಯ ವಾಸ್ತವವನ್ನು ನಿರಾಕರಿಸುವ ಮತ್ತು ಬಲಾತ್ಕಾರದಂತಹ ಘೋರ ಅಪರಾಧಗಳ ಬಗ್ಗೆ ’ಇವೆಲ್ಲ ಮಾಮೂಲಿ’ ಎಂಬ ನಿಲುವನ್ನು ತೆಗೆದುಕೊಳ್ಳುವ ಪುರುಷ ಅಹಂಕಾರದ ಬಲಿಪಶುಗಳಾಗಿದ್ದಾರೆಯೇ? ಪ್ರಧಾನಮಂತ್ರಿಗಳ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ ಹಾಗೂ ಇದು ಸತ್ಯ ಅಲ್ಲ ಎಂದೇ ನಾವು ಆಶಿಸಬೇಕಿದೆ. ಆದರೆ, ಸಾಕ್ಷಿ ಮಲಿಕ್‌ಳ ಕಣ್ಣೀರು, ಬ್ರಿಜ್ ಭೂಷಣ್‌ನ ಅಹಂಕಾರದ ಠೀವಿ ಮತ್ತು ಪ್ರಧಾನಮಂತ್ರಿಯ ಮೌನವನ್ನು ನೋಡುವ ಕೋಟ್ಯಂತರ ಮಹಿಳೆಯರಿಗೆ ಹೀಗೇ ಅನಿಸಬಹುದಲ್ಲವೇ? ಎಲ್ಲಿಯವರೆಗೆ ಪ್ರಧಾನಮಂತ್ರಿ ತಮ್ಮ ಬಾಯಿ ಬಿಚ್ಚುವುದಿಲ್ಲವೋ, ಅಲ್ಲಿಯವರೆಗೆ ಈ ಪ್ರಶ್ನೆ ಎಲ್ಲರ ಕಣ್ಣುಮುಂದೆಯೇ ಇರಲಿದೆ.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳು ಭಾರತದ ’ಬೇಟಿ’ಗಳಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...