Homeಕರ್ನಾಟಕಬೆಂಗಳೂರು: ಫ್ಯಾಕ್ಟ್‌ಚೆಕ್ಕರ್ ಜುಬೇರ್‌ಗೆ ಕೊಲೆ ಬೆದರಿಕೆ ಹಾಕಿದ್ದವರ ವಿರುದ್ಧ ಎಫ್.ಐ.ಆರ್.

ಬೆಂಗಳೂರು: ಫ್ಯಾಕ್ಟ್‌ಚೆಕ್ಕರ್ ಜುಬೇರ್‌ಗೆ ಕೊಲೆ ಬೆದರಿಕೆ ಹಾಕಿದ್ದವರ ವಿರುದ್ಧ ಎಫ್.ಐ.ಆರ್.

- Advertisement -
- Advertisement -

“ಕೆಲವು ಟ್ವಿಟರ್ ಬಳಕೆದಾರರು ನನ್ನ ವಿರುದ್ಧ ಗುಂಪು ಹಿಂಸಾಚಾರಕ್ಕೆ ಮತ್ತು ನನ್ನನ್ನು ಕೊಲೆ ಮಾಡುವುದಕ್ಕೆ ಕರೆ ನೀಡಿದ್ದಾರೆ’’ ಎಂದು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ನೀಡಿದ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಟ್ವಿಟರ್ ಹ್ಯಾಂಡಲ್ @Cyber_Huntss ಮತ್ತು ಹೆಸರಿಲ್ಲದ ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಕಿಡಿಗೇಡಿತನಕ್ಕೆ ಅನುಕೂಲಕರವಾದ ಹೇಳಿಕೆ, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಕ್ರಿಮಿನಲ್ ಬೆದರಿಕೆ, ಶಾಂತಿ ಉಲ್ಲಂಘನೆ ಪ್ರಚೋದನೆ, ಉದ್ದೇಶಪೂರ್ವಕ ಅವಮಾನ ಮಾಡುವುದು- ಈ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಎಫ್.ಐ.ಆರ್.ನಲ್ಲಿ ಹೆಸರಿಸಲಾಗಿದೆ.

ಆದರೆ ಎಫ್‌ಐಆರ್‌ನಲ್ಲಿ ಮಾಜಿ ಒಪಿಇಂಡಿಯಾ ಸಂಪಾದಕ ಅಜೀತ್ ಭಾರ್ತಿ ಹೆಸರನ್ನೂ ಸೇರಿಸುವಂತೆ ಪೊಲೀಸರಲ್ಲಿ ಜುಬೇರ್ ಒತ್ತಾಯಿಸಿದ್ದಾರೆ. “ಅಜಿತ್ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಸರಣಿ ಅಪರಾಧಗಳನ್ನು ಎಸಗಿದ್ದಾರೆ, ಕಾನೂನು ಕ್ರಮ ಜರುಗಿಸಬೇಕು’’ ಎಂದು ಆಗ್ರಹಿಸಿದ್ದಾರೆ.

ಫ್ಯಾಕ್ಟ್ ಚೆಕ್  ವೆಬ್‌ಸೈಟ್‌ `ಆಲ್ಟ್ ನ್ಯೂಸ್’ ಸಹ-ಸಂಸ್ಥಾಪಕ ಜುಬೇರ್ ಅವರು ಏಪ್ರಿಲ್‌ನಲ್ಲಿ 15 ಟ್ವಿಟರ್ ಹ್ಯಾಂಡಲ್‌ಗಳ ವಿರುದ್ಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಟ್ವಿಟರ್ ಖಾತೆಗಳು ಸಾಮಾಜಿಕ ಮಾಧ್ಯಮದಲ್ಲಿ ನನ್ನ ವಿಳಾಸವನ್ನು ಬಹಿರಂಗಪಡಿಸಿವೆ, ಕೊಲೆ ಬೆದರಿಕೆಗಳನ್ನು ಕಳುಹಿಸಲಾಗಿದೆ ಮತ್ತು ಗುಂಪುಗಳ ನಡುವೆ ದ್ವೇಷದ ಭಾವನೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

ರಂಜಾನ್ ಮಾಸದ ವೇಳೆ ಸಾಕುಪ್ರಾಣಿಗಳ ಫುಡ್ ವೆಬ್‌ಸೈಟ್ ಮೂಲಕ 400 ಗ್ರಾಂ ಹಂದಿಮಾಂಸದ ಪ್ಯಾಕೆಟ್ ಅನ್ನು ಏಪ್ರಿಲ್ 9 ರಂದು ಟ್ವಿಟರ್ ಹ್ಯಾಂಡಲ್ @Cyber_Huntss ನನಗೆ ಕಳುಹಿಸಿದೆ ಎಂದು ಜುಬೈರ್ ಹೇಳಿದ್ದಾರೆ.

ಜುಬೇರ್ ಅವರಿಗೆ ಹಂದಿ ಮಾಂಸವನ್ನು ಆರ್ಡರ್ ಮಾಡಿರುವುದಾಗಿ ಈ ಹ್ಯಾಂಡಲ್ನ್ ನಲ್ಲಿ ಟ್ವೀಟ್ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಮೂಲಕ ಬೆಂಗಳೂರಿನಲ್ಲಿರುವ ಜುಬೈರ್ ಅವರ ವಿಳಾಸವನ್ನು ಬಹಿರಂಗಪಡಿಸಲಾಗಿತ್ತು. ನಂತರ ಟ್ವೀಟ್ ಅನ್ನು ಅಳಿಸಲಾಗಿತ್ತು.

“ನನ್ನ ಧಾರ್ಮಿಕ ಗುರುತನ್ನು ಟಾರ್ಗೆಟ್ ಮಾಡಲಾಗಿದೆ. ಮುಸ್ಲಿಮರು ಸೇವಿಸದ ಹಂದಿಮಾಂಸವನ್ನು ಕಳಿಸುವ ಮೂಲಕ ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗಿದೆ’’ ಎಂದು ಜುಬೇರ್ ತಿಳಿದ್ದಾರೆ. “ನನ್ನ ಧಾರ್ಮಿಕ ಅಸ್ಮಿತೆ ಮತ್ತು ಘನತೆಯ ಮೇಲೆ ದಾಳಿ ಮಾಡುವುದಕ್ಕೆ ನಿಷೇಧಿತ ಮಾಂಸವನ್ನು ರಂಜಾನ್ ಮಾಸದ ವೇಳೆ ನನಗೆ ಕಳುಹಿಸಲಾಗಿದೆ’’ ಎಂದು ಅವರು ಆರೋಪಿಸಿದ್ದಾರೆ.

ನನ್ನ ವಿಳಾಸವನ್ನು ಬಹಿರಂಗಪಡಿಸಿರುವ ಟ್ವೀಟ್, ತನ್ನ ವಿರುದ್ಧ ಗುಂಪು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಜುಬೇರ್ ಆತಂಕ ವ್ಯಕ್ತಪಡಿಸಿದ್ದಾರೆ. “ಕಳೆದ ಮಾರ್ಚ್ ತಿಂಗಳಿನಿಂದ ನಾನು ಸ್ವೀಕರಿಸಿರುವ ಕೊನೆಯಿಲ್ಲದ ದ್ವೇಷದ ಕರೆಗಳೊಂದಿಗೆ ಈ ಟ್ವೀಟ್ ಅನ್ನು ಪರಿಗಣಿಸಬೇಕು’’ ಎಂದು ಜುಬೇರ್ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜುಬೈರ್ ಅವರು ಆನ್‌ಲೈನ್ ನಿಂದನೆಯನ್ನು ವ್ಯಾಪಕವಾಗಿ ಎದುರಿಸಿದ್ದಾರೆ. ಆನ್‌ಲೈನ್‌ನಲ್ಲಿ ಹಿಂದುತ್ವ ಬೆಂಬಲಿಗರಿಂದ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ. ಮಾರ್ಚ್‌ ತಿಂಗಳಿನಲ್ಲಿ ಹಲವಾರು ಹಿಂದುತ್ವವಾದಿ ಪ್ರಭಾವಿಗಳು ಆನ್‌ಲೈನ್‌ನಲ್ಲಿ ಬೆದರಿಕೆಗಳನ್ನು ಹಾಕಿದ್ದರು ಮತ್ತು ಕೆಲವರು ಜುಬೇರ್ ವಿರುದ್ಧ ಕಾನೂನು ಮೀರಿದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೆದರಿಸಿದ್ದರು.

ತಮಿಳುನಾಡಿಗೆ ವಲಸೆ ಬಂದ ಬಿಹಾರಿ ಕಾರ್ಮಿಕರ ಹತ್ಯೆಯಾಗಿದೆ ಎಂದು ಹಬ್ಬಿಸಲಾಗಿದ್ದ ಸುಳ್ಳುಗಳನ್ನು ಆಲ್ಟ್ ನ್ಯೂಸ್ ಬಯಲಿಗೆಳೆದಿತ್ತು. “ಈ ಸುಳ್ಳುಗಳನ್ನು ಭೇದಿಸಿದ ನಂತರ ನನಗೆ ಬೆದರಿಕೆಗಳು ಹೆಚ್ಚಾಗಿ ಬರುತ್ತಿವೆ’’ ಎಂದು ಜುಬೇರ್ ದೂರಿದ್ದಾರೆ.

ಆ ಸಮಯದಲ್ಲಿ ಒಪಿಇಂಡಿಯಾದ ಮಾಜಿ ಸಂಪಾದಕ ಅಜೀತ್ ಭಾರ್ತಿ ಟ್ವೀಟ್ ಮಾಡಿ, “ಯೋಜನೆ ಚಾಲನೆ ಪಡೆದಿದೆ. ಈ ಬಾರಿ ಅವನು ಸಂಪೂರ್ಣವಾಗಿ ಸುನ್ನತಿ ಮಾಡಿಸಿಕೊಳ್ಳುತ್ತಾನೆ, ಅವನಿಗೆ ಮೂತ್ರ ವಿಸರ್ಜಿಸಲು ಪೈಪ್ ಅಗತ್ಯವಿದೆ’’ ಎಂದು ಬೆದರಿಕೆ ಹಾಕಿದ್ದನು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...