Homeಅಂಕಣಗಳುನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

- Advertisement -
- Advertisement -

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದಯವಾದ ಸುದ್ದಿಕೇಳಿ ಗಣಿಮಣ್ಣು ತಿಂದಷ್ಟು ಖುಷಿಯಾಯ್ತಲ್ಲಾ. ಇದಕ್ಕೆ ಕಾರಣರಾದ ಜನಾರ್ಧನ ರೆಡ್ಡಿಯವರಿಗೆ ಪೋನ್ ಮಾಡಿ ಶುಭಾಶಯ ಹೇಳಬೇಕೆನಿಸಿ ಪೋನ್ ಮಾಡಿದರೆ ರಿಂಗಾಯ್ತು. ರಿಂಗ್‌ಟೋನ್: ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ….’

“ಹಲೋ ಯಾರು?”

“ನಾನು ಸಾರ್ ಪತ್ರಕರ್ತ ಯಾಹು ಅಂತ.”

“ಯಾವೂ ಅಂದ್ರೆ ಯಾರು?”

“ನಿಮ್ಮತ್ರ ಈ ಹಿಂದೆ ಒಬ್ಬ ವಕೀಲ, ಮತ್ತೊಬ್ಬ ಪತ್ರಕರ್ತ ಕಂ ಪ್ರೊಫೆಸರ್ ಇದ್ರಲ್ಲ ಸಾರ್ ಅವರ ಆತ್ಮೀಯ ಗೆಳೆಯ ಸಾರ್.”

“ಭಾಳ ಒಳ್ಳೆದು. ಏನು ಹೇಳಿ ಇವರೆ.”

“ನಿಮ್ಮನ್ನ ಅಭಿನಂದಿಸೋದಕ್ಕೆ ಪೋನ್ ಮಾಡಿದೆ ಸಾರ್. ಅಂತೂ ನಮ್ಮ ಕರ್ನಾಟಕ್ಕೆ ಇಂತದೊಂದು ಪಾರ್ಟಿ ಬೇಕಿತ್ತು ಸಾರ್.”

“ಅದಕ್ಕಾಗಿ ನಾನು ಪಾರ್ಟಿ ಸ್ಥಾಪನೆ ಮಾಡಿದೆ, ಯಾಕಂದ್ರೆ ಕಲ್ಯಾಣ ಕರ್ನಾಟಕ ಅಂತ ಹೇಳಿ ಬರೀ ನಾಮಕರಣ ಮಾಡಿದ್ರು, ಆದ್ರೆ ಅಭಿವೃದ್ಧಿ ಕೆಲಸಗಳು ಏನೂ ಆಗಿಲ್ಲ.”

“ನಿಜ ಸಾರ್ ಶ್ರೀಕೃಷ್ಣದೇವರಾಯನ ಕಾಲದಿಂದ್ಲೂ ಆಭಿವೃದ್ಧಿ ಆಗಲಿಲ್ಲ. ಕಡೆಗೆ ನಮ್ಮ ಸಂಪತ್ತನ್ನೆಲ್ಲಾ ತುಂಬಿಕೊಂಡು ಆಂಧ್ರಕ್ಕೋದ್ರು.”

“ನಾನು ಕಲ್ಯಾಣ ಕರ್ನಾಟಕನ ಅಷ್ಟೇ ಅಭಿವೃದ್ಧಿ ಮಾಡಲ್ಲ, ಇಡೀ ಕರ್ನಾಟಕನ ಅಭಿವೃದ್ಧಿ ಮಾಡತಕ್ಕಂತ ಕಾರ್ಯಕ್ರಮ ತಯಾರು ಮಾಡಿದ್ದಿನಿ.”

“ಆ ಅಭಿವೃದ್ಧಿಲಿ ಗಣಿ ಗುಡ್ಡಗಳು ಇವೆಯಾ ಸಾರ್?”

“ಇಲ್ಲ, ಜನರ ಮೂಲಭೂತ ಸಮಸ್ಯೆಗಳಿವೆ.”

“ಜನರ ಸಮಸ್ಯೆ ನಿವಾರಿಸಕ್ಕೆ ಹಣ ಬೇಕಲ್ಲವ ಸಾರ್. ಅದನ್ನ ಎಲ್ಲಿಂದ ತರ್ತಿರಿ? ಕೇಂದ್ರ ಸರಕಾರ ಹಣಕೊಡಲಿಲ್ಲ ಅಂದರೆ ಯಂಗೆ ಮಾಡ್ತಿರಿ?”

“ನಾನು ಹ್ಯಾಗೊ ಮಾಡ್ತಿನಿ. ಮೊದಲಿಂದ ನಾನು ನನ್ನ ಗುರಿಲಿ ಸೋತವನಲ್ಲ, ಈಗಲೂ ಸೋಲಲ್ಲ.”

“ಸೋಲಬೇಡಿ ಸಾರ್.. ವಿಧಾನಸೌಧದ ವರಾಂಡದಲ್ಲಿ ನಿಮ್ಮ ಗ್ರೀನ್ ಕಲರ್ ರೋಲ್ಸ್‌ರಾಯ್ ಕಾರ್ ನಿಂತಿರದ್ದನ್ನ ನೋಡಕ್ಕೆ ನನ್ನ ಕಣ್ಣಿಗೆ ಹಬ್ಬ ಸಾರ್.”

“ನಾನು ನನ್ನ ರೋಲ್ಸ್‌ರಾಯ್ ಕಾರಲ್ಲಿ ಬಂದೇ ಬರ್ತಿನಿ ಯಾಹೂ.”

“ನಿಮ್ಮಂತವರ ಕಾರ್ಯಕ್ಷೇತ್ರದ ತಾಣದಂಗಿದ್ದ ಬಿಜೆಪಿ ಯಾಕೆ ಬಿಟ್ರಿ ಸಾರ್?”

“ಬಿಜೆಪಿ ಇವತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ರೆ ಅದು ನನ್ನಿಂದ. ಮೊದಲು ಕುಮಾರಸ್ವಾಮಿಗೆ ಏನು ಬೇಕೋ ಅದನ್ನ ಕೊಟ್ಟು ಅಧಿಕಾರದಲ್ಲಿ ಪಾಲು ಪಡೆದೆವು. ನಂತರ ಬಹುಮತ ಬರದೇ ಹೋದಾಗ ಶಾಸಕರಿಗೆ ಏನು ಬೇಕೋ ಅದು ಕೊಟ್ಟು, ಅವರಿಂದ ರಾಜಿನಾಮೆ ಕೊಡಿಸಿ ಚುನಾವಣೆ ಮಾಡಿ ಎಡೂರಪ್ಪನ್ನ ಮುಖ್ಯಮಂತ್ರಿ ಮಾಡಿದ್ದು ನಾವು. ಅದಕ್ಕಾಗಿ ನಾವು ಗಣಿಯಿಂದ ಬಂದ ಹಣವನ್ನು ಖರ್ಚು ಮಾಡಿದೆವು.”

“ಆ ನಂತರ ಸರಕಾರ ಬಂದಾಗ ಅಕ್ರಮ ಮಾಡಿ ಹಣ ಮಾಡಿಕಂಡ್ರಲ್ಲ ಸಾರ್. ಗಣಿ ಹಣನ ರಾಜಕಾರಣಕ್ಕೆ ಹಾಕಿದ್ರಿ. ಪವರ್ರಿಗೆ ಬಂದಾಗ ಗೋರಿ ಕಂಡ್ರಿ..”

“ಅದು ಸರಿ, ಪರಿಣಾಮಗಳನ್ನ ಅನುಭವಿಸಿದವರು ನಾವು, ಜೈಲಿಗೆ ಹೋಗಿದ್ದು ನಾನು, ನಮ್ಮ ತಾಯಿ ಸಮಾನರಾಗಿದ್ದ ಸುಷ್ಮಸ್ವರಾಜ್ ಕೂಡ ಅವುರ್ಯಾರೊ ನನಿಗೆ ಗೊತ್ತೆಯಿಲ್ಲ ಅಂದುಬುಟ್ರು. ಇನ್ನ ತಂದೆ ಸಮಾನರಾದ ಎಡೂರಪ್ಪನೂ ನಮ್ಮ ಸಹಾಯಕ್ಕೆ ಬರಲಿಲ್ಲ..”

“ಬರಲಿಲ್ಲ ಅಂದ್ರೆ ಅವರಿಗೂ ನಿಮ್ಮ ಮೇಲೆ ಸಿಟ್ಟಿತ್ತಲ್ಲ ಸಾರ್. ಅವರ ಆತ್ಮೀಯರಾಗಿದ್ದ ಶೋಭ ಕರಂದ್ಲಾಜೆಯವರ್ನ ಸಂಪುಟದಿಂದ ತಗಿಬೇಕು ಅಂದ್ರಿ, ತಗದ್ರು. ಇನ್ನ ನಿಮ್ಮನ್ನ ವಿಚಾರಿಸಿಗಳಕ್ಕೆ ಅಂತ ಕಳಿಸಿದ್ದ ಡಿ.ಸಿನ ಕೂಡಲೇ ವರ್ಗಮಾಡಿ ಅಂದಾಗ ಮಾಡಿದ್ರು. ಒಂದೇ ವಾರಕ್ಕೆ ಎಸ್ಪಿ ಡಿ.ಸಿ ವರ್ಗ ಮಾಡಿಸಿದ್ದು ನೀವೇ ಇರಬೇಕು.”

“ಯಾರು ಸರಕಾರವನ್ನ ತಂದ್ರೋ ಅವರಿಗೇ ಕಿರುಕುಳ ಕೊಡೋ ಅಧಿಕಾರಿಗಳನ್ನ ಹಾಕಿದ್ರೆ ಸುಮ್ಮನಿರಬೇಕಾಗುತ್ತ?”

“ಆಗಲ್ಲ ಸಾರ್. ನೀವು ಬಿಜೆಪಿ ಅನ್ನೋ ಪಾರ್ಟಿನ ಅರ್ಥಮಾಡಿಕೊಬೇಕಾಗಿತ್ತು. ಅವರ ಮೋಸದ ಇತಿಹಾಸ ದೊಡ್ಡದಿದೆ.”

“ನಂಬಿದವರ ಕತ್ತು ಕುಯ್ಯತರೆ ಅಂತ ಗೊತ್ತಿರಲಿಲ್ಲ ಕಂಡ್ರಿ.”

“ಕತ್ತು ಕುಯ್ಯಲ್ಲ ಸಾರ್ ಅವುರು. ನೀವೇ ಪಾಷಣ ತಿಂದು ಸಾಯಂಗೆ ಮಾಡ್ತರೆ. ಇದೇ ಎಡೂರಪ್ಪ ಜೈಲಿಗೋಗಿದ್ದಾಗ ಬೆಂಗಳೂರಿಗೆ ಅಡ್ವಾನಿ ಬಂದಿದ್ರು. ಎಡೂರಪ್ಪನ್ನ ನೋಡಕ್ಕೆ ಹೋಗಿದ್ರಾ? ಅದೇ ಅಡ್ವಾನಿ ಈಗೆಲ್ಯವುರೆ, ಬಾಬರಿ ಮಸೀದಿ ಕೆಡಹಿದ ಕಲ್ಯಾಣಸಿಂಗ ಏನಾದ್ರು, ಹುಬ್ಬಳಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಿದ ಉಮಾಭಾರತಿ ಏನಾದ್ರು, ಶಿವಸೇನೆ ಏನಾಗಿದೆ, ಗೋವಾ ಕತೆ ಏನಾಗಿದೆ. ಕುತಂತ್ರದಿಂದ್ಲೆ ಪಾರ್ಟಿ ಕಟ್ಟಿ ಆಡಳಿತ ಮಾಡದು ಅವರ ಹುಟ್ಟುಗುಣ. ನೀವು ನಿಮ್ಮ ಬಗ್ಗೆ ಯೋಚನೆ ಮಾಡಿದ್ರೆ ಇಷ್ಟೊಂದು ಗಣಿ ಲೂಟಿ ಮಾಡೋ ಅಗತ್ಯ ಇರಲಿಲ್ಲ ಅಲ್ಲವ ಸಾರ್?”

“ಹೌದು, ಇವರಿಗೋಸ್ಕರ ಜಾಸ್ತಿ ಮಾಡಬೇಕಾಯ್ತು.”

“ಗಣಿಕಳ್ರು ಅಂತ ಹೆಸರು ಪಡದೋರು ನೀವು. ಅಧಿಕಾರ ಮಾಡ್ತ ಸರಕಾರನೆ ಕೊಳ್ಳೆ ಹೊಡಿತಾಯಿರೋರು ಅವುರು.”

“ಅದಕೆ ನಾನು ಅವರನ್ನ ಸುಮ್ಮನೆ ಬಿಡಬಾರ್ದು ಅಂತ ಕಲ್ಯಾಣ ಪ್ರಗತಿ ಪಕ್ಷ ಮಾಡಿದ್ದಿನಿ.”

“ಪ್ರಾದೇಶಿಕ ಪಕ್ಷ ಮಾಡಿದೋರ್ಯಾರು ಸಕ್ಸಸ್ ಆಗಿಲವಂತಲ್ಲಾ ಸಾರ್?”

“ಆಗಿಲ್ಲ ಅನ್ನದನ್ನ ನಾನು ಕೂಡ ಗಮನಿಸಿದ್ದೀನಿ. ಮಾನ್ಯ ಎಡೂರಪ್ಪನವರು ಮಾಡಿದ್ರು ಬಿಜೆಪಿನ ಅಧಿಕಾರದಿಂದ ದೂರ ಇಟ್ಟರು. ಆ ನಂತರ ಬಿಜೆಪಿಯವರೇ ಕರದು ಅಧಿಕಾರವನ್ನ ಕೊಟ್ರು. ನಾನು ಕೂಡ ಹಾಗೇ ಮಾಡ್ತಿನಿ ನೋಡಿ.”

“ವಿಜಯನಗರ ಸಾಮ್ರಾಜ್ಯ ಆಳಿದೋರು ತೆಲುಗರಂತೆ! ಅವರ ನಂತರ ನೀವೇನಾದ್ರು ಪವರ್ರಿಗೆ ಬಂದ್ರೆ ಮತ್ತೆ ಕಲ್ಯಾಣ ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಆಗುತ್ತಲ್ಲ ಸಾರ್?”

“ಈಗಲೂ ಕಲ್ಯಾಣ ಕರ್ನಾಟಕ ತೆಲುಗರದ್ದೇ ಆಗಿದೆ ಕಂಡ್ರಿ. ಇಲ್ಲಿನ ಜಿಲ್ಲಾಪಂಚಾಯ್ತಿ ಸದಸ್ಯರು, ಗ್ರಾಮಪಂಚಾಯ್ತಿ ಸದಸ್ಯರು, ಎಮ್ಮೆಲ್ಲೆ, ಮಂತ್ರಿಗಳೆಲ್ಲಾ ತೆಲುಗು ಭಾಷಿಕರು. ಅವರಿಗೊಬ್ಬ ಲೀಡರು ಬೇಕು ಆ ಕೊರತೆಯನ್ನ ನಾನು ತುಂಬತೀನಿ.”

“ಮತ್ತೆ ಸಮಗ್ರ ಕರ್ನಾಟಕದ ಮಾತನಾಡ್ತಿರಿ?”

“ಅದು ಕೂಡ ನಿಜ. ಇಡೀ ಕರ್ನಾಟಕ ಅಭಿವೃದ್ಧಿ ನಮ್ಮ ಕನಸು.”

“ನಿಮ್ಮ ಕನಸು ನನಸಾಗದಕ್ಕೆ ಕರ್ನಾಟಕ ಕಾಯ್ತಯಿದೆ ಸಾರ್, ನೀವು ನಿಮ್ಮ ಕಾರ್ಯಕ್ಷೇತ್ರನ ಎಲ್ಲಾ ಜಿಲ್ಲೆಗೂ ವಿಸ್ತರಿಸಿಕೊಳ್ಳೊದಾದ್ರೆ ನಿಧಿ ತರದ ಗುಡ್ಡಗಳು ನಿಂತಿವೆ, ಕನಕಪುರದ ಕಡೆ ಗ್ರಾನೈಟ್ ಬೆಟ್ಟಗಳಿವೆ, ಇನ್ನ ಪಾಂಡವಪುರದ ಕಡೆ ಪುಟ್ಟರಾಜನ ಬೆಟ್ಟಗಳಿವೆ, ಚಿಕ್ಕಮಗಳೂರಿಗೆ ಬಂದ್ರೆ ಗಣಿ ಗಿರಿಗಳ ಸಾಲೇಯಿದೆ, ಶಿವಮೊಗ್ಗದ ಕಡೆ ಕುಂದಾದ್ರಿ ಕೊಡಚಾದ್ರಿ ಬೆಟ್ಟಗಳಿವೆ. ಇನ್ನ ನಿಮ್ಮಲ್ಲೇ ಕಪ್ಪತ್ತ ಗುಡ್ಡ ಸಾಲಿದೆ. ನೀವು ಯಾವುದೇ ಜಿಲ್ಲೆಗೋದ್ರು ಗಣಿಗುಡ್ಡಗಳಿವೆ ಸಾರ್. ಅವನ್ನೆಲ್ಲಾ ನೆಲಸಮ ಮಾಡಿ ಕಲ್ಯಾಣ ರಾಜ್ಯದ ಕೃಷ್ಣದೇವರಾಯನ ಕಾಲ ಮಾಡಬಹುದು. ನಿಮ್ಮ ಖಾಸಗಿ ದರ್ಬಾರಿನಲ್ಲಿರೊ ಕುರ್ಚಿ ಮೇಲೆ ತಿರುಪತಿ ತಿಮ್ಮಪ್ಪನಿಗೆ ಮಾಡಿಸಿ ಕೊಟ್ಟಂತ ಕಿರೀಟ ಧರಿಸಿ ಕೂತಗಬಹುದು. ಆಗ ಬಿಜೆಪಿ ಕಣ್ಣು ತಪ್ಪಿಸಿ ರಾಮುಲು ಬರ್ತರೆ.”

“ರಾಮುಲು ಬಂದ್ರೆ ಅವರನ್ನೆ ಮುಖ್ಯಮಂತ್ರಿ ಮಾಡ್ತಿನಿ.”

“ನೀವು?”

“ನಾನು ಉಪಮುಖ್ಯಮಂತ್ರಿ ಮತ್ತೆ ಗಣಿಕಾತೆ ತಗೊತಿನಿ.”

ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...