Homeಅಂಕಣಗಳುಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

ಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣವಚನ ತೆಗೆದುಕೊಂಡ ಸಿದ್ದು ಅವರ ಲಕ್ಕಿನಲ್ಲಿ ಎಡೂರಪ್ಪನವರ ಪಾಲು ಪ್ರಧಾನವಾಗಿದೆಯಂತಲ್ಲಾ. ಮೊದಲು ಸಿದ್ದು ಮುಖ್ಯಮಂತ್ರಿಯಾಗಬೇಕಾದರೆ, ಎಡೂರಪ್ಪ ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಮಾಡಿ ಚುನಾವಣೆಗಿಳಿದು ಬಿಜೆಪಿಯನ್ನು ಕೇವಲ ನಲವತ್ತು ಸೀಟಿಗೆ ಇಳಿಸಿದ್ದು ಕಾರಣವಾದರೆ, ಈ ಸಾರ್ತಿಗೆ, ದಾರಿ ಇನ್ನು ಇರುವಾಗಲೇ ಮಾರ್ಗಮಧ್ಯದಲ್ಲಿ ಯಡ್ಡಿಯವರನ್ನು ಇಳಿಸಿ ಕಣ್ಣೀರು ತರಿಸಿದ್ದರ ಜೊತೆಗೆ, ಬಿಜೆಪಿಯಲ್ಲಿದ್ದರೂ ಬಾಯಿ ಸ್ವಚ್ಛವಾಗಿಟ್ಟುಕೊಂಡಿದ್ದ ಜಗದೀಶ್ ಶೆಟ್ಟರ್ ಅವರಿಗೆ ಮಾಡಿದ ಅವಮಾನವೂ ಕಾರಣವಾಗಿದೆಯಂತಲ್ಲಾ. ಆದರೆ ಬುದ್ಧಿವಂತ ಸಿದ್ದು ಅವರು ಯಡ್ಡಿಯವರ ದೆಸೆಯಿಂದ ತಮ್ಮ ದೆಸೆ ಕುದುರಿದ್ದದನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಮನದೊಳಗೇ ಒಂದು ಕೃತಜ್ಞತೆಯಿದೆ. ಅದೇ ಕಾರಣಕ್ಕೆ ಏನೋ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನಗೌಡನಿಗೆ ಟಿಕೆಟ್ ತಪ್ಪಿಸಿ ಗೋಣಿಮಾಲತೇಶರನ್ನ ಕ್ಯಾಂಡಿಡೇಟ್ ಮಾಡಿ, ಎಡೂರಪ್ಪನವರ ಮಗನಿಗೆ ಸಹಾಯ ಮಾಡಿದ್ದಾರೆಂದು ಜನರು ಹೇಳುತ್ತಿದ್ದಾರಂತಲ್ಲಾ. ಇದರಲ್ಲಿ ಡಿ.ಕೆ.ಶಿ ಕೈವಾಡವನ್ನು ಅಲ್ಲಗಳೆಯಲಾಗುತ್ತಿಲ್ಲವಲ್ಲಾ, ಥೂತ್ತೇರಿ.

*******

ಪಂಚರತ್ನ ಮುಂದಿಟ್ಟುಕೊಂಡು ಇಡೀ ಕರ್ನಾಟಕವನ್ನು ಸುತ್ತಿ ಬಂದ ಕುಮಾರಣ್ಣನ ಪಾರ್ಟಿ ವಿಧಾನಸಭೆಯಲ್ಲಿ ನಿಗದಿತ ಸಂಖ್ಯೆಯ ಮಾನ್ಯತೆ ಕಳೆದುಕೊಂಡು ತನ್ನ ಕುಮಾರಣ್ಣನ ಪಕ್ಷ ವಿಸರ್ಜನೆ ಘೋಷಣೆಗೆ ಕಾಯುತ್ತಿದೆಯಂತಲ್ಲಾ. ಹಾಗೇ ನೋಡಿದರೆ ಬಿಜೆಪಿಯಂತೆ ದಳ ಕೂಡ ಎಂದೂ ಮೆಜಾರಿಟಿ ಪಡೆಯದ ಪಾರ್ಟಿ; ಇದು ಗೊತ್ತಿದ್ದರಿಂದಲೇ ಕುಮಾರಣ್ಣ ನನ್ನ ಪಾರ್ಟಿಗೆ ಬಹುಮತ ಬರದಿದ್ದರೆ ವಿಸರ್ಜಿಸುತ್ತೇನೆ ಎಂದಿದ್ದು ಸಾಮಾಜಿಕ ಮಾಧ್ಯಮಗಳ ಲ್ಲಿ ಹರಿದಾಡಿತ್ತು. ಹಾಗೆ ನೋಡಿದರೆ ಕುಮಾರಣ್ಣನ ಪಾರ್ಟಿ ತನಗೆ ತಾನೇ ವಿಸರ್ಜಿಸಿಕೊಳ್ಳುತ್ತ ಹೊರಟು ಶಾನೆ ವರ್ಷವಾಯ್ತು. ಮೊದಲಿಗೆ ಜಿ.ಟಿ.ದೇವೇಗೌಡರು ಹೊರನಡೆದು ಕಾಂಗ್ರೆಸ್ ಮನೆಯ ಬಾಗಿಲಿಗೆ ಹೋಗಿ ಮತ್ತೆ ವಾಪಸ್ ಬಂದರು; ನಂತರ ಹಲವಾರು ಜನ ಹೊರನಡೆದೇಬಿಟ್ಟರು. ಪಾರ್ಟಿ ಅಧ್ಯಕ್ಷನಾದವನು ಜವಾಬ್ದಾರಿಯಿಂದ ನಡೆದುಕೊಂಡು, ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅಸಮಾಧಾನಗೊಂಡವರನ್ನ ಸಾಂತ್ವನಗೊಳಿಸುತ್ತ ಸಣ್ಣತನಗಳನ್ನು ಮೀರುತ್ತ ಪಾರ್ಟಿ ಕಾರ್ಯಕರ್ತರ ರಕ್ಷಕನಾಗಿರಬೇಕು. ಮುಖಂಡನಲ್ಲಿ ಈ ಗುಣಗಳಿಲ್ಲದಿದ್ದರೆ ಹಿಂಬಾಲಕರು ಒಂದೊಂದು ಹಂತದಲ್ಲಿ ಖಾಲಿಯಾಗುತ್ತಾರೆ. ಕುಮಾರಣ್ಣನ ಪಂಚರತ್ನಕ್ಕಿಂತ ಪಾರ್ಟಿ ಮುಖಂಡರು ಮುಖ್ಯವಾಗಬೇಕಿತ್ತು. ಐದು ವರ್ಷ ದುರಾಡಳಿತ ನಡೆಸಿದವರನ್ನು ಬಿಟ್ಟು ಕಾಂಗ್ರೆಸ್ ಟೀಕಿಸುವುದು ಮುಖ್ಯವಾಗಬಾರದಿತ್ತು. ನಿಜಕ್ಕೂ ದಳದಂತಹ ಪಾರ್ಟಿ ಇರಬೇಕು. ಅದು ಇದ್ದು ಬಿಜೆಪಿಯನ್ನ ಕಾಂಗ್ರೆಸ್ಸನ್ನ ನಿಯಂತ್ರಿಸಬೇಕು. ಆ ಎರಡೂ ಪಾರ್ಟಿಗಳಿಗಿಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆಯಲ್ಲಾ, ಇದು ಸಾಧ್ಯವೇ ಥೂತ್ತೇರಿ.

*****

ಕರ್ನಾಟಕದ ಜನಸ್ತೋಮಕ್ಕೆ ಬೇಕಿದ್ದ ಒಂದು ಚುನಾವಣಾ ಸೋಲು ಕಡೆಗೂ ಸಂಭವಿಸಿ ಜನ ನಿಟ್ಟುಸಿರುಬಿಟ್ಟರಂತಲ್ಲಾ. ಜನಕ್ಕೆ ಬೇಕಿದ್ದ ಆ ಸೋತ ವ್ಯಕ್ತಿ ಸಿ.ಟಿ ರವಿ. ತನ್ನ ಸೋಲನ್ನು ಇನ್ನೂ ನಂಬದ ಸಿ.ಟಿ ರವಿಯವರನ್ನು ಮಾತನಾಡಿಸಿ ಒಂದಿಷ್ಟು ಮನರಂಜನೆ ತೆಗೆದುಕೊಳ್ಳಲು ಫೋನ್ ಮಾಡಿದರೆ, ರಿಂಗಾಯ್ತು. ರಿಂಗ್‌ಟೋನ್: ’ನಮಸ್ತೆ ಸದಾ ವತ್ಸಲೇ ಮಾತೃಭೂಮಿ..’.

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಅಂದ್ರೆ ಯಾರ್ರಿ?”

“ಇದೇನ್ ಸಾರ್ ಹಿಂಗ್ ಕೇಳ್ತಿರಿ? ನೀವೆ ಒಂದು ಸತಿ ಕಲಾಮಂದಿದರಲ್ಲಿ ಸನ್ಮಾನ ಮಾಡಿದ್ರಿ..”

“ಆಗ್ಲೆ ಇಪ್ಪತ್ತು ವರ್ಷ ಆಯ್ತಲ್ರೀ?”

“ಹೌದು ಸಾರ್, ಆಗ ನೀವು ವಳ್ಳೆಯವರಾಗಿದ್ರಿ.”

“ಆಗ ಒಳ್ಳೆಯವನಾಗಿದ್ದೆ ಅಂದ್ರೆ ಈಗ ಕೆಟ್ಟೊಗಿದ್ದಿನಾ?”

“ಹೌದು ಸಾರ್, ನೀವು ಈಗ ಒಳ್ಳೆಯವರಾಗಿದ್ರೆ, ಚಿಕ್ಕಮಗಳೂರಿನ ನೀರಿನ ವಿಷಯ ಮಾತಾಡಿ, ಕರಗಡದ ಸಮಸ್ಯೆ ಬಗೆಹರಸತಿದ್ರಿ. ಅದುಬಿಟ್ಟು ಬಾಬಾ ಬುಡನ್‌ಗಿರಿ ಹಿಡಕಂಡ್ರಿ.”

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

“ಬಾಬಾ ಬುಡನ್‌ಗಿರಿ ಹಿಡಕೊಂಡು ದತ್ತಪೀಠ ಮಾಡಿದ್ಕೆ ನಾನು ನಾಲ್ಕು ಸಾರಿ ಗೆದ್ದದ್ದು.”

“ಈಗ್ಯಾಕೆ ಸೋತ್ರಿ ಸಾರ್?”

“ನಮ್ಮವರೆ ವಿಶ್ವಾಸ ದ್ರೋಹ ಮಾಡಿದ್ರು?”

“ನೀವು ವಿಶ್ವಾಸ ಕಳಕೊಂಡ ಮ್ಯಾಲೆ ಅವುರು ದ್ರೋಹ ಮಾಡದು ಸಹಜ ಅಲ್ಲವಾ?”

“ನಾನು ಯಾರ ವಿಶ್ವಾಸವನ್ನು ಕಳಕೊಂಡಿಲ್ಲ. ಸಮರ್ಥ ರೀತಿಲಿ ಆಡಳಿತ ಮಾಡಿದ್ದಿವಿ. ನಮ್ಮದು ಒಳ್ಳೆ ಸರಕಾರ ಗೊತ್ತ?”

“ನನಿಗಾಗೊ ಆಶ್ಚರ್ಯ ಯಾವುದು ಅಂದ್ರೆ ಸಾರ್.. ನಿಮ್ಮ ಸರಕಾರ ಸಮಾಜಘಾತುಕ ಶಕ್ತಿತರ ಕೆಲಸ ಮಾಡ್ತು. ಅದೆಲ್ಲ ನಿಮಗೆ ಒಳ್ಳೆದಾಗಿ ಕಾಣ್ತದಲ್ಲಾ ಅದೇ ದುರಂತ. ಒಂದು ತಪ್ಪು ತಪ್ಪಾಗಿ ಕಾಣದೆ ನಿಮಗೆಲ್ಲ ಸರಿಯಾಗಿ ಕಾಣ್ತದೆ ಅಂದ್ರೆ ಒಂದು ಪಾರ್ಟಿ ಜನಕ್ಕೆ ಏನೋ ಆಗಿ ಕಾಣ್ಸಿದೆ ಅನ್ಸುತ್ತೆ ಸಾರ್.”

“ನಮಗೇನೂ ಆಗಿಲ್ಲ, ನಿಮ್ಮ ಪೂರ್ವಗ್ರಹನ ಸರಿಮಾಡಿಕಳಿ.”

“ನಿಮ್ಮ ಬಗ್ಗೆ ಯಾವ ಪೂರ್ವಗ್ರಹದ ಅಗತ್ಯ ಇಲ್ಲ. ಸಾರ್ ನಿಮ್ಮ ಪಾರ್ಟಿ ಕೃತ್ಯಗಳೇ ಅಂಗಿದ್ದೊ.”

“ನಾವು ಕಾಂಗ್ರೆಸ್ಸಿಗರಿಗಿಂತ ಒಳ್ಳೆ ಆಡಳಿತ ಕೊಟ್ಟಿದ್ದಿವಿ.”

“ನಿಜ ಸಾರ್, ಆ ಕಾಂಗ್ರೆಸ್‌ನವು ಎಂದೂ ನಲವತ್ತು ಪರಸೆಂಟ್ ತಗೊಂಡಿರಲಿಲ್ಲ, ಆ ಕಾರಣಕ್ಕೆ ಯಾವ ಮಂತ್ರಿನೂ ರಾಜಿನಾಮೆ ಕೊಟ್ಟು ಟಿಕೆಟ್ ಇಲ್ದೆ ಮನಿಗೋಗಿರಲಿಲ್ಲ. ಸಿಕ್ಕಿದ್ದೆ ಅವಕಾಶ ಅಂತ ಪಠ್ಯಪುಸ್ತಕ ತಿದ್ದಿ ಪುರೋಹಿತರ ಅಜೆಂಡ ಸೇರಿಸಿರಲಿಲ್ಲ. ಕುವೆಂಪುಗೆ ಅವಮಾನ ಮಾಡಿದಾಗ್ಲು ನೀವು ಸುಮ್ಮನಿದ್ರಿ. ಆಡತಯಿದ್ದ ನಾಟಕ ನಿಲ್ಲಿಸಿದ್ರಿ, ಟಿಪ್ಪುವನ್ನ ವಿಕೃತವಾಗಿ ಚಿತ್ರಿಸಿ ನಾಟಕ ಆಡಿದ್ರಿ, ಅದನ್ನ ಟೀಕೆ ಮಾಡಿದ ಸಿದ್ದರಾಮಯ್ಯನವರನ್ನ “ಸಿದ್ರಾಮುಲ್ಲಖಾನ್” ಅಂತ ಕರದ್ರಿ. ಮಹಿಳೆಯರ ಬಗ್ಗೆ ನಿಮ್ಮಲ್ಲಿ ಎಂಥ ಬಾವುನೆ ಅದೆ ಅನ್ನದ ಹೇಳೋದೆ ಬೇಕಿಲ್ಲ. ಸೋಮಣ್ಣ ಪಾಪ ಬಡ ಹೆಂಗಸಿಗೆ ಸಾರ್ವಜನಿಕವಾಗಿ ಹೊಡೆದು, ಆಮೇಲೆ ಆ ಹೆಂಗಸಿಗೆ ದುಡ್ಡುಕೊಟ್ಟರು. ಸೋಮಣ್ಣ ಹೊಡಿಲಿಲ್ಲ, ತಮಾಸಿಗೆ ಭುಜ ತಟ್ಟಿದ್ದು ಅಂತ ಹೇಳಿಸಿದ್ರಿ. ನಿಮ್ಮ ಇಡೀ ಪಾರ್ಟಿ ಜನ ಒಂದೇ ಒಂದು ಒಳ್ಳೆ ಮಾತಾಡಲಿಲ್ಲ. ನಿಮ್ಮ ಸರಕಾರ ಒಂದೇ ಒಂದು ಜನ ಮೆಚ್ಚುವ ಕೆಲಸ ಮಾಡಲಿಲ್ಲ. ಜಾತಿ ಜಗಳ ಮಾಡಿಸಿದ್ರಿ. ಮುಸಲ್ಮಾನರ ಮೇಲೆ ಬಿದ್ದು ಗಲಭೆ ಮಾಡಿಸಿದ್ರಿ. ಸುಳ್ಳು ಕೇಸಾಕ್ಸಿದ್ರಿ. ಇಡೀ ನಾಡೆ ಒಂದು ಅವ್ಯಕ್ತ ಭಯದಲ್ಲಿ ಕ್ಷೆಭೆಗೊಳಗಾಗಿತ್ತು. ನಿಮ್ಮಂಥ ಜವಾಬ್ದಾರಿಯಿರೊ ಯುವ ನಾಯಕರು ಪುರೋಹಿತಶಾಹಿಗಳ ಗುಲಾಮರಾಗಿದ್ರಿ. ಬಹಳ ವಿಶಾಲವಾದ ಮನಸ್ಸಿನ ಪರಂಪರೆಯಿಂದ ಬಂದ ನಿಮಗೆ ಆರೆಸ್ಸೆಸ್ ಆಶ್ರಯದ ಅಗತ್ಯ ಇರಲಿಲ್ಲ. ಚಿಕ್ಕಮಗಳೂರು ಬ್ರಿಟಿಷರು ಕೂಡ ಮೆಚ್ಚಿದ ಸುಂದರ ನಾಡು. ಅಲ್ಲಿ ಇಂಗ್ಲೆಂಡಿನಿಂದ, ಜರ್ಮನಿಯಿಂದ ಬಂದು ತೋಟ ಮಾಡಿದೋರವುರೆ, ಮದ್ರಾಸಿನಿಂದ ಬಂದು ತೋಟ ಮಾಡಿದೋರವುರೆ. ಹಿಂಗೆ ಜಗತ್ತಿಗೇ ತೆರೆಕೊಂಡ ಚಿಕ್ಕಮಗಳೂರಿಗೆ ಪುರೋಹಿತಶಾಹಿ ತರಹ ಮಾತನಾಡೊ ರಾಜಕಾರಣಿ ಬೇಕಿಲ್ಲ ಅಂತ ಜನಕ್ಕೆ ಅನ್ನಿಸಿ ನಿಮ್ಮನ್ನ ಸೋಲಿಸಿದ್ರು ಸಾರ್. ನಿಮ್ಮ ಸೋಲಿನ ಕಾರಣಗಳು ಯಾವ ಕಾರಣಕ್ಕೂ ನಿಮಗೆ ಹೊಳಿಯಲ್ಲ. ಯಾಕೆ ಅಂದ್ರೆ ನಿಮ್ಮ ಕಣ್ಣಿಗೆ ಪೊರೆಯಾಗಿವೆ. ನೀವು ಇನ್ನೊಂದು ದಾಖಲೆ ಮಾಡಿದ್ದೀರಿ ಸಾರ್. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕುಳಿ ವಿಠ್ಠಲ ಹೆಗಡೆಯವರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡ್ತು. ಆತ ಸಾಮಾನ್ಯ ವ್ಯಕ್ತಿಯೇನಲ್ಲ. ಆತ ಬರದಿರೊ ’ಮಂಗನಬ್ಯಾಟೆ’ಗೆ ಅಕಾಡೆಮಿ ಅವಾರ್ಡು ಬಂದಿದೆ. ಹೆಗಡೆ ನಿಮಗಾಗಲ್ಲ ಅಂತ ಹೇಳಿ ಸಾಹಿತ್ಯ ಸಮ್ಮೇಳನ ನ್ಯಡಿದಂಗೆ ಮಾಡಿದ್ರಿ. ಸಮ್ಮೇಳನದ ಜಾಗಕ್ಕೆ ಭಜರಂಗಿಗಳು ಬಂದು ಬಾಯಿ ಹರಕೊಂಡು ಸಮ್ಮೇಳನ ನಿಲ್ಲಿಸಿದ್ರು. ಇದು ಇತಿಹಾಸದಲ್ಲಿ ದಾಖಲಾದ ಅಭಿವ್ಯಕ್ತಿ ಸ್ವಾತಂತ್ರ ಹರಣದ ಘಟನೆ. ಕನ್ನಡ ಸಾಹಿತ್ಯಕ್ಕೆ ನೀವು ಮಾಡಿದ ಅವಮಾನ. ಭುವನೇಶ್ವರಿಗೆ ಮಾಡಿದ ದ್ರೋಹ. ದೂರದ ಊರುಗಳಿಂದ ಬಂದ ಸಾಹಿತಿಗಳು ನಿಮ್ಮನ್ನ ನಿಂದಿಸುತ್ತಾ ಇದೊಂದು ಅನಾಗರಿಕ ನಡೆ, ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ, ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸಿದವರಿಗೆ ಮಾಡಿದ ಅವಮಾನ, ಇದೇ ಜಿಲ್ಲೆಯ ಹಿರೇಕೂಡಿಗೆಯಲ್ಲಿ ಹುಟ್ಟಿದ ಕುವೆಂಪುಗೆ ಮಾಡಿದ ಅವಮಾನ ಅಂತ ಬೈಕಂಡೋದ್ರು ಸಾರ್. ಮಾತಾಡಿ ಸಾರ್ ಹೇಳಿ ಏನಾರ. ಹಲೋ. ಹಲೋ. ಹಲೋ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...