Homeಅಂಕಣಗಳುಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು

- Advertisement -
- Advertisement -

| ಯಾಹೂ |

ಬಿಜೆಪಿ ಗಳಿಸಿದ ಬಹುಮತಕ್ಕೆ ದೇಶದ ಬುದ್ದಿಜೀವಿಗಳು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯ ಪ್ರಜೆ ತನ್ನ ಕೆಲಸ ಮುಗಿಸಿದಂತೆ ಸಮಾಧಾನದಿಂದಿದ್ದಾನೆ. ಆದರೆ ಚೆಡ್ಡಿಗಳ ತುರಿಕೆ ಚೇಷ್ಟೆಯನ್ನು ಗ್ರಹಿಸಿದವರು ಈ ದೇಶಕ್ಕೆ ಏನು ಕಾದಿದೆಯೋ ಎಂದು ಹೆದರಿ ಹೋಗಿದ್ದಾರಲ್ಲಾ. ಈ ಸಮಯದಲ್ಲಿ ಬಹು ಗಂಭೀರವಾಗಿ ಚಿಂತಿಸುವುದರ ಬದಲು ನಮ್ಮ ವಾಟಿಸ್ಸೆಗೆ ಫೋನ್ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತು. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ಏನು ಮಾಡಿ ಏನು ಬಂತಣ್ಣ, ನಾವೆಲ್ಲ ಕೂಡಿ ಏನು ಮಾಡಿ ಏನು ಬಂತಣ್ಣಾ…..
“ಗುಡ್‍ಮಾರ್ನಿಂಗು ಸಾ.”
“ವಾಟಿಸ್ಸೆ ಎಲ್ಲಿದ್ದೀ.”
“ಇನ್ನೆಲ್ಲಿರನ ಸಾರ್, ಕತ್ತಿಗೆ ಬೇಜಾರಾದ್ರೆ ಹಾಳು ಗ್ವಾಡೆ ಅಂತ ಊರಲ್ಲಿದೀನಿ.”
“ಯಂಗಿದೆ ಊರು.”
“144 ಸೆಕ್ಷೆನ್ ಹಾಕಿದಂಗದೆ.”
“ಯಾಕೆ?”
“ಅಂಥಾ ಬಿಸ್ಲು ಸಾರ್, ಈ ಬಿಸ್ಲು ನೋಡಿ ಮುಂದ್ಲೊರಸಕೂ ಇರಬೇಕಾ ಅನ್ನಿಸಿದೆ.”
“ನಿನ್ನಂಥವನಿಗೆ ಅಂಗನ್ನಸಬಾರ್ದು.”
“ನನ್ನಂಥವುನು ಅಂದ್ರೇನು ಸಾ.”
“ಭಾರತವನ್ನೇ ಬದಲಾಯ್ಸೊ ಶ್ರೀಸಾಮಾನ್ಯ ಅಂತ.”
“ಶ್ರೀಸಾಮಾನ್ಯ ಇನ್ನ ಯಾರ ಮಾತ್ನೂ ಕೇಳದಿಲ್ಲ, ಯಾರಿಗೂ ಸಿಗದಿಲ್ಲ ಸಾ.”
“ಅದನ್ನ ರಾಜಕಾರಣಿಗಳು ಅರ್ಥ ಮಾಡಿಕಳ್ಳಿಲ್ಲವಲ್ಲ ಹೇಳು.”
“ಈಗದೆ ಆಯ್ತಾ ಅದೆ ಸಾ. ಈ ಸಿದ್ರಾಮಯ್ಯ ದ್ಯಾವೇಗೌಡ ಇವುರಿಗ್ಯಲ್ಲ ಈಗರ್ಥ ಆಯ್ತ ಅದೆ.”
“ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ದೇಸದ ಕತೆ ಏನಾರ ಆಗ್ಲಿ. ನಮ್ಮ ಸುಮಲತ ಗೆದ್ಲಲ್ಲ ಸಾ.”
“ಸುಮಲತನ ಗೆಲುವ ಅಷ್ಟು ಸೀರಿಯಸ್ಸಾಗಿ ತಗಂಡಿದ್ಯಾ?”
“ಊ ಸಾ. ನಮ್ಮ ಅಳಿವು ಉಳಿವಿನ ಪ್ರಶ್ನೆ ಆಗಿತ್ತು.”
“ಅಷ್ಟ್ ಗಂಭೀರವಾಗಿತ್ತ.”
“ಅಲ್ವೆ ಮತ್ತೆ, ಅದೆಲ್ಲೊ ಬಾರಲ್ಲಿ ಕುತಗಂಡು ಚಿಲ್ಡ್ ಬೀರು ಕುಡೀತಿದ್ದ ಹುಡುಗನ್ನ ತಂದು ಮಂಡ್ಯಕ್ಕೆ ನಿಲ್ಸಿದ್ರಲ್ಲ. ಇವರಿಗೆ ಎಷ್ಟು ಧೈರ್ಯ ಇರಬೇಕು. ಮಂಡ್ಯ ಜಿಲ್ಲೇನ ಏನನ್ನಕಂಡಿದ್ರು ಸಾ.”
“ಸರಿಯಾದ ಉತ್ರ ಕೊಟ್ರಲ್ಲ ಬುಡಿ.”
“ಬುಡದಲ್ಲ ಸಾ. ದ್ಯಾವೇಗೌಡ್ರು ಅಷ್ಟು ಸುಲಭಕ್ಕೆ ಏನ್ನೂ ಬುಡದಿಲ್ಲ. ಆ ಹುಡುಗನ್ನ ಅಲ್ಲೇ ಇರು ಅಂದುಬುಡ್ತರೆ.”
“ಹಾಗಂತೀಯಾ.”
“ಇತಿಹಾಸ ನೋಡಿಲ್ವಾ ಸಾ. ದ್ಯಾವೇಗೌಡ್ರು ಚುನಾವಣೆಯ ಸೋಲು ಗೆಲುವಿಗೆ ಹೆದರಿದೋರಲ್ಲ. ನಿನ್ನ ಭಾಗಕ್ಕೆ ಮಂಡ್ಯ ಕೊಟ್ಟಿದೀವಿ, ನೀನಲ್ಲೇ ಇರು ಅಂದು ಬುಡ್ತರೆ. ಇದು ನೋಡಿದ್ರೆ ಹೈಲು ಪೈಲುಡುಗ ಮಂಡ್ಯ ಜಿಲ್ಲೆಯನ್ನೆ ಹುಚ್ಚಾಸ್ಪತ್ರೆ ಮಾಡಿಬುಡ್ತನೆ.”
“ಏನೇ ಆದ್ರು ಮಂಡ್ಯದ ಜನಗಳು ಸ್ವಾಭಿಮಾನಿಗಳು ಬುಡು.”
“ಅದು ಜಗತ್ತಿಗೇ ಗೊತ್ತಾಯ್ತು ಸಾ.”
“ಜಗತ್ತಿಗೇ ಗೊತ್ತಾಯ್ತಾ.”
“ಊ ಸಾ. ಅಂಬರೀಶ್‍ಗೆ ಪ್ರಪಂಚದಲ್ಯಲ್ಲ ಸ್ನೇಹಿತರಿದ್ರು, ಪರಿಚಯ ಮಾಡಿಕ್ಯಳದು, ಪಾರ್ಟಿ ಕೊಡದು, ಮುಂದ್ಲು ದೇಸುಕೆ ಹೋಯ್ತಾಯಿರದ. ಅಂಗೆ ದುಬಾಯಿ, ಕುವೈತ್, ಮಸ್ಕಟ್, ಅಮೇರಿಕದಲ್ಯಲ್ಲ ಪ್ರೆಂಡ್ಸಿದ್ರು. ಅವುರ್ಯಲ್ಲ ಮಂಡ್ಯದ ಜನ ಏನು ಮಾಡ್ತರೆ ಅಂತ ನೋಡ್ತಿದ್ರು.”
“ರಾಜ್ಯದ ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ಹೇಳದೇನು ಸಾ. ಯಲ್ಲ ಮುಗಿತಲ್ಲ ಬುಡಿ.”
“ಮುಗೀತು ಅಂತೀಯಾ.”
“ಇನ್ನೇನು ಸಾ. ಬಿಜೆಪಿ ತಲೆಮ್ಯಾಲೆ ಕಲ್ಲಾಕಕ್ಕೆ ಇವುರಿಬ್ರೂ ಒಂದಾಗಿ ಸೈಜಗಲ್ಲ ಹೊತ್ತಗಂಡು ನಿಂತಿದ್ರು. ಅವುರಿಗೆ ಗೊತ್ತಿಲ್ಲದಂಗೆ ಅವುರವುರ ಮ್ಯಾಲೆ ಹಾಯ್ಕಂಡ್ರು ಸಾ.”
“ಏನಂದೆ.”
“ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು.”
“ಅವುರ ನಡುವೆ ಅಷ್ಟು ದ್ವೇಶ ಇತ್ತ.”
“ಇತ್ತು ಸಾ, ಸತತವಾಗಿ ಒಂದೊರ್ಸ ಜಗಳಾಡ್ಯವುರೆ, ಹರಿಯ ಮುರಿಯ ಜಗಳಾಡಿಕಂಡು ಚುನಾವಣೆ ಬಂದೇಟಿಗೆ ತ್ಯಕ್ಕೆ ಬಡಕಂಡು, ನಾವಿಬ್ರು ಒಂದು ಅಂತ ಜನಗಳೆದ್ರಿಗೆ ಹೋಗಿ ನಿಂತ್ರೆ ಜನ ನಗದಿಲವಾ.”
“ಇದೊಂತರ ವಳೇಟು ಅಂಗರೆ.”
“ಓಟು ಮಾಡದೇ ವಳೇಟು ಕೊಡಕ್ಕಲವೆ, ಆಗೊಂದು ಸತಿ ಮಂಡ್ಯದಲ್ಲಿ ಉಪ ಚುನಾವಣೆ ಬತ್ತು. ದಿಢೀರಂತ ಕುಮಾರಸ್ವಾಮಿನೂ ಎಡೂರಪ್ಪನೂ ಗಬುಕ್ಕಂತ ತಬ್ಬಿಕಂಡು ಮುತ್ತು ಕೊಟ್ರು. ಜನ ಪುಟ್ಟರಾಜನ್ನ ಸೋಲಿಸಿ ರಮ್ಯನ್ನ ಗೆಲ್ಲಿಸಿದ್ರು, ಗೊತ್ತ ಸಾ.”
“ಗೊತ್ತು. ಜನ ಅಕ್ರಮ ಸಮಂದ ಸಹಿಸಲ್ಲ ಅಲವೆ.”
“ಸಮಂದ ಮಾಡೋರೂ ದೊಡ್ಡ ಮನುಸರಾಗಿರಬೇಕು, ಉದ್ದೇಶ ವಳ್ಳೆದಿರಬೇಕು, ಅಂಗಿದ್ರೆ ಸಯಿಸಿಗತ್ತರೆ ಸಾ.”
“ಮೋದಿ ಈ ತರ ಗೆಲ್ಲದ ನಿರೀಕ್ಷೆ ಮಾಡಿದ್ಯಾ?.”
“ತಿರಗ ಬರಬವುದು ಅನ್ನಕಂಡಿದ್ದೆ.”
“ಹ್ಯಂಗೇ.”
” ಮನೇಲಿ ಕುತಗಂಡು ಟಿವಿ ನೋಡಿ ನೋಡಿ ಅಂಗಂದಿದ್ದ. ಟಿವಿಲಿರೋ ಹಾದರಕ್ಕುಟ್ಟಿದ ನನ್ನ ಮಕ್ಕಳು ದ್ಯಾವೇಗೌಡನ ಅಭಿಮಾನಿ ಸಿದ್ದೇಗೌಡನ್ನೇ ಬದ್ಲಾಸಿದ್ರು ಅಂದ್ರೆ ಇನ್ನೇನೇಳನಾ.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...