Homeಮುಖಪುಟಜಾರ್ಖಂಡ್‌: ಅಪ್ರಾಪ್ತೆ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ

ಜಾರ್ಖಂಡ್‌: ಅಪ್ರಾಪ್ತೆ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ

- Advertisement -
- Advertisement -

ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಏಳು ಬಾಲಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರನ್ನು ಬಂಧಿಸಲು ಶೋಧಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತ ಬಾಲಕಿಯ ಪರಿಚಯದವನಾದ ಒಬ್ಬ ಆರೋಪಿ ತನ್ನ ಬೈಕಿನಲ್ಲಿ ಬಾಲಕಿಯನ್ನು ಸುತ್ತಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನ ಇನ್ನು6 ಮಂದಿ ಸ್ನೇಹಿತರು ಕಾಯುತ್ತಿದ್ದ ಮಂದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ.

ಅವರನ್ನು ನೋಡಿ ಬಾಲಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ 7 ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಠಾಣಾ ಉಸ್ತುವಾರಿ ಅಧಿಕಾರಿ ರಾಣಾ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ರೈತರ ಮೇಲೆ ಪೊಲೀಸರ ಹಲ್ಲೆ: ಆಯುಷ್‌ ಸಿನ್ಹಾ ಸರ್ಕಾರಿ ತಾಲಿಬಾನ್‌ ಕಮಾಂಡರ್‌- ರಾಕೇಶ್ ಟಿಕಾಯತ್ ಕಿಡಿ

ಬಾಲಕಿಯನ್ನು ಕಡೆದುಕೊಂಡು ಹೋಗಿದ್ದ ಬಾಲಕನೇ ಮತ್ತೆ ಆಕೆಯನ್ನು ಮನೆಗೆ ತಂದು ಬಿಟ್ಟಿದ್ದಾನೆ. ಬಳಿಕ ಬಾಲಕಿ ಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ. ಮನೆಯ ಸದಸ್ಯರು ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದಾರೆ.

ಎಲ್ಲಾ ಆರೋಪಿಗಳು ಮಂದಾರ್ ಪ್ರದೇಶದವರಾಗಿದ್ದು, ಅವರಲ್ಲಿ ನಾಲ್ವರನ್ನು ಶನಿವಾರ ಬಂಧಿಸಲಾಗಿದೆ. ಎಲ್ಲರ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 24 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಕರ್ನಾಟಕ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.


ಇದನ್ನೂ ಓದಿ: ವಿಜಯಪುರ: ಅತ್ಯಾಚಾರ ಪ್ರಕರಣದ ಆರೋಪಿ ಶೌಚಾಲಯದಲ್ಲಿ ನೇಣಿಗೆ ಶರಣು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -