ಆಗಸ್ಟ್ 8ರ ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದ ವಿಡಿಯೊಗಳು ವೈರಲ್ ಆದ ಬೆನ್ನಲೇ, ಯುವ ಪತ್ರಕರ್ತರೊಬ್ಬರನ್ನು ಸುತ್ತುವರೆದ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬೆದರಿಕೆ ಹಾಕಿರುವ ವಿಡಿಯೊ ಕೂಡ ವೈರಲ್ ಆಗುತ್ತಿದೆ. ಗುಂಪಿನ ಬೆದರಿಕೆಗೆ ಜಗ್ಗದ ಪತ್ರಕರ್ತರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಕುರಿತು ವರದಿ ಮಾಡುವ ವೆಬ್ ಆಧಾರಿತ ಸುದ್ದಿ ಚಾನೆಲ್ ನ್ಯಾಷನಲ್ ದಸ್ತಕ್‌ನ ವರದಿಗಾರ ಅನ್ಮೋಲ್ ಪ್ರೀತಮ್ ಮೇಲೆ ದೆಹಲಿಯ ಜಂತರ್ ಮಂತರ್ ಬಳಿ ಭಾನುವಾರ ಪ್ರತಿಭಟನಾ ನಿರತರ ಗುಂಪೊಂದು ಬೆದರಿಕೆ ಹಾಕಿ, ಹಲ್ಲೆ ನಡೆಸಿದೆ.
ಈ ಕುರಿತು ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರವ ಅನ್ಮೋಲ್ ಪ್ರೀತಮ್, “ನನ್ನನ್ನು ಬೆದರಿಸುವ ಮೂಲಕ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿಸುವ ಪ್ರಯತ್ನ ನಡೆಸಲಾಯಿತು. ನಾನು ಕೂಗಲು ನಿರಾಕರಿಸಿದಾಗ, ನನ್ನನ್ನು ತಳ್ಳಲಾಯಿತು. ಈ ವಿಡಿಯೊದಲ್ಲಿ ನೀವೇ ನೋಡಿ” ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ವೈರಲ್ ವಿಡಿಯೊ ಆಧರಿಸಿ FIR
मुझसे डरा धमकाकर "जय श्री राम"बुलवाने की कोशिश की गई. जब मैंने मना किया तो मेरे साथ धक्का मुक्की भी किया गया. आप लोग वीडियो में खुद ही देख लीजिए@NationalDastak @Profdilipmandal pic.twitter.com/iswtGbff72
— Reporter Anmol Pritam (@anmolpritamND) August 8, 2021
ಘಟನೆ ಕುರಿತು ಟ್ವೀಟ್ ಮಾಡಿರುವ ನ್ಯಾಷನಲ್ ದಸ್ತಕ್ ಮಾಧ್ಯಮ, “ನಕಲಿ ಹಿಂದೂ ಸಂಘಟನೆಗಳು ಬಹುಜನ ಪತ್ರಕರ್ತ ಅನ್ಮೋಲ್ ಪ್ರೀತಮ್ ಅವರನ್ನು ಬೆದರಿಸಲು ಪ್ರಯತ್ನಿಸಿದ್ದಾರೆ”. ಎಂದಿದೆ.
“ಹಿಂದೂ ಸಂಘಟನೆ ಎಂದು ಕರೆಸಿಕೊಳ್ಳುವ ಇವುಗಳು ದಲಿತ, ಒಬಿಸಿ ಸಮಾಜದಿಂದ ಬರುವ ಜನರನ್ನು ಹಿಂದುಗಳೆಂದು ಪರಿಗಣಿಸುವುದಿಲ್ಲ ಎಂಬುದು ಈ ಘಟನೆಯಿಂದ ತಿಳಿಯುತ್ತದೆ. ನ್ಯಾಷನಲ್ ದಸ್ತಕ್ ತಂಡವು ಈ ಘಟನೆಯನ್ನು ಖಂಡಿಸುತ್ತದೆ” ಎಂದು ಹೇಳಿದೆ.
तथाकथित नक़ली हिंदू संगठनों ने बहुजन पत्रकार @anmolpritamND को धमकाने की कोशिश की।
इस घटना से यही प्रतीत होता है कि यह तथाकथित हिंदू संगठन दलित, ओबीसी समाज से आने वाले लोगों को हिंदू नही मानते हैं।
नेशनल दस्तक टीम इस घटना की निंदा करती हैं।#bahujanmedia pic.twitter.com/ArT6PswjUo
— National Dastak (@NationalDastak) August 8, 2021
ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ಬಿಜೆಪಿ ಮುಖಂಡ ಸೇರಿ 6 ಜನರ ಬಂಧನ
ವೈರಲ್ ವಿಡಿಯೊದಲ್ಲಿ ಇರುವುದು ಏನು..?
ನ್ಯಾಷನಲ್ ದಸ್ತಕ್ ಹಂಚಿಕೊಂಡ ವೀಡಿಯೊದ ಆರಂಭದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ವರದಿಗಾರ ಪ್ರೀತಮ್‌ಗೆ ‘ಜೈ ಶ್ರೀರಾಮ್ ‘ ಎಂದು ಘೋಷಿಸಲು ಒತ್ತಾಯಿಸುತ್ತಾರೆ. ಪ್ರೀತಮ್ ನಿರಾಕರಿಸಿದಾಗ, ಆತನ ಸುತ್ತಮುತ್ತಲಿನ ಜನರ ಗುಂಪು ಅವರನ್ನು ‘ಜಿಹಾದಿ’ ಎಂದು ಕರೆಯುತ್ತದೆ.
ಇನ್ನೊಬ್ಬ ವ್ಯಕ್ತಿಯು ಪತ್ರಕರ್ತನಿಗೆ ಬಾಯಿಯಲ್ಲಿ ಮೊಸರು ಹೆಪ್ಪುಗಟ್ಟಿದೆಯೇ ಎಂದು ಛೇಡಿಸುತ್ತಾನೆ. ಮತ್ತೊಬ್ಬ “ಒಂದೋ ದೇಶವನ್ನು ತೊರೆಯಿರಿ … ನೀವು ಉಳಿಯಲು ಬಯಸಿದರೆ, ನೀವು ಜೈ ಶ್ರೀರಾಮ್ ಎಂದು ಹೇಳಬೇಕು” ಎಂದು ಪ್ರೀತಮ್‌ಗೆ ಬೆದರಿಕೆ ಹಾಕುವುದನ್ನು ವಿಡಿಯೊದಲ್ಲಿ ನೋಡಬಹುದು.
ಇವರ ಬೆದರಿಕೆಗಳಿಗೆ ಜಗ್ಗದ ವರದಿಗಾರ, “ನಾನು ಜೈ ಶ್ರೀರಾಮ್ ಹೇಳಲು ಬಯಸಿದರೆ ನಾನು ಹೇಳುತ್ತೇನೆ. ಅದನ್ನು ಹೇಳಲು ನನ್ನ ಮೇಲೆ ಒತ್ತಡ ಹಾಕಬೇಡಿ. ನಿಮ್ಮಲ್ಲಿ ಅನೇಕರು ನನ್ನನ್ನು ಹೀಗೆ ಸುತ್ತುವರೆದು ‘ಜೈ ಶ್ರೀ ರಾಮ್’ ಎಂದು ಹೇಳಲು ಒತ್ತಾಯಿಸಿದರೇ, ನಾನು ಅದನ್ನು ಹೇಳುವುದಿಲ್ಲ” ಎಂದು ಹೇಳುತ್ತಾರೆ.
ದೆಹಲಿಯ ಹೃದಯಭಾಗ ಜಂತರ್ ಮಂತರ್ ಬಳಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದು ಮುಸ್ಲಿಂ ಸಮುದಾಯದವರಿಗೆ ಬೆದರಿಕೆಯೊಡ್ಡುವ, ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೇ ಪ್ರತಿಭಟನೆಯಲ್ಲಿ ಪತ್ರಕರ್ತರಿಗೆ ಬೆದರಿಕೆ ಹಾಕಲಾಗಿದೆ.
ಮತ್ತೆ ಟ್ವೀಟ್ ಮಾಡಿರುವ ಪತ್ರಕರ್ತ ಅನ್ಮೋಲ್ ಪ್ರೀತಮ್, ಹೆದರಿಕೆಯಿಲ್ಲ, ಹೆದರುವುದು ಇಲ್ಲ. ಬದುಕಿರುವವರೆಗೂ ಹೋರಾಡುತ್ತೇವೆ” ಎಂದಿದ್ದಾರೆ.
ना डरे हैं, ना डरेंगे
जब तक जिंदा हैं लड़ते रहेंगे. https://t.co/QqC5kfrpF8— Reporter Anmol Pritam (@anmolpritamND) August 8, 2021
“ಅವರು ನನ್ನನ್ನು ಹೊಡೆದಿದ್ದರೇ, ದೈಹಿಕ ಗಾಯಗಳು ಚೇತರಿಸಿಕೊಳ್ಳುತ್ತಿದ್ದವು. ಆದರೆ ನಾನು ನನ್ನ ನೈತಿಕತೆಯ ಮೇಲೆ ರಾಜಿ ಮಾಡಿಕೊಂಡಿದ್ದರೆ, ನನ್ನ ಆತ್ಮಸಾಕ್ಷಿಯು ಚೇತರಿಸಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪತ್ರಕರ್ತ ಅನ್ಮೋಲ್ ಪ್ರೀತಮ್‌ಗೆ ಸಾವಿವಾರು ಮಂದಿ ಬೆಂಬಲ ನೀಡಿದ್ದಾರೆ. ಅವರ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. #ISupportAnmol ಹ್ಯಾಶ್‌ಟ್ಯಾಗ್ ಟ್ರೇಂಡ್ ಮಾಡಲಾಗಿದೆ. ಬಹುಜನ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿವಾದಿತ ಯತಿ ನರಸಿಂಗಾನಂದ್ ವಿರುದ್ದ FIR ದಾಖಲಿಸಲು ಮಹಿಳಾ ಆಯೋಗ ಒತ್ತಾಯ


