Homeಮುಖಪುಟಜೈ ಶ್ರೀರಾಮ್ ಹೇಳುವಂತೆ ಪತ್ರಕರ್ತನಿಗೆ ಬೆದರಿಕೆ: ನಿಮ್ಮ ಒತ್ತಡಕ್ಕೆ ಜಗ್ಗಲಾರೆ ಎಂದ ಅನ್ಮೋಲ್ ಪ್ರೀತಮ್

ಜೈ ಶ್ರೀರಾಮ್ ಹೇಳುವಂತೆ ಪತ್ರಕರ್ತನಿಗೆ ಬೆದರಿಕೆ: ನಿಮ್ಮ ಒತ್ತಡಕ್ಕೆ ಜಗ್ಗಲಾರೆ ಎಂದ ಅನ್ಮೋಲ್ ಪ್ರೀತಮ್

’ನನ್ನನ್ನು ಹೊಡೆದಿದ್ದರೇ, ದೈಹಿಕ ಗಾಯಗಳು ಚೇತರಿಸಿಕೊಳ್ಳುತ್ತಿದ್ದವು. ಆದರೆ ನಾನು ರಾಜಿ ಮಾಡಿಕೊಂಡಿದ್ದರೆ, ನನ್ನ ಆತ್ಮಸಾಕ್ಷಿ ಚೇತರಿಸಿಕೊಳ್ಳುತ್ತಿರಲಿಲ್ಲ’

- Advertisement -
- Advertisement -

ಆಗಸ್ಟ್ 8ರ ಭಾನುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದ ವಿಡಿಯೊಗಳು ವೈರಲ್ ಆದ ಬೆನ್ನಲೇ, ಯುವ ಪತ್ರಕರ್ತರೊಬ್ಬರನ್ನು ಸುತ್ತುವರೆದ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬೆದರಿಕೆ ಹಾಕಿರುವ ವಿಡಿಯೊ ಕೂಡ ವೈರಲ್ ಆಗುತ್ತಿದೆ. ಗುಂಪಿನ ಬೆದರಿಕೆಗೆ ಜಗ್ಗದ ಪತ್ರಕರ್ತರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ.

ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಕುರಿತು ವರದಿ ಮಾಡುವ ವೆಬ್ ಆಧಾರಿತ ಸುದ್ದಿ ಚಾನೆಲ್ ನ್ಯಾಷನಲ್ ದಸ್ತಕ್‌ನ ವರದಿಗಾರ ಅನ್ಮೋಲ್ ಪ್ರೀತಮ್ ಮೇಲೆ ದೆಹಲಿಯ ಜಂತರ್ ಮಂತರ್ ಬಳಿ ಭಾನುವಾರ ಪ್ರತಿಭಟನಾ ನಿರತರ ಗುಂಪೊಂದು ಬೆದರಿಕೆ ಹಾಕಿ, ಹಲ್ಲೆ ನಡೆಸಿದೆ.

ಈ ಕುರಿತು ವಿಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರವ ಅನ್ಮೋಲ್ ಪ್ರೀತಮ್, “ನನ್ನನ್ನು ಬೆದರಿಸುವ ಮೂಲಕ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿಸುವ ಪ್ರಯತ್ನ ನಡೆಸಲಾಯಿತು. ನಾನು ಕೂಗಲು ನಿರಾಕರಿಸಿದಾಗ, ನನ್ನನ್ನು ತಳ್ಳಲಾಯಿತು. ಈ ವಿಡಿಯೊದಲ್ಲಿ ನೀವೇ ನೋಡಿ” ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಜಂತರ್‌ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ವೈರಲ್ ವಿಡಿಯೊ ಆಧರಿಸಿ FIR

ಘಟನೆ ಕುರಿತು ಟ್ವೀಟ್ ಮಾಡಿರುವ ನ್ಯಾಷನಲ್ ದಸ್ತಕ್ ಮಾಧ್ಯಮ, “ನಕಲಿ ಹಿಂದೂ ಸಂಘಟನೆಗಳು ಬಹುಜನ ಪತ್ರಕರ್ತ ಅನ್ಮೋಲ್ ಪ್ರೀತಮ್ ಅವರನ್ನು ಬೆದರಿಸಲು ಪ್ರಯತ್ನಿಸಿದ್ದಾರೆ”. ಎಂದಿದೆ.

“ಹಿಂದೂ ಸಂಘಟನೆ ಎಂದು ಕರೆಸಿಕೊಳ್ಳುವ ಇವುಗಳು ದಲಿತ, ಒಬಿಸಿ ಸಮಾಜದಿಂದ ಬರುವ ಜನರನ್ನು ಹಿಂದುಗಳೆಂದು ಪರಿಗಣಿಸುವುದಿಲ್ಲ ಎಂಬುದು ಈ ಘಟನೆಯಿಂದ ತಿಳಿಯುತ್ತದೆ. ನ್ಯಾಷನಲ್ ದಸ್ತಕ್ ತಂಡವು ಈ ಘಟನೆಯನ್ನು ಖಂಡಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ಜಂತರ್‌ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ಬಿಜೆಪಿ ಮುಖಂಡ ಸೇರಿ 6 ಜನರ ಬಂಧನ

ವೈರಲ್ ವಿಡಿಯೊದಲ್ಲಿ ಇರುವುದು ಏನು..?

ನ್ಯಾಷನಲ್ ದಸ್ತಕ್ ಹಂಚಿಕೊಂಡ ವೀಡಿಯೊದ ಆರಂಭದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ವರದಿಗಾರ ಪ್ರೀತಮ್‌ಗೆ ‘ಜೈ ಶ್ರೀರಾಮ್ ‘ ಎಂದು ಘೋಷಿಸಲು ಒತ್ತಾಯಿಸುತ್ತಾರೆ. ಪ್ರೀತಮ್ ನಿರಾಕರಿಸಿದಾಗ, ಆತನ ಸುತ್ತಮುತ್ತಲಿನ ಜನರ ಗುಂಪು ಅವರನ್ನು ‘ಜಿಹಾದಿ’ ಎಂದು ಕರೆಯುತ್ತದೆ.

ಇನ್ನೊಬ್ಬ ವ್ಯಕ್ತಿಯು ಪತ್ರಕರ್ತನಿಗೆ ಬಾಯಿಯಲ್ಲಿ ಮೊಸರು ಹೆಪ್ಪುಗಟ್ಟಿದೆಯೇ ಎಂದು ಛೇಡಿಸುತ್ತಾನೆ. ಮತ್ತೊಬ್ಬ “ಒಂದೋ ದೇಶವನ್ನು ತೊರೆಯಿರಿ … ನೀವು ಉಳಿಯಲು ಬಯಸಿದರೆ, ನೀವು ಜೈ ಶ್ರೀರಾಮ್ ಎಂದು ಹೇಳಬೇಕು” ಎಂದು ಪ್ರೀತಮ್‌ಗೆ ಬೆದರಿಕೆ ಹಾಕುವುದನ್ನು ವಿಡಿಯೊದಲ್ಲಿ ನೋಡಬಹುದು.

ಇವರ ಬೆದರಿಕೆಗಳಿಗೆ ಜಗ್ಗದ ವರದಿಗಾರ, “ನಾನು ಜೈ ಶ್ರೀರಾಮ್ ಹೇಳಲು ಬಯಸಿದರೆ ನಾನು ಹೇಳುತ್ತೇನೆ. ಅದನ್ನು ಹೇಳಲು ನನ್ನ ಮೇಲೆ ಒತ್ತಡ ಹಾಕಬೇಡಿ. ನಿಮ್ಮಲ್ಲಿ ಅನೇಕರು ನನ್ನನ್ನು ಹೀಗೆ ಸುತ್ತುವರೆದು ‘ಜೈ ಶ್ರೀ ರಾಮ್’ ಎಂದು ಹೇಳಲು ಒತ್ತಾಯಿಸಿದರೇ, ನಾನು ಅದನ್ನು ಹೇಳುವುದಿಲ್ಲ” ಎಂದು ಹೇಳುತ್ತಾರೆ.

ದೆಹಲಿಯ ಹೃದಯಭಾಗ ಜಂತರ್‌ ಮಂತರ್‌ ಬಳಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದು ಮುಸ್ಲಿಂ ಸಮುದಾಯದವರಿಗೆ ಬೆದರಿಕೆಯೊಡ್ಡುವ, ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಈ  ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೇ ಪ್ರತಿಭಟನೆಯಲ್ಲಿ ಪತ್ರಕರ್ತರಿಗೆ ಬೆದರಿಕೆ ಹಾಕಲಾಗಿದೆ.

ಮತ್ತೆ ಟ್ವೀಟ್ ಮಾಡಿರುವ ಪತ್ರಕರ್ತ ಅನ್ಮೋಲ್ ಪ್ರೀತಮ್, ಹೆದರಿಕೆಯಿಲ್ಲ, ಹೆದರುವುದು ಇಲ್ಲ. ಬದುಕಿರುವವರೆಗೂ ಹೋರಾಡುತ್ತೇವೆ” ಎಂದಿದ್ದಾರೆ.

“ಅವರು ನನ್ನನ್ನು ಹೊಡೆದಿದ್ದರೇ, ದೈಹಿಕ ಗಾಯಗಳು ಚೇತರಿಸಿಕೊಳ್ಳುತ್ತಿದ್ದವು. ಆದರೆ ನಾನು ನನ್ನ ನೈತಿಕತೆಯ ಮೇಲೆ ರಾಜಿ ಮಾಡಿಕೊಂಡಿದ್ದರೆ, ನನ್ನ ಆತ್ಮಸಾಕ್ಷಿಯು ಚೇತರಿಸಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪತ್ರಕರ್ತ ಅನ್ಮೋಲ್ ಪ್ರೀತಮ್‌ಗೆ ಸಾವಿವಾರು ಮಂದಿ ಬೆಂಬಲ ನೀಡಿದ್ದಾರೆ. ಅವರ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. #ISupportAnmol ಹ್ಯಾಶ್‌ಟ್ಯಾಗ್ ಟ್ರೇಂಡ್ ಮಾಡಲಾಗಿದೆ. ಬಹುಜನ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ವಿವಾದಿತ ಯತಿ ನರಸಿಂಗಾನಂದ್ ವಿರುದ್ದ FIR ದಾಖಲಿಸಲು ಮಹಿಳಾ ಆಯೋಗ ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...