Homeಮುಖಪುಟನಟಿಯ ಬಗ್ಗೆ ಅವಹೇಳನಾಕಾರಿ ಪ್ರಶ್ನೆ ಕೇಳಿದ ಪತ್ರಕರ್ತ: ಇದು ಮಹಿಳೆಯರ ಮೇಲೆ ಆತನಿಗಿರುವ ಗೌರವ ವ್ಯಕ್ತಪಡಿಸುತ್ತದೆ...

ನಟಿಯ ಬಗ್ಗೆ ಅವಹೇಳನಾಕಾರಿ ಪ್ರಶ್ನೆ ಕೇಳಿದ ಪತ್ರಕರ್ತ: ಇದು ಮಹಿಳೆಯರ ಮೇಲೆ ಆತನಿಗಿರುವ ಗೌರವ ವ್ಯಕ್ತಪಡಿಸುತ್ತದೆ ಎಂದ ನಟಿ

- Advertisement -
- Advertisement -

ಪತ್ರಕರ್ತರು, ಹಲವು ನೆಟ್ಟಿಗರು ಚಿತ್ರ ನಟಿಯರ ಬಗ್ಗೆ ಮನಸ್ಸಿಗೆ ಬಂದಂತೆ ಬರೆಯುವುದು, ಪ್ರಶ್ನಾರ್ಥಕ ಚಿಹ್ನೆ ಹಾಕಿ ತಮ್ಮ ಮನಸ್ಸಿನಲ್ಲಿರುವ ಕಹಿಯನ್ನು ಕಾರಿಕೊಳ್ಳುವುದು ನೋಡುತ್ತಲೇ ಇದ್ದೇವೆ. ಇದೆ ಸಾಲಿಗೆ ಮತ್ತೊಬ್ಬ ಸಿನಿಮಾ ಪರ್ತಕರ್ತನ ಸೇರ್ಪಡೆಯಾಗಿದೆ. ತೆಲುಗಿನ ’ಡಿಜೆ ಟಿಲ್ಲು’ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಪತ್ರಕರ್ತ ಸುರೇಶ್ ಕೊಂಡೆಟಿ, ನಟ ಸಿದ್ದು ಜೊನ್ನಲಗಡ್ಡ ಅವರಿಗೆ ಅಸಭ್ಯ ಪ್ರಶ್ನೆಯನ್ನು ಹಾಕಿ ವಿವಾದಕ್ಕೆ ಕಾರಣರಾಗಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ಸಿನಿಮಾದ ನಾಯಕ ನಟನಿಗೆ ಪ್ರಶ್ನೆ ಮಾಡಿದ ಸಿನಿಮಾ ಪತ್ರಕರ್ತ, “ಟ್ರೇಲರ್‌ನಲ್ಲಿ ಹೇಳಿರುವಂತೆಯೇ, ನಿಜವಾಗಿಯೂ ನಾಯಕಿ ದೇಹದಲ್ಲಿರುವ ಹುಟ್ಟು ಮಚ್ಚೆಗಳನ್ನು ಎಣಿಸಿದ್ದಿರಾ..?” ಎಂದ ಅಸಭ್ಯವಾಗಿ  ಪ್ರಶ್ನಿಸಿದ್ದಾರೆ.

’ಡಿಜೆ ಟಿಲ್ಲು’ ಚಿತ್ರದ ಟ್ರೇಲರ್‌ನಲ್ಲಿ, ನಾಯಕನು ನಾಯಕಿ ನೇಹಾ ಶೆಟ್ಟಿಗೆ “ನಿಮಗೆ ಎಷ್ಟು ಮಚ್ಚೆಗಳಿವೆ?” ಎಂದು ಕೇಳುತ್ತಾರೆ. ಅದಕ್ಕೆ ಆಕೆ 16 ಎಂದು ಉತ್ತರಿಸುತ್ತಾರೆ. ಇದು ಸಿನಿಮಾದ ದೃಶ್ಯವಾಗಿದೆ. ಆದರೆ, ಕಾರ್ಯಕ್ರಮದಲ್ಲಿ ಪತ್ರಕರ್ತ ಸುರೇಶ್ ಕೊಂಡೆಟಿ, “ನಿಜ ಜೀವನದಲ್ಲಿ ಅವರಿಗೆ ಎಷ್ಟು ಮಚ್ಚೆಗಳಿವೆ ಎಂದು ನೀವು ಎಣಿಸಿದ್ದೀರಾ?” ಎಂದು ನಾಯಕನಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲು ಸಿದ್ದು ನಯವಾಗಿ ನಿರಾಕರಿಸಿದ್ದಾರೆ.

ಇದನ್ನೂ ಓದಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ಈ ಸಂವೇದನಾರಹಿತ ಪ್ರಶ್ನೆಯನ್ನು ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿಸಿರುವ ನಟಿ ನೇಹಾ ಶೆಟ್ಟಿ, “ಇಂದು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಈ ಪ್ರಶ್ನೆ ದುರದೃಷ್ಟಕರವಾಗಿತ್ತು. ಆದರೆ, ಇದು ತನ್ನ ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ತನ್ನ ಸುತ್ತಲಿನ ಮಹಿಳೆಯರ ಬಗ್ಗೆ ಆತ ಹೊಂದಿರುವ ಗೌರವವನ್ನು ವ್ಯಕ್ತಪಡಿಸುತ್ತದೆ”ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಚಿತ್ರದ ನಟ ಸಿದ್ದು ಕೂಡ ಈ ಘಟನೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರೊಮ್ಯಾಂಟಿಕ್ ದೃಶ್ಯಗಳನ್ನು ಚಿತ್ರಿಸುವಾಗ ನಟರಿಗಾಗುವ, ಅದರಲ್ಲೂ ಮಹಿಳಾ ಕಲಾವಿದರಿಗಾಗುವ ಒತ್ತಡಗಳ ಬಗ್ಗೆ ತಿಳಿಸಿದ್ದಾರೆ. ನೂರಾರು ಜನರ ಮಧ್ಯೆ ನಟಿಸುವಾಗ ಎದುರಿಸುವ ಸಂಕಟಗಳ ಬಗ್ಗೆ ಅರಿತು ಮಾತಾಡಬೇಕು. ಕಲಾವಿದರಿಗೆ ಗೌರವ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಪತ್ರಕರ್ತನ ನಡೆಯನ್ನು ನೆಟ್ಟಿಗರು ಸೇರಿದಂತೆ ಹಲವು ಮಂದಿ ಖಂಡಿಸಿದ ಬಳಿಕ ಸುರೇಶ್ ಕೊಂಡೆಟಿ ಕ್ಷಮೆಯಾಚಿಸಿದ್ದಾರೆ. ಪ್ರಶ್ನೆಯ ಹಿಂದಿನ ಉದ್ದೇಶದಲ್ಲಿ ಯಾವುದೇ ತಪ್ಪು ಇರಲಿಲ್ಲ ಎಂದಿದ್ದಾರೆ.

“ಇದು ರೊಮ್ಯಾಂಟಿಕ್ ಚಿತ್ರ, ನಾನು ರೊಮ್ಯಾಂಟಿಕ್ ಪ್ರಶ್ನೆಯನ್ನು ಕೇಳಿದೆ. ನನ್ನ ಉದ್ದೇಶ ತುಂಬಾ ಕ್ಲಿನ್ ಆಗಿತ್ತು. ಅದರಲ್ಲಿ ಡಬಲ್ ಮೀನಿಂಗ್ ಇಲ್ಲ. ದಯವಿಟ್ಟು ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ಡಿಜೆ ಟಿಲ್ಲು ಟ್ರೈಲರ್ ಅತ್ಯುತ್ತಮವಾಗಿದೆ. ಪ್ರೀತಿಯ ಜೋಡಿಗೆ ಆಲ್ ದಿ ಬೆಸ್ಟ್” ಎಂದು ಚಿತ್ರದ ನಾಯಕ, ನಾಯಕಿಯನ್ನು ಟ್ಯಾಗ್ ಮಾಡಿದ್ದಾರೆ.

ನೇಹಾ ಶೆಟ್ಟಿ ಬಹುಭಾಷಾ ನಟಿ ಮತ್ತು ರೂಪದರ್ಶಿ. 2014 ರ ಮಿಸ್ ಮಂಗಳೂರು, 2015 ರ ಮಿಸ್ ಸೌತ್-ಇಂಡಿಯಾ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. 2016 ರಲ್ಲಿ ತೆರೆಕಂಡ ಕನ್ನಡದ ಬಹು ನಿರೀಕ್ಷಿತ ಚಿತ್ರವಾಗಿದ್ದ ಮುಂಗಾರು ಮಳೆ- 2 ನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸದ್ಯ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: 2021 ಸಿನಿಮಾ ಲೋಕ: ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, ಚಿಂತನೆಗೆ ಹಚ್ಚಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...