5 ಜಿ ವೈರ್‌ಲೆಸ್ ನೆಟ್‌ವರ್ಕ್ ತಂತ್ರಜ್ಞಾನದ ವಿರುದ್ಧ ಬಾಲಿವುಡ್ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ವಾಪಸ್ ಪಡೆದಿದ್ದಾರೆ. ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆ ವಕೀಲರ ಮೂಲಕ ಗುರುವಾರ ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ನಟಿ ಜೂಹಿ ಚಾವ್ಲಾ ಅವರ ವಕೀಲ ದೀಪಕ್ ಖೋಸ್ಲಾ ಅವರ ಹೇಳಿಕೆಯ ನಂತರ ಮನವಿಯನ್ನು ಹಿಂಪಡೆಯಲು ನ್ಯಾಯಮೂರ್ತಿ ಜಯಂತ್ ನಾಥ್ ಅನುಮತಿ ನೀಡಿದ್ದಾರೆ. “ಅರ್ಜಿದಾರ ಅರ್ಜಿಯನ್ನು ಹಿಂಪಡೆಯಲು ಬಯಸುತ್ತಾನೆ. ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
5 ಜಿ ನೆಟ್‌ವರ್ಕ್ ವಿರುದ್ಧದ ಮೊಕದ್ದಮೆಯನ್ನು “ವಜಾಗೊಳಿಸಿದ” ಬದಲು “ತಿರಸ್ಕರಿಸಲಾಗಿದೆ” ಎಂದು ಘೋಷಿಸಬೇಕೆಂದು ಕೋರಿ ಚಾವ್ಲಾ ಅರ್ಜಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ: 5 ಜಿ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ನಟಿ ಜೂಹಿ ಚಾವ್ಲಾ ಅರ್ಜಿ
ಭಾರತದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್ ತಂತ್ರಜ್ಞಾನದ ಅನುಷ್ಠಾನದ ವಿರುದ್ಧ ನಟಿ ಜೂಹಿ ಚಾವ್ಲಾ ಮೇ ನಲ್ಲಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ನಾಗರಿಕರು, ಸಸ್ಯ ಮತ್ತು ಪ್ರಾಣಿಗಳ ಮೇಲೆ ವಿಕಿರಣ ಬೀರುವ ಪರಿಣಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿದ್ದಾರೆ. ಪ್ರಕರಣದ ವಿಚಾರಣೆ ಜೂನ್ 2 ರಂದು ನಡೆದಿತ್ತು. ಆದರೆ, ವಿಚಾರಣೆ ಬಳಿಕ ಪ್ರಚಾರವನ್ನು ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಎಂದಿದ್ದ ಹೈಕೋರ್ಟ್, ನಟಿಗೆ 20 ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು.
“5 ಜಿ ತಂತ್ರಜ್ಞಾನ ಜಾರಿಗೆ ಬಂದರೆ ಭೂಮಿಯ ಮೇಲಿನ ಎಲ್ಲಾ ಜೀವಿಗಳು ವಿಕಿರಣಕ್ಕೆ ಒಳಗಾಗುತ್ತವೆ. ಅದು ಪ್ರಸ್ತುತ ಮಟ್ಟಕ್ಕಿಂತ 100 ಪಟ್ಟು ಹೆಚ್ಚಾಗುತ್ತದೆ. ಇದರಿಂದ ಮಾನವರ ಮೇಲೆ ಗಂಭೀರ ಮತ್ತು ಬದಲಾಯಿಸಲಾಗದ ಪರಿಣಾಮಗಳಿಗೆ ಕಾರಣವಾಗುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
“ತಾಂತ್ರಿಕ ಪ್ರಗತಿಯ ಅನುಷ್ಠಾನಕ್ಕೆ ತಾನು ವಿರೋಧಿಯಲ್ಲದಿದ್ದರೂ, “ವಿಕಿರಣವು ಅತ್ಯಂತ ಅಪಾಯಕಾರಿ ಮತ್ತು ಜನರ ಆರೋಗ್ಯ ಮತ್ತು ಸುರಕ್ಷತೆಗೆ ಹಾನಿಕಾರಕವಾಗಿದೆ ಎಂಬುದಕ್ಕೆ ಸಾಕಷ್ಟು ಕಾರಣಗಳಿವೆ” ಎಂದು ನಟಿ ಜೂಹಿ ಚಾವ್ಲಾ ಹೇಳಿದ್ದರು.
ಇದನ್ನೂ ಓದಿ: ಸಂವಿಧಾನದ ಆಶಯಗಳೊಂದಿಗೆ ತೆರೆಗೆ ಬರಲು ಸಿದ್ಧವಾಗಿದೆ ’ಭಾರತದ ಪ್ರಜೆಗಳಾದ ನಾವು’


