Homeರಾಜಕೀಯ‘ಜುಮ್ಲಾಜೀವಿ’, ‘ಶಕುನಿ’, ‘ಸರ್ವಾಧಿಕಾರಿ’ ಅಸಂಸದೀಯ ಪದಗಳು!: ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರ

‘ಜುಮ್ಲಾಜೀವಿ’, ‘ಶಕುನಿ’, ‘ಸರ್ವಾಧಿಕಾರಿ’ ಅಸಂಸದೀಯ ಪದಗಳು!: ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರ

- Advertisement -
- Advertisement -

‘ಜುಮ್ಲಾಜೀವಿ’, ‘ಬಾಲ್ ಬುದ್ಧಿ’, ‘ಕೋವಿಡ್ ಸ್ಪ್ರೆಡರ್’, ‘ಸ್ನೂಪ್‌ಗೇಟ್’, ‘ನಾಚಿಕೆಯಾಗಬೇಕು’, ‘ದುರುಪಯೋಗಪಡಿಸಿಕೊಂಡ’, ‘ದ್ರೋಹ’, ‘ಭ್ರಷ್ಟ’, ‘ನಾಟಕ’, ‘ಬೂಟಾಟಿಕೆ’ ಮತ್ತು ‘ಅಸಮರ್ಥ’ ಮೊದಲಾದ ದಿನನಿತ್ಯ ಬಳಸುವ ಅನೇಕ ಪದಗಳನ್ನು ಸೋಮವಾರದಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಬಳಸುವಂತಿಲ್ಲ ಎಂದು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಹೇಳಿದೆ. ಸರ್ಕಾರವನ್ನು ವಿರೋಧಿಸಲು ಕಷ್ಟವಾಗುವಂತೆ ಲೋಕಸಭೆಯ ಸಚಿವಾಲಯವು ಉಭಯ ಸದನಗಳಿಗೆ ಅಸಂಸದೀಯ ಪದಗಳನ್ನು ಪಟ್ಟಿ ಮಾಡುವ ಹೊಸ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ.

ಈ ಕಿರುಪುಸ್ತಕದಲ್ಲಿ, ‘ಅರಾಜಕತಾವಾದಿ’, ‘ಶಕುನಿ’, ‘ಸರ್ವಾಧಿಕಾರಿ’, ‘ಸರ್ವಾಧಿಕಾರ’, ‘ಜೈಚಂದ್’, ‘ವಿನಾಶ ಪುರುಷ’, ‘ಖಲಿಸ್ತಾನಿ’ ಮತ್ತು ‘ರಕ್ತದ ವ್ಯವಸಾಯ’ ಸೇರಿದಂತೆ ಹಲವು ಪದಗಳನ್ನು ಸದನದ ಚರ್ಚೆಯ ಸಮಯದಲ್ಲಿ ಅಥವಾ ಬೇರೆ ರೀತಿಯಲ್ಲಿ ಬಳಸಿದರೆ ಅದನ್ನು ತೆಗೆದುಹಾಕಲಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ದೋಹ್ರಾ ಚರಿತ್ರ’, ‘ನಿಕಮ್ಮ’, ‘ನೌಟಂಕಿ’, ‘ದಿಂಡೋರಾ ಪೀಟ್ನಾ’ ಮತ್ತು ‘ಬೆಹ್ರಿ ಸರ್ಕಾರ್’ ಪದಗಳನ್ನು ಕೂಡಾ ಬಳಸುವಂತಿಲ್ಲ.

ಅಸಂವಿಧಾನಿಕ ಪದಗಳ ಹೊಸ ಕಿರು ಪುಸ್ತಕ ಹೊರ ತಂದರೂ, ರಾಜ್ಯಸಭಾ ಮತ್ತು ಲೋಕಸಭಾ ಸ್ಪೀಕರ್‌ಗಳು ಈ ಪದಗಳನ್ನು ಕಡತದಿಂದ ತೆಗೆದುಹಾಕಬೇಕೆ ಅಥವಾ ಅದು ಇರಬಹುದೇ ಎಂಬ ಅಂತಿಮ ತೀರ್ಮಾವನ್ನು ತೆಗೆದುಕೊಳ್ಳಬುಹುದಾಗಿದೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಅವರು ಇಂತಹ ಪದಗಳ ಬಳಕೆಯನ್ನು ಮುಂದುವರಿಸುವುದಾಗಿ ಹೇಳಿದ್ದು, ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ತೆಲಂಗಾಣಕ್ಕೆ ಮೋದಿ: ಬರಮಾಡಿಕೊಳ್ಳದ ಕೆಸಿಆರ್‌; ಧಮ್‌ ಬಿರಿಯಾನಿ ತಿಂದು ಹೋಗಿ ಎಂದ ಕೆಟಿಆರ್‌‌!

ಟಿಎಂಸಿಯ ಮತ್ತೊಬ್ಬ ಸಂಸದೆ ಮಹುವಾ ಮೊಯಿತ್ರಾ ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, “ಅಂದರೆ ನಾನು ಲೋಕಸಭೆಯಲ್ಲಿ ಎದ್ದು ನಿಂತು, ಈ ಅಸಮರ್ಥ ಸರ್ಕಾರ ಭಾರತೀಯರಿಗೆ ಹೇಗೆ ದ್ರೋಹ ಬಗೆದಿದೆ ಎಂಬುದರ ಕುರಿತು ಮಾತನಾಡಲು ಸಾಧ್ಯವಿಲ್ಲವೆ. ನಿಮ್ಮ ಬೂಟಾಟಿಕೆಗೆ ನಾಚಿಕೆಪಡಬೇಕು” ಎಂದು ಹೇಳಿದ್ದಾರೆ.

ಅಸಂಸದೀಯ ಎಂದು ಪಟ್ಟಿ ಮಾಡಲಾದ ಕೆಲವು ಪದಗಳ ಪಟ್ಟಿ ಹೀಗಿದೆ

‘ರಕ್ತಪಾತ’, ‘ರಕ್ತಸಿಕ್ತ’, ‘ದ್ರೋಹ’, ‘ನಾಚಿಕೆ’, ‘ದುರುಪಯೋಗ’, ‘ಮೋಸ, ‘ಚಮಚಾ’, ‘ಚಮಚಾಗಿರಿ’, ‘ಚೇಲಾಗಳು’, ‘ಬಾಲಿಶ’, ‘ಭ್ರಷ್ಟ’, ‘ಹೇಡಿ’, ‘ಅಪರಾಧ’ ಮತ್ತು ‘ಮೊಸಳೆ ಕಣ್ಣೀರು’, ‘ಅವಮಾನ’, ‘ಕತ್ತೆ’, ‘ನಾಟಕ’, ‘ಕಣ್ಣೀರು ತೊಳೆಯುವುದು’, ‘ಮೀಠಿ’, ‘ಗೂಂಡಾಗಿರಿ’, ‘ಬೂಟಾಟಿಕೆ’, ‘ಅಸಮರ್ಥ’, ‘ತಪ್ಪುದಾರಿ’, ‘ಸುಳ್ಳು’, ‘ಸತ್ಯ’, ‘ಅರಾಜಕತಾವಾದಿ’, ‘ಗದ್ದರ್’, ‘ಗಿರ್ಗಿಟ್‌’, ‘ಗೂಂಡಾಗಳು’, ‘ಮೊಸಳೆ ಕಣ್ಣೀರು’, ‘ಅಪಮಾನ’, ‘ಅಸತ್ಯ’, ‘ಅಹಂಕಾರ’, ‘ಭ್ರಷ್ಟ’, ‘ಕಾಲಾ ದಿನ’, ‘ಕಾಲಾ ಬಜಾರಿ’, ‘ಖರೀದ್ ಫರೋಖ್ತ್ ‘, ‘ದಂಗಾ’, ‘ದಲಾಲ್’, ‘ದಾದಗಿರಿ’, ‘ದೋಹ್ರಾ ಚರಿತ್ರೆ’, ‘ಬೇಚಾರ’, ‘ಬಾಬ್‌ಕಟ್’, ‘ಲಾಲಿಪಾಪ್’, ‘ವಿಶ್ವಾಘಾತ’, ‘ಸಂವೇದನ ಹೀನ’,, ‘ಮೂರ್ಖ’, ಮತ್ತು ‘ಲೈಂಗಿಕ ಕಿರುಕುಳ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...