ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ರೋಹಿತ್ ಬಿ ದೇವ್‌ರವರು ನ್ಯಾಯಾಲಯದ ಆವರಣದಲ್ಲಿಯೇ ರಾಜೀನಾಮೆ ಘೋಷಿಸಿರುವ ಪ್ರಕರಣ ಜರುಗಿದೆ.
ತನಗೆ ಯಾರ ವಿರುದ್ಧವೂ ನಿಷ್ಠುರ ಭಾವನೆ ಇಲ್ಲ ಎಂದ ಅವರು, ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ. ನಾನು ನನ್ನ ಸ್ವಾಭಿಮಾನಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೈಕೋರ್ಟ್‌ನ ನಾಗ್ಪುರ ಪೀಠದ ಹಿರಿಯ ನ್ಯಾಯಾಧೀಶರಾಗಿದ್ದ ಅವರು ಕಳೆದ ವರ್ಷ ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರನ್ನು ಬಿಡುಗಡೆ ತೀರ್ಪು ನೀಡಿದ ಪೀಠದಲ್ಲಿ ಒಬ್ಬರಾಗಿದ್ದರು.
ತೀರಾ ಇತ್ತೀಚೆಗೆ ರೋಹಿತ್ ಬಿ ದೇವ್ ನೇತೃತ್ವದ ಪೀಠವು ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರ ವಿರುದ್ಧದ ದಂಡನಾತ್ಮಕ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಅಧಿಕಾರ ನೀಡುವ ಸರ್ಕಾರದ ನಿರ್ಣಯದ ವಿರುದ್ಧ ತೀರ್ಪು ನೀಡಿತ್ತು.
2017 ರಲ್ಲಿ ಜಸ್ಟಿಸ್ ದೇವ್ ಅವರನ್ನು ಹೈಕೋರ್ಟ್ ಪೀಠಕ್ಕೆ ಆಯ್ಕೆ ಮಾಡಲಾಗಿತ್ತು. ಅವರು ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ರಾಜ್ಯದ ಅಡ್ವೊಕೇಟ್ ಜನರಲ್ ಆಗಿದ್ದರು. ಅವರು ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 4, 2025 ರವರೆಗೂ ಅವರ ಸೇವಾವದಿ ಇದ್ದರೂ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ; ಸುಪ್ರೀಂ ತೀರ್ಪು: ರಾಹುಲ್‌ಗೆ ಮರಳಿ ಸಂಸದ ಸ್ಥಾನ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ


