’ಪ್ರಸ್ತುತ ಸಾಧಕರನ್ನು ಗುರುತಿಸಲು ಹೊರಟಾಗ ಅವರೆಲ್ಲಾ ಹರಿದ ಟೋನ್ಡ್ ಅಮೆರಿಕನ್ ಜೀನ್ಸ್‌ಗಳನ್ನು ಧರಿಸಿರುತ್ತಾರೆ ಎಂದು, ಟೋನ್ಡ್ ಅಮೆರಿಕನ್ ಜೀನ್ಸ್ ಧರಿಸಿಸುವವರನ್ನು ಪರೋಕ್ಷವಾಗಿ ಟೀಕಿಸಿದ್ದ ನಟಿ ಕಂಗನಾ ರಣಾವತ್ ಅವರನ್ನು ನೆಟ್ಟಿಗರು ಅವರದ್ದೇ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಕಾಲೆಳೆದಿದ್ದಾರೆ.
ಬುಧವಾರ (ಮಾರ್ಚ್ 3) ನಟಿ ಕಂಗನಾ ರಣಾವತ್ ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತ, ಜಪಾನ್ ಮತ್ತು ಸಿರಿಯಾದ ಮೂವರು “ಪ್ರಾಚೀನ” ಮಹಿಳೆಯರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರತಿಯೊಬ್ಬರೂ ತಮ್ಮ ದೇಶಗಳ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ. 1885 ರಲ್ಲಿ ತೆಗೆದಿರುವ ಈ ಛಾಯಾಚಿತ್ರದಲ್ಲಿರುವ ಮೂವರು ಮಹಿಳೆಯರು, ತಮ್ಮ ತಮ್ಮ ದೇಶದ ಮೊದಲ ಪರವಾನಗಿ ಪಡೆದ ಮಹಿಳಾ ವೈದ್ಯರು ಎಂದು ಹೇಳಲಾಗಿದೆ.
ಈ ಚಿತ್ರದ ಜೊತೆ ಇವರ ಸಂಸ್ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟಿ, ಇಂದಿನ ಸಾಧಕರನ್ನು ಗುರುತಿಸಲು ಹೊರಟರೇ ಅವರೆಲ್ಲಾ ಹರಿದ ಅಮೆರಿಕನ್ ಜೀನ್ಸ್ ಮತ್ತು ರಾಗ್‌ಗಳನ್ನು ಬ್ಲೌಸ್‌ನಂತೆ ಧರಿಸಿರುತ್ತಾರೆ. ಇದು ಅಮೆರಿಕನ್ ಮಾರ್ಕೆಟಿಂಗ್ ಅನ್ನು ಹೊರತುಪಡಿಸಿ ಏನನ್ನೂ ಪ್ರತಿನಿಧಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಮಾನಹಾನಿ ಪ್ರಕರಣ: ವಿಚಾರಣೆಗೆ ಹಾಜರಾಗದ ಕಂಗನಾ ರಣಾವತ್‌ಗೆ ವಾರೆಂಟ್!
Appreciation tweet for ancient women who not only represented their individuality but their entire civilisation,cultures and nations. Today if such achievers are to be clicked they will all wear torn American jeans n rags like blouses,representing nothing but American marketing. pic.twitter.com/0k2yjUuF07
— Kangana Ranaut (@KanganaTeam) March 3, 2021
ಈ ಟ್ವೀಟ್‌ಗೆ ಪ್ರತಿಟ್ವೀಟ್ ಮಾಡಿರುವ ನೆಟ್ಟಿಗರು ಅವರು ಟೋನ್ಡ್ ಜೀನ್ಸ್‌ಗಳನ್ನು ಧರಿಸಿರುವ ಚಿತ್ರಗಳನ್ನು ಹಂಚಿಕೊಂಡು, ಇದು ಯಾವ ಮಾರ್ಕೆಟಿಂಗ್ ಎಂದು ಪ್ರಶ್ನಿಸಿದ್ದಾರೆ.
THE HYPOCRISY THO!! https://t.co/tjUnyLTWTl pic.twitter.com/8S72Q5OeVX
— Pk ?? (@jmsgevr) March 4, 2021
ಇಂತಹ ಬೂಟಾಟಿಕೆಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹಲವು ಮಂದಿ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರರು ನಟಿ ಕಂಗನಾ ರಣಾವತ್ ಧರಿಸಿರುವ ಹಲವು ವಿದೇಶಿ ಶೈಲಿಯ ಧಿರಿಸುಗಳ ಕುರಿತು ವಿವರವಾಗಿ ದಾಖಲಿಸಿ, ವಿದೇಶಿ ಮಾರ್ಕೆಟಿಂಗ್ ಅಂದರೆ ಇದು ಎಂದಿದ್ದಾರೆ.

ಟ್ವೀಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಿಶಾದ್ ಸಿಂಗ್ ಎನ್ನುವ ಟ್ವಿಟರ್ ಬಳಕೆದಾರರು ಕಂಗನಾ ರಣಾವತ್ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಅವರು ನಿಜವಾದ ದೇಶಭಕ್ತರಾಗಿದ್ದರೇ ರಾಮ್‌ದೇವ್ ಅವರ ಜೀನ್ಸ್ ಧರಿಸಲು ಹೇಳಿ ಎಂದಿದ್ದಾರೆ.
ದಿ ವರ್ಲ್ಡ್‌ನ ಸಾರ್ವಜನಿಕ ರೇಡಿಯೊ ಕಾರ್ಯಕ್ರಮ ಮತ್ತು ಪಾಡ್‌ಕ್ಯಾಸ್ಟ್ ಪ್ರಕಟಿಸಿದ ವರದಿಯ ಪ್ರಕಾರ, ನಟಿ ಕಂಗನಾ ರಣಾವತ್ ಅವರು ಹಂಚಿಕೊಂಡಿರುವ ಛಾಯಾಚಿತ್ರದಲ್ಲಿನ ಮಹಿಳೆಯರು ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು. ಚಿತ್ರ ಈಗ ಡ್ರೆಕ್ಸೆಲ್ ವಿಶ್ವವಿದ್ಯಾಲಯದ ಆರ್ಕೈವ್‌ಗಳಲ್ಲಿದೆ ಎಂದು ಎನ್‌ಡಿಟಿವಿ ಉಲ್ಲೆಖಿಸಿದೆ.
ಇದನ್ನೂ ಓದಿ: ಕಂಗನಾ ಟ್ವಿಟರ್ ಖಾತೆ ಅಮಾನತುಗೊಳಿಸಿ ಅರ್ಜಿ: ಮಾರ್ಚ್ 9 ರಂದು ವಿಚಾರಣೆ


