Homeಮುಖಪುಟಕಂಗನಾ ಟ್ವಿಟರ್ ಖಾತೆ ಅಮಾನತುಗೊಳಿಸಿ ಅರ್ಜಿ: ಮಾರ್ಚ್ 9 ರಂದು ವಿಚಾರಣೆ

ಕಂಗನಾ ಟ್ವಿಟರ್ ಖಾತೆ ಅಮಾನತುಗೊಳಿಸಿ ಅರ್ಜಿ: ಮಾರ್ಚ್ 9 ರಂದು ವಿಚಾರಣೆ

ದ್ವೇಷ ಹರಡಿದ ಆರೋಪದ ಮೇಲೆ ಕಂಗನಾ ಸಹೋದರಿ ರಂಗೋಲಿ ಚಾಂಡೆಲ್‌ರ ಟ್ವಿಟರ್ ಖಾತೆಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

- Advertisement -
- Advertisement -

ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು ಎಂದು ಟ್ವೀಟ್ ಮಾಡಿರುವ ನಟಿ ಕಂಗನಾ ರಾಣಾವತ್‌ರವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿಯನ್ನು ಮಾರ್ಚ್ 09 ರಂದು ವಿಚಾರಣೆ ನಡೆಸುವುದಾಗಿ ಬಾಂಬೆ ಹೈಕೋರ್ಟ್ ಹೇಳಿದೆ.

ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯಲ್ಲಿ “ರೈತರು ಭಯೋತ್ಪಾದಕರು, ಭಾರತವನ್ನು ವಿಭಜಿಸುತ್ತಿದ್ದಾರೆ, ಚೀನಾದಿಂದ ಪ್ರೇರಿತರಾಗಿದ್ದಾರೆ ಎಂದು ನಟಿ ಎಗ್ಗಿಲ್ಲದೆ ಟ್ವೀಟ್ ಮಾಡಿದ್ದಾರೆ. ಈ ಕುರಿತು 2020ರ ಡಿಸೆಂಬರ್‌ನಲ್ಲಿಯೇ ದೂರು ದಾಖಲಿಸಲಾಗಿದೆ. ಆದರೂ ಅವರು ತಮ್ಮ ರೈತರನ್ನು ಹಣಿಯುವ ಪ್ರವೃತ್ತಿಯನ್ನು ನಿಲ್ಲಿಸಿಲ್ಲ. ಹಾಗಾಗಿ  ಕೂಡಲೇ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ವಕೀಲರಾದ ಅಲಿ ಕಾಶಿಫ್ ದೇಶ್ಮುಖ್‌ರವರು ಸಲ್ಲಿಸರುವ ಅರ್ಜಿಯನ್ನು ಜಸ್ಟಿಸ್ ಎಸ್ಎಸ್‌ ಶಿಂಧೆ ಮತ್ತು ಮನಿಶ್ ಪಿತಾಲೆ ಅವರ ಪೀಠವು ಆಲಿಸುತ್ತಿದ್ದು, ಮುಂದಿನ ವಾದಕ್ಕಾಗಿ ಮಾರ್ಚ್ 09ಕ್ಕೆ ಮುಂದೂಡಿದೆ.

ಕೋರ್ಟ್ ವಿಚಾರಣೆಗೆ ಅನುಮತಿ ನೀಡಿದೆ. ಆದರೆ ನನ್ನ ಅರ್ಜಿಯನ್ನು ರಿಟ್ ಆಗಿ ಪರಿಗಣಿಸಿದೆಯೇ ಅಥವಾ ಪಿಐಎಲ್ ಆಗಿ ಪರಿಗಣಿಸಿದೆಯೇ ಗೊತ್ತಿಲ್ಲ ಎಂದು ಅಲಿ ಕಾಶಿಫ್ ದೇಶ್ಮುಖ್ ತಿಳಿಸಿದ್ದಾರೆ. ಕಂಗನಾ ರಾಣಾವತ್ ನನಗೆ ಮಾತ್ರವಲ್ಲದೆ ಇಡೀ ನನ್ನ ಸಮುದಾಯಕ್ಕೆ ಅವಮಾನವಾಗುವಂತೆ ಸಂದೇಶ ಕಳಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.

ಕಂಗನಾ ಸಹೋದರಿ ರಂಗೋಲಿ ಚಾಂಡೆಲ್ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುವ ಮತ್ತು ಸಾಮರಸ್ಯ ಕದಡುವ ಸಂದೇಶಗಳನ್ನು ಕಳಿಸಿದ್ದರು. ಹಾಗಾಗಿ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಕಂಗನಾ ಖಾತೆಯನ್ನು ಸಹ ಅಮಾನತು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ವಿರುದ್ಧ ನಡೆಯುತ್ತಿರುವ ತನಿಖೆಯ ವರದಿ ಸಲ್ಲಿಸುವಂತೆ ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.


ಇದನ್ನೂ ಓದಿ; ಕಂಗನಾ ದ್ವೇಷಪೂರಿತ ಪೋಸ್ಟ್: ತನಿಖೆಯ ವರದಿ ಸಲ್ಲಿಸುವಂತೆ ಕೋರ್ಟ್ ನಿರ್ದೇಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...