Homeಮುಖಪುಟ’ಗುಂಪು ಹತ್ಯೆ ನಡೆಸುವ ಪಡೆಯನ್ನು ನೇಮಿಸಿಕೊಳ್ಳುತ್ತಿರುವ ಕಪಿಲ್ ಮಿಶ್ರ’: ಆರೋಪ

’ಗುಂಪು ಹತ್ಯೆ ನಡೆಸುವ ಪಡೆಯನ್ನು ನೇಮಿಸಿಕೊಳ್ಳುತ್ತಿರುವ ಕಪಿಲ್ ಮಿಶ್ರ’: ಆರೋಪ

ದೆಹಲಿ ಗಲಭೆ ನಡೆಯಲು ಪ್ರಮುಖ ಕಾರಣಕರ್ತ ಎಂಬ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ‘ಹಿಂದೂ ಎಕೋ ಸಿಸ್ಟಮ್‌’ ಎಂಬ ಗೂಗಲ್ ಫಾರ್ಮ್ ಒಂದನ್ನು ಪ್ರಸಾರ ಮಾಡುತ್ತಿದ್ದಾರೆ

- Advertisement -
- Advertisement -

ದೆಹಲಿ ಗಲಭೆ ನಡೆಯಲು ಪ್ರಮುಖ ಕಾರಣಕರ್ತ ಎಂಬ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ‘ಹಿಂದೂ ಎಕೋ ಸಿಸ್ಟಮ್‌’ ಗೂಗಲ್ ಫಾರ್ಮ್ ಒಂದನ್ನು ಪ್ರಸಾರ ಮಾಡುತ್ತಿದ್ದು, ಹಲವಾರು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈಗಾಗಲೆ 18,000 ಜನರು ಇದಕ್ಕೆ ಸೈನ್ ಅಪ್ ಆಗಿದ್ದಾರೆ ಮತ್ತು ಎರಡು ದಿನಗಳ ನಂತರ ಅವರನ್ನು ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಸಂಪರ್ಕಿಸಲಾಗುವುದು ಕಪಿಲ್ ಮಿಶ್ರಾ  ಹೇಳಿದ್ದಾರೆ. ಫಾರ್ಮ್ ಬಿಡುಗಡೆಯಾದ ಮೂರು ಗಂಟೆಗಳಲ್ಲಿ 5,000 ಜನರು ತಂಡವನ್ನು ಸೇರಿದ್ದಾರೆ ಎಂದು ಅವರು ಈ ಹಿಂದೆ ಹೇಳಿದ್ದರು.

ಈ ವಿವಾದಿತ ಗೂಗಲ್ ಫಾರ್ಮ್‌ನಲ್ಲಿರುವ ಒಂದು ಪ್ರಶ್ನೆ, “ಗೋರಕ್ಷ, ಗೋ ಸೇವಾ, ಲವ್ ಜಿಹಾದ್ ಹೋರಾಟ, ಘರ್ ವಾಪಸಿ, ಹಲಾಲ್, ಮಂದಿರ ನಿರ್ಮಲ್, ಹಿಂದೂ ಏಕ್ತಾ, ಸಾಮಾನ್ಯ ಸೇವೆ ಇವುಗಳಲ್ಲಿ ನೀವು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದೀರಿ” ಎಂದು ಅದು ಕೇಳುತ್ತದೆ.

ಇದನ್ನೂ ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್‌ಡಿಟಿವಿ ತನಿಖಾ ವರದಿ

ಫಾರ್ಮ್ ಪೂರ್ತಿಗೊಳಿಸುವವರು ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ವೃತ್ತಿಯಂತಹ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್‌ನ ಕೊನೆಯ ವಿಭಾದಲ್ಲಿ; “ಹೌದು ಕ್ಲಿಕ್ ಮಾಡುವ ಮೂಲಕ, ‘ಹಿಂದೂ ಎಕೋ ಸಿಸ್ಟಮ್’ ತಂಡವನ್ನು ಸೇರಲು ಬದ್ಧನಾಗಿರುತ್ತೇನೆ” ಎಂಬ ಘೋಷಣೆಯಿದೆ.

ಕಪಿಲ್ ಮಿಶ್ರ ಅವರ ಈ ಉಪಕ್ರಮದ ಬಗ್ಗೆ ಪಕ್ಷಕ್ಕೆ ಯಾವುದೆ ಅರಿವಿಲ್ಲ ಎಂದು ದೆಹಲಿ ಬಿಜೆಪಿ ಮಾಧ್ಯಮ ಸೆಲ್‌ ಮುಖ್ಯಸ್ಥ ನವೀನ್ ಕುಮಾರ್‌ ಹೇಳಿದ್ದಾರೆಂದು ದಿ ಪ್ರಿಂಟ್ ವರದಿ ಮಾಡಿದೆ.

ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯ ಜಾಫ್ರಾಬಾದ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ನಡೆದ ರ್‍ಯಾಲಿಯಲ್ಲಿ ಕಪಿಲ್ ಮಿಶ್ರಾ “ಗೋಲಿ ಮಾರೊ ಸಾಲೋ ಕೋ’’ ಎಂಬ ದ್ವೇಷ ಪೂರಿತ ಘೋಷಣೆಯನ್ನು ಕೂಗಿದ್ದರು. ಇದಾಗಿ ಕೆಲವೇ ದಿನದಲ್ಲಿ ಗಲಭೆ ಭುಗಿಲೆದ್ದು 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಹಿಂದೂ ಎಕೊ ಸಿಸ್ಟಮ್‌ ತಂಡದ ಜವಾಬ್ದಾರಿಗಳು ಸ್ಪಷ್ಟವಾಗಿಲ್ಲವಾದರೂ, “ಪ್ರತಿಯೊಬ್ಬ ಸದಸ್ಯರು ಧರ್ಮದ ಹೆಸರಿನಲ್ಲಿ ನೇರವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಾರೆ” ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.

ಇದನ್ನು ಓದಿ: ಬಿಜೆಪಿ ಕೌನ್ಸಿಲರ್ ದೆಹಲಿ ಗಲಭೆಯನ್ನು ಮುನ್ನೆಡೆಸಿದ್ದರು: ಪ್ರತ್ಯಕ್ಷದರ್ಶಿಯ ದೂರು

ದೆಹಲಿ ಗಲಭೆ ನಡೆಯಲು ಪ್ರಮುಖ ಕಾರಣಕರ್ತ ಎನ್ನಲಾಗುತ್ತಿರುವ ಆರೋಪ ಹೊತ್ತಿರುವ ಕಪಿಲ್‌ ಮಿಶ್ರ ಅವರ ಈ ಉಪಕ್ರಮವನ್ನು ಹಲವಾರು ಜನರು ಟೀಕಿಸಿದ್ದಾರೆ. ಪ್ರಸಿದ್ದ ಕವಿ ಗೀತರಚನೆಕಾರ ಹುಸೈನ್ ಹೈದರಿ, “ದೇಶದಲ್ಲಿ ನಿರುದ್ಯೋಗ ಕಡಿಮೆ ಮಾಡಲು ಇಲ್ಲಿ ಹಲವಾರು ಉದ್ಯೋಗಗಳು ಸೃಷ್ಟಿಯಾಗಿವೆ, ದಯವಿಟ್ಟು ಅರ್ಜಿ ಸಲ್ಲಿಸಿ” ಎಂದು ವ್ಯಂಗ್ಯವಾಡಿದ್ದಾರೆ.

ಪತ್ರಕರ್ತೆ ಝೋಯಾ ರಸೂಲ್, “ದೆಹಲಿ ಹತ್ಯಾಕಾಂಡಗಳನ್ನು ನಡೆಸಲು ಕಪಿಲ್ ಮಿಶ್ರಾ ತನ್ನ ವಾಟ್ಸಾಪ್ ಗುಂಪುಗಳನ್ನು ನವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಪ್ರತಿಯೊಬ್ಬರು ವಿಶೇಷ ಹಿಂಸಾತ್ಮಕ ಕಾರಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಖಂಡಿತ ಇದು ಕಾನೂನುಬದ್ಧವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ ನಾಯಕರ ದ್ವೇಷ ಭಾಷಣಗಳು ನಾಪತ್ತೆ!

“ಅವರು ಗುಂಪು ಹತ್ಯೆ ನಡೆಸುವ ಪಡೆಯನ್ನು ‘ನೇಮಿಸಿಕೊಳ್ಳುತ್ತಿದ್ದಾರೆ’ ಅಷ್ಟೇ” ಎಂದು ಕಿರಣ್ ಎಂಬುವವರು ಅಭಿಪ್ರಾಯ ಪಟ್ಟಿದ್ದಾರೆ.

ಕಪಿಲ್ ಮಿಶ್ರಾ ಎಲ್ಲಾ ಮುಖವಾಡವನ್ನು ಕೈಬಿಟ್ಟು, ನಾಜಿ ನೇಮಕಾತಿ  ಮಾಡುತ್ತಿದ್ದಾರೆ ಎಂದು ಅನುರಾಧ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಎ ವಿರೋಧಿಗಳ ಬೇಟೆ: ದೆಹಲಿ ಗಲಭೆಗೆ ಉಮರ್‌ ಖಾಲಿದ್‌‌ರನ್ನು ಸಿಲುಕಿಸಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...