Homeಕರ್ನಾಟಕ'ಮರಾಠರು ತಲತಲಾಂತರದಿಂದ ಇಲ್ಲಿಯೇ ಇದ್ದಾರೆ'- ಯಡಿಯೂರಪ್ಪ ಹೇಳಿಕೆಗೆ ನೆಟ್ಟಿಗರ ಆಕ್ರೋಶ!

‘ಮರಾಠರು ತಲತಲಾಂತರದಿಂದ ಇಲ್ಲಿಯೇ ಇದ್ದಾರೆ’- ಯಡಿಯೂರಪ್ಪ ಹೇಳಿಕೆಗೆ ನೆಟ್ಟಿಗರ ಆಕ್ರೋಶ!

ಈ ರಾಜ್ಯದಲ್ಲಿ ಅದೆಷ್ಟೋ ಸಣ್ಣ ಸಣ್ಣ ಜಾತಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಅವರೆಲ್ಲರ ಮೂಲ ಕರ್ನಾಟಕ. ಅವರಿಗೇಕೆ ಈ ವಿಶೇಷ ಸವಲತ್ತಿಲ್ಲ? ಎಂದು ಆಕ್ರೋಶ ಹೊರಹಾಕಿದ್ದಾರೆ.

- Advertisement -
- Advertisement -

ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ವ್ಯಾಪಕ ವಿರೋಧಕ್ಕೆ ಒಳಗಾಗಿದ್ದ ಯಡಿಯೂರಪ್ಪ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, “‘ಮರಾಠರು ತಲತಲಾಂತರದಿಂದ ಇಲ್ಲಿಯೇ ಇದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕರ್ನಾಟಕ ಮುಖ್ಯಮಂತ್ರಿಯವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, “ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಾಜ್ಯದಲ್ಲಿರುವ ಮರಾಠ ಜನಾಂಗದವರ ಅಭಿವೃದ್ಧಿಗಾಗಿ ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಈ ಪ್ರಾಧಿಕಾರಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಖರೀದಿ ಕಸರತ್ತಿನ ಹಿಂದೆ ಭ್ರಷ್ಟಾಚಾರದ ವಾಸನೆ: ಸಿದ್ದರಾಮಯ್ಯ ಆರೋಪ

ಮತ್ತೊಂದು ಟ್ವೀಟ್‌ನಲ್ಲಿ, “‘ಮರಾಠರು ತಲಾತಲಾಂತರಗಳಿಂದ ಕರ್ನಾಟಕದಲ್ಲಿಯೇ ವಾಸವಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎನ್ನುವ ಆಶಯದಿಂದ ಈ ಪ್ರಾಧಿಕಾರವನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ- ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ” ಎಂದು ಬರೆಯಲಾಗಿದೆ.

ಯಡಿಯೂರಪ್ಪನವರು ಈ ನಿಲುವು ತೆಗೆದುಕೊಂಡಾಗಿನಿಂದಲೂ ವಿರೋಧ ಪಕ್ಷಗಳು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಈ ಟ್ವೀಟ್ ಮಾಡಿದಮೇಲೆ ನೇರವಾಗಿಯೇ ಇದಕ್ಕೆ ರೀಟ್ವೀಟ್ ಮಾಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ #StopMarathaDevelopmentAuthority #ಮಾರಾಠ_ಅಭಿವೃದ್ಧಿ_ಪ್ರಾಧಿಕಾರ_ನಿಲ್ಲಿಸಿ ಎನ್ನುವ ಅಭಿಯಾನ ಆರಂಭವಾಗಿದೆ.

ಇದನ್ನೂ ಓದಿ: ರಾಯಚೂರು ನಗರಸಭೆ: ಸರ್ಕಾರದ ಅನುದಾನ ಬಳಕೆ ಮಾರ್ಗಸೂಚಿ ಉಲ್ಲಂಘನೆ – ಭ್ರಷ್ಟಾಚಾರದ ವಾಸನೆ!

ಯಶಸ್ ಎಂಬುವವರು ಟ್ವೀಟ್ ಮಾಡಿ, “ಈ ರಾಜ್ಯದಲ್ಲಿ ಅದೆಷ್ಟೋ ಸಣ್ಣ ಸಣ್ಣ ಜಾತಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ ಅವರೆಲ್ಲರದು ಮೂಲ ಕರ್ನಾಟಕವೇ, ಅವರಿಗೇಕೆ ಈ ವಿಶೇಷ ಸವಲತ್ತಿಲ್ಲ? ಸರಕಾರದಿಂದ ಏನಾದರೂ ಸವಲತ್ತು ಸಿಗಬೇಕಾದರೆ ಒಂದು ನೀವು ರಾಜಕೀಯವಾಗಿ ಗಟ್ಟಿಯಾಗಿರಬೇಕು ಇಲ್ಲ ಆ ಜಾತಿ ಹೆಚ್ಚಿರುವ ಜಾಗದಲ್ಲಿ ಉಪಚುನಾವಣೆ ಆಗಬೇಕು. ರಾಜಕೀಯ ನಾಯಕರೇ ಇಲ್ಲದ ಜಾತಿಯ ಕತೆಯೇನು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!

ಪ್ರವೀಣ್ ಎಂಬುವವರು ಟ್ವೀಟ್ ಮಾಡಿ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರಿಗೆ ಸಂಬಳ ನೀಡದಿರುವುದನ್ನು ಉಲ್ಲೇಖಿಸಿ, “ಕೆ ಎಸ್‌ ಆರ್‌ ಟಿ ಸಿ ನೌಕರರು?” ಎಂದು ಅವರ ಗತಿಯೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಯಡಿಯೂರಪ್ಪ: ಸಿದ್ದರಾಮಯ್ಯ

ಅವಿನಾಶ್ ಶೆಟ್ಟಿ ಎಂಬುವವರು ಟ್ವೀಟ್ ಮಾಡಿ, “ತಲ‌ತಲಾಂತರಗಳಿಂದ ವಾಸವಾಗಿರುವವರಿಗೆ ಸಿಗುವ ಬೆಲೆ ಇಲ್ಲಿಯವರೇ ಆಗಿರುವ ನಮಗೆ ತುಳುವರಿಗಿಲ್ಲ” ಎಂದು ತುಳುವ ಜನಾಂಗವನ್ನು ಕಡೆಗಣಿಸಿರುವುದನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್‌ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ

ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, “ಲಿಂಗಾಯತ-ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ವಿಷಯ ಮಾಧ್ಯಮಗಳಿಂದ ಗೊತ್ತಾಗಿದೆ. ಇದು ಅಚ್ಚರಿ ಉಂಟು ಮಾಡಿದೆ. ಎಲ್ಲಾ ಸಮಾಜ ಮತ್ತು ಜಾತಿಗಳಲ್ಲೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರ ನೆರವಿಗೆ ಸರ್ಕಾರ ಬರಬೇಕಾಗಿತ್ತು. ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕೆ ಒತ್ತುಕೊಟ್ಟರೆ ಒಳ್ಳೆಯದು. ಎಲ್ಲಾ ಸಮಾಜದಲ್ಲೂ ಕಡು ಬಡವರು ಇದ್ದಾರೆ. ಅವರ ಸಹಾಯಕ್ಕೆ ಸರ್ಕಾರ ಬರಬೇಕಾಗಿತ್ತು. ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರು ಎಲ್ಲಾ ಜಾತಿಗಳಲ್ಲೂ ಇದ್ದಾರೆ. ಆರ್ಥಿಕವಾಗಿ ಕಷ್ಟ ದಲ್ಲಿರುವವರಿಗೆ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಿದರೆ ಒಳ್ಳೆಯದು. ಆರ್ಥಿಕವಾಗಿ ಬಲಿಷ್ಠವಾದರೆ ಆ ಕುಟುಂಬಗಳು ಮೇಲೆ ಬರುತ್ತವೆ. ಲಿಂಗಾಯತ-ವೀರಶೈವ ಅಭಿವೃದ್ಧಿ ನಿಗಮ ಮಾಡಿರುವುದು ಆಶ್ಚರ್ಯ ತಂದಿದೆ. ಹೀಗೆ ಜಾತಿಗೊಂದು ನಿಗಮ ಮಾಡುತ್ತಾ ಹೋದರೆ ಮಿತಿಯೇ ಇರುವುದಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರದ ಈ ಧೋರಣೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿಯೂ ಸಹ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.


ಇದನ್ನೂ ಓದಿ: ಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...