Homeಕರ್ನಾಟಕಅಪ್ಪಂದಿರ ದಿನವೇ ಮಂಡ್ಯದಲ್ಲಿ ದುರಂತ; ಸಾವಿನಲ್ಲಿ ಒಂದಾದ ತಂದೆ- ಮಗಳು

ಅಪ್ಪಂದಿರ ದಿನವೇ ಮಂಡ್ಯದಲ್ಲಿ ದುರಂತ; ಸಾವಿನಲ್ಲಿ ಒಂದಾದ ತಂದೆ- ಮಗಳು

- Advertisement -
- Advertisement -

ಅಪ್ಪ ಅಂದರೆ ಆಕಾಶ, ಬೆಳಕಿಗೆ ಬಾರದ ಅಪ್ಪನ ತ್ಯಾಗಕ್ಕೆ ಧನ್ಯವಾದ ಸಲ್ಲಿಸಲು ಪ್ರತಿ ವರ್ಷ ಜೂನ್​ 20ನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ತಂದೆ -ಮಕ್ಕಳ ಬಾಂಧವ್ಯಕ್ಕೆ ಸಾಕ್ಷಿಯಾಗುವ ಈ ದಿನದಂದೇ ಮಂಡ್ಯದಲ್ಲಿ ದುರಂತವೊಂದು ಸಂಭವಿಸಿದೆ.

ಮಂಡ್ಯದ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ದುರಂತ ನಡೆದಿದೆ. ಖಾಸಗಿ ಪಿಯು ಕಾಲೇಜಿಗೆ ಸೇರಿಸುವ ವಿಷಯಕ್ಕೆ ಮನನೊಂದಿದ್ದ ಮಗಳು 17 ವರ್ಷದ ಬಾಂಧವ್ಯ ಬೆಳಗಿನ ಜಾವ ಮನೆಯಲ್ಲೇ ನೇಣಿಗೆ ಶರಣಾಗಿದ್ದರು. ಮಗಳ ಸಾವನ್ನು ನೋಡಿದ್ದ ತಂದೆ ರಾಜು (65) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಅಪ್ಪಂದಿರ ದಿನದಂದು ನಡೆದ ಈ ದುರಂತದಲ್ಲಿ ಅಪ್ಪ-ಮಗಳು ಇಬ್ಬರೂ ಸಾವಿನಲ್ಲಿ ಒಂದಾಗಿದ್ದಾರೆ. ವೈದ್ಯಯಾಗುವ ಕನಸು ಕಂಡಿದ್ದ ಬಾಂಧವ್ಯ, ದ್ವಿತೀಯ ಪಿಯುಸಿಗೆ ಖಾಸಗಿ ಕಾಲೇಜಿಗೆ ಸೇರಿಸುವಂತೆ ಕೇಳಿದ್ದಾರೆ. ಒಂದು ವರ್ಷ ಸರ್ಕಾರಿ ಕಾಲೇಜಿನಲ್ಲಿ ಓದಲು ರೈತರಾಗಿದ್ದ ತಂದೆ ರಾಜು ತಿಳಿಸಿದ್ದಾರೆ. ಈ ವಿಷಯದಿಂದ ಮಗಳು ಮತ್ತು ತಂದೆ ನಡುವೆ ಮನಸ್ತಾಪ  ಉಂಟಾಗಿತ್ತು. ಮನನೊಂದಿದ್ದ ಬಾಲಕಿ ಮನೆಯಲ್ಲೇ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.  ಮಗಳು ನೇಣಿಗೆ ಶರಣಾದ ವಿಚಾರ ಕೇಳಿದ ತಂದೆ ರಾಜುಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಅಪ್ಪ-ಮಗಳ ಸಾವಿನ ಸುದ್ದಿಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆದ್ದು, ಈ ಸಂಬಂಧ  ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...