Homeಕರ್ನಾಟಕರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

’ಅಂಬೇಡ್ಕರ್‌, ಸಂವಿಧಾನದ ಬಗ್ಗೆ ಪೂರ್ವಾಗ್ರಹಗಳನ್ನಿಟ್ಟುಕೊಂಡ ಅನೇಕ ಮಂದಿ ಜಿಲ್ಲಾ ಮತ್ತು ಅಧೀನ ಕೋರ್ಟುಗಳಲ್ಲಿ ನ್ಯಾಯಾಧೀಶರ ವೇಶದಲ್ಲಿದ್ದಾರೆ’: ಸಿ.ಎಸ್.ದ್ವಾರಕನಾಥ್

- Advertisement -
- Advertisement -

ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆರವುಗೊಳಿಸಿ, ಧ್ವಜಾರೋಹಣ ನಡೆಸಿರುವ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ನಾಡಿನ ಚಿಂತಕರು, ಸಾಹಿತಿಗಳು, ವಕೀಲರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯನ್ನು ಖಂಡಿಸಿ, ನ್ಯಾಯಧೀಶರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ತಕ್ಷಣವೇ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರುವ ವಿಮರ್ಶಕ ಕೇಶವ ಮಳಗಿ “ಭಾರತ ದೇಶ ಅಥವ ಇಂಡಿಯನ್‌ ನೇಶನ್‌ ಎನ್ನುವುದು ಎಷ್ಟೇ ಅಮೂರ್ತ ಕಲ್ಪನೆಯಾದರೂ ಯಾವುದೇ ರಾಜಕೀಯ ಪಕ್ಷದ ಗುತ್ತಿಗೆಯಲ್ಲ. ಇಲ್ಲಿ, ಗ್ರಾಮ ಪಂಚಾಯಿತಿ ಸದಸ್ಯ, ಚುನಾಯಿತ ಪ್ರಧಾನಿ, ಪಕ್ಷಗಳ ಒಮ್ಮತದಿಂದ ಆಯ್ಕೆಯಾಗುವ ರಾಷ್ಟ್ರಪತಿ, ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಮತ್ತು ಅತಿ ಸಾಮಾನ್ಯ ಹೀಗೆ ಎಲ್ಲರಿಗೂ ಒಂದೇ ಸಂವಿಧಾನ, ಕಾನೂನು, ನ್ಯಾಯವ್ಯವಸ್ಥೆ. ನಾವು ಯಾವುದೇ ಜಾತಿ, ಲಿಂಗ, ಕುಲಮತ, ಬುಡಕಟ್ಟು, ಲೈಂಗಿಕ ಆಯ್ಕೆ-ಅಪೇಕ್ಷೆಗಳಿಗೆ ಸೇರಿದವರಾದರು ಅಂತಿಮವಾಗಿ ಒಂದೇ ಸಂವಿಧಾನವನ್ನು ಒಪ್ಪಿಕೊಂಡು ಬದುಕಲು ಆಯ್ಕೆ ಮಾಡಿಕೊಂಡ ದೇಶಕ್ಕೆ ಸೇರಿದ್ದೇವೆ.

ಕಾನೂನು ವಿದ್ಯಾಭ್ಯಾಸ ಮಾಡಿ, ಅರ್ಹತೆಯ ಪರೀಕ್ಷೆ ಬರೆದು ಈ ಹುದ್ದೆಗೆ ಬಂದ ರಾಯಚೂರಿನ ನ್ಯಾಯಾಧೀಶರು ಈ ಸಂವೇದನೆ-ಸೂಕ್ಷ್ಮತೆ ಹೊಂದಿಲ್ಲವೆಂದರೆ ಅಂಥವರು ಆ ಹುದ್ದೆಯಲ್ಲಿ ಮುಂದುವರೆಯಲು ಅನರ್ಹರು. ಸರ್ಕಾರ ಅವರನ್ನು ಕೂಡಲೇ ಕೆಲಸದಿಂದ ಬಿಡುಗಡೆ ಮಾಡಬೇಕು. ಮಾತ್ರವಲ್ಲ, ಧ್ವಜಾರೋಹಣೆಯನ್ನು ನಿರ್ದಿಷ್ಟ ಕಾರಣಕ್ಕೆ ನಿರಾಕರಿಸಿದ್ದರೆ ಅವರ ಮೇಲೆ “ಸಂವಿಧಾನ ನಿಂದನೆ” ನಿಯಮಾವಳಿ ಪ್ರಕಾರ ಪ್ರಕರಣ ದಾಖಲಿಸಿ, ಬಂಧಿಸಬೇಕು. (ರಾಷ್ಟ್ರ ನಿಂದನೆ ಕಾನೂನು: 1971, ಆಕ್ಟ್‌ 69, 1971)” ಎಂದಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆಗೆ ತೀವ್ರ ಆಕ್ರೋಶ

ಹಿರಿಯ ವಕೀಲರಾದ ಸಿ.ಎಸ್.ದ್ವಾರಕನಾಥ್ ತಮ್ಮ ಫೇಸ್‌ಬುಕ್‌ನಲ್ಲಿ “ಸಂವಿಧಾನದ ಅವಧಿ ಮುಗಿಯುತ್ತಿದೆ’ ಎಂಬ ಚರ್ಚಾ ಸ್ವರ್ಧೆ ಏರ್ಪಡಿಸಿದ್ದ ಶಾಲೆ ಮತ್ತು ಅಂಬೇಡ್ಕರ್ ಫೋಟೋ ತೆಗಿಸಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಈ ಎರಡು ಪ್ರಕರಣಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಸಂವಿಧಾನ ಮತ್ತು ಅಂಬೇಡ್ಕರ್ ರವರ ಕುರಿತು ಏನೆಲ್ಲಾ ಪೂರ್ವಾಗ್ರಹಗಳನ್ನು ಇಟ್ಟುಕೊಂಡ ಅನೇಕ ಮಂದಿ ಜಿಲ್ಲಾ ಮತ್ತು ಅಧೀನ ಕೋರ್ಟುಗಳಲ್ಲಿ ನ್ಯಾಯಾದೀಶರ ವೇಶದಲ್ಲಿದ್ದಾರೆ. ಇಂತವರು ನಮ್ಮ ಹೈಕೋರ್ಟು, ಸುಪ್ರೀಂ ಕೋರ್ಟುಗಳಲ್ಲೂ ಇದ್ದಾರೆ! ಇದರ ಬಗ್ಗೆ ಅನುಮಾನವೇ ಇಲ್ಲ! ನನಗೆ ಆತಂಕವಿರುವುದು ಇಂತಹ ಪೂರ್ವಾಗ್ರಹ ಇಟ್ಟುಕೊಂಡ ನ್ಯಾಯಾದೀಶರಿಂದ ಎಂತಹ ತೀರ್ಪುಗಳನ್ನು ಈ ನಾಡಿನ ಜನ ನಿರೀಕ್ಷಿಸಬಹುದು ಎನ್ನುವುದು..?  ಡಾ.ಅಂಬೇಡ್ಕರ್ ರವರು ಈ ದೇಶದ ಸಂವಿಧಾನ ಬರೆದವರು, ಗಣರಾಜ್ಯೋತ್ಸವದ ದಿನ ಎಂದರೆ ಸಂವಿಧಾನದ ಪ್ರಕಾರ ಈ ದೇಶವನ್ನು ಗಣರಾಜ್ಯವನ್ನಾಗಿ ಪರಿಗಣಿಸಿದ ದಿನ. ಇಂತಹ ದಿನದಂದು ಸಂವಿಧಾನ ರಚಿಸಿದ ಅಂಬೇಡ್ಕರ್ ರವರಲ್ಲದೆ ಇನ್ಯಾರ ಚಿತ್ರವನ್ನು ಇಟ್ಟು ಗಣರಾಜ್ಯೋತ್ಸವ ವನ್ನು ಆಚರಿಸಬೇಕು? ಎಂಬ ಕಾಮನ್ ಸೆನ್ಸ್ ಪ್ರಶ್ನೆಯನ್ನು ಹಾಕಿಕೊಂಡಿದ್ದರೂ ಈ ನ್ಯಾಯಾದೀಶನಿಗೆ ಉತ್ತರ ಸಿಗುತಿತ್ತು‌? ಅಂಬೇಡ್ಕರ್ ಅಸ್ಪೃಶ್ಯ ರಾಗಿದ್ದೇ ಕಾರಣ, ಈ so called ಶೂದ್ರ ಜಾತಿಗಳಿಗೂ ಜಾತಿ ಪ್ರಜ್ಞೆ ಜಾಗೃತವಾಗಿಬಿಡುತ್ತೆ. ಈ ಕ್ಯಾನ್ಸರ್ ಇವರ ತಲೆಯಲ್ಲಿರುವವರೆಗೂ ಇವರಿಗೆ ಉಳಿಗಾಲವಿಲ್ಲ!” ಎಂದಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ ಘಟನೆ: ಶೋಷಿತರ ಬಗ್ಗೆ ಹೆಪ್ಪುಗೊಂಡಿರುವ ಅಸಹನೆಯ ಚಿಕ್ಕ ಪ್ರತಿನಿಧಿ ಈ ನ್ಯಾಯಾಧೀಶರು!

ಹಿರಿಯ ಸಾಹಿತಿ, ಸಂಶೋಧಕ ಪ್ರೊ. ರಹಮತ್ ತರೀಕೆರೆ ಅವರು “ಬಾಬಾಸಾಹೇಬರು ರಚಿಸಿದ ಸಂವಿಧಾನದಡಿಯಲ್ಲಿ, ನ್ಯಾಯದಾನ ಮಾಡುವ ಮತ್ತು ಅಧಿಕಾರ ನಿರ್ವಹಿಸುವ ಸಾರ್ವಜನಿಕ ಜಾಗೆಗಳಲ್ಲಿ, ದಲಿತರನ್ನು‌ ಮಹಿಳೆಯರನ್ನು ಮುಸ್ಲಿಮರನ್ನು ಬುಡಕಟ್ಟುಗಳನ್ನು ಕುರಿತು ಹೆಪ್ಪುಗೊಂಡಿರುವ ಘೋರ ಅಸಹನೆಯ ಒಂದು ಚಿಕ್ಕ ಪ್ರತಿನಿಧಿ ರಾಯಚೂರಿನ ಸದರಿ ಮಾನ್ಯ ನ್ಯಾಯಾಧೀಶರು. ನ್ಯಾಯಾಲಯ ಕ್ಷೇತ್ರದಲ್ಲಿ ಢಾಳಾಗಿ ನೆಲೆಗೊಂಡಿರುವ ಸಾಮಾಜಿಕ-ಧಾರ್ಮಿಕ ದ್ವೇಷಭಾವದ ಬಗ್ಗೆ ನನ್ನ ವಕೀಲ ಮಿತ್ರರ ಅನುಭವಗಳನ್ನು ಕೇಳಿರುವೆ. ನ್ಯಾಯಾಧೀಶರಾಗಿದ್ದ ಕೋಚೆಯವರೂ ಇಂತಹ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಗಾಬರಿಯಾಗುತ್ತದೆ. ದುಗುಡವಾಗುತ್ತದೆ. ಅಂಬೇಡ್ಕರ್ ಅವರು “ಸಾಮಾಜಿಕ ಆರ್ಥಿಕ ಅಸಮಾನತೆ ಇರುವ ಸಮಾಜದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ” ಎಂದಿದ್ದು ಇದಕ್ಕಾಗಿಯೇ” ಎಂದು ಆತಂಖ ಹಂಚಿಕೊಂಡಿದ್ದಾರೆ.

ಚಿಂತಕ, ಪ್ರಾಧ್ಯಾಪಕ ಕೆಎಲ್‌ ಚಂದ್ರಶೇಖರ್‌ ಐಜೂರು, ತಮ್ಮ ಫೇಸ್‌ಬುಕ್‌ನಲ್ಲಿ ಸರ್ಕಾರಿ ಆದೇಶದ ಪ್ರತಿ ಹಂಚಿಕೊಂಡಿದ್ದು, ನ್ಯಾಯಾಧೀಶರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

 

ಲೇಖಕ, ಪತ್ರಕರ್ತ ಬಿಎಂ ಬಶೀರ್‌ ಅವರು, ‘‘ಯಾವಾಗ ಈ ದೇಶದ ಹೈಕೋರ್ಟ್ ಮುಂದೆ ಮನುವಿನ ಪ್ರತಿಮೆ ಸ್ಥಾಪನೆಯಾಗಲು ಜನರು ಮೌನ ಸಮ್ಮತಿಯನ್ನು ಕೊಟ್ಟರೋ ಆಗಲೇ ಅಂಬೇಡ್ಕರ್ ಬದಿಗೆ ಸರಿದರು. ರಾಜಸ್ತಾನದ ಹೈಕೋರ್ಟ್ ಮುಂದೆ ಮನುವಿನ ಪ್ರತಿಮೆ ಬಟಾ ಬಯಲಲ್ಲಿ ನಿಂತು ಈ ದೇಶದ ಸಂವಿಧಾನಕ್ಕೆ ಪ್ರತಿ ದಿನ ಸವಾಲು ಹಾಕುತ್ತಿರುವಾಗ, ನಮಗೇನೂ ಅನ್ನಿಸುವುದಿಲ್ಲ. ನೆನಪಿಡಿ ಈ ಪ್ರತಿಮೆ ನಿಲ್ಲಿಸಲು ಅನುಮತಿ ನೀಡಿದವರು ನ್ಯಾಯಾಧೀಶರೇ. ಹೀಗಿರುವಾಗ ನ್ಯಾಯಾಧೀಶನೊಬ್ಬ ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎನ್ನುವುದರಲ್ಲಿ ಅಚ್ಚರಿ ಏನೂ ಇಲ್ಲ ಎಂದಿದ್ದಾರೆ.


ಇದನ್ನೂ ಓದಿ: ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Some peoples trying to touch….. And then it gets embarrassed asking sorry……
    But we must think that once day comes next night should also be circulated…… Anyone can’t close the eyes of Almighty God.

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...