HomeUncategorizedನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

ನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

- Advertisement -
- Advertisement -

ಬಾಬ್ರಿ ಮಸೀದಿಯ ಧ್ವಂಸ ಒಂದು ರೀತಿಯ ‘ಹಿಂದೂತ್ವ’ದ ಉನ್ಮಾದತೆಯನ್ನು ಯುವಕರಲ್ಲಿ ತುಂಬಿದ್ದ ಸಂದರ್ಭ. ಅಂತಹ ಉನ್ಮಾದಿತರು ಆಗಸ್ಟ್ 15ರಂದು ಬಿಡುಗಡೆಗೊಂಡ ‘ರೋಜಾ’ ಸಿನಿಮಾವನ್ನು ಕಣ್ತುಂಬಿಕೊಂಡು ಬಂದು, ದೇಶಪ್ರೇಮದ ಮಾದರಿಯೊಂದನ್ನು ಹೃದಯಕ್ಕಿಳಿಸಿಕೊಂಡರು. ಅದರ ಪರಿಣಾಮವನ್ನು ಥಿಯೇಟರ್‍ಗಳಲ್ಲೇ ನೋಡಬಹುದಿತ್ತು! ದೇಶದ ಬಗ್ಗೆ ಪ್ರೇಮವಷ್ಟೇ ಆಗಿದ್ದರೆ, ಅದಕ್ಕಿಂತ ಒಳ್ಳೆಯ ಸಂಗತಿ ಇನ್ನೇನಿರಲು ಸಾಧ್ಯ? ಆದರೆ, ಅವರು ಕಾಶ್ಮೀರವನ್ನು ಕಣ್ತುಂಬಿಕೊಂಡ ರೀತಿಯಲ್ಲಿ ದೊಡ್ಡ ಸಮಸ್ಯೆಯಿತ್ತು. ಅದರ ಪ್ರಕಾರ ಕಾಶ್ಮೀರವೆಂದರೆ ಭಾರತವನ್ನು ದ್ವೇಷಿಸುವ ಭಯೋತ್ಪಾದಕರ ತಾಣ ಅಷ್ಟೇ.

ಸುಡುತ್ತಿರುವ ರಾಷ್ಟ್ರಧ್ವಜದ ಮೇಲೆ ಸಿನಿಮಾದ ಹೀರೊ ಅರವಿಂದ ಸ್ವಾಮಿ ಬಿದ್ದು, ತನ್ನ ಬಟ್ಟೆಗಳು ಸುಟ್ಟು ಜೀವಕ್ಕೆ ಅಪಾಯವಿದ್ದರೂ ಧ್ವಜವನ್ನು ರಕ್ಷಿಸುವ ಹೋರಾಟ. ಥಿಯೇಟರಿನಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಆಗ 14-20 ವಯಸ್ಸಿನವರಾಗಿದ್ದವರು ಈಗ 40-47 ವಯಸ್ಸಿನ ಅಜುಬಾಜಿನಲ್ಲಿದ್ದಾರೆ. ಥಿಯೇಟರಿನಲ್ಲಿ ‘ದೇಶಪ್ರೇಮ’ದ ದ್ಯೋತಕವಾಗಿ ಮೊಳಗಿದ್ದ ಘೋಷಣೆಗಳು ಈಗ ದೇಶವೆಂಬ ಥಿಯೇಟರಿನಲ್ಲಿ ಮೊಳಗುತ್ತಿವೆ. ಅದರ ಅರ್ಥವೂ ಸಾರೇ ಜಹಾಂಸೆ ಅಚ್ಛಾ, ಜನಗಣಮನ, ಹಿಂದ್ ದೇಶ್ ಕೇ ನಿವಾಸಿ ಥರದ ಗೀತೆಗಳಲ್ಲಿ ವ್ಯಕ್ತವಾದ ಭಾವಕ್ಕಿಂತ ಭಿನ್ನವಾಗಿದೆ.

***

370ನೇ ವಿಧಿ ರದ್ದಿನ ಕುರಿತು ತುಂಬ ಭಾವುಕರಾಗಿ, ರೋಮಾಂಚಿತರಾಗಿ ‘ಐತಿಹಾಸಿಕ ಕ್ರಮ’ ಎನ್ನುವ ಪೀಳಿಗೆಯ ಬಹುತೇಕರ ಪಾಲಿಗೆ ಕಾಶ್ಮೀರ ಸಮಸ್ಯೆ ಎಂದರೆ ಅಂದು ಮಣಿರತ್ನಂ ತೀರಾ ಜಾಳು ಜಾಳಾಗಿ, ಬಾಲಿಶವಾಗಿ ತೋರಿಸಿದ್ದ, ‘ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು’ ಅವರು ಯತ್ನಿಸುತ್ತಿದ್ದಾರೆ ಎಂಬುದಷ್ಟೇ. 1989ರಲ್ಲಿ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದಾಗ ಶಾಲೆ-ಕಾಲೇಜಿಗೆ ಹೋಗುತ್ತಿದ್ದವರು ಮುಂದೆ ಅಲ್ಲಿ ಉಗ್ರವಾದ ಮತ್ತು ಸೇನಾ ಕಾರ್ಯಾಚರಣೆಗಳ ಕಾರಣಕ್ಕೆ ಸರಿಯಾದ ವಿದ್ಯೆಯನ್ನೇ ಪಡೆಯಲಿಲ್ಲ. ದಿನವೂ ಅಘೋಷಿತ ಬಂದ್ ನೋಡಿಯೇ ಬೆಳೆದ ಅಂಥವರ ಬದುಕು ಈಗ ಸಂದಿಗ್ಧದಲ್ಲಿದೆ. ಆದರೆ ಕಾಶ್ಮೀರದಾಚೆಯ ಭಾರತದಲ್ಲಿರುವ ಯುವ ಸಮೂಹಕ್ಕೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕ ಹೆಮ್ಮೆಯಿದೆ!

‘ರೋಜಾ’ ಅಥವಾ ‘ಮಿಷನ್ ಕಾಶ್ಮೀರ್’- ಇಂತಹ ಜನಪ್ರಿಯ ಸಿನಿಮಾಗಳ ಅಪಾಯವಿರುವುದೇ ಇಲ್ಲಿ ಅನಿಸುತ್ತದೆ. ಪ್ರೇಮಕತೆಯ ಎಳೆ ಇಟ್ಟುಕೊಂಡು ಹೊರಡುವ ಮಣಿರತ್ನಂ, ‘ಕಾಶ್ಮೀರ ಪ್ರಕ್ಷುಬ್ದತೆ’ಯ ಹಿನ್ನೆಲೆಯಲ್ಲಿ ಪ್ರೇಮಕತೆ ಎಂದು ಪ್ರಚಾರ ಪಡೆದರು. ಆದರೆ, ಯಾವ ಗಂಭೀರ ಅಧ್ಯಯನವೂ ಇಲ್ಲದೇ ಅವರು ಹಸಿ ಹಸಿಯಾಗಿ ತೋರಿಸಿದ ಬ್ಯಾಕ್‍ಡ್ರಾಪ್ ಕತೆ ಮತ್ತು ಧ್ವಜ ಕಾಪಾಡುವ ಹೀರೊಯಿಸಂ- ಹಿಂದೂತ್ವದ ರಾಷ್ಟ್ರೀಯತೆಯ ರೂಪಕಗಳೇ ಆಗಿದ್ದವು. ಕಾಶ್ಮೀರವನ್ನು ಭಾರತದೊಡನೆ ಬೆಸೆಯಲು ಬೇಕಾದ ಪ್ರೇಮಕಥೆ ಅದಾಗಿರಲಿಲ್ಲ.

ಮಣಿರತ್ನಂ ತಮ್ಮ ‘ಬಾಂಬೆ’ಯಲ್ಲಿ ನ್ಯೂಟ್ರಲ್ ನೋಟ ಕೊಡಲು ಯತ್ನಿಸಿದ್ದರು. ನಂತರದ ‘ದಿಲ್ ಸೆ’ ಈಶಾನ್ಯ ಭಾರತದ ಸಂಕೀರ್ಣ ಸಮಸ್ಯೆಯನ್ನು ಒಂದು ಸರಳ ರೇಖಾತ್ಮಕ ನೆಲೆಯಲ್ಲಿ ತೋರಿಸಿತ್ತು.

ಕಾಶ್ಮೀರ ಮತ್ತು ಈಶಾನ್ಯ ಭಾರತದ ಕುರಿತು ಬೇರೆ ರೀತಿಯ ಮಾಹಿತಿ ಇಲ್ಲದವರಿಗೆ 370 ವಿಧಿ ರದ್ದು ಐತಿಹಾಸಿಕ ಅನಿಸಿರಲೇಬೇಕು… ಈ ನಡುವೆ 2002ರ ಭೀಕರ ಹತ್ಯಾಕಾಂಡ ಕೂಡ ‘ಅವರಿಗೆ’ ಕಲಿಸಿದ ಪಾಠ ಎಂದು ನಂಬಿಕೊಂಡು ಬಂದವರಿಗೆ ಕಾಶ್ಮೀರದ ವಿಭಜನೆ ಕೂಡ ಐತಿಹಾಸಿಕವೇ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿಯೇ ಇರಬೇಕು. ಅದರ ಇತಿಹಾಸ ಭಾರತದ ಉಳಿದ ಭಾಗಗಳ ಇತಿಹಾಸದ ಜೊತೆಗೆ ಹೊಂದಿಕೊಂಡಿದೆ. ಅದನ್ನು ಆಳಿದವರು ‘ಹಿಂದೂ ರಾಜ’ರು ಎಂಬ ಕಾರಣಕ್ಕೆ ಮಾತ್ರವಲ್ಲದೇ, ಅದರ ಜನಪ್ರಿಯ ನಾಯಕ ಷೇಕ್ ಅಬ್ದುಲ್ಲಾ ಸಹಾ ಸೆಕ್ಯುಲರ್ ಕಾಶ್ಮೀರವನ್ನೇ ಬಯಸಿದ್ದರು ಎಂಬುದನ್ನೂ ಮರೆಯಲಾಗದು. ಅಂತಹ ಕಾಶ್ಮೀರದ ಪ್ರತಿ ಪ್ರಜೆಯನ್ನೂ ಪ್ರೀತಿಯಿಂದ ಗೆಲ್ಲಬೇಕೆಂದರೆ, ಅವರ ಕುರಿತ ಪೂರ್ವಗ್ರಹಗಳನ್ನು ತೊರೆಯಬೇಕಿದೆ. ಇದ್ದುದರಲ್ಲಿ ರಾಜೀó ಗಡಿಯಾಚೆ ಮತ್ತು ಈಚೆಗಿನ ಜನರನ್ನು ಮನುಷ್ಯರನ್ನಾಗಿ ಚಿತ್ರಿಸುವ ಕೆಲಸ ಮಾಡಿದೆ.

****

ಹಿಂದೊಮ್ಮೆ ಇನ್ಪೋಸಿಸ್‍ನ ಎನ್.ಆರ್.ನಾರಾಯಣ ಮೂರ್ತಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈಗ ಸೇನೆಯನ್ನು ಬಳಸಿಕೊಂಡು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿಬಿಟ್ಟರೆ? ಬಹುಪಾಲು ಬೆಂಗಳೂರಿಗರು ಇದೊಂದು ಐತಿಹಾಸಿಕ ಕ್ರಮವೆಂದೇ ಕರೆಯುತ್ತಾರೆ. ಅನ್ಯ ರಾಜ್ಯಗಳ ಪಾಲಿಗೆ ಕೂಡ ಇದು ಐತಿಹಾಸಿಕವೇ ಆಗಿರುತ್ತದೆ.

ಆದರೆ, ಬೆಂಗಳೂರಲ್ಲಿರುವ ಮೂಲ ಕನ್ನಡಿಗರು ಮತ್ತು ಬೆಂಗಳೂರಾಚೆಗಿನ ಪ್ರದೇಶದಲ್ಲಿರುವ ಕನ್ನಡಿಗರ ಪಾಲಿಗೆ ಇದೊಂದು ಐತಿಹಾಸಿಕ ದ್ರೋಹ ಅನ್ನಿಸಿಯೇ ಅನ್ನಿಸುತ್ತದೆ, ಅನ್ನಿಸಲೇ ಬೇಕು….

ಈ ನೆಲೆಯಲ್ಲಿ ನಿಂತು ನೋಡಿದಾಗಲಷ್ಟೇ ಕನ್ನಡಿಗರಿಗೆ ಕಾಶ್ಮೀರದ ಜನರ ಸಂಕಟ ಅರ್ಥವಾದಿತೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...