ಮಂಡ್ಯದ ಕೆರಗೋಡು ಗ್ರಾಮದಲ್ಲಿ ಭುಗಿಲೆದ್ದಿರುವ ಧ್ವಜ ವಿವಾದವನ್ನು ಬಿಜೆಪಿ ನಾಯಕರು ರಾಜಕೀಯಗೊಳಿಸಿದ್ದು, ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಜೆಪಿ-ಆರ್‌ಎಸ್‌ಎಸ್ ಅನ್ನು ದೇಶದ್ರೋಹಿಗಳು ಎಂಟು ಟೀಕಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ಅಂತಹ ಬ್ರಿಟಿಷರನ್ನೇ ಹೆದರಿಸಿದ ಕಾಂಗ್ರೆಸ್ ಈ ಬಿಜೆಪಿ-ಆರ್‌ಎಸ್‌ಎಸ್ ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ. ಬ್ರಿಟಿಷರ ಗುಂಡಿಗೆ ಎದೆಗೊಟ್ಟು ತಿರಂಗಾ ಹಾರಿಸಿದ ವೀರ ಪರಂಪರೆ ನಮ್ಮದು, ಈ ಸಂಘಿ ಕ್ರಿಮಿ ಕೀಟಗಳು ನಮ್ಮನ್ನು ತಡೆಯಲು ಸಾಧ್ಯವೇ. ದೇಶದ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದೇವೆ, ದೇಶದ್ರೋಹಿ ಬಿಜೆಪಿಗೆ ದಮ್ಮು ತಾಕತ್ತಿದ್ದರೆ ಈ ರಾಷ್ಟ್ರ ಧ್ವಜವನ್ನು ಕಿತ್ತು ಹಾಕುವ ಧೈರ್ಯ ತೋರಲಿ’ ಎಂದು ಕಿರಿಕಾರಿದೆ.
ಅಂತಹ ಬ್ರಿಟಿಷರನ್ನೇ ಹೆದರಿಸಿದ ಕಾಂಗ್ರೆಸ್ ಈ ಬಿಜೆಪಿ RSS ಎಂಬ ದೇಶದ್ರೋಹಿಗಳಿಗೆ ಹೆದರುವುದುಂಟೆ.
ಬ್ರಿಟಿಷರ ಗುಂಡಿಗೆ ಎದೆಗೊಟ್ಟು ತಿರಂಗಾ ಹಾರಿಸಿದ ವೀರ ಪರಂಪರೆ ನಮ್ಮದು, ಈ ಸಂಘಿ ಕ್ರಿಮಿ ಕೀಟಗಳು ನಮ್ಮನ್ನು ತಡೆಯಲು ಸಾಧ್ಯವೇ.
ದೇಶದ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದೇವೆ, ದೇಶದ್ರೋಹಿ @BJP4Karnataka ಗೆ ದಮ್ಮು ತಾಕತ್ತಿದ್ದರೆ… pic.twitter.com/CTPhwtzXu0
— Karnataka Congress (@INCKarnataka) January 29, 2024
‘ಬಿಜೆಪಿಯ ಲೋಕಸಭಾ ಚುನಾವಣೆಯ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ, ಇದಕ್ಕೆ ಸೋಕಾಲ್ಡ್ ಜಾತ್ಯತೀತ ಜನತಾ ದಳ ಪೂರ್ಣ ಸಹಕಾರ ನೀಡುತ್ತಿದೆ. ಆರ್ ಅಶೋಕ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದಮ್ಮು ತಾಕತ್ತಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ. ಕೆರೆಗೋಡು ಗ್ರಾಮದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ರಾಷ್ಟ್ರಧ್ವಜ ಹಾಗೂ ನಾಡ ಧ್ವಜ ಹಾರಿಸುವುದಕ್ಕಾಗಿ ಮಾತ್ರ ಧ್ವಜ ಸ್ಥಂಭ ಸ್ಥಾಪನೆಗೆ ಮುಚ್ಚಳಿಕೆ ಬರೆದುಕೊಟ್ಟು ಅನುಮತಿ ಪಡೆದಿದ್ದಾರೆ. ಬರೆದುಕೊಟ್ಟ ಮುಚ್ಚಳಿಕೆಯಂತೆ ಹಾಗೂ ಯಾವುದಕ್ಕೆ ಅನುಮತಿ ಪಡೆದಿದ್ದಾರೋ ಅದನ್ನ ಪಾಲಿಸಬೇಕೇ ಬೇಡವೇ’ ಎಂದು ಪ್ರಶ್ನಿಸಿದೆ.
,@BJP4Karnataka ಯ ಲೋಕಸಭಾ ಚುನಾವಣೆಯ ತಾಲೀಮು ಮಂಡ್ಯದಲ್ಲಿ ಶುರುವಾಗಿದೆ, ಇದಕ್ಕೆ ಸೋಕಾಲ್ಡ್ ಜಾತ್ಯತೀತ ಜನತಾ ದಳ ಪೂರ್ಣ ಸಹಕಾರ ನೀಡುತ್ತಿದೆ.@RAshokaBJP ಹಾಗೂ @hd_kumaraswamy ಅವರಿಗೆ ದಮ್ಮು ತಾಕತ್ತಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಲಿ.
ಕೆರೆಗೋಡು ಗ್ರಾಮದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ರಾಷ್ಟ್ರಧ್ವಜ ಹಾಗೂ… pic.twitter.com/yBzMR8DFLw
— Karnataka Congress (@INCKarnataka) January 29, 2024
‘ರಾಷ್ಟ್ರ ಧ್ವಜ ಹಾರಿಸುವ ಉದ್ದೇಶವನ್ನು ಹೈಜಾಕ್ ಮಾಡಿ ಮಂಡ್ಯದಲ್ಲಿ ಶಾಂತಿ ಕದಡಬೇಕು, ಸರ್ಕಾರಕ್ಕೆ ಸವಾಲು ಹಾಕಬೇಕು ಎನ್ನುವುದು ನಿಮ್ಮ ಪೂರ್ವಯೋಜಿತ ಹುನ್ನಾರವಾಗಿತ್ತಲ್ಲವೇ? ನಿಮ್ಮ ನಿಷ್ಠೆ ಸಂವಿಧಾನಕ್ಕೋ; ಮನುವಾದಕ್ಕೋ? ನಿಮ್ಮ ನಿಷ್ಠೆ ದೇಶಕ್ಕೋ, ದೇಶದ್ರೋಹಕ್ಕೋ? ನಿಮ್ಮ ನಿಷ್ಠೆ ರಾಷ್ಟ್ರ ಧ್ವಜಕ್ಕೋ , ಧಾರ್ಮಿಕ ಧ್ವಜಕ್ಕೋ? ಉತ್ತರ ನೀಡುವ ದಮ್ಮು ತಾಕತ್ತು ಇದೆಯೇ’ ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸವಾಲು ಹಾಕಿದೆ.
ಸರ್ಕಾರಿ ಕಟ್ಟಡಗಳ ಮೇಲೆ ಧಮ್ಮ ಚಕ್ರ- ಜೈ ಭೀಮ್ ಧ್ವಜ ಹಾಕಬಹುದೇ?
‘ಅನುಮತಿಯಿಲ್ಲದೆ ನಾನು ನಾಳೆ ಸರ್ಕಾರಿ ಆಸ್ತಿ ಅಥವಾ ಕಟ್ಟಡಗಳ ಮೇಲೆ ಧಮ್ಮ ಚಕ್ರ, ಪಂಚಶೀಲ ಧ್ವಜ ಅಥವಾ ಜೈ ಭೀಮ್ ಧ್ವಜವನ್ನು ಹಾಕಬಹುದೇ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರೇ, ನೀವು ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ? ದಯವಿಟ್ಟು ಟ್ರಸ್ಟ್ ವಿನಂತಿಯನ್ನು ಮತ್ತು ನಂತರದ ಆದೇಶದ ಮರುಪರಿಶೀಲಿಸಿ. ವಿನಂತಿ/ಆದೇಶದ ಯಾವ ಭಾಗವು ಕಾನೂನಿಗೆ ವಿರುದ್ಧವಾಗಿದೆ ಎಂಬುದನ್ನು ದಯವಿಟ್ಟು ಕರ್ನಾಟಕದ ಜನತೆಗೆ ತಿಳಿಸಿ. ಅನುಮತಿಯಿಲ್ಲದೆ ನಾನು ನಾಳೆ ಸರ್ಕಾರಿ ಆಸ್ತಿ ಅಥವಾ ಕಟ್ಟಡಗಳ ಮೇಲೆ ಧಮ್ಮ ಚಕ್ರ, ಪಂಚಶೀಲ ಧ್ವಜ ಅಥವಾ ಜೈಭೀಮ್ ಧ್ವಜವನ್ನು ಹಾಕಬಹುದೇ? ಯಾವುದೇ ಧ್ವಜಕ್ಕಿಂತ ರಾಷ್ಟ್ರಧ್ವಜಕ್ಕೆ ಪ್ರಾಧಾನ್ಯತೆ ನೀಡಬೇಕಲ್ಲವೇ’ ಎಂದು ಹೇಳಿದ್ದಾರೆ.
. @BYVijayendra avare & Opposition Leader @RAshokaBJP avare, why are you protesting?
Please recheck & comprehend the request by the trust & the subsequent order. Please let the people of Karnataka know which part of the request/order is against the law.
Without permission can… https://t.co/tQrZJcm47R pic.twitter.com/OzmHWSsLFu
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 29, 2024
ಶ್ರೀ ಗೌರಿಶಂಕರ್ ಸೇವಾ ಟ್ರಸ್ಟ್ ಭಾರತದ ಧ್ವಜ ಅಥವಾ ಕನ್ನಡ ಧ್ವಜವನ್ನು ಹಾರಿಸಲು ನಿರ್ದಿಷ್ಟವಾಗಿ ಧ್ವಜಸ್ತಂಭವನ್ನು ಕೇಳಿದೆ. ಅದಕ್ಕೆ ಪಂಚಾಯತ್ ಇಲಾಖೆ ಅನುಮತಿ ನೀಡಿರುವುದು ಸ್ಪಷ್ಟವಾಗಿದೆ. ಬಿಜೆಪಿ ಬೇರೆ ಯಾವುದಾದರೂ ಧ್ವಜವನ್ನು ಹಾರಿಸಲು ಒತ್ತಾಯಿಸುತ್ತೀರಾ? ನಿಮ್ಮ ಪಕ್ಷವನ್ನು ಯಾವಾಗಲೂ ಭಾರತೀಯ ಧ್ವಜವನ್ನು ವಿರೋಧಿಸುವ ರಾಷ್ಟ್ರೀಯ ವಿರೋಧಿ ಆರ್‌ಎಸ್‌ಎಸ್‌ನಿಂದ ಪೋಷಿಸಲಾಗಿದೆ. ‘ಆರ್‌ಎಸ್‌ಎಸ್ ಧ್ವಜ ಮುಂದೊಂದು ದಿನ ರಾಷ್ಟ್ರಧ್ವಜವಾಗುತ್ತದೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇತ್ತೀಚೆಗೆ ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಳ್ಳಿ. ನೀವು ಸಹ ಇದನ್ನು ಹೇಗೆ ಒಪ್ಪುತ್ತೀರಿ? ನೀವು ಜವಾಬ್ದಾರಿಯುತವಾಗಿ ಸರ್ಕಾರವನ್ನು ನಡೆಸಲಿಲ್ಲ, ಕನಿಷ್ಠ ಜವಾಬ್ದಾರಿಯುತ ವಿರೋಧ ಪಕ್ಷದವರಾಗಿರಿ’ ಎಂದು ಪ್ರಿಯಾಂಕ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ; ಹನುಮಧ್ವಜ ವಿವಾದ: ಪರಿಸ್ಥಿತಿ ಪ್ರಕ್ಷುಬ್ಧಗೊಳಿಸಿದ ಹಿಂದುತ್ವ ಕಾರ್ಯಕರ್ತರು; ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ


